ದಾಂಪತ್ಯ ಮುರಿದು ಬಿದ್ದ ಹನ್ನೊಂದು ವರ್ಷಗಳ ನಂತರ ಮಾಜಿ ಪತ್ನಿಯ ಜೊತೆ ಮರು ಮದುವೆಯಾಗಲು ಮುಂದಾದ್ರಾ ನಟ ?

ಚಿತ್ರರಂಗದಲ್ಲಿ ಕಿತಾಪತಿ ಮಾಡಲು ಕಿರಾತಕರು ಹೊಂಚು ಹಾಕಿ ಕಾದು ಕುಂತಿರುತ್ತಾರೆ. ಹಾಗಂತೆ-ಹೀಗಂತೆ ಎಂದು ಕತ್ತಲಲ್ಲಿ ಗುಂಡು ಹಾರಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಇಲ್ಲ ಸಲ್ಲದ ಸುದ್ದಿಯನ್ನು ತೇಲಿ ಬಿಟ್ಟು ಅದೆಲ್ಲೋ ಕುಳಿತು ಮಜಾ ನೋಡುತ್ತಾರೆ. ಹೀಗೆ ಹರಿಬಿಡಲಾದ ಸುದ್ದಿಯಲ್ಲಿ ಸತ್ಯಾಂಶ ಇಲ್ಲ ಎನ್ನುವ ವಿಚಾರ ಗೊತ್ತಿದ್ದ ಹಿನ್ನೆಲೆ ಹಲವರು ಸುಮ್ಮನಾಗುತ್ತಾರೆ. ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ.ಯಾರು ಏನೇ ಅಂದರೂ ಯಾವುದಕ್ಕೂ ಕೇರ್ ಮಾಡದೇ ಬದುಕುತ್ತಾರೆ.

ಮತ್ತೂ ಕೆಲವರು ತಮ್ಮ ಕುರಿತ ಈ ಇಲ್ಲ ಸಲ್ಲದ ಮಾತುಗಳನ್ನು ಕೇಳಿ ಕೆರಳಿ ಕೆಂಡವಾಗುತ್ತಾರೆ. ಕೆಲವರು ನ್ಯಾಯಾಲಯದ ಮೊರೆ ಹೋಗುತ್ತಾರೆ. ಇನ್ನು ಕೆಲವರು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಕುರಿತು ಸುಳ್ಳು ಸುದ್ದಿ ಹಬ್ಬಿಸುವರಿಗೆ ಉಗಿದು ಉಪ್ಪಿನಕಾಯಿ ಹಾಕುತ್ತಾರೆ. ಉದಾಹರಣೆಗೆ ಶಾಲಿನ್ ಭಾನೋತ್ ಅವರನ್ನೇ ತೆಗೆದುಕೊಳ್ಳಿ.

Shalin Bhanot Slams Remarriage Rumors With Dalljiet Kaur Threatens Legal Action

ಹೌದು, ಶಾಲಿನ್ ಭಾನೋತ್ .. ''MTV ರೋಡೀಸ್‌'' ಮೂಲಕ ಬೆಳಕಿಗೆ ಬಂದ ಪ್ರತಿಭೆ. ಆ ನಂತರ ಇದೇ ಜನಪ್ರಿಯತೆಯ ಪ್ರಭಾವಳಿಯಲ್ಲಿ ''ಸಾತ್ ಫೇರೆ''.. ''ಕುಲವಧು''.. ''ಗೃಹಸ್ತಿ''.. ''ದೋ ಹಂಸೋ ಕಾ ಜೋಡಾ''.. ''ಸೂರ್ಯಪುತ್ರ ಕರ್ಣ''.. ಧಾರಾವಾಹಿಗಳಲ್ಲಿ ಕಾಣಿಸಿಕೊಂಡ ಶಾಲಿನ್, 2009ರಲ್ಲಿ ದಲ್ಜೀತ್ ಕೌರ್ ಅವರ ಜೊತೆ ಅದ್ಧೂರಿಯಾಗಿ ಮದುವೆಯಾಗಿದ್ದರು.

ಈ ದಲ್ಜೀತ್ ಬೇರೆ ಯಾರು ಅಲ್ಲ. ಬದಲಿಗೆ ಹಿಂದಿ ಕಿರುತೆರೆಯ ಖ್ಯಾತ ಚೆಲುವೆ. ಶಾಲಿನ್ ಅಭಿನಯದ ''ಕುಲವಧು'' ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದು ಇವರೇ.

ಇದೇ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ದಾಂಪತ್ಯ ಜೀವನಕ್ಕೆ ಮುನ್ನುಡಿಯನ್ನು ಕೂಡ ಬರೆಯಿತು. ಆದರೆ.. ಮಗ ಹುಟ್ಟಿದ ಒಂದು ವರ್ಷದಲ್ಲೇ ಇವರ ಸಂಸಾರದ ಕಥೆ-ವ್ಯಥೆ ಬೀದಿಗೆ ಬಂತು.

ಶಾಲಿನ್ ವಿರುದ್ಧ ದಲ್ಜೀತ್ ಕೌರ್ ಗೃಹಹಿಂಸೆ ಮತ್ತು ಕಿರುಕುಳದ ಗಂಭೀರ ಆರೋಪಗಳನ್ನು ಮಾಡಿದರು. ಗರ್ಭಿಣಿಯಾಗಿದ್ದಾಗಲೂ ಶಾಲಿನ್ ಸರಿಯಾಗಿ ನೋಡಿಕೊಳ್ಳಲಿಲ್ಲ ಎಂದು ದಲ್ಜೀತ್ ಆರೋಪಿಸಿದ್ದರು. ತೀವ್ರ ಕಾನೂನು ಹೋರಾಟದ ನಂತರ 2015 ರಲ್ಲಿ ಇಬ್ಬರು ಅಧಿಕೃತವಾಗಿ ದೂರ ಆದರು. ಮಗನ ಕಸ್ಟಡಿ ದಲ್ಜೀತ್‌ಗೆ ಸಿಕ್ಕಿತು.

shalin-bhanot-slams-remarriage-rumors-with-dalljiet-kaur-threatens-legal-action

ದಲ್ಜೀತ್ ಅವರಿಂದ ದೂರವಾದ ನಂತರ ಶಾಲಿನ್ ಇನ್ನೂ ಸಿಂಗಲ್ಲಾಗಿಯೇ ಇದ್ದಾರೆ. ಆದರೆ. ದಲ್ಜೀತ್ ಮಾತ್ರ ಡಿವೋರ್ಸ್ ಪಡೆದ 8 ವರ್ಷಗಳ ನಂತರ ಕೀನ್ಯಾ ಮೂಲದ ಉದ್ಯಮಿ ನಿಕಿಲ್ ಪಟೇಲ್ ಅವರನ್ನು ಮದುವೆಯಾದರು. ಮಗನನ್ನು ತಮ್ಮ ಜೊತೆ ಕರೆದುಕೊಂಡು ಕೀನ್ಯಾದಲ್ಲಿಯೇ ಬದುಕು ರೂಪಿಸಿಕೊಳ್ಳುವ ಪ್ರಯತ್ನ ಮಾಡಿದರು.

ಆದರೆ, ದುರಾದೃಷ್ಟವಶಾತ್ ಈ ಸಂಬಂಧ ಕೂಡ ಒಂದೇ ವರ್ಷಕ್ಕೆ ಮುರಿದು ಬಿತ್ತು. ಹಾದಿ-ಬೀದಿ ರಂಪ ಆಯ್ತು. ತಮ್ಮ ಎರಡನೇ ಗಂಡ ನಿಖಿಲ್ ಪಟೇಲ್‌ಗೆ ಬೇರೊಬ್ಬರ ಜೊತೆ ಅನೈತಿಕ ಸಂಬಂಧ ಇದೆ ಎಂದು ಆರೋಪ ಮಾಡಿದರು. 2024ರಲ್ಲಿ ಮಗನ ಜೊತೆ ಮತ್ತೆ ಭಾರತಕ್ಕೆ ಮರಳಿದರು. ಸದ್ಯ ಇವರ ನಡುವೆ ಕಾನೂನು ಸಮರ ನಡೆಯುತ್ತಿದೆ.

ಹೀಗೆ ದಾಂಪತ್ಯ ಜೀವನದ ಹಿನ್ನೆಲೆಯನ್ನು ಹೊಂದಿರುವ ಶಾಲಿನ್ ಮತ್ತು ದಲ್ಜೀತ್ ತಮ್ಮ ಹಳೆಯ ಕಹಿ ನೆನಪು ಮರೆತು ಮತ್ತೆ ಮದುವೆಯಾಗಲು ಅಣಿಯಾಗಿದ್ಧಾರೆ ಎನ್ನುವ ಸುದ್ದಿ ಸದ್ಯ ಹಬ್ಬಿದೆ. ಈ ಸುದ್ದಿ ಹಬ್ಬಿಸಿದ್ದು ಬೇರೆ ಯಾರು ಅಲ್ಲ ಬದಲಿಗೆ ಸೆಲೆಬ್ರಿಟಿಗಳ ಹಿಂದೆ ಮೂರೊತ್ತು ಕ್ಯಾಮರಾ ಹಿಡಿದು ಓಡಾಡುವ ಪಾಪರಾಜಿಗಳು ಅನ್ನುವುದು ದುರಂತ.

ಹೌದು, ಅಸಲಿಗೆ ಶಾಲಿನ್ ಭಾನೋತ್ ಚಿತ್ರವೊಂದನ್ನು ಮಾಡಿದ್ಧಾರೆ. ಆ ಚಿತ್ರದ ಹೆಸರು ''ಮೇ ವಾಪಸ್ ಆವುಂಗಾ''. ಇಮ್ತಿಯಾಜ್ ಅಲಿ ನಿರ್ದೇಶನದ ಈ ಚಿತ್ರದ ವಿಶೇಷ ಪ್ರದರ್ಶನಕ್ಕೆ ಶಾಲಿನ್ ಬಂದಿದ್ದರು. ಕ್ಯಾಮರಾಗಳಿಗೆ ನಗುನಗುತ್ತಲೇ ಪೋಸ್ ನೀಡಿದ್ದರು.

ಆದರೆ, ಮರು ದಿನ ಶಾಲಿನ್‌ಗೆ ಆಘಾತ ಕಾದಿತ್ತು. ಬಾಲಿವುಡ್‌ನ ಜನಪ್ರಿಯ ಡಿಜಿಟಲ್ ಪೇಜ್‌ನಲ್ಲಿ ಒಂದಾದ ''ಪ್ಯಾಪ್ಸ್ ಅಂಡ್ ಪಾಸ್ತಾ'' ಶಾಲಿನ್ ಅವರ ಈ ವಿಡಿಯೋವನ್ನು ಬಳಸಿ ಶಾಲಿನ್ ಭಾನೋತ್ ತಮ್ಮ ಮೊದಲ ಪತ್ನಿಯನ್ನು ಮರುಮದುವೆಯಾಗಲು ನಿರ್ಧರಿಸಿದ್ದಾರೆ ಎಂಬ ಸುದ್ದಿಯನ್ನು ವರದಿ ಮಾಡಿತ್ತು.

ಈ ಸುದ್ದಿಯನ್ನು ಓದಿ ಸದ್ಯ ಶಾಲಿನ್ ಕೆರಳಿ ಕೆಂಡವಾಗಿದ್ದು, ಕೇವಲ ಲೈಕ್ಸ್ ಮತ್ತು ವ್ಯೂಸ್‌ಗಳಿಗಾಗಿ ತಮ್ಮ ವೈಯಕ್ತಿಕ ಜೀವನವನ್ನು ದುರುಪಯೋಗಪಡಿಸಿಕೊಂಡ ಪಾಪರಾಜಿಗಳ ವಿರುದ್ದ ಕಿಡಿ ಕಾರಿದ್ಧಾರೆ. ''ಪ್ಯಾಪ್ಸ್ ಅಂಡ್ ಪಾಸ್ತಾ'' ಕೂಡಲೇ ಬಹಿರಂಗ ಕ್ಷಮೆಯಾಚಿಸಬೇಕು ಇಲ್ಲವಾದಲ್ಲಿ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಅಂದ್ಹಾಗೇ ಕೆಲ ದಿನಗಳ ಹಿಂದೆಯಷ್ಟೇ ಪರಾಸ್ ಛಾಬ್ರಾಗೆ ಶಾಲಿನ್ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ನನಗೆ ಪಾಪರಾಜಿಗಳೆಂದರೆ ಇಷ್ಟ, ಅವರ ಕೆಲಸ ಮಸಾಲೆಯುಕ್ತ ಸುದ್ದಿಗಳನ್ನು ಹುಡುಕುವುದು ಎಂದು ನನಗೆ ಗೊತ್ತು. ಆದರೆ ಕೆಲವೊಮ್ಮೆ ಫ್ಯಾನ್ ಥಿಯರಿಗಳು ಮಿತಿ ಮೀರುತ್ತವೆ ಎಂದು ಹೇಳಿದ್ದರು. ಮಾಧ್ಯಮಗಳ ಪ್ರಕಾರ ನನಗಂತೂ ಪ್ರತಿ ಕೆಲವು ತಿಂಗಳಿಗೊಮ್ಮೆ ಮದುವೆಯಾಗುತ್ತಲೇ ಇರುತ್ತದೆ ಎಂದು ತಮಾಷೆ ಮಾಡಿದ್ದರು. ಅಂದು ಇವರಾಡಿದ್ದ ತಮಾಷೆಯ ಮಾತನ್ನೇ ಸಾಬೀತು ಮಾಡಲೆಂದೇ ಏನೋ ಮರುಮದುವೆಯ ಸುದ್ದಿಯನ್ನು ಅದೇ ಪಾಪರಾಜಿಗಳು ಹಬ್ಬಿಸಿರುವುದು ವಿಪರ್ಯಾಸ.

English summary
Is Shalin Bhanot getting back with Dalljiet Kaur? The actor clears the air with a massive warning to paps and threats of legal action. Read details.
Read more about: fake news rumours
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X