For Quick Alerts
  ALLOW NOTIFICATIONS  
  For Daily Alerts

  ಶಾರೂಖ್ ಖಾನ್-ರಾಜ್ ಕುಮಾರ್ ಹಿರಾನಿ ಚಿತ್ರದ ಅಪ್‌ಡೇಟ್

  |

  ಬಾಲಿವುಡ್‌ ಬಾದ್‌ಶಾ ಶಾರೂಖ್ ಖಾನ್ ಅಭಿಮಾನಿಗಳಿಗೆ ಸಿಹಿ ಸುದ್ದಿ. ಕಳೆದ ಮೂರು ವರ್ಷದಿಂದ ಶಾರೂಖ್ ಸಿನಿಮಾಗಳಿಲ್ಲದೇ ನಿರಾಸೆಯಲ್ಲಿರುವ ಅಭಿಮಾನಿಗಳಿಗೆ ಮುಂದಿನ ವರ್ಷ ಡಬಲ್ ಧಮಾಕ ಆಗಬಹುದು.

  ಹೌದು, ಸ್ಟಾರ್ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಮತ್ತು ಶಾರೂಖ್ ಕಾಂಬಿನೇಷನ್ ಸಿನಿಮಾ ಶೀಘ್ರದಲ್ಲೇ ಆರಂಭವಾಗಲಿದೆ ಎನ್ನುವ ಸುದ್ದಿ ಹೊರಬಿದ್ದಿದೆ. ಈ ಕುರಿತು ಬರಹಗಾರ್ತಿ ಕನಿಕಾ ಧಿಲ್ಲೋನ್ ಖಚಿತಪಡಿಸಿದ್ದಾರೆ.

  ಶಾರೂಖ್ ಖಾನ್-ಅಟ್ಲಿ ಚಿತ್ರದ ಟೈಟಲ್ ಫಿಕ್ಸ್, ಚಿತ್ರೀಕರಣಕ್ಕೆ ಚಾಲನೆ!ಶಾರೂಖ್ ಖಾನ್-ಅಟ್ಲಿ ಚಿತ್ರದ ಟೈಟಲ್ ಫಿಕ್ಸ್, ಚಿತ್ರೀಕರಣಕ್ಕೆ ಚಾಲನೆ!

  ಕನಿಕಾ ಧಿಲ್ಲೋನ್ ಮತ್ತು ಅಭಿಜತ್ ಜೋಷಿ ಇಬ್ಬರು ಶಾರೂಖ್-ಹಿರಾನಿ ಜೋಡಿಯ ಚಿತ್ರದ ಸ್ಕ್ರಿಪ್ಟ್ ಕೆಲಸ ಮುಗಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಟ್ವೀಟ್ ಮಾಡಿರುವ ಕನಿಕಾ, ''ನನ್ನ ಮುಂದಿನ ಚಿತ್ರಕ್ಕಾಗಿ ತುಂಬಾ ಉತ್ಸುಕನಾಗಿದ್ದೇನೆ. ನಾನು ಪ್ರೀತಿಸುವ ಎಲ್ಲ ಜನರೊಂದಿಗೆ ಕೆಲಸ ಮಾಡುತ್ತಿದ್ದೇನೆ. ಇದು ತುಂಬಾ ವಿಶೇಷವಾಗಿದೆ'' ಎಂದು ಪೋಸ್ಟ್ ಹಾಕಿ ರಾಜ್ ಕುಮಾರ್ ಹಿರಾನಿ ಹಾಗೂ ಶಾರೂಖ್ ಖಾನ್ ಅವರನ್ನು ಟ್ಯಾಗ್ ಮಾಡಿದ್ದಾರೆ.

  ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವ ಪ್ರಕಾರ, ''ಶಾರುಖ್ ಖಾನ್ ಜೊತೆಗಿನ ರಾಜಕುಮಾರ್ ಹಿರಾನಿ ಚಿತ್ರದ ಸ್ಕ್ರಿಪ್ಟ್ ಅಂತಿಮವಾಗಿದೆ ಮತ್ತು ನಿರ್ಮಾಣಕ್ಕೆ ಸಿದ್ಧವಾಗಿದೆ. ಲಾಕ್‌ಡೌನ್‌ ಸಮಯದಲ್ಲಿ ಹಿರಾನಿ, ಕನಿಕಾ ದಿಲ್ಲೋನ್ ಮತ್ತು ಅಭಿಜಾತ್ ಜೋಶಿ ಒಂದು ವರ್ಷಕ್ಕೂ ಹೆಚ್ಚು ಕಾಲ ಸ್ಕ್ರಿಪ್ಟ್‌ನಲ್ಲಿ ಕೆಲಸ ಮಾಡಿದ್ದಾರೆ. ಹಿರಾನಿಗೆ ಮತ್ತೊಂದು ಹಿಟ್ ಫಿಲಂ ಇದಾಗುತ್ತದೆ'' ಎಂದು ಮೂಲವೊಂದು ತಿಳಿಸಿದೆಯಂತೆ.

  ಅಂದ್ಹಾಗೆ, ಶಾರೂಖ್ ಖಾನ್ ಮತ್ತು ಹಿರಾನಿ ಜೋಡಿಯಿಂದ ಬರಲಿರುವ ಮೊದಲ ಚಿತ್ರ ಇದಾಗಿದ್ದು, ಇನ್ನು ಹೆಸರಿಟ್ಟಿಲ್ಲ. ಇದಕ್ಕೂ ಮುಂಚೆ ತ್ರಿ-ಈಡಿಯೆಟ್ಸ್ ಚಿತ್ರಕ್ಕಾಗಿ ಅಮೀರ್ ಖಾನ್‌ಗೂ ಮೊದಲು ಶಾರುಖ್ ಅವರನ್ನು ಅಪ್ರೋಚ್ ಮಾಡಿದ್ದರಂತೆ ಹಿರಾನಿ.

  'ದಯವಿಟ್ಟು ಅವಕಾಶ ಕೊಡಿ': ಖ್ಯಾತ ನಟಿ ಬಳಿ ಕೇಳಿಕೊಂಡ ಶಾರೂಖ್'ದಯವಿಟ್ಟು ಅವಕಾಶ ಕೊಡಿ': ಖ್ಯಾತ ನಟಿ ಬಳಿ ಕೇಳಿಕೊಂಡ ಶಾರೂಖ್

  ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡಿರುವ ಶಾರೂಖ್ ಖಾನ್, ಈಗ ತಮಿಳು ನಿರ್ದೇಶಕ ಅಟ್ಲಿ ಜೊತೆ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರಕ್ಕೆ ಲಯನ್ ಎಂದು ಹೆಸರಿಟ್ಟಿದ್ದು, ನಯನತಾರ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  2018ರಲ್ಲಿ ತೆರೆಕಂಡ 'ಸಂಜು' ಚಿತ್ರದ ನಂತರ ರಾಜ್ ಕುಮಾರ್ ಹಿರಾನಿ ಯಾವ ಚಿತ್ರವನ್ನು ಮಾಡಿಲ್ಲ. ಸಹಜವಾಗಿ ಶಾರೂಖ್ ಖಾನ್ ಮತ್ತು ಹಿರಾನಿ ಚಿತ್ರ ನಿರೀಕ್ಷೆ ಹೆಚ್ಚು ಮಾಡಿದೆ.

  English summary
  Bollwood actor Shah Rukh Khan and Rajkumar Hirani Film will start soon says Writter Kanika Dhillon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X