For Quick Alerts
  ALLOW NOTIFICATIONS  
  For Daily Alerts

  'ದಯವಿಟ್ಟು ಅವಕಾಶ ಕೊಡಿ': ಖ್ಯಾತ ನಟಿ ಬಳಿ ಕೇಳಿಕೊಂಡ ಶಾರೂಖ್

  |

  'ಜೀರೋ' ಸಿನಿಮಾದಲ್ಲಿ ಶಾರೂಖ್ ಖಾನ್ ನಟನೆಯಲ್ಲಿ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಸಿದ್ಧಾರ್ಥ್ ಆನಂದ್ ಜೊತೆಗೆ ಪಠಾಣ್ ಸಿನಿಮಾ ಆರಂಭಿಸಿರುವ ಕಿಂಗ್ ಖಾನ್, ಅದಾದ ಮೇಲೆ ರಾಜ್ ಕುಮಾರ್ ಹಿರಾನಿ ಹಾಗೂ ದಕ್ಷಿಣ ನಿರ್ದೇಶಕ ಅಟ್ಲಿ ಜೊತೆ ಸಿನಿಮಾ ಮಾಡಲಿದ್ದಾರೆ.

  ಈ ನಡುವೆ ಖ್ಯಾತ ನಟಿಯೊಬ್ಬರ ನಿರ್ಮಾಣದಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವಿಟ್ಟರ್‌ನಲ್ಲಿ ಮನವಿ ಮಾಡಿರುವ ಶಾರೂಖ್ ಖಾನ್, ''ದಯವಿಟ್ಟು ನಿಮ್ಮ ಸಂಸ್ಥೆಯಲ್ಲಿ ಅವಕಾಶ ಕೊಡಿ, ಸರಿಯಾದ ಸಮಯಕ್ಕೆ ಶೂಟಿಂಗ್ ಬರ್ತೇನೆ'' ಎಂದು ಕೇಳಿಕೊಂಡಿದ್ದಾರೆ. ಅಷ್ಟಕ್ಕೂ, ಬಾಲಿವುಡ್ ಬಾದ್‌ಶಾ ವಿನಂತಿ ಮಾಡಿಕೊಂಡಿದ್ದು ಯಾರ ಬಳಿ? ಶಾರೂಖ್ ಖಾನ್ ಹೀಗೆ ಹೇಳಲು ಕಾರಣ ಏನು? ಮುಂದೆ ಓದಿ...

  ಮೊದಲ ಸಿನಿಮಾ ಘೋಷಿಸಿದ ಆಲಿಯಾ ಭಟ್

  ಮೊದಲ ಸಿನಿಮಾ ಘೋಷಿಸಿದ ಆಲಿಯಾ ಭಟ್

  ಬಾಲಿವುಡ್ ನಟಿ ಆಲಿಯಾ ಭಟ್ ತಮ್ಮ ನಿರ್ಮಾಣದಲ್ಲಿ ತಯಾರಾಗುತ್ತಿರುವ ಚೊಚ್ಚಲ ಚಿತ್ರ ಅಧಿಕೃತವಾಗಿ ಶೂಟಿಂಗ್ ಶುರು ಮಾಡಿದೆ. ಈ ಚಿತ್ರಕ್ಕೆ 'ಡಾರ್ಲಿಂಗ್ಸ್' ಎಂದು ಹೆಸರಿಟ್ಟಿದ್ದು ,ಸೆಟ್‌ನಲ್ಲಿ ಮೇಕಪ್‌ ಮಾಡಿಕೊಳ್ಳುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ ಆಲಿಯಾ ಭಟ್.

  ಲಾಕ್‌ಡೌನ್ ನಂತರ ಶೂಟಿಂಗ್ ಆರಂಭಿಸಿದ ಶಾರೂಖ್-ಪ್ರಭಾಸ್ಲಾಕ್‌ಡೌನ್ ನಂತರ ಶೂಟಿಂಗ್ ಆರಂಭಿಸಿದ ಶಾರೂಖ್-ಪ್ರಭಾಸ್

  ನಟಿಯಾಗಿರಲು ಇಷ್ಟ, ನರ್ವಸ್ ಆಗಿದ್ದೇನೆ

  ನಟಿಯಾಗಿರಲು ಇಷ್ಟ, ನರ್ವಸ್ ಆಗಿದ್ದೇನೆ

  ''ಡಾರ್ಲಿಂಗ್ಸ್, ನನ್ನ ಮೊದಲ ನಿರ್ಮಾಣದ ಸಿನಿಮಾ. ನನ್ನ ಮೊದಲ ಆಯ್ಕೆ ನಟನೆ. ಯಾವಾಗಲೂ ಒಬ್ಬ ನಟಿಯಾಗಿ ಉಳಿಯಲು ಇಷ್ಟಪಡುತ್ತೇನೆ. ಹೊಸ ಚಿತ್ರ ಆರಂಭಿಸುವ ದಿನ ಬಹಳ ನರ್ವಸ್ ಆಗಿರುತ್ತೇನೆ. ಹಿಂದಿನ ರಾತ್ರಿ ಪೂರ್ತಿ ಕನಸು ಕಾಣ್ತೇನೆ, ಅಚ್ಚರಿ ಎನ್ನುವಂತೆ ಎನರ್ಜಿಯೊಂದಿಗೆ ಶುರು ಮಾಡ್ತೇನೆ'' ಎಂದು ನಟಿ ಆಲಿಯಾ ಭಟ್ ಟ್ವೀಟ್ ಮಾಡಿದ್ದಾರೆ.

  ಅವಕಾಶ ಕೊಡಿ ಎಂದ ಶಾರೂಖ್

  ಅವಕಾಶ ಕೊಡಿ ಎಂದ ಶಾರೂಖ್

  ಆಲಿಯಾ ಭಟ್ ಚೊಚ್ಚಲ ನಿರ್ಮಾಣದ ಸಿನಿಮಾ ಕುರಿತು ವಿಶ್ ಮಾಡಿರುವ ಶಾರೂಖ್ ಖಾನ್, ''ದಯವಿಟ್ಟು ನಿಮ್ಮ ಮುಂದಿನ ಪ್ರೊಡಕ್ಷನ್ ಚಿತ್ರದಲ್ಲಿ ನನಗೊಂದು ಸಣ್ಣ ಅವಕಾಶ ಕೊಡಿ, ಸರಿಯಾದ ಸಮಯಕ್ಕೆ ಶೂಟಿಂಗ್ ಬರ್ತೇನೆ, ಬಹಳ ಪ್ರಾಮಾಣಿಕವಾಗಿ ಇರುತ್ತೇನೆ'' ಎಂದು ಪ್ರಾಮೀಸ್ ಮಾಡಿದ್ದಾರೆ.

  'ಪಠಾಣ್' ಮುಗಿಸುತ್ತಿದ್ದಂತೆ ಸೌತ್ ನಿರ್ದೇಶಕನ ಚಿತ್ರಕ್ಕೆ ಶಾರೂಖ್ ಚಾಲನೆ'ಪಠಾಣ್' ಮುಗಿಸುತ್ತಿದ್ದಂತೆ ಸೌತ್ ನಿರ್ದೇಶಕನ ಚಿತ್ರಕ್ಕೆ ಶಾರೂಖ್ ಚಾಲನೆ

  Recommended Video

  ನಿಖಿಲ್ ದಂಪತಿಗೆ ಹುಟ್ಟೋ ಮಗುವಿನ ಬಗ್ಗೆ ಭವಿಷ್ಯ ನುಡಿದ ವಿನಯ್ ಗುರೂಜಿ | Filmibeat Kannada
  ಆಲಿಯಾ-ಶಾರೂಖ್ ಜಂಟಿ ನಿರ್ಮಾಣ

  ಆಲಿಯಾ-ಶಾರೂಖ್ ಜಂಟಿ ನಿರ್ಮಾಣ

  'ಡಾರ್ಲಿಂಗ್ಸ್' ಸಿನಿಮಾ ಡಾರ್ಕ್ ಕಾಮಿಡಿ ಜಾನರ್ ಆಗಿದ್ದು, ಇದನ್ನು ಅಲಿಯಾ ಭಟ್ ಅವರ ಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ಸ್ ಮತ್ತು ಶಾರುಖ್ ಅವರ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಜಂಟಿಯಾಗಿ ನಿರ್ಮಿಸಲಿದೆ. ಈ ಚಿತ್ರದಲ್ಲಿ ಆಲಿಯಾ ಭಟ್, ಶೆಫಾಲಿ ಶಾ, ವಿಜಯ್ ವರ್ಮಾ ಮತ್ತು ರೋಶನ್ ಮ್ಯಾಥ್ಯೂ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.

  English summary
  Bollywood actor Shahrukh Khan wishes to work with Alia Bhatt production.
  Sunday, July 4, 2021, 12:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X