twitter
    For Quick Alerts
    ALLOW NOTIFICATIONS  
    For Daily Alerts

    ''ನನ್ನ ತಂದೆ ಒಬ್ಬ ಸಕ್ಸಸ್ ಫುಲ್ ಫೆಲ್ಯೂರ್''- ಶಾರೂಖ್ ಖಾನ್ ಹೃದಯಸ್ಪರ್ಶಿ ಮಾತುಗಳು

    |

    ಯಶಸ್ಸು ಸುಲಭವಾಗಿ ಸಿಗಲ್ಲ. ಸುಲಭವಾಗಿ ಸಿಕ್ಕ ಯಶಸ್ಸು ಬಹಳ ದಿನ ಇರಲ್ಲ. ಈ ಮಾತು ಚಿತ್ರರಂಗದಲ್ಲಿ ನೂರಕ್ಕೆ ನೂರರಷ್ಟು ನಿಜ. ಇಂತಹ ಪರಿಸ್ಥಿತಿಯಲ್ಲಿ ಕೆಲವು ಸ್ಟಾರ್ ಗಳು ಕಷ್ಟಪಟ್ಟು ಬೆಳೆದು, ಯಶಸ್ಸಿಗೆ ನಿಜವಾದ ಅರ್ಧ ನೀಡುತ್ತಾರೆ. ಆ ರೀತಿಯಾಗಿ ಪರಿಶ್ರಮದಿಂದ ಮೇಲೆ ಬಂದ ನಟ ಶಾರೂಖ್ ಖಾನ್.

    ಶಾರೂಖ್ ಖಾನ್ ಈಗಾಗಲೇ ಸಾಕಷ್ಟು ಸಂದರ್ಶನಗಳಲ್ಲಿ ತಮ್ಮ ಜೀವನದ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಇತ್ತೀಚಿಗಷ್ಟೆ ಅವರ ಒಂದು ಸಂದರ್ಶನ ತುಂಬ ಭಾವನಾತ್ಮಕವಾಗಿ ಇತ್ತು. ನೆಟ್ ಫಿಕ್ಸ್ ನಡೆಸಿದ ಈ ಸಂದರ್ಶನದಲ್ಲಿ ಯಾವುದೇ ಮುಚ್ಚು ಮರೆ ಇಲ್ಲದೆ ಶಾರೂಖ್ ಖಾನ್ ಮಾತನಾಡಿದರು.

    ಸಣ್ಣ ವಯಸ್ಸಿನಲ್ಲಿಯೇ ತಂದೆ, ತಾಯಿಯನ್ನು ಶಾರೂಖ್ ಖಾನ್ ಕಳೆದುಕೊಂಡರು. ಸಾವಿನ ಬಗ್ಗೆ ನಂತರ ಜೀವನದ ಜೊತೆಗಿನ ಹೋರಾಟದಲ್ಲಿ ಗೆದ್ದು, ದೊಡ್ಡ ನಟನಾಗಿ ಬೆಳೆದರು.

    'ಬಾಯ್ ಫ್ರೆಂಡ್ ಬಿಟ್ಟಾಕು' ಮಗಳಿಗೆ ಶಾರೂಖ್ ಖಾನ್ ಬುದ್ದಿ ಮಾತು 'ಬಾಯ್ ಫ್ರೆಂಡ್ ಬಿಟ್ಟಾಕು' ಮಗಳಿಗೆ ಶಾರೂಖ್ ಖಾನ್ ಬುದ್ದಿ ಮಾತು

    ಇತ್ತೀಚಿಗಿನ ಸಂದರ್ಶನದಲ್ಲಿ ಶಾರೂಖ್ ಹೇಳಿದ ಒಂದು ಘಟನೆ ಹೃದಯಸ್ಪರ್ಶಿಯಾಗಿತ್ತು. ಶಾರೂಖ್ ಖಾನ್ ಹುಟ್ಟುಹಬ್ಬದ ವಿಶೇಷವಾಗಿ ಆ ಸಂದರ್ಶನದ ಪ್ರಮುಖ ಅಂಶವನ್ನು ಇಲ್ಲಿ ಹಂಚಿಕೊಂಡಿದ್ದೇವೆ.

    ನನ್ನ ತಂದೆ ಒಬ್ಬ 'ಸಕ್ಸಸ್ ಫುಲ್ ಫೆಲ್ಯೂರ್'

    ನನ್ನ ತಂದೆ ಒಬ್ಬ 'ಸಕ್ಸಸ್ ಫುಲ್ ಫೆಲ್ಯೂರ್'

    ತಮ್ಮ ತಂದೆಯನ್ನು ತಮ್ಮ ಸಕ್ಸಸ್ ಫುಲ್ ಫೆಲ್ಯೂರ್ ಎಂದು ಶಾರೂಖ್ ಖಾನ್ ಹೇಳುತ್ತಾರೆ. ಕಾರಣ ಅವರ ತಂದೆ ಜೀವನದಲ್ಲಿ ಏನನ್ನು ಮಾಡಲಿಲ್ಲವಂತೆ. ಸತ್ಯವಾಗಿ ಇದ್ದದ್ದೇ ಅವರ ಯಶಸ್ಸಿಗೆ ಅಡ್ಡ ಆಯಿತಂತೆ. ಕೆಲಸ ಇಲ್ಲದೆ ಮಕ್ಕಳ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿದ್ದರಂತೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದು, ಮಾತ್ರ ತಂದೆಯ ಬಗ್ಗೆ ಶಾರೂಖ್ ಗೆ ಖುಷಿ ನೀಡುವ ವಿಷಯ.

    ಡಾಕ್ಟರೇಟ್ ಗೌರವ ಪಡೆದ ಬಾಲಿವುಡ್ ನಟ ಶಾರೂಖ್ ಖಾನ್ಡಾಕ್ಟರೇಟ್ ಗೌರವ ಪಡೆದ ಬಾಲಿವುಡ್ ನಟ ಶಾರೂಖ್ ಖಾನ್

    ತಂದೆ, ತಾಯಿ ಇಬ್ಬರ ನಿಧನ

    ತಂದೆ, ತಾಯಿ ಇಬ್ಬರ ನಿಧನ

    ಶಾರೂಖ್ ಆಗ 15 ವರ್ಷದ ಹುಡುಗ. ಮನೆಗೆ ಬರುವ ತಂದೆ ತನಗೆ ಕ್ಯಾನ್ಸರ್ ಇದೆ ಎಂದು ಹೇಳುತ್ತಾರೆ. ಶಾರೂಖ್ ಹಾಗೂ ಅವರ ತಾಯಿ ಇಬ್ಬರಿಗೂ ಆ ಕಾಲದಲ್ಲಿ ಕ್ಯಾನ್ಸರ್ ಖಾಯಿಲೆ ಬಗ್ಗೆ ಅಷ್ಟೊಂದು ತಿಳಿದಿರಲಿಲ್ಲ. ಅದು ವಾಸಿಯಾಗಿಬಿಡುವ ಖಾಯಿಲೆ ಎಂದು ಭಾವಿಸಿದ್ದರು. ಆದರೆ, ಕ್ಯಾನ್ಸರ್ ಆದ ಮೂರು ತಿಂಗಳಿಗೆ ತಂದೆ ತೀರಿಹೋದರು. ನಂತರ ಕೆಲವೇ ವರ್ಷಗಳಲ್ಲಿ ತಾಯಿ ಕೂಡ ಕೊನೆಯುಸಿರೆಳೆದರು.

    ಸಾವಿನ ಬಗ್ಗೆ ತಮ್ಮದೇ ವ್ಯಾಖ್ಯಾನ

    ಸಾವಿನ ಬಗ್ಗೆ ತಮ್ಮದೇ ವ್ಯಾಖ್ಯಾನ

    ತಂದೆ ನಿಧನರಾದ ನಂತರ ಸಾವಿನ ಬಗ್ಗೆ ಶಾರೂಖ್ ಖಾನ್ ತಮ್ಮದೆ ರೀತಿಯಾದ ಅರ್ಥವನ್ನು ಕಂಡುಕೊಂಡಿದ್ದರು. ಯಾರಿಗೆ ಭೂಮಿಯ ಮೇಲೆ ಕೆಲಸ ಮುಗಿಯುತ್ತದೆ, ಯಾರು ಜೀವನದಲ್ಲಿ ತೃಪ್ತಿಯಾಗಿ ಇರುತ್ತದೆ ಅವರಿಗೆ ಮಾತ್ರ ಸಾವು ಬರುತ್ತದೆ ಎಂದುಕೊಂಡಿದ್ದರು. ಹೀಗಾಗಿ ತಾಯಿ ನೆಮ್ಮದಿಯಾಗಿ ಇದ್ದರೆ, ಆಕೆಯೂ ಸಾಯುತ್ತಾಳೆ ಎಂದು ತೊಂದರೆ ನೀಡಲು ಶುರು ಮಾಡಿದರು.

    ತಾಯಿಗೆ ನೆಮ್ಮದಿ ಇರಬಾರದು

    ತಾಯಿಗೆ ನೆಮ್ಮದಿ ಇರಬಾರದು

    ಆಗಿನ್ನು ಶಾರೂಖ್ ಗೆ ಸಾವು ಎಂದರೇನು ಎಂದು ಸರಿಯಾಗಿ ತಿಳಿಯದ ವಯಸ್ಸು. ತಮ್ಮ ತಾಯಿ ಸಾಯಬಾರದು ಎಂಬ ಕಾರಣಕ್ಕೆ ಅವರಿಗೆ ತೊಂದರೆ ಆಗುವಂತೆ ನಡೆದುಕೊಂಡರು. ಅಕ್ಕನಿಗೆ ಕಾಟ ನೀಡುತ್ತಿದ್ದರು. ಕೆಲಸ ಬಿಟ್ಟರು, ಕುಡಿಯುವುದನ್ನು ಕಲಿತರು. ಈ ರೀತಿ ತಮ್ಮ ತಾಯಿಗೆ ನೆಮ್ಮದಿ ಇಲ್ಲದಂತೆ ಮಾಡಿದರು. ಜೀವನದಲ್ಲಿ ಸಮಾಧಾನ, ನೆಮ್ಮದಿ ಇದ್ದರೆ, ಆ ವ್ಯಕ್ತಿಗಳಿಗೆ ಸಾವು ಬರುತ್ತದೆ ಎನ್ನುವುದು ಅವರ ನಂಬಿಕೆ ಆಗಿತ್ತು.

    ಸಿನಿಮಾಗಳ ಸೋಲಿನಿಂದ ಕಂಗೆಟ್ಟ ಶಾರುಖ್ ಈಗ ತಮಿಳಿನಲ್ಲಿ ವಿಲನ್?ಸಿನಿಮಾಗಳ ಸೋಲಿನಿಂದ ಕಂಗೆಟ್ಟ ಶಾರುಖ್ ಈಗ ತಮಿಳಿನಲ್ಲಿ ವಿಲನ್?

    ಯಶಸ್ಸನ್ನು ಅಪ್ಪ, ಅಮ್ಮ ಇಬ್ಬರು ನೋಡಲಿಲ್ಲ

    ಯಶಸ್ಸನ್ನು ಅಪ್ಪ, ಅಮ್ಮ ಇಬ್ಬರು ನೋಡಲಿಲ್ಲ

    ತಾಯಿ ಸಾವಿನ ಸಮಯದಲ್ಲಿ ಶಾರೂಖ್ ಖಾನ್ ಮುಂಬೈನಲ್ಲಿ ಟಿವಿ ಸೀರಿಯಲ್ ವೊಂದರಲ್ಲಿ ನಟಿಸಲು ಶುರು ಮಾಡಿದರು. ಮುಂದೆ ''ದಿವಾನ' ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ಸಿನಿಮಾಗಳ ಮೇಲೆ ಸಿನಿಮಾ ಮಾಡಿ, ಸೋಲು, ಗೆಲುವು ಎಲ್ಲವನ್ನು ಕಂಡು, ಇಂದು ದೊಡ್ಡ ಸ್ಟಾರ್ ಆಗಿದ್ದಾರೆ. ಆದರೆ, ಈ ಯಶಸ್ಸು ನೋಡಲು ಅವರ ಅಪ್ಪ, ಅಮ್ಮ ಇಬ್ಬರು ಇಲ್ಲ.

    English summary
    Actor Shahrukh Khan says his father is successful failure person
    Saturday, November 2, 2019, 17:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X