For Quick Alerts
  ALLOW NOTIFICATIONS  
  For Daily Alerts

  'ಪಠಾಣ್' ಮುಗಿಸುತ್ತಿದ್ದಂತೆ ಸೌತ್ ನಿರ್ದೇಶಕನ ಚಿತ್ರಕ್ಕೆ ಶಾರೂಖ್ ಚಾಲನೆ

  |

  'ಜೀರೋ' ಸಿನಿಮಾದ ಸೋಲಿನ ಬಳಿಕ ಶಾರೂಖ್ ಖಾನ್ ಅಭಿನಯಿಸಿದ ಯಾವುದೇ ಹೊಸ ಸಿನಿಮಾ ಬಿಡುಗಡೆಯಾಗಿಲ್ಲ. ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ 'ಪಠಾಣ್' ಎಂಬ ಚಿತ್ರ ಕೈಗೆತ್ತಿಕೊಂಡ ಖಾನ್ ಸದ್ದಿಲ್ಲದೇ ಚಿತ್ರೀಕರಣ ಮಾಡುತ್ತಿದ್ದರು. ಈ ಚಿತ್ರದ ಬಗ್ಗೆಯೂ ಎಲ್ಲಿಯೂ ಅಧಿಕೃತವಾಗಿ ಮಾಹಿತಿ ನೀಡದೇ, ಗೌಪ್ಯತೆ ಕಾಪಾಡಿಕೊಂಡಿದ್ದರು.

  ಸದ್ಯದ ಮಾಹಿತಿ ಪ್ರಕಾರ ಪಠಾಣ್ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದೆ. ಈ ಸಿನಿಮಾದ ನಂತರ ಮತ್ತೊಂದು ಮೆಗಾ ಚಿತ್ರ ಶುರು ಮಾಡಲಿದ್ದಾರೆ ಬಾಲಿವುಡ್ ಬಾದ್‌ಶಾ. ಈ ಸಂಬಂಧ ಸೌತ್ ನಿರ್ದೇಶಕನಿಗೆ ಕಾಲ್‌ಶೀಟ್ ನೀಡಿದ್ದು, ಈಗಾಗಲೇ ಸ್ಕ್ರಿಪ್ಟ್ ಸಹ ಕೇಳಿ ಸಮ್ಮತಿಸಿದ್ದಾರೆ ಎಂಬ ವಿಚಾರ ಈಗಷ್ಟೇ ಹೊರಬಿದ್ದಿದೆ. ಮುಂದೆ ಓದಿ...

  ಶಾರೂಖ್ ಖಾನ್ ಅಭಿಮಾನಿಗಳಿಗೆ ನಿರಾಸೆ: 2021ಕ್ಕೆ ಬರಲ್ಲ ಪಠಾಣ್?ಶಾರೂಖ್ ಖಾನ್ ಅಭಿಮಾನಿಗಳಿಗೆ ನಿರಾಸೆ: 2021ಕ್ಕೆ ಬರಲ್ಲ ಪಠಾಣ್?

  2021ರ ಅಂತ್ಯಕ್ಕೆ ಶಾರೂಖ್-ಅಟ್ಲಿ ಸಿನಿಮಾ ಆರಂಭ

  2021ರ ಅಂತ್ಯಕ್ಕೆ ಶಾರೂಖ್-ಅಟ್ಲಿ ಸಿನಿಮಾ ಆರಂಭ

  ಶಾರೂಖ್ ಖಾನ್ ತಮ್ಮ ಮುಂದಿನ ಚಿತ್ರವನ್ನು ತಮಿಳು ನಿರ್ದೇಶಕ ಅಟ್ಲಿ ಜೊತೆ ಆರಂಭಿಸಲಿದ್ದಾರೆ. ಈ ಸಂಬಂಧ ಹಲವು ದಿನಗಳಿಂದ ಮಾತುಕತೆ ನಡೆಯುತ್ತಿತ್ತು. ಕಳೆದ ತಿಂಗಳಷ್ಟೇ ಮುಂಬೈಗೆ ಬಂದಿದ್ದ ಅಟ್ಲಿ ಶಾರೂಖ್‌ಗೆ ಸ್ಕ್ರಿಪ್ಟ್ ವಿವರಿಸಿ ಸಮ್ಮತಿ ಪಡೆದುಕೊಂಡಿದ್ದಾರೆ. ಸ್ಕ್ರಿಪ್ಟ್ ಓಕೆ ಆಗ್ತಿದ್ದಂತೆ ಪ್ರಾಜೆಕ್ಟ್ ಆರಂಭಿಸಲು ಸಜ್ಜಾಗಿರುವ ಅಟ್ಲಿ 2021ರ ಅಂತ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

  ಕೊನೆಯ ಹಂತದಲ್ಲಿ ಪಠಾಣ್ ಚಿತ್ರೀಕರಣ

  ಕೊನೆಯ ಹಂತದಲ್ಲಿ ಪಠಾಣ್ ಚಿತ್ರೀಕರಣ

  ದುಬೈ, ಮುಂಬೈ ಸೇರಿದಂತೆ ಹಲವು ಕಡೆ ಪಠಾಣ್ ಸಿನಿಮಾದ ಚಿತ್ರೀಕರಣ ನಡೆದಿದೆ. ಬಹುತೇಕ ಕೊನೆಯ ಹಂತದ ಶೂಟಿಂಗ್ ಮಾತ್ರ ಬಾಕಿ ಇದೆ. ಅಟ್ಲಿ ತಮ್ಮ ಚಿತ್ರವನ್ನು ಈ ವರ್ಷದ ಕೊನೆಯಲ್ಲಿ ಆರಂಭಿಸಲು ತಯಾರಿ ನಡೆಸುತ್ತಿದ್ದಾರೆ. ಅದಕ್ಕೂ ಮುಂಚೆ ಪಠಾಣ್ ಸಂಪೂರ್ಣವಾಗಿ ಶೂಟಿಂಗ್ ಮುಗಿಸುವ ಯೋಜನೆಯಲ್ಲಿದೆ ಎಂದು ತಿಳಿದು ಬಂದಿದೆ.

  ಮುಂದಿನ ಚಿತ್ರದ ಬಗ್ಗೆ 'ದೊಡ್ಡ ಸುಳಿವು' ನೀಡಿದ ಶಾರೂಖ್ ಖಾನ್ಮುಂದಿನ ಚಿತ್ರದ ಬಗ್ಗೆ 'ದೊಡ್ಡ ಸುಳಿವು' ನೀಡಿದ ಶಾರೂಖ್ ಖಾನ್

  ಶಾರೂಖ್ ಜೊತೆ ಸಲ್ಮಾನ್ ಖಾನ್

  ಶಾರೂಖ್ ಜೊತೆ ಸಲ್ಮಾನ್ ಖಾನ್

  ಪಠಾಣ್ ಚಿತ್ರದಲ್ಲಿ ಶಾರೂಖ್ ಖಾನ್‌ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಸಹ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಸಲ್ಮಾನ್ ಮತ್ತು ಶಾರೂಖ್ ಕಾಂಬಿನೇಷನ್ ಶೂಟಿಂಗ್ ಅದಾಗಲೇ ಮುಂಬೈನಲ್ಲಿ ನಡೆದಿದೆ.

  ಯಶಸ್ವಿ ನಿರ್ದೇಶಕ ಅಟ್ಲಿ

  ಯಶಸ್ವಿ ನಿರ್ದೇಶಕ ಅಟ್ಲಿ

  ರಾಜರಾಣಿ, ಮೆರ್ಸಲ್, ಥೇರಿ, ಬಿಗಿಲ್ ಅಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ಅಟ್ಲಿ ಈಗ ಬಾಲಿವುಡ್‌ಗೆ ಹಾರಿದ್ದಾರೆ. ಅಟ್ಲಿ ಮುಂದಿನ ಚಿತ್ರವನ್ನು ಶಾರುಖ್ ಜೊತೆ ಮಾಡುತ್ತಿರುವುದಕ್ಕೆ ತಮಿಳು ಇಂಡಸ್ಟ್ರಿ ಸಹ ಖುಷಿ ವ್ಯಕ್ತಪಡಿಸಿದೆ. ಈ ನಡುವೆ ನಿರ್ಮಾಪಕರಾಗಿಯೂ ಅಟ್ಲಿ ಎರಡು ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

  ತಂದೆ-ತಾಯಿ ವಿಚ್ಛೇದನ ಪಡೆದು ದೂರವಾಗಿದ್ದಾಗ ಖುಷಿಯಾಗಿತ್ತು ಎಂದ ಶ್ರುತಿ ಹಾಸನ್ | Filmibeat Kannada
  2018ರಲ್ಲಿ ಬಂದಿದ್ದ ಜೀರೋ

  2018ರಲ್ಲಿ ಬಂದಿದ್ದ ಜೀರೋ

  ಆನಂದ್ ಎಲ್ ರೈ ನಿರ್ದೇಶನದಲ್ಲಿ ತಯಾರಾಗಿದ್ದ ಜೀರೋ ಸಿನಿಮಾ ಹೀನಾಯ ಸೋಲು ಕಂಡಿತ್ತು. 2018ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ 100 ಕೋಟಿ ಸಹ ಗಳಿಸಿರಲಿಲ್ಲ. ಕುಬ್ಜನಾಗಿ ಅಭಿನಯಿಸಿದ್ದ ಶಾರೂಖ್ ಜೊತೆ ಅನುಷ್ಕಾ ಶರ್ಮಾ ಮತ್ತು ಕತ್ರಿನಾ ಕೈಫ್ ಬಣ್ಣ ಹಚ್ಚಿದ್ದರು.

  English summary
  Shahrukh khan to start Atlee's new movie by end of 2021. Pathan will be completed before that said source.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X