»   » ಸಲ್ಲೂ ಮನೇಲಿ ಶಾರುಖ್ ಪತ್ನಿ ಗೌರಿ ಹಬ್ಬ ಆಚರಣೆ

ಸಲ್ಲೂ ಮನೇಲಿ ಶಾರುಖ್ ಪತ್ನಿ ಗೌರಿ ಹಬ್ಬ ಆಚರಣೆ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ದೀಪಾವಳಿ ಜಡತ್ವ ಕಳೆದು ಹೊಸ ಹುರು, ಹೊಸ ಬೆಳೆಕು ನೀಡುವ ಹಬ್ಬ. ಬಾಲಿವುಡ್ ಜಗತ್ತಿನ ಅತಿ ದೊಡ್ಡ ವೈರಿಗಳು ಎಂದೇ ಪರಿಗಣಿತವಾಗಿರುವ ಕಿಂಗ್ ಖಾನ್ ಶಾರುಖ್ ಹಾಗೂ ಸಲ್ಮಾನ್ ಖಾನ್ ನಡುವಿನ ವೈರತ್ವ ಅಂತ್ಯವಾಯಿತೆ? ಹೀಗೊಂದು ಸುದ್ದಿ ಹಲವು ದಿನಗಳಿಂದ ಹಬ್ಬುತ್ತಲೆ ಇದೆ. ರಂಜಾನ್ ನಿಂದ ದೀಪಾವಳಿ ತನಕ ಇದೇ ಸುದ್ದಿ. ಸದ್ಯದ ಶಾಕಿಂಗ್ ಸುದ್ದಿ ಎಂದರೆ ಸಲ್ಮಾನ್ ಖಾನ್ ಮನೆಯಲ್ಲಿನ ದೀಪಾವಳಿ ಹಬ್ಬದ ಆಚರಣೆಯಲ್ಲಿ ಶಾರುಖ್ ಪತ್ನಿ ಗೌರಿ ಖಾನ್ ಕಾಣಿಸಿಕೊಂಡಿದ್ದಾರೆ.

ನಿರೂಪಕನಾಗಿ ಹೆಸರು ಗಳಿಸಿರುವ ಸಲ್ಮಾನ್ ಬಿಗ್ ಬಾಸ್ ಮನೆಯಲ್ಲಿ ದೀಪಾವಳಿ ಆಚರಣೆ ಮುಗಿಸಿಕೊಂಡು ನೇರ ಸೋದರ ಸೊಹೈಲ್ ಖಾನ್ ಮನೆಗೆ ಬಂದಿದ್ದಾರೆ. ಸಲ್ಮಾನ್ ಖಾನ್ ಅವರ ಪೂರ್ತಿ ಕುಟುಂಬದ ಜತೆಗೆ ಸುನೀಲ್ ಶೆಟ್ಟಿ, ಯುವರಾಜ್ ಸಿಂಗ್, ಜಹೀರ್ ಖಾನ್, ಕರೀಷ್ಮಾ ಕಪೂರ್, ಅಮೃತಾ ಅರೋರಾ, ಟುಲಿಪ್ ಜೋಶಿ ಸೇರಿದಂತೆ ಹಲವಾರು ಬಾಲಿವುಡ್ ತಾರೆಯರು ಸಂತೋಷ ಕೂಟದಲ್ಲಿ ಪಾಲ್ಗೊಂಡಿದ್ದಾರೆ.

ಈ ಸಂಭ್ರಮಾಚರಣೆಗೆ ಗೌರಿ ಅವರನ್ನು ಯಾರು ಆಹ್ವಾನಿಸಿದ್ದರು ಎಂಬುದು ಇನ್ನೂ ತಿಳಿದು ಬಂದಿಲ್ಲ. ಅಥವಾ ಶಾರುಖ್ ಹಾಗೂ ಸಲ್ಮಾನ್ ನಡುವಿನ ವೈರತ್ವ ಅಳಿಸಿ ಹಾಕಲು ಗೌರಿ ಅವರು ಸಂಧಾನಕಾರರಾಗಿದ್ದಾರೆಯೇ? ಗೊತ್ತಿಲ್ಲ, ನಿರೀಕ್ಷೆಯಂತೆ ಶಾರುಖ್ ಖಾನ್ ಈ ಪಾರ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಶಾರುಖ್ ಮಕ್ಕಳು ಬಂದಿರಲಿಲ್ಲ.

ಇದಕ್ಕೂ ಮುನ್ನ ಗೌರಿ ಅವರು ಶಾರುಖ್ ಅವರ ಜತೆ ಬಚ್ಚನ್ ಕುಟುಂಬ ನೀಡಿದ ದೀಪಾವಳಿ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಐಶ್ವರ್ಯಾ ರೈ ಬಚ್ಚನ್ ಪಾರ್ಟಿಯಲ್ಲಿ ರಣಬೀರ್ ಕತ್ರೀನಾ ಕೂಡಾ ಬಂದಿದ್ದರು. ಆದರೆ, ಸಲ್ಮಾನ್ ಮನೆ ಸಂಭ್ರಮಾಚರಣೆಗೆ ಗೌರಿ ಮಾತ್ರ ಹಾಜರಾಗಿದ್ದದ್ದು ಹಲವರ ಹುಬ್ಬೇರಿಸಿದೆ.. ಸದ್ಯಕ್ಕೆ ಬಾಲಿವುಡ್ ಮಂದಿಯ ಸಂಭ್ರಮಾಚರಣೆ ಚಿತ್ರಗಳನ್ನು ಇಲ್ಲಿ ನೋಡಿ ಕಣ್ತುಂಬಿಸಿಕೊಳ್ಳಿ...

ಏಕಾಂಗಿಯಾಗಿ ಬಂದ ಗೌರಿ

ಶಾರುಖ್ ಪತ್ನಿ ಗೌರಿ ಬಚ್ಚನ್ ಕುಟುಂಬ ನೀಡಿದ ದೀಪಾವಳಿ ಪಾರ್ಟಿ ಮುಗಿಸಿಕೊಂಡು ಸೊಹೈಲ್ ಖಾನ್ ಮನೆಗೆ ಬಂದಿದ್ದು ಹೀಗೆ

ಶರ್ಟ್ ಲೆಸ್ ಸಲ್ಮಾನ್

ಸಲ್ಮಾನ್ ಖಾನ್ ಲೋನಾವಾಲದಿಂದ ಮುಂಬೈನಲ್ಲಿರುವ ಸೊಹೈಲ್ ಖಾನ್ ನಿವಾಸಕ್ಕೆ ಕಾಲಿಟ್ಟಿದ್ದು ಹೀಗೆ ಅದು ಶರ್ಟ್ ಇಲ್ಲದೆ

ಕ್ರಿಕೆಟರ್ಸ್ ಆಗಮನ

ಸೊಹೈಲ್ ಖಾನ್ ಅವರ ದೀಪಾವಳಿ ಸಂತೋಷ ಕೂಟಕ್ಕೆ ಆಗಮಿಸಿದ ಟೀಂ ಇಂಡಿಯಾದ ಕ್ರಿಕೆಟರ್ಸ್ ಯುವರಾಜ್ ಸಿಂಗ್ ಹಾಗೂ ಜಹೀರ್ ಖಾನ್

ಸಲ್ಲೂ ತಂಗಿ

ಸಲ್ಮಾನ್ ಖಾನ್, ಸೊಹೈಲ್ ಖಾನ್, ಅರ್ಬಾಜ್ ಖಾನ್ ಅವರ ಸೋದರಿ ಅಲ್ವಿರಾ ಖಾನ್ ಮನೆಯ ಹೊರಗಡೆ ಕಾಣಿಸಿದ್ದು ಹೀಗೆ.. ಇನ್ನಷ್ಟು ಚಿತ್ರಗಳನ್ನು ನಿರೀಕ್ಷಿಸಿ

ಶರ್ಟ್ ಲೆಸ್ ಸಲ್ಮಾನ್

ಬಿಗ್ ಬಾಸ್ ಸೆಟ್ ನಿಂದ ನೇರ ಸೊಹೈಲ್ ಖಾನ್ ಮನೆಗೆ ಬಂದ ಸಲ್ಮಾನ್

ಸುನಿಲ್ ಕುಟುಂಬ

ಪತ್ನಿ ಮನಾ ಶೆಟ್ಟಿ ಜತೆ ಆಗಮಿಸಿದ ಸುನಿಲ್ ಶೆಟ್ಟಿ

ತುಷಾರ್ ಕಪೂರ್

ತುಷಾರ್ ಕಪೂರ್ ಹಾಗೂ ಚಂಕಿ ಪಾಂಡೆ

ಟುಲಿಪ್ ಜೋಶಿ

ತನ್ನ ಗೆಳೆಯನಿಂದ ಚುಂಬನ ಪಡೆಯುತ್ತಿರುವ ಟುಲಿಪ್ ಜೋಶಿ

ಪಿಂಕ್ ಪಾಂಡೆ

ಚಂಕಿ ಪಾಂಡೆ ಪಿಂಕ್ ಡ್ರೆಸ್ ಯಾಕೆ

ಕರಿಷ್ಮಾ ಕಪೂರ್

ಕೆಂಪು ಬಿಳಿ ಸೆಲ್ವಾರ್ ಉಡುಪಿನಲ್ಲಿ ಕರೀಷ್ಮಾ ಕಪೂರ್

ಬಚ್ಚನ್ ಮನೆ ದೀಪಾವಳಿ

ಸಂಭ್ರಮದಲ್ಲಿ ಶಾರುಖ್ ಖಾನ್ ಗೌರಿ ಖಾನ್ ಅಮಿತಾಬ್ ಜಯಾ ಅಭಿಷೇಕ್ ಐಶ್ವರ್ಯಾ

ಏನಿದು ಇಶಾರೆ ಐಶೂ

ಪಿಂಕ್ ಅನಾರ್ಕಲಿ ಉಡುಪಿನಲ್ಲಿದ್ದ ಐಶೂ ಏನೋ ಸೂಚನೆ ನೀಡುತ್ತಿದ್ದಾರೆ. ಅಭಿಷೇಕ್ ಕಿತ್ತಲೆ ಬಣ್ಣದ ಶೇರ್ವಾಲಿ ದಿರಿಸಿನಲ್ಲಿ ಮಿಂಚಿದ್ದಾರೆ.

ಐಶೂ ಪಾರ್ಟಿಗೆ ಕತ್ರೀನಾ

ಕತ್ರೀನಾ ಕೈಫ್ ಕೂಡಾ ಬಚ್ಚನ್ ಕುಟುಂಬದ ದೀಪಾವಳಿ ಪಾರ್ಟಿಯ ಅತಿಥಿಯಾಗಿದ್ದರು.

ಬಚ್ಚನ್ ಮನೆ ಹೊರಗೆ

ಅಮಿತಾಬ್ ಬಚ್ಚನ್ ಮನೆ ಹೊರಗೆ ಬಂದು ಅಭಿಮಾನಿಗಳತ್ತ ಕೈ ಬೀಸಿದ್ದಾರೆ.

ಆಲಿಯಾ ಭಟ್

ಮಹೇಶ್ ಭಟ್ ಕುಟುಂಬದ ಪ್ರತಿನಿಧಿಯಾಗಿ ಬಂದಿದ್ದ ಆಲಿಯಾ ಭಟ್ ರನ್ನು ಖುದ್ದು ಅಭಿಷೇಕ್ ಬಚ್ಚನ್ ಸ್ವಾಗತಿಸಿದ್ದು ವಿಶೇಷವಾಗಿತ್ತು.

ಅನುಷ್ಕ ಶರ್ಮ

ಕಲರ್ ಫುಲ್ ಸೀರೆಯುಟ್ಟ ಅನುಷ್ಕಾ ಶರ್ಮ ಫೋನಿನಲ್ಲಿ ಬ್ಯುಸಿ

ರಣಬೀರ್ ಕಪೂರ್

ಕತ್ರೀನಾ ಕೈಫ್ ಜತೆಗೂಡಿ ಬಂದಿದ್ದ ರಣಬೀರ್ ಕಪೂರ್ ಯಾಕೋ ಪಾರ್ಟಿನಲ್ಲಿ ಒಂಟಿಯಾಗಿ ಕಂಡರು

ಸಿದ್ದಾರ್ಥ್

ಸಿದ್ದಾರ್ಥ್ ಮಲ್ಹೋತ್ರ ಬಚ್ಚನ್ ಮನೆಗೆ ಬಂದಿದ್ದು ಹೀಗೆ

ಜಿಮ್ಮಿ ಶೇರ್ ಗಿಲ್

ಜಿಮ್ಮಿ ಶೇರ್ ಗಿಲ್ ತನ್ನ ಪತ್ನಿ ಜತೆ ಪಾರ್ಟಿಗೆ ಬಂದಿದ್ದರು.

ಅಮೀರ್ ಮನೆ ಪಾರ್ಟಿ

ಅಮೀರ್ ಖಾನ್ ಮನೆಯಲ್ಲಿ ನಡೆದ ದೀಪಾವಳಿ ಪಾರ್ಟಿಗೆ ಬಂದಿದ ಪ್ರಿಯಾಂಕಾ ಚೋಪ್ರಾ

ಜಾಕಿ ಕುಟುಂಬ

ನಟ ಜಾಕಿ ಶ್ರಾಫ್ ಕುಟುಂಬದೊಡನೆ

ರಾಮ್ ಸಂಪತ್

ರಾಮ್ ಸಂಪತ್ ಹಾಗೂ ಸೋನಾ ಮೊಹಾಪಾತ್ರ

ಅತುಲ್ ಕುಲಕರ್ಣಿ

ಅಮೀರ್ ಖಾನ್ ಮನೆಯಲ್ಲಿ ನಟ ಅತುಲ್ ಕುಲಕರ್ಣಿ

ಶರ್ಮಾನ್ ಜೋಶಿ

ಅಮೀರ್ ಖಾನ್ ಮನೆಯಲ್ಲಿ ಶರ್ಮಾನ್ ಜೋಶಿ ಹಾಗೂ ಪತ್ನಿ

ವಿಧು ವಿನೋದ್ ಛೋಪ್ರಾ

ಅಮೀರ್ ಖಾನ್ ಆಪ್ತರ ಬಳಗದ ಚಿತ್ರಕರ್ಮಿ ವಿಧು ವಿನೋದ್ ಛೋಪ್ರಾ

ನವಾಜುದ್ದೀನ್

ಅಮೀರ್ ಖಾನ್ ಮನೆಯಲ್ಲಿ ನವಾಜುದ್ದೀನ್ ಸಿದ್ದಿಕ್ಕಿ ಹಾಗೂ ಅವರ ಪತ್ನಿ

ಇಮ್ರಾನ್ ಖಾನ್

ಅಮೀರ್ ಖಾನ್ ಅಳಿಯ ಇಮ್ರಾನ್ ಖಾನ್ ತನ್ನ ಪತ್ನಿ ಅವಂತಿಕಾ ಜತೆಯಲ್ಲಿ

ವಿದ್ಯಾ-ಸಿದ್ದಾರ್ಥ್ ರಾಯ್

ವಿದ್ಯಾಬಾಲನ್ ತನ್ನ ಪತಿ ಸಿದ್ದಾರ್ಥ್ ರಾಯ್ ಕಪೂರ್ ಜತೆ

ನಿರ್ದೇಶಕ ಅಶುತೋಷ್

ಅಮೀರ್ ಖಾನ್ ಮನೆ ಪಾರ್ಟಿಯಲ್ಲಿ ನಿರ್ದೇಶಕ ಅಶುತೋಷ್ ಗೊವಾತ್ರಿಕರ್

ಪ್ರದೀಪ್ ರಾವತ್

ಪತ್ನಿ ಜತೆ ಪಾರ್ಟಿ ಬಂದಿದ್ದ ಪ್ರದೀಪ್ ರಾವತ್

ಕರಣ್ ಜೋಹರ್

ಬಚ್ಚನ್ ಮನೆ, ಸೊಹೈಲೆ ಖಾನ್ ಮನೆಯಲ್ಲಿ ಕಾಣಸಿಗದ ಕರಣ್ ಜೋಹರ್ ಮುಖ ಅಮೀರ್ ಖಾನ್ ಮನೆಯಲ್ಲಿ ಸಿಕ್ಕಿತು

ಅನಿಲ್ ಕಪೂರ್

ಮನೆಯಲ್ಲಿ ಪಾರ್ಟಿ ಮುಗಿಸಿಕೊಂಡು ಅಮೀರ್ ಖಾನ್ ಮನೆಯಲ್ಲಿ ಹಾಜರಿ ಹಾಕಲು ಬಂದ ಅನಿಲ್ ಕಪೂರ್

English summary
Diwali(Deepavali), the festival of lights celebrated all over the world symbolizes the victory of light over dark, good over evil, and knowledge over darkness. This is one such festival, that have seen rivals turning friends. And what we saw recently, was indeed a shocker, after Gauri Khan was spotted at Salman Khan's Diwali bash.
Please Wait while comments are loading...