ಬಾಲಿವುಡ್ ಕೈ ಹಿಡಿದ ಮಾಟ, ಮಂತ್ರ, ವಶೀಕರಣ ; ಶೈತಾನ್ ಗಳಿಸಿದ್ದೆಷ್ಟು..?

ಹಿಂದಿ ಚಿತ್ರರಂಗದಲ್ಲಿ ಈ ವರ್ಷ ಹೇಳಿಕೊಳ್ಳುವಂತಹ ಪವಾಡ ನಡೆದಿಲ್ಲ. ಈ ಕಾರಣಕ್ಕೆ ಅಜಯ್ ದೇವಗನ್, ಮಾಧವನ್ ಹಾಗೂ ಜ್ಯೋತಿಕಾ ಅಭಿನಯದ ಶೈತಾನ್ ಚಿತ್ರದ ಮೇಲೆ ಎಲ್ಲರ ಕಣ್ಣಿತ್ತು. ಮೊದಲ ದಿನ ಚಿತ್ರ ಉತ್ತಮವಾದ ಮೊತ್ತ ಕಲೆ ಹಾಕುವ ನಿರೀಕ್ಷೆ ಇತ್ತು.

ಆ ನಿರೀಕ್ಷೆ ಸದ್ಯಕ್ಕಂತು ಹುಸಿಯಾಗಿಲ್ಲ. ಯಾಕೆಂದರೆ ಮೊದಲನೇ ದಿನ ಶೈತಾನ್ ಹದಿನಾಲ್ಕು ಕೋಟಿ ಗಳಿಸಿದೆ. ನಿಜಾ.. ಅಜಯ್ ದೇವಗನ್ ಹೆಸರಿಗೆ ಈ ಗಳಿಕೆ ಕಮ್ಮಿನೇ. ಆದರೆ ಮುಳುಗುವವನಿಗೆ ಹುಲ್ಲು ಕಡ್ಡಿ ಆಸರೆ ಎಂಬಂತೆ ಶೈತಾನ್ ಚಿತ್ರದ ಹದಿನಾಲ್ಕು ಕೋಟಿಯ ಗಳಿಕೆಗೆ ಬಾಲಿವುಡ್ ತೃಪ್ತಿ ಪಟ್ಟಿದೆ.

Shaitaan box office Day 1 Ajay Devgn s film starts off with Rs 14 crore

ಇನ್ನೂ ಶೈತಾನ್ ಚಿತ್ರದ ಮೊದಲ ದಿನದ ಗಳಿಕೆಯನ್ನ ಕಂಡು, ಮೂಗು ಮುರಿಯುವಂತೆ ಇಲ್ಲ. ಯಾಕೆಂದರೆ ಗಳಿಸಿದ್ದು ಹದಿನಾಲ್ಕು ಕೋಟಿಯಾದರೂ ಬಾಲಿವುಡ್ ನಲ್ಲಿ ಒಂದು ದಾಖಲೆ ಶೈತಾನ್ ಚಿತ್ರದ ಮುಂದೆ ಉಡೀಸ್ ಆಗಿದೆ.

ಹೌದು, ಅಸಲಿಗೆ ಇಮ್ರಾನ್ ಹಶ್ಮಿ ಅಭಿನಯದ ರಾಜ್ 3 ಮೊದಲ ದಿನ ಹತ್ತು ಕೋಟಿ ಮೂವತ್ಮೂರು ಲಕ್ಷ ಗಳಿಸಿತ್ತು. ಈ ಮೂಲಕ ಅತೀ ಹೆಚ್ಚು ಗಳಿಕೆ ಕಂಡ ಬಾಲಿವುಡ್ ನ ಮೊದಲ ಹಾರರ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ದಾಖಲೆಯನ್ನ ಹದಿನಾಲ್ಕು ಕೋಟಿಯನ್ನ ಗಳಿಸುವ ಮೂಲಕ ಶೈತಾನ್ ಅಳಿಸಿ ಹಾಕಿದೆ.

Shaitaan box office Day 1 Ajay Devgn s film starts off with Rs 14 crore

ಇನ್ನೂ ಮೊದಲನೇ ದಿನ ಹದಿನಾಲ್ಕು ಕೋಟಿ ಗಳಿಸಿದ ಶೈತಾನ್, ಎರಡನೇ ದಿನ ಅಂದರೆ ಇಂದು ಇಪ್ಪತ್ತು ಕೋಟಿಯ ಗಡಿ ತಲುಪುವ ನಿರೀಕ್ಷೆ ಹಿಂದಿ ಉದ್ಯಮಕ್ಕೆ ಇದೆ. ಭಾನುವಾರ ಬಂಪರ್ ಲಾಟರಿ ಹೊಡೆಯುವ ಭರವಸೆಯೂ ಇದೆ. ಚಿತ್ರದ ಕುರಿತು ಮೌತ್ ಪಬ್ಲಿಸಿಟಿ ಚೆನ್ನಾಗಿರುವ ಕಾರಣ ಬಾಕ್ಸಾಫೀಸ್ ನ ಈ ಪರೀಕ್ಷೆಯಲ್ಲಿ ಶೈತಾನ್ ಪಾಸಾಗಬಹುದು

ಶೈತಾನ್ ಕಥಾ ಹಂದರ

ಶೈತಾನ್ ನಾಲ್ಕು ಪಾತ್ರಗಳ ಸುತ್ತ ಸುತ್ತುವ ಸಿನಿಮಾ. ಇಲ್ಲಿ ಮಾಟ ಮಂತ್ರ ವಶೀಕರಣ ಇದೆ. ಕುಟುಂಬವೊಂದು ಪ್ರವಾಸಕ್ಕೆ ತೆರಳಿದಾಗ ಅಲ್ಲಿ ಎದುರಾಗುವ ವ್ಯಕ್ತಿಯಿಂದ, ಕುಟುಂಬ ಏನೆಲ್ಲ ಸಮಸ್ಯೆಯನ್ನ ಎದುರಿಸುತ್ತೆ ಅನ್ನುವುದು ಚಿತ್ರದ ಸಾರ. ತಂದೆಯ ಪಾತ್ರದಲ್ಲಿ ಅಜಯ್ ದೇವಗನ್, ತಾಯಿಯ ಪಾತ್ರದಲ್ಲಿ ಜ್ಯೋತಿಕಾ ಮಾಟಗಾರನ ಪಾತ್ರದಲ್ಲಿ ಆರ್.ಮಾಧವನ್ ಇದ್ದಾರೆ. ಜಾನಕಿ ಬೋಡಿವಾಲಾ ಅಜಯ್ ದೇವಗನ್ ಹಾಗೂ ಜ್ಯೋತಿಕಾ ಅವರ ಮಗಳ ಪಾತ್ರವನ್ನ ನಿರ್ವಹಿಸಿದ್ದಾರೆ. ಇಡೀ ಚಿತ್ರದ ಕೇಂದ್ರ ಬಿಂದು ಇವರೇ.

Shaitaan box office Day 1 Ajay Devgn s film starts off with Rs 14 crore

ಸೂಪರ್ 30 ಹಾಗೂ ಕ್ವೀನ್ ಚಿತ್ರಗಳನ್ನ ನಿರ್ದೇಶಿಸಿದ್ದ ವಿಕಾಸ್ ಬಹ್ಲ್ ಈ ಚಿತ್ರವನ್ನ ನಿರ್ದೇಶಿಸಿದ್ದಾರೆ. 25 ವರ್ಷದ ನಂತರ ಜ್ಯೋತಿಕಾ ಈ ಚಿತ್ರದ ಮೂಲಕ ಬಾಲಿವುಡ್ ಗೆ ಮರಳಿರುವುದು ವಿಶೇಷತೆಯಲ್ಲೊಂದು.

ಗುಜರಾತಿ ಚಿತ್ರದ ರಿಮೇಕ್

ಗುಜರಾತಿ ಭಾಷೆಯಲ್ಲಿ ಕಳೆದ ವರ್ಷ 'ವಶ್​ ' ಹೆಸರಿನಲ್ಲಿ ಚಿತ್ರವೊಂದು ಬಂದಿತ್ತು. ಅಲ್ಲಿನ ಗಲ್ಲಾಪೆಟ್ಟಿಗೆಯಲ್ಲಿ ಸದ್ದನ್ನೂ ಮಾಡಿತ್ತು. ಶೈತಾನ್ ಇದೇ ವಶ್ ಚಿತ್ರದ ಹಿಂದಿ ಅವತರಣಿಕೆ.ವಿಶೇಷ ಅಂದರೆ ಗುಜರಾತಿ ಭಾಷೆಯಲ್ಲಿ ಚಿತ್ರವನ್ನ ಕಣ್ತುಂಬಿಕೊಂಡವರು ಕೂಡ, ಹಿಂದಿಯಲ್ಲಿ ಈ ಚಿತ್ರವನ್ನ ನೋಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಎರಡು ಚಿತ್ರಗಳನ್ನ ಹೋಲಿಸಿ ಚರ್ಚೆ ಮಾಡುತ್ತಿದ್ದಾರೆ

More from Filmibeat

English summary
One of the most anticipated films of the year, Ajay Devgn, R Madhavan and Jyothika's 'Shaitaan' saw a decent opening at the box office. The film, which enjoyed a solo opening on March 8, earned Rs 14.50 crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X