ಶಾರೂಖ್ ಖಾನ್ ಪುತ್ರ ಡೇಟಿಂಗ್ ಮಾಡ್ತಿರುವ ಹುಡುಗಿ ಅವಳಲ್ಲ, ಇವಳು.!

ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಚಿತ್ರರಂಗಕ್ಕೆ ಬರಲು ಸಜ್ಜಾಗುತ್ತಿದ್ದು, ಅದಕ್ಕಾಗಿ ಅಗತ್ಯವಾದ ತಯಾರಿ ನಡೆಸುತ್ತಿದ್ದಾರೆ. ಲಂಡನ್ ಗೆ ತೆರಳಿರುವ ಆರ್ಯನ್ ನಟನೆ ಮತ್ತು ಇತರೆ ಕೌಶಲ್ಯಗಳ ತರಬೇತಿ ಪಡೆದುಕೊಳ್ಳುತ್ತಿದ್ದಾರೆ.

ಈ ಮಧ್ಯೆ ಬಾಲಿವುಡ್ ನಟಿ ಅನನ್ಯ ಪಾಂಡೆ ಜೊತೆ ಆರ್ಯನ್ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಇಂಟರ್ ನೆಟ್ ನಲ್ಲಿ ಹೆಚ್ಚು ಸದ್ದು ಮಾಡಿತು. ಕೆಲವು ಪಾರ್ಟಿಗಳಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡ ಫೋಟೋಗಳು ಕೂಡ ವೈರಲ್ ಆಗಿತ್ತು.

ಆದ್ರೆ, ಇವರಿಬ್ಬರ ಸಂಬಂಧದ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿರಲಿಲ್ಲ. ಬಾಲ್ಯದಿಂದ ಇಬ್ಬರು ಸ್ನೇಹಿತರು. ಹಾಗಾಗಿ, ಒಟ್ಟಿಗೆ ತಿರುಗಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಇದೀಗ, ಅನನ್ಯ ಪಾಂಡೆ ಬಿಟ್ಟು ಇನ್ನೊಬ್ಬ ಹುಡುಗಿ ಜೊತೆ ಆರ್ಯನ್ ಹೆಸರು ಕೇಳಿ ಬಂದಿದೆ.

Shahrukh khan son Aryan Khan dating with london girl

ಪಾರ್ಟಿಯೊಂದರಲ್ಲಿ ಹುಡುಗಿ ಜೊತೆ ಡ್ಯಾನ್ಸ್ ಮಾಡುತ್ತಿರುವ ಆರ್ಯನ್ ಈ ಫೋಟೋವನ್ನ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಆಕೆ ಯಾರು, ಏನು ಎಂಬುದರ ಬಗ್ಗೆ ಯಾವುದೇ ಮಾಹಿತಿ ಕೊಟ್ಟಿಲ್ಲ. ಹೀಗಾಗಿ, ಇವರಿಬ್ಬರ ಈ ಫೋಟೋ ಬಗ್ಗೆ ಹೆಚ್ಚು ಚರ್ಚೆಯಾಗ್ತಿದೆ. ಲಂಡನ್ ಮೂಲದ ಈ ಹುಡುಗಿ ಜೊತೆ ಆರ್ಯನ್ ಡೇಟ್ ಮಾಡ್ತಿದ್ದಾರೆ ಎಂದು ಸುದ್ದಿ ಹರಡಿದೆ.

ಇತ್ತೀಚಿಗಷ್ಟೆ ಶಾರೂಖ್ ಖಾನ್ ದಂಪತಿ ಮಾಲ್ಡೀವ್ಸ್ ನಲ್ಲಿ ಹಾಲಿಡೇ ಎಂಜಾಯ್ ಮಾಡಲು ಹೋಗಿದ್ದರು. ಈ ಸಂತಸ ಕ್ಷಣದ ಕೆಲವು ಫೋಟೋಗಳನ್ನ ಗೌರಿ ಖಾನ್ ಹಂಚಿಕೊಂಡಿದ್ದರು. 'ಜೀರೋ' ಚಿತ್ರದ ಸೋಲಿನ ನಂತರ ಗಂಭೀರವಾಗಿರುವ ಶಾರೂಖ್ ಸ್ಕ್ರಿಪ್ಟ್ ಆಯ್ಕೆಯಲ್ಲಿ ಎಚ್ಚರವಹಿಸಿದ್ದಾರೆ. ಹೀಗಾಗಿ, ಸದ್ಯಕ್ಕೆ ಯಾವ ಚಿತ್ರವನ್ನು ಅಧಿಕೃತವಾಗಿ ಘೋಷಿಸಿಲ್ಲ.

More from Filmibeat

English summary
Shahrukh khan son Aryan Khan's pictures with a mystery girl have been doing the rounds on the social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X