ರಣ್ವೀರ್ ಸಿಂಗ್ ಗೆ ಶಕ್ತಿಮಾನ್ ಪಾತ್ರ ಮಾಡುವ ಅರ್ಹತೆ-ಯೋಗ್ಯತೆ ಇಲ್ಲ ; ಮುಖೇಶ್ ಖನ್ನಾ..!

ಮುಖೇಶ್ ಖನ್ನಾ.. ಒಂದ್ಕಾಲದ ಭೀಷ್ಮ ಹಾಗೂ ಶಕ್ತಿಮಾನ್. ಈ ಎರಡೇ ಪಾತ್ರಗಳ ಮೂಲಕ ಅನೇಕ ಅಭಿಮಾನಿಗಳನ್ನ ಸಂಪಾದಿಸಿದ ಮುಖೇಶ್ ಖನ್ನಾ, ಸದ್ಯಕ್ಕೆ ರಣ್ವೀರ್ ಸಿಂಗ್ ಮೇಲೆ ಹರಿಹಾಯ್ದಿದ್ದಾರೆ.

ಹೌದು, ಅಸಲಿಗೆ ಕೆಲ ದಿನಗಳಿಂದ.. 90ರ ದಶಕದ ಭಾರತದ ಸೂಪರ್ ಹೀರೋ ಶಕ್ತಿಮಾನ್ ಗೆ ಮರುಜೀವ ನೀಡುವ ಚರ್ಚೆ ನಡೆಯುತ್ತಿದೆ. ಬೆಳ್ಳಿತೆರೆಯಲ್ಲಿ ಶಕ್ತಿಮಾನ್ ನ ಕಣ್ತುಂಬಿಕೊಳ್ಳುವ ಆಸೆಯೂ ಅನೇಕರಲ್ಲಿದೆ. ಆದರೆ.. ಗತಕಾಲದ ಶಕ್ತಿಮಾನ್ ಹಾಗೂ ಗಂಗಾಧರ್ ಪಾತ್ರಗಳನ್ನ ನಿರ್ವಹಿಸುವರು ಯಾರು.? ಈ ಪ್ರಶ್ನೆಗೆ ಅನೇಕರು ರಣ್ವೀರ್ ಸಿಂಗ್ ಸೂಕ್ತ ವ್ಯಕ್ತಿಯೆಂದು ಉತ್ತರವನ್ನ ಕೊಟ್ಟಿದ್ದರು. ಮುಖೇಶ್ ಖನ್ನಾ ಖುದ್ದು ರಣ್ವೀರ್ ಸಿಂಗ್ ಗೆ ನವಯುಗದ ಶಕ್ತಿಮಾನ್ ನ ಅವತಾರವೆತ್ತಲು ಸಮ್ಮತಿಯನ್ನ ನೀಡಿದ್ದಾರೆ ಎಂದು ಭಾವಿಸಿದ್ದರು. ಆದರೆ ಇದು ಸುಳ್ಳು. ಮುಖೇಶ್ ಖನ್ನಾ ಈ ವಿಚಾರವನ್ನೇ ಹೇಳಿ ರಣ್ವೀರ್ ಸಿಂಗ್ ಮೇಲೆ ಕೆಂಡ ಕಾರಿದ್ದಾರೆ. ಶಕ್ತಿಮಾನ್ ಆಗುವ ಅರ್ಹತೆ-ಯೋಗ್ಯತೆ ಎರಡು ರಣ್ವೀರ್ ಸಿಂಗ್ ಗೆ ಇಲ್ಲ ಅಂದಿದ್ದಾರೆ.

Shakthimaan Mukesh Khanna says that Ranveer Singh Cant Do It

ರಣ್ವೀರ್ ಸಿಂಗ್ ಎಷ್ಟೇ ದೊಡ್ಡ ಸ್ಟಾರ್ ಆಗಿರಬಹುದು. ಆದರೆ ಬೆತ್ತಲೆ ಫೋಟೋಶೂಟ್ ಮಾಡಿಸಿಕೊಳ್ಳುವ ಸ್ಟಾರ್ ಯಾವತ್ತೂ ಶಕ್ತಿಮಾನ್ ಆಗಲಾರ ಅಂದಿದ್ದಾರೆ. ಬೆತ್ತಲೆಯಾಗಿ ನಟಿಸುವುದು ಭಾರತದ ಸಂಸ್ಕೃತಿ ಅಲ್ಲ ಹಾಗೊಂದು ವೇಳೆ ಬೆತ್ತಲೆಯಾಗಿ ಕಾಣಿಸಿಕೊಳ್ಳುವುದು ಅವರಿಗೆ ಸರಿ ಎನಿಸಿದರೆ ಫಿನ್ ಲ್ಯಾಂಡ್ ಅಥವಾ ಸ್ಪೇನ್ ಗೆ ಹೋಗಲಿ ಎಂದು ಮುಖೇಶ್ ಖನ್ನಾ ಹೇಳಿದ್ದಾರೆ. ಅಲ್ಲಿ ಪ್ರತಿ ಮೂರನೇ ಒಂದು ದೃಶ್ಯದಲ್ಲಿ ಬೆತ್ತಲೆಯಾಗಿ ನಟಿಸಬಹುದು ಎಂದಿದ್ದಾರೆ.

ಶಕ್ತಿಮಾನ್ ಪಾತ್ರಕ್ಕೆ ಅದ್ರದ್ದೇ ಆದ ಘನತೆ ಇದೆ. ಇನ್ನೂ ನಮ್ಮ ಪೈಪೋಟಿ ಇರುವುದು ಸೂಪರ್​ ಮ್ಯಾನ್​, ಸ್ಪೈಡರ್​ ಮ್ಯಾನ್​ ವಿರುದ್ಧ ಅಲ್ಲ ಎಂದು ನಾನು ನಿರ್ಮಾಪಕರಿಗೆ ಹೇಳಿದ್ದೇನೆ ಎಂದಿರುವ ಮುಖೇಶ್ ಖನ್ನಾ,​ ಶಕ್ತಿಮಾನ್ ಅಂದರೆ ಕೇವಲ ಸೂಪರ್ ಹೀರೋ ಅಲ್ಲ ಬದುಕಿನ ಶಿಕ್ಷಕವೂ ಹೌದು ಅಂದಿದ್ದಾರೆ. ಆ ಪಾತ್ರವನ್ನು ಮಾಡುವ ನಟನಿಗೆ ಅಂಥ ಗುಣ ಇರಬೇಕು. ಅವನು ಹೇಳಿದರೆ ಜನರು ಕೇಳುವಂತಿರಬೇಕು ಎಂದು ಹೇಳಿರುವ ಮುಖೇಶ್ ಖನ್ನಾ, ರಣ್ವೀರ್ ಸಿಂಗ್ ಹೊರತು ಪಡಿಸಿ ಶಕ್ತಿಮಾನ್ ಪಾತ್ರಕ್ಕೆ ಹೊಂದುವಂತ ಸ್ಟಾರ್ ನಟರು ಇದ್ದಾರೆ. ಆದರೆ ಅವರ ಇಮೇಜ್ ಅಡ್ಡ ಬರುತ್ತೆ ಎಂದಿದ್ದಾರೆ

Shakthimaan Mukesh Khanna says that Ranveer Singh Cant Do It

ಮುಖೇಶ್ ಅವರ ಈ ಮಾತು ಸದ್ಯಕ್ಕೆ ಬಾಲಿವುಡ್ ನಲ್ಲಿ ಚರ್ಚೆಯನ್ನ ಹುಟ್ಟು ಹಾಕಿದೆ. ರಣ್ವೀರ್ ಸಿಂಗ್ ಅವರ ಅಭಿಮಾನಿಗಳನ್ನೂ ಕೂಡ ಕೆರಳಿಸಿದೆ. ಇನ್ನೂ ವಿಡಿಯೋ ಮಾಡಿ ಅದನ್ನ ತಮ್ಮ ಇನ್ಸ್ಟಾ ಗ್ರಾಂನಲ್ಲಿ ಹಂಚಿಕೊಂಡಿದ್ದ ಮುಖೇಶ್ ಖನ್ನಾ ಕೆಲ ಸಮಯದ ಬಳಿಕ ವಿಡಿಯೋವನ್ನ ಡಿಲೀಟ್ ಮಾಡಿದ್ದಾರೆ. ಕಾರಣ ಖುದ್ದು ಮುಖೇಶ್ ಖನ್ನಾ ಅವರಿಗೆ ಗೊತ್ತು.

Shakthimaan Mukesh Khanna says that Ranveer Singh Cant Do It

ಶಕ್ತಿಮಾನ್ ಚಿತ್ರಕ್ಕೆ ನಿರ್ದೇಶಕ ಯಾರು..?

ಮಲಯಾಳಂ ನಿರ್ದೇಶಕ ಬಾಸಿಲ್ ಜೋಸೆಫ್ ಶಕ್ತಿಮಾನ್ ಚಿತ್ರವನ್ನ ನಿರ್ದೇಶಿಸಲಿದ್ದಾರೆ ಅನ್ನುವ ಸುದ್ದಿ ಇದೆ. ಈಗಾಗಲೇ ಬಾಸಿಲ್ ಗೆ ಸೂಪರ್ ಹಿರೋ ಸಿನಿಮಾ ಮಿನ್ನಲ್ ಮುರಲಿ ನಿರ್ದೇಶಿಸಿದ ಅನುಭವ ಇದೆ. ಇನ್ನೂ ಆ ಸಿನಿಮಾ ಕೂಡ ಬ್ಲಾಕ್ ಬಸ್ಟರ್ ಆಗಿತ್ತು. ಈ ಕಾರಣಕ್ಕೆ ಬಾಸಿಲ್ ಅವರಿಗೆ ಶಕ್ತಿಮಾನ್ ಚಿತ್ರ ಮಾಡುವ ಜವಾಬ್ಧಾರಿಯನ್ನ ಮುಖೇಶ್ ಖನ್ನಾ ವಹಿಸಿದ್ದಾರೆ ಎಂಬ ಮಾತು ಬಲವಾಗಿ ಕೇಳಿ ಬರುತ್ತಿದೆ. ಇನ್ನೂ ಶಕ್ತಿಮಾನ್ ಧಾರಾವಾಹಿಗೆ ದೊಡ್ಡ ಜನಪ್ರಿಯತೆ ಇದೆ. ಆ ಪಾತ್ರಕ್ಕೆ ಇರುವ ಗೌರವಕ್ಕೆ ಧಕ್ಕೆ ಆಗದಂತೆ ಬಾಸಿಲ್ ಜೋಸೆಫ್ ಜಾಗರೂಕತೆಯಿಂದ ಚಿತ್ರಕತೆ ಸಿದ್ಧಪಡಿಸಿದ್ದಾರೆ ಎಂಬ ಮಾತು ಕೂಡ ಮುಂಬೈನಲ್ಲಿ ಕೇಳಿ ಬರುತ್ತಿದೆ. ಶೀಘ್ರದಲ್ಲಿಯೇ ಶಕ್ತಿಮಾನ್ ಚಿತ್ರ ಸೆಟ್ಟೇರುವ ನಿರೀಕ್ಷೆ ಇದೆ.

More from Filmibeat

English summary
Veteran Bollywood Actor Mukesh Khanna Strongly Reacts On Rumour Of Casting The Film Shakthiman. The Original Shaktimaan Says Ranveer Singh Cant Give Justice To The Role Of Shakthimaan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X