For Quick Alerts
  ALLOW NOTIFICATIONS  
  For Daily Alerts

  ಐಪಿಎಲ್ ಹರಾಜಿನಲ್ಲಿ ಆಕರ್ಷಣೆಯಾದ ಶಾರೂಖ್ ಖಾನ್ ಪುತ್ರ ಆರ್ಯನ್

  |

  2021ರ ಐಪಿಎಲ್ ಹರಾಜು ಪ್ರಕ್ರಿಯೆ ಇಂದು ಚೆನ್ನೈನಲ್ಲಿ ನಡೆಯಿತು. ಕೆಕೆಆರ್ ತಂಡದ ಪರವಾಗಿ ಶಾರೂಖ್ ಖಾನ್ ಭಾಗವಹಿಸಿರಲಿಲ್ಲ. ಆದ್ರೆ, ಕೆಕೆಆರ್ ಕ್ಯಾಂಪ್‌ನಲ್ಲಿ ಒಂದು ಕ್ಷಣ ಶಾರೂಖ್ ಖಾನ್ ಅವರನ್ನೇ ನೋಡಿದ ಅನುಭವ ಆಯಿತು. ಆಮೇಲೆ ಸೂಕ್ಷ್ಮವಾಗಿ ಗಮನಿಸಿ ನೋಡಿದ್ರೆ ಅಲ್ಲಿ ಇದ್ದಿದ್ದು ಶಾರೂಖ್ ಪುತ್ರ ಆರ್ಯನ್ ಖಾನ್.

  ಇಂದಿನ ಐಪಿಎಲ್ ಹರಾಜಿನಲ್ಲಿ ಆರ್ಯನ್ ಖಾನ್ ಹೆಚ್ಚು ಗಮನ ಸೆಳೆದರು. ಕೆಕೆಆರ್ ಕ್ಯಾಂಪ್‌ನಲ್ಲಿ ಆರ್ಯನ್ ಪಾತ್ರ ಏನು ಎನ್ನುವುದು ಸ್ಪಷ್ಟವಾಗಿ ತಿಳಿದಿರಲಿಲ್ಲ. ಆದರೂ, ಇಂದಿನ ಹರಾಜಿನಲ್ಲಿ ಆರ್ಯನ್ ಪ್ರಮುಖ ಆಕರ್ಷಣೆಯಾಗಿದ್ದರು ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ.

  ಕೊಲ್ಕತ್ತಾ ನೈಟ್ ರೈಡರ್ಸ್ ಬಳಿಕ ಮತ್ತೊಂದು ಕ್ರಿಕೆಟ್ ತಂಡ ಖರೀದಿಸಿದ ಶಾರೂಖ್ ಖಾನ್ಕೊಲ್ಕತ್ತಾ ನೈಟ್ ರೈಡರ್ಸ್ ಬಳಿಕ ಮತ್ತೊಂದು ಕ್ರಿಕೆಟ್ ತಂಡ ಖರೀದಿಸಿದ ಶಾರೂಖ್ ಖಾನ್

  ಅದರಲ್ಲೂ ಶಾರೂಖ್ ಖಾನ್ ಹೆಸರಿನಲ್ಲಿ ಆಟಗಾರನೊಬ್ಬ ಹರಾಜಿಗೆ ಬಂದರು. ಆ ವೇಳೆ ಆರ್ಯನ್ ಖಾನ್ ಕಡೆ ಕ್ಯಾಮೆರಾ ಫೋಕಸ್ ಆಗಿತ್ತು. ತಂದೆಯ ಹೆಸರಿನ ಆಟಗಾರ ಹರಾಜಿಗೆ ಬಂದಿದ್ದನ್ನು ನೋಡಿ ಆರ್ಯನ್ ಮುಗುಳ್ನಗೆ ಬೀರಿದರು. ಇದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

  ಐಪಿಎಲ್ ಹರಾಜಿನಲ್ಲಿ ಆರ್ಯನ್ ಖಾನ್ ಭಾಗವಹಿಸಿದ್ದ ಫೋಟೋಗಳು ಹಾಗೂ ವಿಡಿಯೋ ತುಣುಕು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರ್ಯನ್ ಕುಳಿತುಕೊಂಡಿದ್ದ ಸ್ಟೈಲ್, ಕಾಫಿ ಕುಡಿದ ಸ್ಟೈಲ್, ಮ್ಯಾನರಿಸಂ ಎಲ್ಲವೂ ಕ್ಯಾಮೆರಾದಲ್ಲಿ ಕಂಡಿದೆ. ಇದೆಲ್ಲವೂ ಶಾರೂಖ್ ಖಾನ್ ಅವರ ಸ್ಟೈಲ್ ಹೋಲುತ್ತಿದೆ.

  ಆರ್ಯನ್ ಅವರನ್ನು ನೋಡುತ್ತಿದ್ದರೆ, ಯುವಕನಾಗಿದ್ದ ಸಂದರ್ಭದಲ್ಲಿ ಶಾರೂಖ್ ಹೀಗೆ ಇದ್ದಿರಬಹುದು ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

  ಇನ್ನು ಶಾರೂಖ್ ಖಾನ್ ಹೆಸರಿನ ಆಟಗಾರನನ್ನು ಕೆಕೆಆರ್ ತಂಡ ಬಿಡ್ ಮಾಡಿತು. ಆದ್ರೆ, ಅಂತಿಮವಾಗಿ ಕಿಂಗ್ಸ್ ಪಂಜಾಬ್ ತಂಡಕ್ಕೆ ಶಾರೂಖ್ ಖಾನ್ ಸೇಲ್ ಆದರು.

  English summary
  KKR Owener, Actor Shahrukh khan Son Aryan Khan participated in IPL 2021 Auction.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X