Shahrukh Khan: 'ಜವಾನ್' ಕಲೆಕ್ಷನ್ ಫೇಕ್ ಎಂದವನಿಗೆ ಬಾಯಿ ಮುಚ್ಚು ಎಂದ ಕಿಂಗ್‌ ಖಾನ್

ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಅಧಿಕೃತವಾಗಿ ಚಿತ್ರತಂಡವೇ ಸಿನಿಮಾ ಕಲೆಕ್ಷನ್ 1000 ಕೋಟಿ ರೂ. ಗಡಿ ದಾಟಿದೆ ಎಂದು ಘೋಷಿಸಿದೆ. ಸೆಪ್ಟೆಂಬರ್ 7ಕ್ಕೆ ರಿಲೀಸ್ ಆಗಿದ್ದ ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು. ಅಟ್ಲಿ- ಶಾರುಖ್ ಮ್ಯಾಜಿಕ್ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ.

ತಮ್ಮದೇ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಲ್ಲಿ ಶಾರುಖ್ ಖಾನ್ 'ಜವಾನ್' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ವರ್ಷದ ಆರಂಭದಲ್ಲೇ ಕಿಂಗ್ ಖಾನ್ ನಟನೆಯ 'ಪಠಾಣ್' ಸಿನಿಮಾ 1000 ಕೋಟಿ ರೂ. ಗಳಿಕೆ ಕಂಡು ಎಲ್ಲರ ಹುಬ್ಬೇರಿಸಿತ್ತು. ಇದೀಗ 'ಜವಾನ್' ಅದೇ ಸಾಧನೆ ಮಾಡಿದೆ. ಒಂದೇ ವರ್ಷದಲ್ಲಿ ಶಾರುಖ್ ನಟನೆಯ 2 ಸಿನಿಮಾಗಳು 1000 ಕೋಟಿ ರೂ. ಕಲೆಕ್ಷನ್ ಮಾಡಿದಂತಾಗಿದೆ. ಈ ದಾಖಲೆ ಬರೆದ ಮೊದಲ ನಟ ಕಿಂಗ್ ಖಾನ್ ಆಗಿದ್ದಾರೆ.

ShahRukh Khan reacts to Jawan Fake collections discussion

ಹಿಂದೆ ಮಾತ್ರವಲ್ಲದೇ ತಮಿಳು, ತೆಲುಗಿಗೂ 'ಜವಾನ್' ಸಿನಿಮಾ ಡಬ್ ಆಗಿ ರಿಲೀಸ್ ಆಗಿದೆ. ಕರ್ನಾಟಕದಲ್ಲೂ ಸಿನಿಮಾ 50 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡು ಎಲ್ಲರ ಹುಬ್ಬೇರಿಸಿದೆ. ಕೇರಳ ಬಿಟ್ಟು ಎಲ್ಲಾ ರಾಜ್ಯಗಳಲ್ಲಿ 'ಜವಾನ್' ಆರ್ಭಟ ಜೋರಾಗಿದೆ. ಕೇರಳದಲ್ಲಿ ಭಾರೀ ಮೊತ್ತಕ್ಕೆ ವಿತರಣೆ ಹಕ್ಕು ಕೊಂಡುಕೊಳ್ಳಲಾಗಿತ್ತು. ಅಷ್ಟು ಮೊತ್ತ ಮರಳಿ ಬರೋದು ತಡವಾಗುತ್ತಿದೆ. ಇನ್ನುಳಿದಂತೆ ಸಿನಿಮಾ ಎಲ್ಲಾ ಕಡೆ ಲಾಭದಲ್ಲಿದೆ.

18 ದಿನಕ್ಕೆ 'ಜವಾನ್' ಸಿನಿಮಾ ವಿಶ್ವದಾದ್ಯಂತ 1000 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ಚಿತ್ರತಂಡ ಘೋಷಿಸಿತ್ತು. ಇತ್ತೀಚೆಗೆ ಸಿನಿಮಾ ಕಲೆಕ್ಷನ್ ರಿಪೋರ್ಟ್ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರತಂಡಗಳೇ ಘೋಷಣೆ ಮಾಡಿದರೂ ಕೆಲವರು ನಂಬುವುದಿಲ್ಲ. 'ಜವಾನ್' ಸಿನಿಮಾ ಕಲೆಕ್ಷನ್ ಎಲ್ಲಾ ಫೇಕ್, ಸುಳ್ಳು ಲೆಕ್ಕ ಕೊಡುತ್ತಿದ್ದೀರಾ ಎಂದು ನೆಟ್ಟಿಗನೊಬ್ಬ ನೇರವಾಗಿ ಶಾರುಖ್‌ ಖಾನ್‌ಗೆ ಹೇಳಿದ್ದಾರೆ. ಇದಕ್ಕೆ ಕಿಂಗ್ ಖಾನ್ ಖಾರವಾಗಿಯೇ ಉತ್ತರಿಸಿದ್ದಾರೆ.

ಶಾರುಖ್ ಇತ್ತೀಚೆಗೆ ಟ್ವಿಟರ್‌ನಲ್ಲಿ ಕ್ವೆಶನ್ ಆನ್ಸರ್ ಸೆಷನ್ ನಡೆಸಿದರು. ಇದರಲ್ಲಿ ನೆಟ್ಟಿಗರೊಬ್ಬರು 'ಜವಾನ್' ನಕಲಿ ಕಲೆಕ್ಷನ್ ಬಗ್ಗೆ ಕೇಳಿದ್ದಾರೆ. ಜವಾನ್ ಫೇಕ್ ಕಲೆಕ್ಷನ್‌ ಬಗ್ಗೆ ಚರ್ಚೆ ಆಗ್ತಿದೆ. ಅದು ನಿಜವಾದ ಕಲೆಕ್ಷನ್ ಹೌದೋ ಅಲ್ವೋ? ಎನ್ನುವಂತೆ ಪ್ರಶ್ನಿಸಿದ್ದಾನೆ. ಅದಕ್ಕೆ ಶಾರುಖ್ ಉತ್ತರಿಸಿದ್ದು "ಸುಮ್ಮನೆ ಕೂತು ಎಣಿಸುತ್ತಾ ಇರು. ಅಷ್ಟೆ" ಎಂದು ರಿಪ್ಲೇ ಮಾಡಿದ್ದಾರೆ. ಸದ್ಯ ಈ ಟ್ವೀಟ್ ವೈರಲ್ ಆಗ್ತಿದೆ.

ಕಾಲಿವುಡ್ ಹಾಗೂ ಬಾಲಿವುಡ್ ಕಲಾವಿದರು, ತಂತ್ರಜ್ಞರು ಸೇರಿ ಮಾಡಿರುವ ಸಿನಿಮಾ 'ಜವಾನ್'. ತಮಿಳು ನಿರ್ದೇಶಕ ಅಟ್ಲಿ ಈ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಜೊತೆಗೆ ನಯನತಾರ, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಕೂಡ ಹಿಂದಿ ಚಿತ್ರರಂಗ ಪ್ರವೇಶಿಸಿದಂತಾಗಿದೆ. ಈಗಾಗಲೇ ಹಿಂದಿ ಪ್ರಾಜೆಕ್ಟ್‌ಗಳಲ್ಲಿ ವಿಜಯ್ ಸೇತುಪತಿ ನಟಿಸ್ತಿದ್ದು 'ಜವಾನ್' ಚಿತ್ರ ದೊಡ್ಡ ಬ್ರೇಕ್ ಕೊಟ್ಟಿದ್ದಾರೆ. ಚಿತ್ರದಲ್ಲಿ ವಿಲನ್ ಆಗಿ ಸೇತುಪತಿ ಅಬ್ಬರಿಸಿದ್ದಾರೆ.

ಚಿತ್ರದಲ್ಲಿ ಶಾರುಖ್ ಖಾನ್ ತಂದೆ ಮಗನಾಗಿ ಡಬಲ್ ರೋಲ್‌ನಲ್ಲಿ ದರ್ಬಾರ್ ನಡೆಸಿದ್ದಾರೆ. ರಾಬಿನ್ ಹುಡ್ ಮಾದರಿಯ ಹೀರೊ ಆಗಿ ದರ್ಶನ ಕೊಟ್ಟಿದ್ದಾರೆ. ಆಕ್ಷನ್‌ಗೆ ಕೊಂಚ ಹೆಚ್ಚೇ ಮಹತ್ವ ಕೊಡಲಾಗಿದೆ. ವಿಭಿನ್ನ ಶೇಡ್‌ಗಳಲ್ಲಿ ಕಿಂಗ್ ಖಾನ್ ಮಿಂಚಿದ್ದಾರೆ. ಮಾಸ್ ಪ್ರೇಕ್ಷಕರಿಗೆ ಸಿನಿಮಾ ಹಬ್ಬದೂಟ ಎನ್ನುವಂತಿದೆ. ಅನಿರುದ್ಧ್ ಬಿಜಿಎಂ ಚಿತ್ರಕ್ಕೆ ಪ್ಲಸ್ ಆಗಿದೆ. ಸತತರ ಸೋಲುಗಳಿಂದ ಕಂಗೆಟ್ಟಿದ್ದ ಬಾಲಿವುಡ್‌ಗೆ 'ಪಠಾಣ್' ಹಾಗೂ 'ಜವಾನ್' ಚಿತ್ರಗಳ ಮೂಲಕ ಶಾರುಖ್ ಬಲ ತುಂಬಿದ್ದಾರೆ.

More from Filmibeat

English summary
ShahRukh Khan Has A Witty Reply When netizen asks Jawan Fake collections trolls;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X