ಬಾಲಿವುಡ್ ನಟನಿಗಾಗಿ ಸೌತ್ ಸಿನಿಮಾಗೆ ಕೈಕೊಟ್ರಂತೆ ನಟಿ ಶಾಲಿನಿ ಪಾಂಡೆ!

Recommended Video

Arjun Reddy Fame Shalini Pandey in Trouble | FILMIBEAT KANNADA

'ಅರ್ಜುನ್ ರೆಡ್ಡಿ' ಚಿತ್ರದ ಮೂಲಕ ರಾತ್ರೋರಾತ್ರಿ ಸ್ಟಾರ್ ಆದ ನಟಿ ಶಾಲಿನಿ ಪಾಂಡೆಗೆ ಸಿಕ್ಕಾಪಟ್ಟೆ ಆಫರ್ ಗಳು ಬಂದವು. ಆದರೆ, ಎರಡನೇ ಚಿತ್ರವನ್ನ ಒಪ್ಪಿಕೊಳ್ಳಲು ವಿಳಂಬವಾಯಿತು. ಪ್ರಮುಖ ಸ್ಟಾರ್ ಗಳ ಚಿತ್ರಗಳಲ್ಲಿ ಅತಿಥಿ ಪಾತ್ರ ಮಾಡುವ ಮೂಲಕ ಸ್ವಲ್ಪ ಸೈಲೆಂಟ್ ಆಗಿದ್ದರು.

ಕೀರ್ತಿ ಸುರೇಶ್ ನಟನೆಯ ಮಹಾನಟಿ ಚಿತ್ರದಲ್ಲಿ ಸುಶೀಲಾ ಪಾತ್ರ ಮಾಡಿದ್ದರು. ಎನ್.ಟಿ.ಆರ್ ಬಯೋಪಿಕ್ ನಲ್ಲಿ ಸಾವುಕಾರ್ ಜಾನಕಿ ಪಾತ್ರ ನಿರ್ವಹಿಸಿದ್ದರು. ಆಮೇಲೆ ಕಲ್ಯಾಣ್ ರಾಮ್ ಜೊತೆ '118' ಎಂಬ ಸಿನಿಮಾ ಮಾಡಿದರು. ಗೋರಿಲ್ಲ, 100% ಕಾದಲ್ ಚಿತ್ರಗಳಲ್ಲು ನಟಿಸಿದರು.

ಆದರೆ, ಯಾವ ಸಿನಿಮಾನೂ ಶಾಲಿನಿ ಪಾಂಡೆಗೆ ಕೈಹಿಡಿದಿಲ್ಲ. ಇದೀಗ, ಬಾಲಿವುಡ್ ನಿಂದ ದೊಡ್ಡ ಆಫರ್ ಬಂದಿದೆ. ಬಿಟೌನ್ ಸೂಪರ್ ಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡುವ ಅವಕಾಶ ಒಲಿದು ಬಂದಿದೆ. ಈ ಕಾರಣಕ್ಕಾಗಿ, ಕೈಯಲ್ಲಿರುವ ಸೌತ್ ಚಿತ್ರಗಳನ್ನ ಬಿಟ್ಟು ಹಿಂದಿಗೆ ಹಾರುವ ಪ್ಲಾನ್ ನಲ್ಲಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಯಾವುದು ಆ ಬಾಲಿವುಡ್ ಸಿನಿಮಾ?

ರಣ್ವೀರ್ ಸಿಂಗ್ ಜೊತೆ ನಟನೆ

ರಣ್ವೀರ್ ಸಿಂಗ್ ಜೊತೆ ನಟನೆ

1983 ವಿಶ್ವಕಪ್ ಆಧಾರಿತ '83' ಚಿತ್ರದಲ್ಲಿ ನಟಿಸುತ್ತಿರುವ ರಣ್ವೀರ್ ಸಿಂಗ್, ಅದಾದ ಬಳಿಕ ಯಶ್ ರಾಜ್ ಬ್ಯಾನರ್ ನಲ್ಲಿ ಬರಲಿರುವ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರವನ್ನ ದಿವ್ಯಾಂಗ ತಕ್ಕರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗಾಗಿ ಈಗ ಸೌತ್ ನಲ್ಲಿ ಮಾಡುತ್ತಿರುವ ಚಿತ್ರಗಳಿಗೆ ಸರಿಯಾಗಿ ಸಮಯ ಕೊಡುತ್ತಿಲ್ಲ ಎಂಬ ಆರೋಪ ಬಂದಿದೆ.

ತಮಿಳು ನಿರ್ಮಾಪಕರ ಆಕ್ರೋಶ

ತಮಿಳು ನಿರ್ಮಾಪಕರ ಆಕ್ರೋಶ

ಶಾಲಿನಿ ಪಾಂಡೆ ತಮಿಳು ಸಿನಿಮಾವೊಂದಕ್ಕೆ ಹೊಸದಾಗಿ ಕಾಲ್ ಶೀಟ್ ಕೊಟ್ಟಿದ್ದರಂತೆ. ಎಲ್ಲ ಸಿದ್ಧವಾಗಿ ಶೂಟಿಂಗ್ ಗೆ ಹೋಗುವ ಸಮಯದಲ್ಲಿ ಶಾಲಿನಿ ಆ ತಮಿಳು ಚಿತ್ರಕ್ಕೆ ಕೈಕೊಟ್ಟಿದ್ದಾರಂತೆ. ಇದರಿಂದ ನಿರ್ಮಾಪಕರು ಆಕ್ರೋಶ ಗೊಂಡಿದ್ದು, ನಿರ್ಮಾಪಕರ ಸಂಘದ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

ಗುಜರಾತಿ ಹುಡುಗಿಯಾಗಿ ಶಾಲಿನಿ

ಗುಜರಾತಿ ಹುಡುಗಿಯಾಗಿ ಶಾಲಿನಿ

'ಜಯೇಶ್ ಭಾಯ್ ಜೋರ್ ದಾರ್' ಎಂದು ಈ ಚಿತ್ರಕ್ಕೆ ಹೆಸರಿಟ್ಟಿದ್ದು, ಈ ಚಿತ್ರದಲ್ಲಿ ರಣ್ವೀರ್ ಸಿಂಗ್ ಗುಜರಾತಿ ವ್ಯಕ್ತಿಯಾಗಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಹೊಸ ನಾಯಕಿಯನ್ನ ಪರಿಚಯ ಮಾಡಬೇಕು ಎಂಬ ಉದ್ದೇಶ ಹೊಂದಿದ್ದ ನಿರ್ದೇಶಕರು, ದಕ್ಷಿಣ ಭಾರತದಿಂದ ಶಾಲಿನಿ ಪಾಂಡೆ ಅವರನ್ನ ಬಿಟೌನ್ ಗೆ ಕರೆತಂದಿದ್ದಾರೆ. ಶಾಲಿನಿ ಈ ಚಿತ್ರದಲ್ಲಿ ಗುಜರಾತಿ ಹುಡುಗಿಯಾಗಿ ನಟಿಸಲಿದ್ದಾರೆ.

ಮಾಧವನ್ ಸಿನಿಮಾದಲ್ಲಿ ನಟನೆ

ಮಾಧವನ್ ಸಿನಿಮಾದಲ್ಲಿ ನಟನೆ

ತಮಿಳು, ತೆಲುಗು ಹಾಗೂ ಇಂಗ್ಲಿಷ್ ನಲ್ಲಿ ತಯಾರಾಗುತ್ತಿರುವ ನಿಶ್ಯಬ್ದಂ ಚಿತ್ರದಲ್ಲಿ ಶಾಲಿನಿ ಪಾಂಡೆ ನಟಿಸುತ್ತಿದ್ದಾರೆ. ಮಾಧವನ್ ಮತ್ತು ಅನುಷ್ಕಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಇದರ ಜೊತೆಗೆ ತೆಲುಗಿನಲ್ಲಿ 'ಇದ್ದರಿ ಲೋಕಂ ಒಕಟೆ' ಎಂಬ ಇನ್ನೊಂದು ಚಿತ್ರವನ್ನ ಕೂಡ ಮಾಡುತ್ತಿದ್ದಾರೆ.

More from Filmibeat

English summary
Arjun reddy fame actress Shalini Pandey set to play female leading role in opposite ranveer singh in Jayeshbhai Jordar movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X