For Quick Alerts
  ALLOW NOTIFICATIONS  
  For Daily Alerts

  ಶಾರುಖ್ ಪುತ್ರನಿಗೆ ಹುಟ್ಟು ಹಬ್ಬದ ಸಂಭ್ರಮ: ಆರ್ಯನ್ ಖಾನ್‌ ಬಗ್ಗೆ ವಿಶೇಷ ಸುದ್ದಿ ಇಲ್ಲಿದೆ

  |

  ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ಖಾನ್ ಅವರ ಪುತ್ರ ಆರ್ಯನ್ ಖಾನ್‌ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಶಾರುಖ್ ಅವರಂತೆ, ಅವರ ಮೂವರು ಮಕ್ಕಳು ಆರ್ಯನ್, ಸುಹಾನಾ ಮತ್ತು ಅಬ್ರಾಮ್ ಖಾನ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಇವರನ್ನು ಸಾಕಷ್ಟು ಜನ ಫಾಲೋ ಮಾಡುತ್ತಾರೆ. ಅವರಿಗೇ ಆದ ಅಭಿಮಾನಿಗಳು ಕೂಡ ಇದ್ದಾರೆ. ಹಾಗಾಗಿ ಈ ಮೂವರ ಬಗ್ಗೆ ಏನೇ ವಿಚಾರ ಹರಿದಾಡಿದರೂ ಅದು ವೈರಲ್‌ ಆಗಿ ಬಿಡುತ್ತದೆ. ಇಂದು ಶಾರುಖ್ ಹಿರಿಯ ಮಗ, ಆರ್ಯನ್ ಖಾನ್ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

  ಇತ್ತೀಚೆಗೆ ಡ್ರಗ್ ಪ್ರಕರಣದಲ್ಲಿ ಆರ್ಯನ್‌ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದರು. ಇದು ಇಡೀ ಕುಟುಂಬಕ್ಕೆ ಆಘಾತ ತಂದಿತ್ತು. ಬಾಲಿವುಡ್‌ನಲ್ಲಿ ಈ ಸುದ್ದಿ ಸಂಚಲನ ಮೂಡಿಸಿತ್ತು. ಸದ್ಯ ಆರ್ಯನ್ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾರೆ. ಆರ್ಯನ್ ಖಾನ್ ತಮ್ಮ ಹುಟ್ಟು ಹಬ್ಬಕ್ಕೂ ಮೊದಲೇ ಜೈಲಿನಿಂದ ಹೊರ ಬಂದಿರುವುದು ಕುಟುಂಬಕ್ಕೆ ಸಂತಸದ ಸುದ್ದಿ. ಸದ್ಯ ಶಾರುಖ್ ಕುಟುಂಬ ಆರ್ಯನ್‌ ಹುಟ್ಟು ಹಬ್ಬದ ಆಚರಣೆಯ ಸಂಭ್ರಮದಲ್ಲಿ ಇದೆ.

  ಶಾರುಖ್‌ ಪುತ್ರನ ಬಗ್ಗೆ ನಿಮಗೆ ಗೊತ್ತಿಲ್ಲದ ಒಂದಷ್ಟು ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ. ಮುಂದೆ ಓದಿ

  1. ಆರ್ಯನ್ ನಾಯಕನಟನಾಗಿ ಇನ್ನೂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿಲ್ಲ. ಆದರೆ ಆರ್ಯನ್ ಖಾನ್ ಬಾಲ ನಟನಾಗಿ ಕಭಿ ಖುಷಿ ಕಭಿ ಗಮ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ಈ ಚಿತ್ರದಲ್ಲಿ ಶಾರುಖ್ ನಟಿಸಿದೆ ರಾಹುಲ್ ಪಾತ್ರದ ಬಾಲ್ಯದ ಪಾತ್ರವನ್ನು ಆರ್ಯನ್ ಮಾಡಿದ್ದಾನೆ.

  2. ಆರ್ಯನ್ ಖಾನ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಫಿಲ್ಮ್ ಮೇಕಿಂಗ್ ಕುರಿತು ಅಧ್ಯಯನ ಮಾಡಿದ್ದಾನೆ. ಆದರೆ, ಆರ್ಯನ್‌ಗೆ ಕ್ಯಾಮೆರಾ ಹಿಂದೆ ಇರಲು ಹೆಚ್ಚು ಆಸಕ್ತಿ ಎಂದು ಶಾರುಖ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

  3. ಆರ್ಯನ್‌ ಖಾನ್‌ಗೆ ನಟನಾಗಲು ಇಷ್ಟವಿಲ್ಲ ಎಂದು ಎಸ್‌ಆರ್‌ಕೆ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಸಿನಿಮಾಗಳನ್ನು ನಿರ್ಮಿಸಲು ಮತ್ತು ನಿರ್ದೇಶಕನಾಗಲು ಆರ್ಯನ್‌ಗೆ ಹೆಚ್ಚು ಆಸಕ್ತಿ.

  4. ಆರ್ಯನ್‌ ಖಾನ್‌ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 1.9 ಮಿಲಿಯನ್ ಫಾಲೋಯರ್ಸ್ ಹೊಂದಿದ್ದಾರೆ. ಆದರೆ ಆರ್ಯನ್ 439 ಜನರನ್ನು ಫಾಲೋ ಮಾಡುತ್ತಿದ್ದಾರೆ. ಈ ಲಿಸ್ಟ್‌ನಲ್ಲಿ ಕತ್ರಿನಾ ಕೈಫ್, ಅರ್ಜುನ್ ಕಪೂರ್, ಶನಯಾ ಕಪೂರ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಇದ್ದಾರೆ.

  5. 1.9 ಮಿಲಿಯನ್ ಫಾಲೋಯರ್ಸ್ ಇದ್ದರೂ ಆರ್ಯನ್ ಖಾನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕೇವಲ 24 ಪೋಸ್ಟ್‌ಗಳನ್ನು ಮಾತ್ರ ಹಾಕಿದ್ದಾರೆ.

  6. ಆರ್ಯನ್‌ ಕ್ರೀಡಾ ಉತ್ಸಾಹಿ, ಸಮರ ಕಲೆಗಳಲ್ಲಿ ತರಬೇತಿ ಪಡೆದಿದ್ದಾರೆ. ಟೇಕ್ವಾಂಡೋ ಸಮರ ಕಲೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾರೆ. ಅವರು 2010 ರಲ್ಲಿ ಮಹಾರಾಷ್ಟ್ರದಲ್ಲಿ ಟೇಕ್ವಾಂಡೋ ಸ್ಪರ್ಧೆಯನ್ನು ಗೆದ್ದಿದ್ದಾರೆ.

  7. ಫುಟ್ಬಾಲ್‌ ಆಟ ಆರ್ಯನ್ ಖಾನ್‌ಗೆ ಇಷ್ಟ. ಶಾಲೆಯಲ್ಲಿ ಫುಟ್ಬಾಲ್ ತಂಡದ ನಾಯಕ ಆಗಿದ್ದ ಆರ್ಯನ್.

  8. 2019ರಲ್ಲಿ ತೆರೆಕಂಡ ದಿ ಲಯನ್ ಕಿಂಗ್ ಹಿಂದಿ ಆವೃತ್ತಿಗೆ, ಆರ್ಯನ್ ಸಿಂಬಾ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಮತ್ತು ಶಾರುಖ್ ಸಿಂಬಾ ಅವರ ತಂದೆ ಮುಫಾಸಾ ಪಾತ್ರಕ್ಕೆ ಧ್ವನಿ ನೀಡಿದ್ದಾರೆ.

  Shahrukh Khan Son Aryan Khan Birthday

  9. ಆರ್ಯನ್ 2004 ರಲ್ಲಿ ಬಂದ ಅನಿಮೇಟೆಡ್ ಚಲನಚಿತ್ರ ದಿ ಇನ್‌ಕ್ರೆಡಿಬಲ್ಸ್ ಹಿಂದಿ ಆವೃತ್ತಿಗೆ ಧ್ವನಿ ನೀಡಿದ್ದಾರೆ. ಮತ್ತು ಅತ್ಯುತ್ತಮ ಡಬ್ಬಿಂಗ್ ಬಾಲ ಕಲಾವಿದ ಪ್ರಶಸ್ತಿಯನ್ನು ಪಡೆದಿದ್ದಾರೆ.

  10.ಸ್ಟಾರ್ ಕಿಡ್ ಸುನಿಲ್ ಶೆಟ್ಟಿ ಅವರ ಮಗ ಅಹಾನ್ ಶೆಟ್ಟಿಯೊಂದಿಗೆ ಉತ್ತಮ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ ಮತ್ತು ಇಬ್ಬರೂ ಒಟ್ಟಿಗೆ ಕ್ರಿಕೆಟ್ ಆಡುವುದನ್ನು ಕಾಣಬಹುದು.

  11. ಆರ್ಯನ್ ಖಾನ್‌ಗೆ ತನ್ನ ಕಿರಿಯ ಸಹೋದರ ಅಬ್ರಾಮ್ ಖಾನ್ ಅಂದರೆ ತುಂಬಾ ಇಷ್ಟ. ಅಬ್ರಾಮ್ ಖಾನ್ ಜೊತೆಗೆ ಆಗಾಗ ಕ್ಯಾಮೆರಾಗೆ ಪೋಸ್ ಕೊಡುತ್ತಾರೆ. ತಮ್ಮನೊಂದಿಗಿನ ಫೋಟೋಗಳನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಈ ಸಂಗತಿಗಳು ಆರ್ಯನ್‌ ಖಾನ್‌ ಚಿತ್ರರಂಗದಲ್ಲಿ ಒಬ್ಬ ನಿರ್ದೇಶಕನಾಗ ಬೇಕು ಎನ್ನುವ ಆಸೆ ಇಟ್ಟು ಕೊಂಡಿರುವುದನ್ನು ಹೇಳುತ್ತವೆ. ಹಾಗಿದ್ದರೆ ಆರ್ಯನ್ ಖಾನ್ ಅಪ್ಪನಂತೆ ನಾಯಕ ನಟ ಆಗುವುದಿಲ್ಲ. ಬದಲಿಗೆ ನಿರ್ದೇಶಕನಾಗಿಯೇ ಬಾಲಿವುಡ್‌ಗೆ ಎಂಟ್ರಿ ಕೊಡುವ ಲಕ್ಷಣ ಕಾಣುತ್ತಿದೆ.

  English summary
  Today Is Shahrukh Khan Son Aryan Khan Birthday Family Going To celebrate,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X