ಕೊರೊನಾ ಭೀತಿ: ಮುಂಬೈ ತೊರೆದ ಶಾರುಖ್ ಖಾನ್ ಕುಟುಂಬ

ಕೊರೊನಾ ಎರಡನೇ ಅಲೆ ಹೆಚ್ಚಾಗಿದ್ದು, ದೇಶದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಹೆಚ್ಚುತ್ತಿರುವ ಕೊರೊನಾದಿಂದ ದೇಶ ತತ್ತರಿಸಿ ಹೋಗಿದೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕರ್ಫ್ಯೂ ಮೊರೆ ಹೋಗಿದೆ. ದೇಶದ ಅನೇಕ ನಗರಗಳಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ.

ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿದೆ. ಈಗಾಗಲೇ ಕರ್ಫ್ಯೂ ಜಾರಿ ಮಾಡಲಾಗಿದ್ದು, ಅನೇಕರು ಮುಂಬೈ ತೊರೆಯುತ್ತಿದ್ದಾರೆ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸಹ ಮುಂಬೈ ಬಿಟ್ಟು ನೆಚ್ಚಿನ ತಾಣಗಳಿಗೆ ಹೋಗಿ ನೆಲೆಸುತ್ತಿದ್ದಾರೆ.

ಸಿನಿಮಾ ಕೆಲಸಗಳಿಗೆ ಬ್ರೇಕ್ ಬಿದ್ದ ಕಾರಣ ಸಿನಿ ಸೆಲೆಬ್ರಿಟಿಗಳು ಮುಂಬೈ ತೊರೆಯುತ್ತಿದ್ದಾರೆ. ದೀಪಿಕಾ ಮತ್ತು ರಣ್ವೀರ್ ಸಿಂಗ್ ದಂಪತಿ, ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಜೋಡಿ, ಸಾರಾ ಅಲಿ ಖಾನ್, ಜಾಹ್ನವಿ ಕಪೂರ್, ದಿಶಾ ಪಟಾನಿ ಮತ್ತು ಟೈಗರ್ ಶ್ರಾಫ್ ಸೇರಿದಂತೆ ಅನೇಕರು ಈಗಾಗಲೇ ಮುಂಬೈ ತೊರೆದಿದ್ದಾರೆ. ಇದೀಗ ಶಾರುಖ್ ಖಾನ್ ಕುಟುಂಬ ಕೂಡ ಬಿಟ್ಟು ವಿದೇಶಿ ಫ್ಲೈಟ್ ಹತ್ತಿದ್ದಾರೆ.

Shahrukh Khan wife Gouri Khan and son Aryan Khan jet off to New York

ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಮತ್ತು ಪುತ್ರ ಆರ್ಯನ್ ಖಾನ್ ನ್ಯೂಯಾರ್ಕ್ ಗೆ ಪಯಣ ಬೆಳೆಸಿದ್ದಾರೆ. ಈಗಾಗಲೇ ಶಾರುಖ್ ಪುತ್ರಿ ಸುಹಾನಾ ಖಾನ್ ನ್ಯೂಯಾರ್ಕ್ ನಲ್ಲಿ ಬೀಡುಬಿಟ್ಟಿದ್ದಾರೆ. ನ್ಯೂಯಾರ್ಕ್ ನಲ್ಲಿ ಸುಹಾನಾ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಇದೀಗ ಗೌರಿ ಮತ್ತು ಆರ್ಯನ್ ಕೂಡ ಸುಹಾನಾ ಇದ್ದ ಜಾಗಕ್ಕೆ ತೆರಳಿದ್ದಾರೆ.

ಗೌರಿ ಖಾನ್ ಮತ್ತು ಕಾರ್ತಿಕ್ ಇಬ್ಬರು ನಿನ್ನೆ (ಏಪ್ರಿಲ್ 21) ಏರ್ ಪೋರ್ಟ್‌ನಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ಇತ್ತ ಶಾರುಖ್ ಮಾತ್ರ ಮುಂಬೈನಲ್ಲಿ ನೆಲೆಸಿದ್ದು, ಐಪಿಎಲ್ ನಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಶಾರುಖ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಝೀರೋ ಸಿನಿಮಾ ನಂತರ ಶಾರುಖ್ ಯಾವುದೇ ಸಿನಿಮಾ ಬಿಡುಗಡೆಯಾಗಲಿಲ್ಲ. ಸದ್ಯ ಪಠಾಣ್ ಚಿತ್ರದಲ್ಲಿ ಶಾರುಖ್ ನಟಿಸುತ್ತಿದ್ದಾರೆ. ಆದರೀಗ ಕೊರೊನಾ ಕರ್ಫ್ಯೂಯಿಂದ ಚಿತ್ರೀಕರಣ ಸ್ಥಗಿತವಾಗಿದೆ.

More from Filmibeat

English summary
Bollywood Actor Shahrukh Khan wife Gouri Khan and son Aryan Khan jet off to New York.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X