ತನುಶ್ರೀ ದತ್ತಾ ವಿವಾದದ ಬಗ್ಗೆ ನಗುತ್ತಾ ಪ್ರತಿಕ್ರಿಯೆ ನೀಡಿದ ಶಕ್ತಿ ಕಪೂರ್

ಬಾಲಿವುಡ್ ಅಂಗಳದಲ್ಲಿ ಈಗ ತನುಶ್ರೀ ದತ್ತಾ ವಿವಾದ ಬಿಸಿ ಬಿಸಿ ಚರ್ಚೆ ಆಗುತ್ತಿದೆ. ಅಮಿತಾಬ್ ಬಚ್ಚನ್ ನಂತರ ಹಿಂದಿ ಚಿತ್ರರಂಗದ ಇದೀಗ ಮತ್ತೊಬ್ಬ ದೊಡ್ಡ ನಟ ಈ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ನಟ ನಾನಾ ಪಾಟೇಕರ್ ನನ್ನ ಜೊತೆಗೆ ಅಸಭ್ಯವಾಗಿ ವರ್ತನೆ ಮಾಡಿದ್ದರು ಎಂದು ನಟಿ ತನುಶ್ರೀ ದತ್ತಾ ಗಂಭೀರ ಆರೋಪ ಮಾಡಿದ್ದರು. ಈ ಬಗ್ಗೆ ಸದ್ಯ ನಟ ಶಕ್ತಿ ಕಪೂರ್ ಮಾತನಾಡಿದ್ದು, ನನಗೆ ಈ ಘಟನೆಯ ಬಗ್ಗೆ ಏನು ಗೊತ್ತಿಲ್ಲ. ಇದು ಹತ್ತು ವರ್ಷದ ಹಿಂದೆ ಆಗಿರುವ ಘಟನೆ, ಆಗ ನಾನಿನ್ನು ಸಣ್ಣವನಾಗಿದ್ದೆ'' ಎಂದು ನಗುತ್ತಾ ಉತ್ತರ ನೀಡಿದ್ದಾರೆ.

ಶಕ್ತಿ ಕಪೂರ್ ನೀಡಿದ ಉತ್ತರ ಕೇಳುತ್ತಿದ್ದ ತನುಶ್ರೀ ದತ್ತಾ ವಿವಾದವನ್ನು ಅವರು ಹೆಚ್ಚು ಸೀರಿಯಸ್ ಆಗಿ ತೆಗೆದುಕೊಂಡಿಲ್ಲ ಎಂದು ಖಾತ್ರಿ ಆಗುತ್ತದೆ. ಇನ್ನೊಂದು ಕಡೆ ಅಮಿತಾಬ್ ಬಚ್ಚನ್ ಕೂಡ ಈ ವಿವಾದದ ಬಗ್ಗೆ ''ನನ್ನ ಹೆಸರು ತನುಶ್ರೀ ಅಲ್ಲ, ನಾನಾ ಪಾಟೇಕರ್ ಕೂಡ ಅಲ್ಲ. ಈ ಬಗ್ಗೆ ನಾನು ಹೇಗೆ ಉತ್ತರಿಸಲಿ'' ಎಂದು ಹೇಳಿದ್ದರು.

Shakti Kapoor reacts on Tanushree Duttas controversy

ತನುಶ್ರೀ ದತ್ತಾ ಮಾಡುತ್ತಿರುವ ಆರೋಪ ಇದು

''ಹಾರ್ನ್ ಓಕೆ ಪ್ಲೀಸ್' ಚಿತ್ರದ ಸ್ಪೆಷಲ್ ಹಾಡಿಗೆ ಡ್ಯಾನ್ಸ್ ಮಾಡುವಾಗ ನನ್ನೊಂದಿಗೆ ನಾನಾ ಪಾಟೇಕರ್ ಅಸಭ್ಯವಾಗಿ ವರ್ತಿಸಿದ್ದರು. ಮಹಿಳೆಯರ ಜೊತೆಗೆ ನಾನಾ ಪಾಟೇಕರ್ ಹೇಗೆ ವರ್ತಿಸುತ್ತಾರೆ ಅಂತ ಇಂಡಸ್ಟ್ರಿಯಲ್ಲಿ ಇರುವವರಿಗೆ ಗೊತ್ತಿದೆ. ಆದ್ರೆ, ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಮಹಿಳೆಯರಿಗೆ ನಾನಾ ಪಾಟೇಕರ್ ಗೌರವ ಕೊಡಲ್ಲ. ಕೆಲ ನಟಿಯರ ಮೇಲೆ ನಾನಾ ಪಾಟೇಕರ್ ಕೈ ಮಾಡಿದ್ದಾರೆ... ದೌರ್ಜನ್ಯ ಎಸಗಿದ್ದಾರೆ. ಈ ಬಗ್ಗೆ ಯಾರೂ ಕೂಡ ವರದಿ ಮಾಡಿಲ್ಲ'' ಎಂದು ಸಂದರ್ಶನವೊಂದರಲ್ಲಿ ತನುಶ್ರೀ ದತ್ತಾ ಬೇಸರ ವ್ಯಕ್ತಪಡಿಸಿದ್ದರು.

More from Filmibeat

English summary
Bollywood Actor Shakti Kapoor reacts on Tanushree Dutta's controversy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X