For Quick Alerts
  ALLOW NOTIFICATIONS  
  For Daily Alerts

  ಶಾರೂಖ್ ಖಾನ್-ಅಟ್ಲಿ ಚಿತ್ರದ ಟೈಟಲ್ ಫಿಕ್ಸ್, ಚಿತ್ರೀಕರಣಕ್ಕೆ ಚಾಲನೆ!

  |

  ಬಾಲಿವುಡ್ ಬಾದ್‌ಶಾ ಶಾರೂಖ್ ಖಾನ್ ಮತ್ತು ತಮಿಳು ನಿರ್ದೇಶಕ ಅಟ್ಲಿ ಕಾಂಬಿನೇಷನ್ ಚಿತ್ರ ಅಧಿಕೃತವಾಗಿ ಸೆಟ್ಟೇರಿಲ್ಲ. ಆದರೂ ಸೈಲೆಂಟ್ ಆಗಿ ಚಿತ್ರೀಕರಣಕ್ಕೆ ಪ್ಲಾನ್ ಮಾಡಿದೆ ಚಿತ್ರತಂಡ ಎಂಬ ಸುದ್ದಿ ಹೊರಬಿದ್ದಿದೆ. 'ಪಠಾಣ್' ಚಿತ್ರದ ಶೂಟಿಂಗ್ ಮುಗಿಸಿರುವ ಶಾರೂಖ್ ಖಾನ್, ಸೆಪ್ಟೆಂಬರ್ ತಿಂಗಳಲ್ಲಿ ಅಟ್ಲಿ ಜೊತೆಗಿನ ಪ್ರಾಜೆಕ್ಟ್ ಆರಂಭಿಸಲಿದ್ದಾರೆ. ಮೊದಲ ಹಂತದ ಶೂಟಿಂಗ್ ಸುಮಾರು 10 ದಿನಗಳ ಕಾಲ ನಡೆಯಲಿದ್ದು, ಪುಣೆಯಲ್ಲಿ ಎಲ್ಲ ಸಿದ್ಧತೆ ಆಗಿದೆ ಎಂದು ವರದಿಯಾಗಿದೆ.

  ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಪಠಾಣ್' ಚಿತ್ರ ಭಾರತದಲ್ಲಿ ಶೂಟಿಂಗ್ ಮುಗಿಸಿದೆ. ಇನ್ನು ವಿದೇಶದಲ್ಲಿ ಚಿತ್ರೀಕರಣ ಬಾಕಿ ಉಳಿದಿದೆ. ಹೀಗಾಗಿ, ವಿದೇಶಿ ಶೂಟಿಂಗ್‌ಗೆ ಇನ್ನು ಸಮಯವಕಾಶವಿದ್ದು, ಈ ನಡುವೆ ಅಟ್ಲಿ ಚಿತ್ರ ಪ್ರಾರಂಭಿಸಲು ಶಾರೂಖ್ ನಿರ್ಧರಿಸಿದ್ದಾರೆ.

  ಶಾರೂಖ್ ಖಾನ್-ಅಟ್ಲಿ ಚಿತ್ರದ ಅಪ್‌ಡೇಟ್: ಆಗಸ್ಟ್ ತಿಂಗಳಲ್ಲಿ ಸರ್ಪ್ರೈಸ್ಶಾರೂಖ್ ಖಾನ್-ಅಟ್ಲಿ ಚಿತ್ರದ ಅಪ್‌ಡೇಟ್: ಆಗಸ್ಟ್ ತಿಂಗಳಲ್ಲಿ ಸರ್ಪ್ರೈಸ್

  'ಪಠಾಣ್' ಚಿತ್ರದ ವಿದೇಶಿ ಚಿತ್ರೀಕರಣಕ್ಕಾಗಿ ಇನ್ನು ಲೋಕೇಶನ್ ಅಂತಿಮಗೊಳಿಸಿಲ್ಲ. ಹಾಗಾಗಿ, ಶಾರೂಖ್ ಈಗ ಅಟ್ಲಿ ಪ್ರಾಜೆಕ್ಟ್‌ ಮೇಲೆ ಗಮನ ಹರಿಸಿದ್ದಾರೆ. ಇದು 10 ದಿನ ಶೆಡ್ಯೂಲ್ ಆಗಿದ್ದು, ಅದೇ ದಿನ ಸಿನಿಮಾದ ಮುಹೂರ್ತ ಸಹ ಜರುಗಲಿದೆ. ನಂತರ ಮುಂಬೈ, ದುಬೈ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ಸಾಗಲಿದೆ. ಮುಂದೆ ಓದಿ...

  ಚಿತ್ರದ ಶೀರ್ಷಿಕೆ ಏನು?

  ಚಿತ್ರದ ಶೀರ್ಷಿಕೆ ಏನು?

  ಶಾರೂಖ್ ಖಾನ್ ಸಲಹೆಯಂತೆ ಸ್ಕ್ರಿಪ್ಟ್‌ನಲ್ಲಿ ಕೆಲವು ಬದಲಾವಣೆ ಮಾಡಿಕೊಂಡಿರುವ ಅಟ್ಲಿ ಶೂಟಿಂಗ್‌ಗೆ ಸಿದ್ಧವಾಗಿದ್ದಾರೆ. ಈ ಹಿಂದೆ ಸುದ್ದಿಯಾದಂತೆ ಈ ಚಿತ್ರಕ್ಕೆ 'ಸಂಖಿ' ಎಂದು ಹೆಸರಿಡಬಹುದು ಎನ್ನಲಾಗಿತ್ತು. ಆದ್ರೀಗ, ಬಿಟೌನ್‌ನಲ್ಲಿ ಹೊಸ ಸುದ್ದಿ ಹಬ್ಬಿದೆ. ಹಿಂದಿ ಜೊತೆಗೆ ತಮಿಳು, ತೆಲುಗಿನಲ್ಲೂ ಈ ಚಿತ್ರ ರಿಲೀಸ್ ಆಗಲಿದ್ದು ಹಿಂದಿಯಲ್ಲಿ 'ರಾಜವರ್ಧನ್ ಠಾಕೂರ್', ತಮಿಳಿನಲ್ಲಿ 'ವೇಲಸ್ವಾಮಿ ಮುರುಗನ್' ಹಾಗೂ ತೆಲುಗಿನಲ್ಲಿ 'ಕತ್ತಿಕೊಂಡಲ ರಾಯುಡು' ಎಂದು ಹೇಳಲಾಗುತ್ತಿದೆ.

  ಅಟ್ಲಿ ಚಿತ್ರಕ್ಕೆ ನಯನತಾರ ನಾಯಕಿ

  ಅಟ್ಲಿ ಚಿತ್ರಕ್ಕೆ ನಯನತಾರ ನಾಯಕಿ

  ಲೈಕಾ ಪ್ರೊಡಕ್ಷನ್ ಮತ್ತು ಶಾರೂಖ್ ಖಾನ್ ಅವರ ರೆಡ್ ಚಿಲ್ಲೀಸ್ ಸಂಸ್ಥೆ ಈ ಚಿತ್ರ ನಿರ್ಮಿಸುತ್ತಿದೆ. ಸುಮಾರು 200 ಕೋಟಿ ಪ್ರಾಜೆಕ್ಟ್ ಎನ್ನಲಾಗಿದೆ. ಇನ್ನು ಅಟ್ಲಿ ಮತ್ತು ಶಾರೂಖ್ ಖಾನ್ ಕಾಂಬಿನೇಷನ್‌ನಲ್ಲಿ ಸೆಟ್ಟೇರಲಿರುವ ಹೊಸ ಚಿತ್ರದಲ್ಲಿ ನಯನತಾರ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಗಳಾಗಿವೆ. ಈ ಹಿಂದೆ ಅಟ್ಲಿ ನಿರ್ದೇಶನದ 'ರಾಜರಾಣಿ' ಸಿನಿಮಾದಲ್ಲಿ ನಯನತಾರ ಅಭಿನಯಿಸಿದ್ದರು. ಒಂದು ವೇಳೆ ಈ ಚಿತ್ರ ಖಚಿತವಾದರೆ, 'ಲೇಡಿ ಸೂಪರ್‌ಸ್ಟಾರ್‌'ಗೆ ಚೊಚ್ಚಲ ಹಿಂದಿ ಸಿನಿಮಾ ಆಗಲಿದೆ.

  'ಪಠಾಣ್' ಮುಗಿಸುತ್ತಿದ್ದಂತೆ ಸೌತ್ ನಿರ್ದೇಶಕನ ಚಿತ್ರಕ್ಕೆ ಶಾರೂಖ್ ಚಾಲನೆ'ಪಠಾಣ್' ಮುಗಿಸುತ್ತಿದ್ದಂತೆ ಸೌತ್ ನಿರ್ದೇಶಕನ ಚಿತ್ರಕ್ಕೆ ಶಾರೂಖ್ ಚಾಲನೆ

  ರಾಜ್ ಕುಮಾರ್ ಹಿರಾನಿ ಜೊತೆ ಸಿನಿಮಾ

  ರಾಜ್ ಕುಮಾರ್ ಹಿರಾನಿ ಜೊತೆ ಸಿನಿಮಾ

  ಸದ್ಯ ಶಾರೂಖ್ ಖಾನ್ 'ಪಠಾಣ್' ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರಕ್ಕೆ ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡ್ತಿದ್ದು, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಾಹಂ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಬಹುತೇಕ ಕೊನೆಯ ಹಂತದಲ್ಲಿದೆ. ಈ ಪ್ರಾಜೆಕ್ಟ್ ಮುಗಿಯುತ್ತಿದ್ದಂತೆ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಜೊತೆ ಹೊಸ ಸಿನಿಮಾವೊಂದು ಮಾಡಲಿದ್ದಾರೆ ಎಂದು ಹೇಳಲಾಗಿದೆ. ಈ ಚಿತ್ರವೂ ಅಧಿಕೃತವಾಗಿ ಘೋಷಣೆಯಾಗಿಲ್ಲ.

  ಮೂರು ವರ್ಷದಿಂದ ಸಿನಿಮಾ ಇಲ್ಲ

  ಮೂರು ವರ್ಷದಿಂದ ಸಿನಿಮಾ ಇಲ್ಲ

  2018ರಲ್ಲಿ 'ಜೀರೋ' ಸಿನಿಮಾ ಬಿಡುಗಡೆಯಾಗಿತ್ತು. ಆನಂದ್ ಎಲ್ ರೈ ನಿರ್ದೇಶನದ ಈ ಚಿತ್ರದಲ್ಲಿ ಅನುಷ್ಕಾ ಶರ್ಮಾ, ಕತ್ರಿನಾ ಕೈಫ್ ಹಾಗೂ ಶಾರೂಖ್ ಖಾನ್ ನಟಿಸಿದ್ದರು. ಈ ಸಿನಿಮಾ ಬಳಿಕ ಶಾರೂಖ್ ಖಾನ್ ನಟನೆಯ ಯಾವ ಚಿತ್ರಗಳು ಬಿಡುಗಡೆಯಾಗಿಲ್ಲ. ಸುಮಾರು ಮೂರು ವರ್ಷದ ನಂತರ 'ಪಠಾಣ್' ಸಿನಿಮಾ ಚಿತ್ರಮಂದಿರಕ್ಕೆ ಬರುವ ತಯಾರಿಯಲ್ಲಿದೆ.

  English summary
  Bollywood Actor Shahrukh Khan to start shooting for Atlee's untitled directorial from September with a 10 day schedule.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X