For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: ಚಲಿಸುತ್ತಿರುವ ಕಾರಿನ ಮೇಲೆ ಶಾರೂಖ್ ಖಾನ್ ಸಾಹಸ

  |

  ಶಾರೂಖ್ ಖಾನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟ ತೆರೆಗೆ ಕಂಬ್ಯಾಕ್ ಮಾಡುವ ಬಗ್ಗೆ ಕಾತುರದಿಂದ ಕಾಯುತ್ತಿದ್ದಾರೆ. ಪಠಾಣ್ ಚಿತ್ರದ ಮೂಲಕ ಶಾರೂಖ್ ಮತ್ತೆ ಬಿಗ್ ಸ್ಕ್ರೀನ್ ಮೇಲೆ ಜಾದೂ ಮಾಡಲಿದ್ದಾರೆ ಎಂಬ ನಿರೀಕ್ಷೆ ಇದೆ.

  ಪಠಾಣ್ ಸಿನಿಮಾದ ಶೂಟಿಂಗ್ ಆರಂಭಿಸಿರುವ ಶಾರೂಖ್ ಖಾನ್ ಅವರ ಕೆಲವು ಪ್ರಮುಖ ದೃಶ್ಯಗಳು ಸೋರಿಕೆಯಾಗಿದೆ. ಆಕ್ಷನ್ ದೃಶ್ಯಗಳಲ್ಲಿ ಕಿಂಗ್ ಖಾನ್ ಭಾಗವಹಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ಇಲ್ಲೊಂದು ವಿಡಿಯೋದಲ್ಲಿ ನಟ ಶಾರೂಖ್ ಖಾನ್ ಚಲಿಸುತ್ತಿರುವ ಕಾರಿನ ಮೇಲೆ ಶೂಟಿಂಗ್ ಮಾಡುತ್ತಿದ್ದಾರೆ. ಈ ದೃಶ್ಯವನ್ನು ನೋಡಿ ಶಾರೂಖ್ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ವಾಹ್....!ಎಂತಹ ಅದ್ಭುತ ನಟ. ರಿಸ್ಕ್ ಇದ್ದರೂ ನೈಜವಾಗಿ ಸಾಹಸ ದೃಶ್ಯ ಚಿತ್ರಿಸುತ್ತಿದ್ದಾರೆ ಎಂದು ನಿರ್ಮಾಪಕ ಖುಷಿಯಾಗಿದ್ದಾರೆ.

  ಕಳೆದ ತಿಂಗಳಷ್ಟೇ ದುಬೈನಲ್ಲಿ ಪಠಾಣ್ ಸಿನಿಮಾದ ಚಿತ್ರೀಕರಣ ಶುರುವಾಗಿತ್ತು. ಪ್ರಪಂಚ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ಫೈಟ್ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ಈ ದೃಶ್ಯವೂ ಚಿತ್ರದ ಕಥೆಗೆ ಬಹಳ ಮುಖ್ಯವಾಗಿದ್ದು, ಆಕ್ಷನ್ ಸ್ಕ್ರಿಪ್ಟ್ ಇದಾಗಿದೆಯಂತೆ.

  ಶಾರುಖ್ ಖಾನ್ ತಂದೆ-ತಾಯಿ ಸಮಾಧಿ ಇರುವುದೆಲ್ಲಿ; ಕಿಂಗ್ ಖಾನ್ ದಿಢೀರ್ ಭೇಟಿ ನೀಡಿದ್ದೇಕೆ?ಶಾರುಖ್ ಖಾನ್ ತಂದೆ-ತಾಯಿ ಸಮಾಧಿ ಇರುವುದೆಲ್ಲಿ; ಕಿಂಗ್ ಖಾನ್ ದಿಢೀರ್ ಭೇಟಿ ನೀಡಿದ್ದೇಕೆ?

  Roberrt Box Office Collection : ಅಭಿಮಾನಿಗಳ ಆರ್ಭಟಕ್ಕೆ ಬಾಕ್ಸ್ ಆಫೀಸ್ ಲೂಟಿ | Filmibeat Kannada

  ಜೀರೋ ಸಿನಿಮಾದ ಬಳಿಕ ಶಾರೂಖ್ ಖಾನ್ ಅಧಿಕೃತವಾಗಿ ಕೈಗತ್ತಿಕೊಂಡಿರುವ ಚಿತ್ರ. ಮುಂಬೈನ ಯಶ್ ರಾಜ್ ಸ್ಟುಡಿಯೋದಲ್ಲಿ ಸಲ್ಮಾನ್ ಖಾನ್ ಮತ್ತು ಶಾರೂಖ್ ಒಟ್ಟಿಗೆ ಚಿತ್ರೀಕರಣ ಮಾಡಿದ್ದರು.

  English summary
  Bollywood Baadshah Shahrukh khan performs Pathan movie stunts on moving car. Shooting video leaked in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X