ನಾನು ಇನ್ನೂ ಸತ್ತಿಲ್ಲ ; ಏಕಾಏಕಿ ಗುಡುಗಿದ್ದೇಕೆ ಬಾಲಿವುಡ್‌ನ ದಿಗ್ಗಜ ಶಕ್ತಿ ಕಪೂರ್ ?

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜನ ಸಾಮಾನ್ಯರು ಯಾವುದಾದರು ಒಂದು ಸುದ್ದಿಯನ್ನು ಟಿವಿ ಮತ್ತು ನ್ಯೂಸ್ ಪೇಪರ್‌ಗಳನ್ನು ನೋಡಿದ ನಂತರ ನಂಬುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಅಂಗೈಯಲ್ಲಿರುವ ಮೊಬೈಲ್‌ನಲ್ಲಿಯೇ ಎಲ್ಲ ಸುದ್ದಿ ಕೆಲವೇ ಸೆಕೆಂಡ್‌ನಲ್ಲಿ ತಲುಪಿ ಬಿಡುತ್ತಾವೆ.

ಆದರೆ, ಹೀಗೆ ತಲುಪುವ ಈ ಸುದ್ದಿಗಳಲ್ಲಿ ಸತ್ಯ ಯಾವುದು ಸುಳ್ಳು ಯಾವುದು ಎನ್ನುವುದನ್ನು ಅರಿಯುವಷ್ಟರಲ್ಲಿ ಆ ಸುದ್ದಿ ಎಲ್ಲಿಂದ ಎಲ್ಲೆಲ್ಲಿಗೋ ತಲುಪಿ, ಮತ್ಯಾವುದೋ ಪ್ರಮಾದವನ್ನು ಸೃಷ್ಟಿಸಿರುತ್ತೆ. ಇದಕ್ಕೆ ಬಾಲಿವುಡ್‌ನ ಹಿರಿಯ ನಟ ಮತ್ತು ಶ್ರದ್ದಾ ಕಪೂರ್ ತಂದೆ ಶಕ್ತಿ ಕಪೂರ್ ನಿಧನದ ವಾರ್ತೆ ಸದ್ಯದ ಉದಾಹರಣೆ.

Shakti Kapoor Shuts Down Viral Rumors with Healthy amp amp Happy Update

ಹೌದು, ಲೈಕ್ಸ್.. ವ್ಯೂವ್ಸ್ ಮತ್ತು ಸಬ್‌ಸ್ಕೈಬರ್ಸ್ ಹುಚ್ಚಿನಲ್ಲಿ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಹರಡುವವರ ಸಂತತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. 2024ರಲ್ಲಿ ಗೃಹ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ 2021 ರಿಂದ 2024 ವರೆಗೆ ರಾಜ್ಯದಲ್ಲಿ ಒಟ್ಟು 247 ''ಫೇಕ್ ನ್ಯೂಸ್'' ಪ್ರಕರಣ ದಾಖಲಾಗಿವೆ.

''ಸುಳ್ಳು ಸುದ್ದಿ'' ಹಂಚಿಕೊಂಡರೆ ಕ್ರಮ ಕೈಗೊಳ್ಳಲಾಗುತ್ತೆ ಎನ್ನುವ ಅರಿವು ಇದ್ದರು ಕೂಡ ಅನೇಕರು ''ಸುಳ್ಳು ಸುದ್ದಿ''ಯನ್ನು ಬರೆಯುತ್ತಾರೆ. ಹಂಚಿಕೊಳ್ಳುತ್ತಾರೆ. ಇದಕ್ಕೆ ಮತ್ತೊಂದು ಕೈಗನ್ನಡಿ ಎಂಬಂತೆ ಶಕ್ತಿ ಕಪೂರ್ ನಿಧನರಾಗಿದ್ದಾರೆ ಎನ್ನುವ ''ಫೇಕ್ ನ್ಯೂಸ್'' ನ ತೇಲಿ ಬಿಡಲಾಗಿದೆ.

ಸಹಜವಾಗಿಯೇ ಈ ಸುದ್ದಿ ಕೇಳಿ ಹಲವರಿಗೆ ಆಘಾತವಾಗಿದೆ. ಯಾಕೆಂದರೆ ಶಕ್ತಿ ಕಪೂರ್ ಬಾಲಿವುಡ್‌ನ ದಿಗ್ಗಜ. ಒಂದೆರಡಲ್ಲ.. ನೂರು ಇನ್ನೂರಲ್ಲ.. ಬರೋಬ್ಬರಿ 750ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದವರು ಶಕ್ತಿ ಕಪೂರ್. ಸದ್ಯ ಶಕ್ತಿ ಕಪೂರ್ ಗೆ ಈಗ 73 ವರ್ಷ. ಇಳಿವಯಸ್ಸಿನಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳು ಶಕ್ತಿ ಕಪೂರ್ ಅವರಿಗೆ ಕೂಡ ಇದ್ದೇ ಇವೆ.

ಈ ಹಿನ್ನೆಲೆ ಈ ಸುಳ್ಳು ಸುದ್ದಿಯನ್ನು ಓದಿ, ಕೇಳಿ ಹಲವರು ನಿಜಾ ಎಂದುಕೊಂಡಿದ್ದಾರೆ. ಸತ್ಯಾಸತ್ಯತೆ ಅರಿಯದೇ ''ಫ್ಯಾಕ್ಟ್ ಚೆಕ್'' ಕೂಡ ಮಾಡದೇ ಸಾಮಾಜಿಕ ಜಾಲತಾಣದಲ್ಲಿ RIP ಸುರಿಮಳೆಗೈದಿದ್ದಾರೆ. ಫೋಟೊಗಳನ್ನು ಹಂಚಿಕೊಡು ಸಂತಾಪ ಸೂಚಿಸಿದ್ದಾರೆ. ಹೀಗಾಗಿ ತಾನು ಬದುಕಿದ್ದೇನೆ ಎಂದು ಸ್ವತಃ ಶಕ್ತಿ ಕಪೂರ್ ಅವರೇ ಹೇಳಿಕೊಳ್ಳಬೇಕಾಗಿ ಬಂದಿರುವುದು ಈ 5G ಯುಗದ ದುರಂತ.

shakti-kapoor-shuts-down-viral-rumors-with-healthy-happy-update

ತಮ್ಮ ಡೆತ್ ನ್ಯೂಸ್ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಶಕ್ತಿ ಕಪೂರ್, ಎಲ್ಲರಿಗೂ ನಮಸ್ಕಾರ, ನನ್ನ ಸಾವಿನ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ. ನಾನು ಆರೋಗ್ಯವಾಗಿದ್ದೇನೆ, ಖುಷಿಯಾಗಿದ್ದೇನೆ ಎಂದು ಹೇಳಿರುವ ಶಕ್ತಿ ಕಪೂರ್ ದಯಮಾಡಿ ನಾನು ಸತ್ತು ಹೋಗಿದ್ದೇನೆ ಎಂಬ ವದಂತಿಯನ್ನು ನಿರ್ಲಕ್ಷಿಸಿ ಎಂದು ಹೇಳಿದ್ದಾರೆ. ಇದು ಒಳ್ಳೆಯದಲ್ಲ.. ಮಾಡಿದ್ದು ಖಂಡಿತವಾಗಿಯೂ ಸರಿಯಲ್ಲ ಎಂದು ತಮ್ಮ ಅಸಮಾಧಾನ ಕೋಪವನ್ನು ಕೂಡ ಹೊರ ಹಾಕಿರುವ ಶಕ್ತಿ ಕಪೂರ್, ಈ ಕುರಿತು ಸೈಬರ್ ಕ್ರೈಂಗೆ ನಾನು ದೂರು ನೀಡಲಿದ್ದೇನೆ ಎಂದು ಕೂಡ ಹೇಳಿದ್ದಾರೆ.

ಶಕ್ತಿ ಕಪೂರ್ ಅವರ ಈ ವಿಡಿಯೋ ಹೊರ ಬಂದ ಬೆನ್ನಲ್ಲೇ ಹಲವರು ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸುಳ್ಳು ಸುದ್ದಿಗಳಿಗೆ ಸರ್ಕಾರ ಕಡಿವಾಣ ಹಾಕಬೇಕು, ಈ ದಿಸೆಯಲ್ಲಿ ಕಠಿಣ ಕಾನೂನು ರಚನೆ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಅಂದ್ಹಾಗೇ ಶಕ್ತಿ ಕಪೂರ್ 2023ರಲ್ಲಿ ತೆರೆಗೆ ಬಂದ ''ಅನಿಮಲ್'' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಕಳೆದ ವರ್ಷ ತೆರೆಗೆ ಬಂದ ''ಮೇರೆ ಹಸ್ಬಂಡ್ ಕಿ ಬೀವಿ'' ಇವರ ಕೊನೆಯ ಸಿನಿಮಾ. ಈ ಚಿತ್ರದ ನಂತರ ಶಕ್ತಿ ಕಪೂರ್ ಬೇರೆ ಯಾವ ಚಿತ್ರವನ್ನು ಕೂಡ ಒಪ್ಪಿಕೊಂಡಿಲ್ಲ.

English summary
Shakti Kapoor is alive, well, and taking names! The actor reacts to false online reports by filing a cyber complaint. Read his official "Healthy & Happy" statement here.
Read more about: shakti kapoor fake news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X