twitter
    For Quick Alerts
    ALLOW NOTIFICATIONS  
    For Daily Alerts

    ಟ್ರಾನ್ಸ್‌ಕ್ವೀನ್ 2020: ಶೈನ್ ಸೋನಿಗೆ ಮಿಸ್ ಟ್ರಾನ್ಸ್‌ಕ್ವೀನ್ ಇಂಡಿಯಾ ಪಟ್ಟ

    |

    ಲಿಂಗಪರಿವರ್ತಿತ ಅಥವಾ ದ್ವಿಲಿಂಗಿಗಳಿಗೆ ನಡೆಸಲಾಗುವ ಮಿಸ್ ಟ್ರಾನ್ಸ್‌ಕ್ವೀನ್ ಇಂಡಿಯಾ ಸ್ಪರ್ಧೆಯಲ್ಲಿ ಶೈನ್ ಸೋನಿಗೆ ಕಿರೀಟ ಒಲಿದಿದೆ. ಲಿಂಗಪರಿವರ್ತಿತಗೊಂಡವರು ಅಥವಾ ದ್ವಿಲಿಂಗಿಗಳಿಗೆಂದೇ ನಡೆಸಲಾಗುವ ಸೌಂದರ್ಯ ಸ್ಪರ್ಧೆ 'ಟ್ರಾನ್ಸ್‌ಕ್ವೀನ್'.

    ಈ ಗೆಲುವಿನ ಮೂಲಕ 'ಮಿಸ್‌ ಇಂಟರ್‌ನ್ಯಾಷನಲ್ ಕ್ವೀನ್ 2021' ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದಾರೆ.

    ಕಳೆದ ಮೂರು ವರ್ಷಗಳಿಂದಲೂ 'ಮಿಸ್ ಟ್ರಾನ್ಸ್‌ಕ್ವೀನ್ ಇಂಡಿಯಾ' ಸೌಂದರ್ಯ ಸ್ಪರ್ಧೆ ಆಯೋಜನೆಗೊಳ್ಳುತ್ತಿದೆ. ಕೊರೊನಾ ಕಾರಣದಿಂದ ಈ ವರ್ಷ ಸ್ಪರ್ಧೆಯನ್ನು ರದ್ದುಗೊಳಿಸಲಾಗಿತ್ತು. ಆದರೆ 2021 ರ 'ಮಿಸ್‌ ಇಂಟರ್‌ನ್ಯಾಷನಲ್ ಕ್ವೀನ್' ಸ್ಪರ್ಧೆಗೆ ಭಾರತದ ಪ್ರಾತಿನಿಧ್ಯ ಖಾಯಂಗೊಳಿಸಲು ಸ್ಪರ್ಧೆ ಆಯೋಜಿಸಿ, ಶೈನ್ ಸೋನಿಯನ್ನು ಆಯ್ಕೆ ಮಾಡಲಾಯಿತು.

    Shaine Soni Becomes Indias Miss Transqueen 2020

    ಗೆಲುವಿನ ಬಗ್ಗೆ ಸಿಎನ್‌ಎನ್‌ ಜೊತೆ ಮಾತನಾಡಿರುವ ಶೈನ್ ಸೋನಿ, ಹುಟ್ಟುತ್ತಾ ಗಂಡಾಗಿದ್ದ ನಾನು ಎಳವೆಯಲ್ಲಿಯೇ ಹೆಣ್ಣಾಗಿ ಬದಲಾದೆ. ನನ್ನ ಸುತ್ತಲಿನವರು ನನ್ನನ್ನು ಅರ್ಥ ಮಾಡಿಕೊಳ್ಳಲಿಲ್ಲ. ಕುಟುಂಬದಿಂದಲೂ ಸಾಕಷ್ಟು ಒತ್ತಡ ಅನುಭವಿಸಿದ್ದಾಗಿ ಹೇಳಿದ್ದಾರೆ ಶೈನ್ ಸೋನಿ.

    Recommended Video

    ರೈತರಿಗಾಗಿ ತ್ಯಾಗ ಮಾಡಿದ ಮೋಹಕ ತಾರೆ Ramya | Filmibeat Kannada

    17 ರ ಪ್ರಾಯದಲ್ಲಿಯೇ ಮನೆಬಿಟ್ಟು ಹೊರಗೆ ಬಂದ ಶೈನ್ ಸೋನಿ, ಫ್ಯಾಷನ್ ಡಿಸೈನ್ ಕೋರ್ಸ್ ಪೂರ್ತಿಗೊಳಿಸಿ, ಅದರಲ್ಲಿಯೇ ಉನ್ನತ ಶಿಕ್ಷಣ ಮಾಡಿದ್ದಾರೆ. ಈಗ ತಮ್ಮದೇ ಆದ ಸ್ವಂತ ಫ್ಯಾಷನ್ ಬ್ರ್ಯಾಂಡ್ ಹೊಂದಿದ್ದಾರೆ ಶೈನ್ ಸೋನಿ.

    English summary
    Fashion designer Shaine Soni becomes India's miss Transqueen 2020. She will represent India in Miss International Transqueen 2021.
    Wednesday, December 23, 2020, 9:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X