ಅಪ್ಪನ ಹೆಸರು ಉಳಿಸುತ್ತಿರುವ ಮಗಳು ; ಕಿಂಗ್ ಖಾನ್ ಪುತ್ರಿ ಖರೀದಿಸಿದ ಆಸ್ತಿ ಬೆಲೆ ಎಷ್ಟು ಗೊತ್ತಾ..?

ಸೆಲೆಬ್ರಿಟಿ ಗಳ ಬದುಕು ಚೆಂದ.. ಅವರ ಮಕ್ಕಳ ಬದುಕು ಇನ್ನೂ ಚೆಂದ. ಯಾಕೆಂದರೆ.. ಅಪ್ಪ ಹಾಕಿದ ಆಲದ ಮರದ ಕೆಳಗೆ ಕುಳಿತು ಇವರು ಏನೇ ಮಾಡಿದರೂ ಅದು ಸುದ್ದಿನೇ.‌ ಕಾಸು ಯಾರದ್ದಾದರೂ ಆಗಿರಲಿ. ಇದಕ್ಕೆ ಸದ್ಯದ ಉದಾಹರಣೆ ಶಾರುಖ್ ಖಾನ್ ಅವರ ಮುದ್ದಿನ ಪುತ್ರಿ ಸುಹಾನಾ ಖಾನ್

ಹೌದು. ಕಳೆದ ವರ್ಷ ಸುಹಾನಾ ಖಾನ್, ಕೃಷಿ ಭೂಮಿ‌ ಖರೀದಿಸಿದ್ದರು. 2,218 ಚದರ ಅಡಿ ಕೃಷಿ ಭೂಮಿಗೆ ಸುಹಾನಾ 12.91 ಕೋಟಿ ಹಣ ಕೊಟ್ಟಿದ್ದರು. ಈ ವಿಚಾರ ನಿಮಗೆ ಗೊತ್ತಿರಬೇಕು.‌ಯಾಕೆಂದರೆ ಆಗಲೂ ಸಾಮಾಜಿಕ‌ ಜಾಲತಾಣದಲ್ಲಿ ಸುಹಾನಾ ಪೇ ಚರ್ಚಾ ನಡೆದಿತ್ತು.

Shahrukh Khan’s daughter Suhana buys one more land parcel in Alibaug near Mumbai

23ರ‌ಪ್ರಾಯದಲ್ಲಿ ಎಂಥಹ ಸಾಧನೆ ಮಾಡಿದ್ದಾರೆ ಅನ್ನುವ ಮಾತು ಕೇಳಿ ಬಂದಿತ್ತು. ಈಗ ಸುಹಾನಾ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಮತ್ತೆ 10 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಕೊಂಡುಕೊಂಡಿದ್ದಾರೆ. ಸುಹಾನಾ ಖಾನ್ ಈಗ ಖರೀದಿಸಿರುವ ಆಸ್ತಿ 1.8 ಎಕರೆ ಇದೆ.

ಫೆಬ್ರವರಿ 12ರಂದು ಈ ವ್ಯವಹಾರ ನಡೆದಿದ್ದು, ಸುಹಾನಾ ಖಾನ್​ ಅವರು 57 ಲಕ್ಷ ರೂಪಾಯಿ ಸ್ಟ್ಯಾಂಪ್​ ಡ್ಯೂಟಿ ಭರ್ತಿ ಮಾಡಿದ್ದಾರೆ ಎಂದು ಹಿಂದಿ ಉದ್ಯಮ ಮಾತನಾಡುತ್ತಿದೆ. ಇನ್ನೂ ಸುಹಾನಾ ಈ ವ್ಯಾಪಾರ ವಹಿವಾಟು ಮಾಡಿರುವುದು ಮುಂಬೈನ ಪ್ರತಿಷ್ಟಿತ ಅಲಿಭಾಗ್​ನಲ್ಲಿ.

Shahrukh Khan’s daughter Suhana buys one more land parcel in Alibaug near Mumbai

ಅಲ್ಲಿ ಉಸಿರಾಡೋಕೂ ಟ್ಯಾಕ್ಸ್ ಕಟ್ಟಬೇಕು‌‌. ಆದರೂ ಸುಹಾನಾ ಅಲ್ಲಿ ಪ್ರಾಪರ್ಟಿ ಪರ್ಚೇಸ್ ಮಾಡಿದ್ದಾರೆ. ಹೀಗಾಗಿ ಇದು ಸಾಧನೆ ಅಲ್ಲದೇ ಇನ್ನೇನು.? ಎಂಬ ಚರ್ಚೆಯನ್ನ ಸಾಮಾಜಿಕ ಜಾಲತಾಣ ಮತ್ತೊಮ್ಮೆ ಮಾಡ್ತಿದೆ.

ಒಟ್ಟಿನಲ್ಲಿ ಸುಹಾನಾ ಮಾಡಿದ್ದು ಒಂದೇ ಸಿನಿಮಾ. ಆ ಸಿನಿಮಾವನ್ನ ಯಾರು ನೋಡಿದರೂ ಅನ್ನುವುದಕ್ಕೆ ಉತ್ತರ ಸುಹಾನಾ ನೀಡಬೇಕಾದರೂ ಸುಹಾನಾ ಅವರ ಈ ಆಸ್ತಿ ಮೋಹ ಸದ್ಯಕ್ಕೆ ಟ್ರೋಲಿಗರ ದಾಹವನ್ನ ತಣಿಸುತ್ತಿದೆ. ನಂಬಿಕೆ ಬಾರದೇ ಇದ್ದರೆ ಸಾಮಾಜಿಕ ಜಾಲತಾಣವನ್ನ ನೀವು ಇಣುಕಿ ನೋಡಬಹುದು.

More from Filmibeat

English summary
Actress Suhana Khan, daughter of Bollywood star Shahrukh Khan, has acquired a property in Alibaug, a sought-after beachfront locale among Mumbai's wealthy and elite, for a sum exceeding Rs 10 crore including stamp duty charges
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X