For Quick Alerts
  ALLOW NOTIFICATIONS  
  For Daily Alerts

  ಶಾರೂಖ್ ಖಾನ್ ಅಭಿಮಾನಿಗಳಿಗೆ ನಿರಾಸೆ: 2021ಕ್ಕೆ ಬರಲ್ಲ ಪಠಾಣ್?

  |

  2018ರಲ್ಲಿ ತೆರೆಕಂಡ 'ಜೀರೋ' ಚಿತ್ರದ ಬಳಿಕ ಶಾರೂಖ್ ಖಾನ್ ನಟನೆಯ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಎರಡು ವರ್ಷಗಳ ಕಾಲ ಯಾವುದೇ ಹೊಸ ಸಿನಿಮಾವನ್ನು ಘೋಷಣೆ ಸಹ ಮಾಡಿರಲಿಲ್ಲ. ಶಾರೂಖ್ ಮುಂದಿನ ಸಿನಿಮಾ ಯಾವುದು ಎಂದು ಯೋಚಿಸುತ್ತಾ ಕುಳಿತಿದ್ದ ಅಭಿಮಾನಿಗಳಿಗೆ 'ಪಠಾಣ್' ಸಿನಿಮಾ ಸಮಾಧಾನ ತಂದಿತ್ತು.

  ಹೊಸ ಸಿನಿಮಾ ಘೋಷಿಸಿದ ಬಾಲಿವುಡ್ ನಟ ಶಾರೂಖ್ ಖಾನ್ಹೊಸ ಸಿನಿಮಾ ಘೋಷಿಸಿದ ಬಾಲಿವುಡ್ ನಟ ಶಾರೂಖ್ ಖಾನ್

  ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್ ಚಿತ್ರದಲ್ಲಿ ಶಾರೂಖ್ ನಟಿಸುತ್ತಿದ್ದಾರೆ. ಜೀರೋ ಸಿನಿಮಾ ಆದ್ಮೇಲೆ ಬಾದ್‌ಶಾ ಕೈಗೆತ್ತಿಕೊಂಡಿರುವ ಚಿತ್ರವಿದು. ಈಗಾಗಲೇ ಶೂಟಿಂಗ್ ಸಹ ಪ್ರಾರಂಭವಾಗಿದೆ. ದುಬೈನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆದಿದೆ ಎಂಬ ಸುದ್ದಿಯೂ ವರದಿಯಾಗಿತ್ತು. ಆದ್ರೀಗ, ಪಠಾಣ್ ಚಿತ್ರತಂಡದಿಂದ ನಿರಾಸೆಯ ಸುದ್ದಿ ಹೊರಬಿದ್ದಿದೆ. ಮುಂದೆ ಓದಿ...

  ಎಲ್ಲರನ್ನೂ ನಗಿಸಿದ್ದ ನಟನಿಗೆ ಇದೆಂತಾ ನೋವು | Filmibeat Kannada
  2021ಕ್ಕೆ ರಿಲೀಸ್ ಆಗಲ್ಲ ಪಠಾಣ್?

  2021ಕ್ಕೆ ರಿಲೀಸ್ ಆಗಲ್ಲ ಪಠಾಣ್?

  ಸಿದ್ಧಾರ್ಥ್ ಆನಂದ್ ನಿರ್ದೇಶನ ಹಾಗೂ ಯಶ್ ರಾಜ್ ಫಿಲಂಸ್ ಕಾಂಬಿನೇಷನ್‌ನಲ್ಲಿ ಶುರುವಾಗಿರುವ ಪಠಾಣ್ ಸಿನಿಮಾ ಈ ವರ್ಷದ ಸೆಕೆಂಡ್ ಹಾಫ್‌ನಲ್ಲಿ ತೆರೆಗೆ ಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಪಠಾಣ್ ಸಿನಿಮಾ 2021ರಲ್ಲಿ ಬರಲ್ಲ ಎಂದು ಚಿತ್ರ ವಿಶ್ಲೇಷಕ ತರಣ್ ಆದರ್ಶ್ ಖಚಿತಪಡಿಸಿದ್ದಾರೆ. ಪಠಾಣ್ ಸಿನಿಮಾ 2022ರಲ್ಲಿ ರಿಲೀಸ್ ಆಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.

  ದೀಪಿಕಾ-ಜಾನ್ ಅಬ್ರಾಹಂ ನಟನೆ

  ದೀಪಿಕಾ-ಜಾನ್ ಅಬ್ರಾಹಂ ನಟನೆ

  ಪಠಾಣ್ ಚಿತ್ರದಲ್ಲಿ ಶಾರೂಖ್ ಖಾನ್ ಜೊತೆ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಶಾರೂಖ್ ಹಾಗೂ ದೀಪಿಕಾ ಜೋಡಿಗೆ ಜಾನ್ ಅಬ್ರಾಹಂ ಸಹ ಸಾಥ್ ನೀಡುತ್ತಿದ್ದಾರೆ. 2007ರಲ್ಲಿ ರಿಲೀಸ್ ಆದ 'ಓಂ ಶಾಂತಿ ಓಂ' ಚಿತ್ರದಲ್ಲಿ ಮೊದಲ ಬಾರಿಗೆ ಶಾರೂಖ್ ಜೊತೆ ದೀಪಿಕಾ ಕಾಣಿಸಿಕೊಂಡರು. ನಂತರ ಚೆನ್ನೈ ಎಕ್ಸ್‌ಪ್ರೆಸ್‌, ಹ್ಯಾಪಿ ನ್ಯೂ ಇಯರ್ ಸಿನಿಮಾ ಮಾಡಿದ್ರು. ಈಗ ನಾಲ್ಕನೇ ಸಿನಿಮಾ ಆರಂಭಿಸಿದ್ದಾರೆ.

  ನವೆಂಬರ್‌ನಲ್ಲಿ ಶೂಟಿಂಗ್ ಆರಂಭಿಸಿದ್ದ ಪಠಾಣ್

  ನವೆಂಬರ್‌ನಲ್ಲಿ ಶೂಟಿಂಗ್ ಆರಂಭಿಸಿದ್ದ ಪಠಾಣ್

  ಜೀರೋ ಸಿನಿಮಾದ ಬಳಿಕ ಶಾರೂಖ್ ನಟಿಸುತ್ತಿರುವ ಚಿತ್ರ ಯಾವುದು ಎಂದು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆದರೆ, ಯಶ್ ರಾಜ್ ಫಿಲಂಸ್ ಕಚೇರಿಯಲ್ಲಿ ಶಾರೂಖ್ ಕಾಣಿಸಿಕೊಂಡ ನಂತರ ಪಠಾಣ್ ಸಿನಿಮಾದ ಸುಳಿವು ಸಿಕ್ಕಿತ್ತು. ಬಳಿಕ, ನವೆಂಬರ್ ತಿಂಗಳಲ್ಲಿ ಶಾರೂಖ್ ಶೂಟಿಂಗ್ ಆರಂಭಿಸಿದ್ದರು.

  ಜೀರೋ ಹೀನಾಯ ಸೋಲು

  ಜೀರೋ ಹೀನಾಯ ಸೋಲು

  ಆನಂದ್ ಎಲ್ ರೈ ನಿರ್ದೇಶನದಲ್ಲಿ ತಯಾರಾಗಿದ್ದ ಜೀರೋ ಸಿನಿಮಾ ಹೀನಾಯ ಸೋಲು ಕಂಡಿತ್ತು. 2018ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ 100 ಕೋಟಿ ಸಹ ಗಳಿಸಿರಲಿಲ್ಲ. ಕುಬ್ಜನಾಗಿ ಅಭಿನಯಿಸಿದ್ದ ಶಾರೂಖ್ ಜೊತೆ ಅನುಷ್ಕಾ ಶರ್ಮಾ ಮತ್ತು ಕತ್ರಿನಾ ಕೈಫ್ ಬಣ್ಣ ಹಚ್ಚಿದ್ದರು.

  English summary
  Pathan, which marks SRK’s return to the big screen after a hiatus will release in 2022, not 2021.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X