ಡಾಕ್ಟರೇಟ್ ಗೌರವ ಪಡೆದ ಬಾಲಿವುಡ್ ನಟ ಶಾರೂಖ್ ಖಾನ್
ಆಸ್ಟ್ರೇಲಿಯದ ಮೆಲ್ಬೋರ್ನ್ ನಲ್ಲಿರುವ 'ಲಾ ಟ್ರೋಬ್ ವಿಶ್ವವಿದ್ಯಾಲಯ' ಭಾರತೀಯ ನಟ ಶಾರೂಖ್ ಖಾನ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಶುಕ್ರವಾರ ಮೆಲ್ಬೋರ್ನ್ನಲ್ಲಿ ನಡೆದ ಸಮಾರಂಭದಲ್ಲಿ ಶಾರೂಖ್ ಈ ಗೌರವಕ್ಕೆ ಪಾತ್ರರಾದರು.
ಮೀರ್ ಫೌಂಡೇಶನ್ ಮೂಲಕ ಬಡಮಕ್ಕಳು, ಮಹಿಳೆಯರ ಸಬಲೀಕರಣದ ಹೋರಾಟ ಮತ್ತು ಭಾರತ ಚಿತ್ರರಂಗಕ್ಕೆ ಶಾರುಖ್ ಖಾನ್ ನೀಡಿರುವ ಕೊಡುಗೆಯನ್ನ ಪರಿಗಣಿಸಿ ಲಾ ಟ್ರೋಬ್ ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿದೆ.
ಅಷ್ಟೇ ಅಲ್ಲ ಶಾರೂಖ್ ಹೆಸರಿನಲ್ಲಿ ಸ್ಕಾಲರ್ ಶಿಪ್ ನೀಡುವುದಾಗಿ ಲಾ ಟ್ರೋಬ್ ವಿಶ್ವವಿದ್ಯಾಲಯ ಘೋಷಿಸಿದೆ. ಸಂಶೋಧನ ವಿಭಾಗದಲ್ಲಿ ಆಯ್ಕೆಯಾಗುವ ಮಹಿಳಾ ಅಭ್ಯರ್ಥಿಗಳಿಗೆ ನಾಲ್ಕು ವರ್ಷಕ್ಕೆ ಧನಸಹಾಯ ಮಾಡುವುದಾಗಿ ಪ್ರಕಟಿಸಿದ್ದಾರೆ.

ಮಹಿಳಾ ಸಬಲೀಕರಣ ಮತ್ತು ಮಹಿಳಾ ಸಮಾನತೆ ದೃಷ್ಟಿಯಿಂದ ಈ ವಿದ್ಯಾರ್ಥಿವೇತನ ನೀಡುತ್ತಿರುವುದು ನನಗೆ ಸಂತಸ ತಂದಿದೆ. ಇದಕ್ಕಾಗಿ ಲಾ ಟ್ರೋಬ್ ವಿಶ್ವವಿದ್ಯಾಲಯಕ್ಕೆ ಹೃದಯಪೂರ್ವಕ ಧನ್ಯವಾದ ತಿಳಿಸುತ್ತೇನೆ'' ಎಂದು ಶಾರೂಖ್ ಖಾನ್ ತಿಳಿಸಿದ್ದಾರೆ.
ಕಿಂಗ್ ಆಫ್ ಬಾಲಿವುಡ್, ಕಿಂಗ್ ಖಾನ್, ಬಾದ್ ಶಾ ಎಂದೆಲ್ಲ ಕರೆಸಿಕೊಳ್ಳುವ ಶಾರೂಖ್ ಖಾನ್, ಸುಮಾರು 80ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರರಂಗಕ್ಕೆ ಇವರು ನೀಡಿದ ಕೊಡುಗೆ ಕೇಂದ್ರ ಸರ್ಕಾರದಿಂದ ಪದ್ಮಶ್ರೀ ಪುರಸ್ಕಾರ ಲಭಿಸಿದೆ. 14ಕ್ಕೂ ಹೆಚ್ಚು ಫಿಲಂ ಫೇರ್ ಪ್ರಶಸ್ತಿ ಸಿಕ್ಕಿದೆ.


Click it and Unblock the Notifications











