'ಟೈಗರ್' ರಕ್ಷಣೆಗೆ ಬಂದ 'ಪಠಾಣ್': ಅಯ್ಯೋ ಥಿಯೇಟರ್‌ನಿಂದ 'ಟೈಗರ್'-3 ಜಬರ್ದಸ್ತ್ ಸೀನ್ ಲೀಕ್

ಸಲ್ಮಾನ್ ಖಾನ್ ನಟನೆಯ 'ಟೈಗರ್-3' ದೀಪಾವಳಿ ಸಂಭ್ರಮದಲ್ಲಿ ಭಾನುವಾರವೇ ರಿಲೀಸ್ ಆಗ್ತಿದೆ. ಒಂದು ದಿನ ಮೊದ್ಲೆ ವಿದೇಶಗಳಲ್ಲಿ ಕೆಲವೆಡೆ ಸಿನಿಮಾ ಪ್ರದರ್ಶನ ಆರಂಭವಾಗಿದೆ. ಚಿತ್ರದಲ್ಲಿ ಶಾರುಖ್ ಖಾನ್ ಗೆಸ್ಟ್ ಅಪಿಯರೆನ್ಸ್ ಮಾಡಿದ್ದು ಸಣ್ಣ ಝಲಕ್ ಲೀಕ್ ಆಗಿದೆ.

ಮನೀಶ್ ಶರ್ಮಾ ನಿರ್ದೇಶನದ 'ಟೈಗರ್' ಸರಣಿಯ ಹೊಸ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಚಿತ್ರದಲ್ಲಿ ಸಲ್ಲು ಜೊತೆ ಮತ್ತೊಮ್ಮೆ ಕತ್ರೀನಾ ಕೈಫ್ ನಾಯಕಿಯಾಗಿ ಮಿಂಚಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದೆ. ಟೀಸರ್, ಟ್ರೈಲರ್‌ನಿಂದ ಸದ್ದು ಮಾಡಿದ್ದ ಸಿನಿಮಾ ಈಗ ಥಿಯೇಟರ್‌ಗಳಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದೆ.

ShahRukh Khans Pathaan cameo in Salman Khans Tiger- 3 video leaked

ಯಶ್ ರಾಜ್‌ ಫಿಲ್ಮ್ಸ್ ಸ್ಪೈ ಯೂನಿವರ್ಸ್‌ನಲ್ಲಿ 'ಟೈಗರ್-3' ಸಿನಿಮಾ ಕೂಡ ಇದೆ. ಹಾಗಾಗಿ ಇದೇ ಯೂನಿವರ್ಸ್‌ನ 'ಪಠಾಣ್' ಚಿತ್ರಕ್ಕೂ ಲಿಂಕ್ ಇದೆ. ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲಿ ರಾ ಏಜೆಂಟ್ ಅವಿನಾಶ್ ಟೈಗರ್ ರಾಥೋರ್ ಸಂಕಷ್ಟಕ್ಕೆ ಸಿಲುಕಿದಾಗ ಮತ್ತೊಬ್ಬ ರಾ ಏಜೆಂಟ್ ಪಠಾಣ್ ಬಂದು ಸಹಾಯ ಮಾಡುತ್ತಾನೆ. ಶಾರುಖ್ ಖಾನ್ ಮಾತ್ರವಲ್ಲ ಚಿತ್ರದಲ್ಲಿ ಹೃತಿಕ್ ರೋಷನ್ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

ಯಶ್‌ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್‌ನಲ್ಲಿ 'ಟೈಗರ್‌-3' ಹಾಗೂ ಹೃತಿಕ್ ನಟನೆಯ 'ವಾರ್' ಕತೆಗೂ ಲಿಂಕ್ ಇದೆ. ಚಿತ್ರದಲ್ಲಿ ಕಬೀರ್ ಆಗಿ ಬಾಲಿವುಡ್ ಗ್ರೀಕ್ ಗಾಡ್ ಕಾಣಿಸಿಕೊಂಡಿದ್ದಾರೆ. ಹೃತಿಕ್ ನಟನೆಯ ಸಣ್ಣ ಝಲಕ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಚಿತ್ರತಂಡ ಶಾರುಖ್ ಗೆಸ್ಟ್ ಅಪಿಯರೆನ್ಸ್ ಬಗ್ಗೆ ಮಾಹಿತಿ ನೀಡಿತ್ತು. ಆದರೆ ಸ್ಯಾಂಪಲ್‌ಗಳಲ್ಲಿ ಝಲಕ್ ತೋರಿಸಿಲಿಲ್ಲ.

'ಟೈಗರ್-3' ಚಿತ್ರದಲ್ಲಿ ಹೃತಿಕ್ ರೋಷನ್ ಇರ್ತಾರೆ ಅನ್ನೋದು ಇತ್ತೀಚೆಗೆ ಗೊತ್ತಾಗಿತ್ತು. ಚಿತ್ರತಂಡ ಈ ಬಗ್ಗೆ ಕೂಡ ತುಟಿ ಬಿಚ್ಚಿರಲಿಲ್ಲ. ಆದರೆ ಭಾರತದಲ್ಲಿ ಸಿನಿಮಾ ರಿಲೀಸ್ ಆಗುವುದಕ್ಕು ಮುನ್ನ ಸೀಕ್ರೆಟ್ ರಿವೀಲ್ ಆಗಿದೆ. ಅದ್ರಲ್ಲೂ ಶಾರುಖ್, ಹೃತಿಕ್ ಎಂಟ್ರಿ ಝಲಕ್ ಲೀಕ್ ಆಗಿದೆ. ಹಾಗಾಗಿ ಸಹಜವಾಗಿಯೇ ಥಿಯೇಟರ್‌ಗಳಲ್ಲಿ ಆ ಸರ್‌ಪ್ರೈಸ್ ಕಿಕ್ ಮಿಸ್ ಆದಂತಾಗಿದೆ.

ಸ್ಪೈ ಆಕ್ಷನ್ ಥ್ರಿಲ್ಲರ್ 'ಟೈಗರ್-3' ಚಿತ್ರದಲ್ಲಿ ಇಮ್ರಾನ್ ಹಶ್ಮಿ ವಿಲನ್ ಆಗಿ ಅಬ್ಬರಿಸಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಅಡ್ವಾನ್ಸ್ ಬುಕ್ಕಿಂಗ್‌ನಿಂದಲೇ ಸಿನಿಮಾ 20 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಆದಿತ್ಯ ಚೋಪ್ರಾ ಬಹಳ ಅದ್ಧೂರಿಯಾಗಿ 'ಟೈಗರ್-3' ಸಿನಿಮಾ ನಿರ್ಮಾಣ ಮಾಡಿದ್ದಾರೆ. ಶ್ರೀಧರ್ ರಾಘವ ಚಿತ್ರಕತೆ, ಅನಯ್ ಓಂ ಗೋಸ್ವಾಮಿ ಛಾಯಾಗ್ರಹಣ, ಪ್ರೀತಮ್ ಸಂಗೀತ ಚಿತ್ರಕ್ಕಿದೆ. ಹಿಂದಿ ಜೊತೆ ತೆಲುಗು, ತಮಿಳಿಗೂ ಸಿನಿಮಾ ಡಬ್ ಮಾಡಿ ರಿಲೀಸ್ ಮಾಡಲಾಗುತ್ತಿದೆ. ಆದರೆ ಕನ್ನಡದಲ್ಲಿ ಸಿನಿಮಾ ರಿಲೀಸ್ ಆಗ್ತಿಲ್ಲ.

ShahRukh Khans Pathaan cameo in Salman Khans Tiger- 3 video leaked

ಸಲ್ಲು 'ಟೈಗರ್-3' ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡುತ್ತದೆ ಎನ್ನುವ ನಿರೀಕ್ಷೆಯಿದೆ. ಕಿಂಗ್ ಖಾನ್ ನಟನೆಯ ಹಿಂದಿನ 2 ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ 1000 ರೂ. ಕೋಟಿ ಗಳಿಕೆ ಕಂಡು ದಾಖಲೆ ಬರೆದಿದ್ದವು. ಅದೇ ಹಾದಿಯಲ್ಲಿ 'ಟೈಗರ್-3' ಕಲೆಕ್ಷನ್ ಲೆಕ್ಕಚಾರ ನಡೀತಿದೆ. ಸಲ್ಮಾನ್ ಖಾನ್ ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿದ್ದಾರೆ. ಈ ಸಿನಿಮಾ ಗೆಲ್ಲಲೇಬೇಕು ಎಂದು ನಿರೀಕ್ಷೆಯಿಂದ ಇದ್ದಾರೆ. ವಿಶ್ವದಾದ್ಯಂತ ಸಾವಿರಾರು ಸ್ಕ್ರೀನ್‌ಗಳಲ್ಲಿ ಏಕಕಾಲಕ್ಕೆ ಸಿನಿಮಾ ತೆರೆಗಪ್ಪಳಿಸುತ್ತಿದೆ.

More from Filmibeat

English summary
ShahRukh Khan Goosebumps Entry in Salman Khan's Tiger- 3 video viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X