"ನಂಗೆ ಒಂದು ಸಿನ್ಮಾ ಮಾಡಿ ಪ್ಲೀಸ್" ಎಂದು ಮಣಿರತ್ನಂ ಬಳಿ ಬೇಡಿದ ಶಾರುಖ್ ಖಾನ್!

ಬಾಲಿವುಡ್ ನಟ ಶಾರುಖ್ ಖಾನ್ ಈಗ ಸಕ್ಸಸ್ ಟ್ರ್ಯಾಕ್‌ನಲ್ಲಿದ್ದಾರೆ. 4 ವರ್ಷಗಳ ಹಿಂದೆ 'ಜೀರೊ' ಸಿನಿಮಾ ಮಾಡಿ ಹೀನಾಯವಾಗಿದ್ದ ಸೋತಿದ್ದ ಕಿಂಗ್ ಖಾನ್ ಕಳೆದ ವರ್ಷ ಹ್ಯಾಟ್ರಿಕ್ ಹಿಟ್ ಕೊಟ್ಟಿದ್ದರು. ಸದ್ಯ ಯಾವುದೇ ಹೊಸ ಸಿನಿಮಾ ಶುರು ಮಾಡಿಲ್ಲ. ಆದರೆ ಇತ್ತೀಚೆಗೆ ಮಣಿರತ್ನಂ ಬಳಿ ಒಂದು ಸಿನಿಮಾ ಮಾಡಿ ಎಂದು ಬೇಡಿಕೊಂಡಿದ್ದಾರೆ.

25 ವರ್ಷಗಳ ಹಿಂದೆ ಮಣಿರತ್ನಂ ನಿರ್ದೇಶನದ 'ದಿಲ್‌ಸೇ' ಚಿತ್ರದಲ್ಲಿ ಶಾರುಖ್ ಖಾನ್ ನಟಿಸಿದ್ದರು. ಬಳಿಕ ಯಾವುದೇ ಸಿನಿಮಾದಲ್ಲಿ ಇವರಿಬ್ಬರು ಒಟ್ಟಿಗೆ ಕೆಲಸ ಮಾಡಲಿಲ್ಲ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಶಾರುಖ್ ಖಾನ್ ನನಗೊಂದು ಸಿನಿಮಾ ಮಾಡಿ ಎಂದು ಮನವಿ ಮಾಡಿದ್ದಾರೆ. ಆ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

Shahrukh Khan requested Mani Ratnam to direct a movie for him

ತಮಿಳು ನಿರ್ದೇಶಕ ಮಣಿರತ್ನಂ ಬಗ್ಗೆ ಹೊಸದಾಗಿ ಹೇಳುವುದು ಬೇಕಾಗಿಲ್ಲ. ಕ್ಲಾಸಿಕ್ ಸಿನಿಮಾಗಳಿಂದ ಮಣಿ ಸದಾ ಪ್ರೇಕ್ಷಕರನ್ನು ಗೆಲ್ಲುತ್ತಾರೆ. ಟ್ರೆಂಡ್‌ಗೆ ತಕ್ಕಂತೆ ಬದಲಾಗುತ್ತಾ ಸಿನಿಮಾಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಅದೇ ಕಾರಣಕ್ಕೆ ಮಣಿರತ್ನಂ ಸಿನಿಮಾಗಳು ಸದಾ ನಿರೀಕ್ಷೆ ಹುಟ್ಟುಹಾಕುತ್ತದೆ. ಕಳೆದ 'ಪೊನ್ನಿಯಿನ್ ಸೆಲ್ವನ್' ಸರಣಿ ಸಿನಿಮಾಗಳಿಂದ ಮಣಿ ಕಮಾಲ್ ಮಾಡಿದ್ದರು. ಇದೀಗ ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ವೇದಿಕೆ ಮೇಲಿದ್ದ ಶಾರುಖ್ ಖಾನ್, ವೇದಿಕೆ ಮುಂಭಾಗದಲ್ಲಿ ಕೂತಿದ್ದ ನಿರ್ದೇಶಕ ಮಣಿರತ್ನಂ ಬಳಿ ಸಿನಿಮಾ ಮಾಡುವಂತೆ ಕೇಳಿಕೊಂಡರು. ತಮಾಷೆಯಾಗಿಯೇ ಶಾರುಖ್ ತಮ್ಮ ಬೇಡಿಕೆ ಮುಂದಿಟ್ಟರು. "ಮಣಿ ಸರ್ ಎಷ್ಟೋ ಬಾರಿ ನಿಮ್ಮನ್ನು ಬೇಡಿದ್ದೇನೆ. ಮತ್ತೆ ನನ್ನ ಜೊತೆ ಸಿನಿಮಾ ಮಾಡಿ ಎಂದು ಕೇಳಿದೆ. ಬೇಡಿಕೊಂಡೆ.. ಈ ಸಲ ಸಿನಿಮಾ ಮಾಡಿದರೆ ರೈಲಿನಲ್ಲಿ ಅಲ್ಲ ವಿಮಾನದ ಮೇಲೆ ಬೇಕಿದ್ದರೂ ಡ್ಯಾನ್ಸ್ ಮಾಡುತ್ತೇನೆ (ಚೈಯ್ಯಾ ಚೈಯ್ಯಾ ಸಾಂಗ್ ನೆನಪಿಸಿ) ಎಂದಿದ್ದಾರೆ.

ಶಾರುಖ್ ಮನವಿಗೆ ಮಣಿರತ್ನಂ ನಗುತ್ತಲೇ ಉತ್ತರಿಸಿದ್ದಾರೆ. ವಿಮಾನ ಖರೀದಿಸಿದ ನಂತರ ಸಿನಿಮಾ ಮಾಡುತ್ತೇನೆ ಎಂದಿದ್ದಾರೆ. ಕೂಡಲೇ ಶಾರುಖ್ ಖಾನ್ ನಾನು ವಿಮಾನ ಖರೀದಿಸಿದರೆ ಸರಿಯೇ? ಇತ್ತೀಚೆಗೆ ನನ್ನ ಸಿನಿಮಾಗಳು ಹೇಗೆ ಸದ್ದು ಮಾಡ್ತಿದ್ದೆ ಗೊತ್ತಲ್ಲ. ನನಗೆ ವಿಮಾನ ಖರೀದಿಸುವುದು ಕಷ್ಟ ಅಲ್ಲ ಎನ್ನುವಂತೆ ಶಾರುಖ್ ತಮಾಷೆಯಾಗಿ ಮಾತನಾಡಿದ್ದಾರೆ. ವಿಮಾನದ ಮೇಲೆ ಡ್ಯಾನ್ಸ್ ಮಾಡ್ತೀನಿ ಎಂದ ಶಾರುಖ್‌ಗೆ ನಿನ್ನನ್ನು ಕೆಳಗೆ ಇಳಿಸುತ್ತೇನೆ, ಎಂದು ಮಣಿರತ್ನಂ ಹೇಳಿದ್ದಾರೆ. ಈ ಸಂಭಾಷಣೆ ವಿಡಿಯೋ ವೈರಲ್ ಆಗುತ್ತಿದೆ.

'ಪಠಾಣ್', 'ಜವಾನ್' ಹಾಗೂ 'ಡಂಕಿ' ಒಟ್ಟಾರೆಯಾಗಿ 2500 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿವೆ. ಒಂದೇ ವರ್ಷ 3 ಹಿಟ್ ಕೊಟ್ಟು ಕಿಂಗ್ ಖಾನ್ ದಾಖಲೆ ಬರೆದಿದ್ದಾರೆ. ಅದಕ್ಕೆ ತಕ್ಕಂತೆ ಸಂಭಾವನೆ ಪಡೆದಿದ್ದಾರೆ. 'ಜವಾನ್' ಹಾಗೂ 'ಡಂಕಿ' ಚಿತ್ರಗಳಿಗೆ ಬಂಡವಾಳವನ್ನು ಹೂಡಿ ಕೋಟಿ ಕೋಟಿ ಲಾಭ ಗಳಿಸಿದ್ದಾರೆ.

ಪ್ರಭಾಸ್ ನಟನೆಯ 'ಸಲಾರ್' ಹಾಗೂ ಶಾರುಖ್ 'ಡಂಕಿ' ಸಿನಿಮಾಗಳು ಒಂದು ದಿನ ಅಂತರದಲ್ಲಿ ಬಿಡುಗಡೆಯಾಗಿ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಟ್ಟಿತ್ತು. 'ಸಲಾರ್' ಚಿತ್ರಕ್ಕೆ ಮಲ್ಟಿಪ್ಲೆಕ್ಸ್‌ಗಳು ಸಿಗುತ್ತಿಲ್ಲ ಎಂದು ಹೊಂಬಾಳೆ ಸಂಸ್ಥೆ ಗರಂ ಆಗಿತ್ತು. ಎಲ್ಲವನ್ನು ಮೀರಿ ಎರಡು ಸಿನಿಮಾಗಳು ಭರ್ಜರಿ ಪ್ರದರ್ಶನ ಕಂಡಿವೆ. ಬಾಕ್ಸಾಫೀಸ್ ಲೆಕ್ಕಾಚಾರದಲ್ಲಿ ಶಾರುಖ್ ಸಿನಿಮಾವನ್ನು ಮೀರಿ ಪ್ರಭಾಸ್ ಸಿನಿಮಾ ಗೆದ್ದಿತ್ತು.

More from Filmibeat

English summary
Shahrukh Khan asked Mani Ratnam to direct a movie,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X