For Quick Alerts
  ALLOW NOTIFICATIONS  
  For Daily Alerts

  'ನನ್ನ ಮಗ ಹುಡುಗಿಯರ ಜೊತೆ ಸುತ್ತಾಡಬಹುದು, ಡ್ರಗ್ಸ್ ಕೂಡ ಸೇವಿಸಬಹುದು'- ಶಾರೂಖ್

  By ರವೀಂದ್ರ ಕೊಟಕಿ
  |

  ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ವ್ಯವಸ್ಥಿತ ರೀತಿಯಲ್ಲಿ ದಾಳಿ ಮಾಡುವುದರ ಮೂಲಕ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿ ಬಿ) ಅಧಿಕಾರಿಗಳು ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಸೇರಿದಂತೆ 8 ಜನರನ್ನು ಈಗಾಗಲೇ ಬಂಧಿಸಿದ್ದು ಅವರ ವಿಚಾರಣೆ ಕೂಡ ನಡೆಯುತ್ತಿದೆ.

  ವಿಷಯ ತಿಳಿದ ಶಾರುಖ್ ಖಾನ್ ತಮ್ಮ ಸ್ಪೇನ್ ಪ್ರವಾಸವನ್ನು ರದ್ದುಗೊಳಿಸಿ ತನ್ನ ಮಗನ ರಕ್ಷಣೆಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಶಾರುಖ್ ಖಾನ್ ಗೆ ನೈತಿಕ ಬೆಂಬಲ ನೀಡಲು ಬಾಲಿವುಡ್ ಮಂದಿ ರಾತ್ರಿಯಿಂದಲೇ ಶಾರುಖ್ ಖಾನ್ ನಿವಾಸ 'ಮನ್ನತ್' ಗೆ ಭೇಟಿ ನೀಡುತ್ತಿದ್ದಾರೆ.

  ಆರ್ಯನ್ ಅರೆಸ್ಟ್ ಬಳಿಕ ಶಾರೂಖ್ ಭೇಟಿ ಮಾಡಿದ ಸಲ್ಮಾನ್ ಖಾನ್ಆರ್ಯನ್ ಅರೆಸ್ಟ್ ಬಳಿಕ ಶಾರೂಖ್ ಭೇಟಿ ಮಾಡಿದ ಸಲ್ಮಾನ್ ಖಾನ್

  ಈಗಾಗಲೇ ಸಲ್ಮಾನ್ ಖಾನ್, ಶಾರುಖ್ ಖಾನ್ ನಿವಾಸದಲ್ಲಿ ಕುಟುಂಬದವರನ್ನು ಭೇಟಿ ಮಾಡಿ ಅವರಿಗೆ ನೈತಿಕ ಬೆಂಬಲ ಮತ್ತು ಧೈರ್ಯ ತುಂಬುವ ಕೆಲಸ ಮಾಡಿ ಬಂದಿದ್ದಾರೆ. ಇನ್ನೊಂದೆಡೆ ಸುನಿಲ್ ಶೆಟ್ಟಿ, ಪೂಜಾ ಭಟ್, ಸುಚಿತ್ರ ಕೃಷ್ಣಮೂರ್ತಿ ಸೇರಿದಂತೆ ಅನೇಕ ಬಾಲಿವುಡ್ನ ತಾರೆಗಳು ಶಾರುಖ್ ಖಾನ್ ಬೆಂಬಲಕ್ಕೆ ಸಂಕಷ್ಟದ ಸಮಯದಲ್ಲಿ ನಿಂತು ತಮ್ಮ ಟ್ವಿಟರ್ ಖಾತೆಗಳ ಮೂಲಕ ಬಹಿರಂಗವಾದ ಬೆಂಬಲವನ್ನು ಪ್ರಕಟಿಸಿದ್ದಾರೆ. ಅಲ್ಲದೆ, ಶಾರುಖ್ ಖಾನ್ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗೆ ತಮ್ಮ ನೈತಿಕ ಬೆಂಬಲವನ್ನು ನೀಡುತ್ತಾ ಟ್ವೀಟ್ ಗಳನ್ನು ಮಾಡುತ್ತಿದ್ದಾರೆ. ಮುಂದೆ ಓದಿ...

  ನೆಟಿಜನ್ ಗಳಿಂದ ಸಂಸ್ಕಾರದ ಪಾಠ

  ನೆಟಿಜನ್ ಗಳಿಂದ ಸಂಸ್ಕಾರದ ಪಾಠ

  ಇನ್ನೊಂದೆಡೆ ನೆಟಿಜನ್ ಗಳು ಅಕ್ಷಯ್ ಕುಮಾರ್ ತನ್ನ ಮಗನಿಗೆ ಅಡುಗೆ ಕಲಿಸುವ, ದೇವರ ಪೂಜೆ ಹೇಳಿಕೊಡುತ್ತಿರುವ ದೃಶ್ಯಗಳೊಂದಿಗೆ ಶಾರುಖ್ ಖಾನ್ ಗೆ 'ನಿಮ್ಮ ಮಗನ ಇಂದಿನ ಈ ದುಸ್ಥಿತಿಗೆ ನೀವೇ ಕಾರಣ' ಅಂತೇಳಿ ಶಾರುಖ್ ಖಾನ್ ಅವರ ಹಳೆಯ ವಿಡಿಯೋ ಒಂದನ್ನು ವೈರಲ್ ಮಾಡುತ್ತಿದ್ದಾರೆ. ಜೊತೆಗೆ ಮತ್ತೊಬ್ಬ ನಟ ಮಾಧವನ್ ಅವರು ತಮ್ಮ ಮಗನಿಗೆ ಕಲಿಸಿ ಕೊಡುತ್ತಿರುವ ಸಂಸ್ಕಾರದ ಫೋಟೋ ಜೊತೆ ಶಾರುಖ್ ಮತ್ತು ಅವನ ಮಗನ ಜೊತೆಗಿನ ಫೋಟೋಗಳೊಂದಿಗೆ, ಸಂಸ್ಕಾರ ಕಲಿಸಿದರೆ ಮಗ ಏನಾಗುತ್ತಾನೆ? ಕಲಿಸದೆ ಹೋದರೆ ಏನಾಗುತ್ತಾನೆ? ಅಂತೇಳಿ ಕಾಲೆಳೆಯುತ್ತಿದ್ದಾರೆ.

  ವೈರಲ್ ಆಗುತ್ತಿರುವ ಶಾರುಖ್ ಖಾನ್ ಹಳೆಯ ವಿಡಿಯೋ

  ವೈರಲ್ ಆಗುತ್ತಿರುವ ಶಾರುಖ್ ಖಾನ್ ಹಳೆಯ ವಿಡಿಯೋ

  ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನನ್ನು ಡ್ರಗ್ಸ್ ಪ್ರಕರಣದಲ್ಲಿ ಎನ್ ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಆರ್ಯನ್ ಸೇರಿದಂತೆ ಒಟ್ಟು ಎಂಟು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅಧಿಕಾರಿಗಳು ಪ್ರಸ್ತುತ ಡ್ರಗ್ ಪೆಡ್ಲರ್‌ಗಳೊಂದಿಗೆ ಆರ್ಯನ್ ಚಾಟ್ ಮಾಡುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಈ ಹಿಂದೆ ತನ್ನ ಮಗನ ಬಗ್ಗೆ ಶಾರುಖ್ ಆಡಿದ್ದ ಮಾತುಗಳು ಈಗ ವೈರಲ್ ಆಗುತ್ತಿವೆ. ಖಾನ್ ಅವರ ಪತ್ನಿ ಗೌರಿ ಖಾನ್ ಜೊತೆಗೂಡಿ ಸಿಮಿ ಗಾರೆವಾಲ್ ಗೆ ನೀಡಿದ ಸಂದರ್ಶನ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

  ಡ್ರಗ್ಸ್ ಪ್ರಕರಣ: ಎನ್‌ಸಿಬಿ ವಶಕ್ಕೆ ಶಾರುಖ್ ಪುತ್ರ, ನ್ಯಾಯಾಲಯದಲ್ಲಿ ನಡೆದಿದ್ದೇನು?ಡ್ರಗ್ಸ್ ಪ್ರಕರಣ: ಎನ್‌ಸಿಬಿ ವಶಕ್ಕೆ ಶಾರುಖ್ ಪುತ್ರ, ನ್ಯಾಯಾಲಯದಲ್ಲಿ ನಡೆದಿದ್ದೇನು?

  ಆರ್ಯನ್ ಬಗ್ಗೆ ಶಾರುಖ್ ಹೇಳಿದ ಮಾತುಗಳೇನು?

  ಆರ್ಯನ್ ಬಗ್ಗೆ ಶಾರುಖ್ ಹೇಳಿದ ಮಾತುಗಳೇನು?

  'ನನ್ನ ಮಗ ಹುಡುಗಿಯರನ್ನು ಡೇಟ್ ಮಾಡಬಹುದು. ಸಿಗರೇಟ್ ಸೇದಬಹುದು. ಲೈಂಗಿಕತೆ ಮತ್ತು ಮಾದಕವಸ್ತುಗಳನ್ನು ಸಹ ಆನಂದಿಸಬಹುದು. ತಾನು ಯೌವ್ವನದಲ್ಲಿ ಮಾಡಲಾಗದ ಎಲ್ಲಾ ಕೆಲಸಗಳನ್ನು ಮಾಡಲು ಅವನಿಗೆ ಮುಕ್ತವಾದ ಅವಕಾಶವಿದೆ" ಅಂತ ಶಾರುಖ್ ತಮಾಷೆಯಾಗಿ ಹೇಳುತ್ತಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ.

  ಅಪ್ಪನ ಆಸೆ ಈಡೇರಿಸಿದ ಮಗ

  ಅಪ್ಪನ ಆಸೆ ಈಡೇರಿಸಿದ ಮಗ

  ಸಂದರ್ಶನ ನಡೆದಾಗ ಆರ್ಯನ್ ಗೆ ಮೂರು ವರ್ಷ ವಯಸ್ಸು. ಅದಕ್ಕೆ ಈಗ ನೆಟಿಜನ್ ಗಳು ಈವಿಡಿಯೋ ಹಿಡಿದು 'ಅಂತೂ ಮಗ ಅಪ್ಪನ ಆಸೆಯನ್ನು ಪೂರೈಸುತ್ತಿದ್ದಾನೆ. ತಂದೆಯ ಬಯಕೆಯಂತೆ ಅವರು ತಮ್ಮ ಯೌವ್ವನದಲ್ಲಿ ಮಾಡಲಾಗದ ಕೆಲಸಗಳನ್ನು ಮಾಡುವುದರ ಮೂಲಕ, ತಂದೆಯ ಮಾತುಗಳನ್ನು ನಿಜವಾಗಿಸಿದ್ದಾನೆ ಎಂದು ನೆಟಿಜನ್ ಗಳು ಕಮೆಂಟ್ ಮಾಡುತ್ತಿದ್ದಾರೆ.

  English summary
  Bollywood Superstar Shah Rukh Khan says Aryan Khan can do drugs in Throwback interview; Video goes viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X