"ಅವಕಾಶಕ್ಕಾಗಿ ಮಂಚ ಹತ್ತಬೇಕಿತ್ತು" : ಕಾಸ್ಟಿಂಗ್ ಕೌಚ್ ಬಗ್ಗೆ ಶಮಾ ಸಿಕಂದರ್ ಶಾಕಿಂಗ್ ಹೇಳಿಕೆ!

ಬಾಲಿವುಡ್ ಬ್ಯೂಟಿ ಶಮಾ ಸಿಕಂದರ್ ಹೆಸರು ಕೇಳಿದರೆ ಸಾಕು ಪಡ್ಡೆ ಹೈಕಳು ಒಂದು ಕ್ಷಣ ಅಲರ್ಟ್ ಆಗ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕೆಯನ್ನು ಫಾಲೋ ಮಾಡುವವರಿಗೆ ಬಿಡಿಸಿ ಹೇಳುವುದು ಬೇಕಾಗಿಲ್ಲ. ಸದಾ ಹಾಟ್ ಹಾಟ್ ಫೋಟೊಶೂಟ್‌ಗಳಿಂದ ಶಮಾ ನೆಟ್ ವರ್ಲ್ಡ್‌ನಲ್ಲಿ ಹಲ್‌ಚಲ್‌ ಎಬ್ಬಿಸುತ್ತಿರ್ತಾಳೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ಬಿಂದಾಸ್ ಬೆಡಗಿ ಚಿತ್ರರಂಗದ ಕರಾಳ ಮುಖ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾಳೆ.

ಚಿತ್ರರಂಗ ಕಲರ್‌ಫುಲ್ ದುನಿಯಾ. ಮೇಲೆ ತಳುಕು ಒಳಗೆ ಉಳುಕು ಅನ್ನುವಂತೆ ಹೊರಗಿನಿಂದ ಕಾಣಿಸೋದೇ ಬೇರೆ. ಒಳಗೆ ಇರುವುದೇ ಬೇರೆ ಅಂತ ಸಾಕಷ್ಟು ಜನ ಹೇಳುತ್ತಿರುತ್ತಾರೆ. ಚಿತ್ರರಂಗದಲ್ಲಿರುವ ಕಮೀಟ್‌ಮೆಂಟ್ ಸಂಸ್ಕೃತಿ ಬಗ್ಗೆ ಸಾಕಷ್ಟು ನಟ-ನಟಿಯರು ತಮಗಾದ ಕಹಿ ಅನುಭವನ್ನು ಬಿಚ್ಚಿಟ್ಟಿದ್ದಾರೆ. ಮೀಟು ಅಭಿಯಾನ ಅಂತೂ ಬಹಳ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಬಾಲಿವುಡ್, ಟಾಲಿವುಡ್, ಕಾಲಿವುಡ್ ಅಷ್ಟೇ ಅಲ್ಲ ಸ್ಯಾಂಡಲ್‌ವುಡ್ ನಟಿಯರು ಸಹ ಈ ಬಗ್ಗೆ ಮಾತನಾಡಿದ್ದಾಳೆ.

ಕಾಸ್ಟಿಂಗ್ ಕೌಚ್ ಅಂದರೆ ಪಾತ್ರಕ್ಕಾಗಿ ಪಲ್ಲಂಗ ಅನ್ನುವ ಹೀನ ಸಂಸ್ಕೃತಿ ಬಗ್ಗೆ ಶಮಾ ಸಿಕಂದರ್ ಮತ್ತೊಮ್ಮೆ ಮಾತನಾಡಿದ್ದಾರೆ. "ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇದೆ. ಆದರೆ ಮೊದಲಿಗೆ ಹೋಲಿಸಿದರೆ ಈಗ ಕೊಂಚ ಕಮ್ಮಿ ಆಗಿದೆ ಎನ್ನಬಹುದು. ಈಗಿನ ಯುವ ನಿರ್ದೇಶಕರು ಅರ್ಥ ಮಾಡಿಕೊಂಡು ಮಾತನಾಡುತ್ತಿದ್ದಾರೆ. ಕ್ಯಾಶ್ಯುವಲ್ ಆಗಿ ತುಂಬಾ ಪ್ರೊಫೆಷನಲ್ ಆಗಿ ಇರ್ತಾರೆ. ಮಹಿಳೆಯರನ್ನು ಗೌರವಿಸುತ್ತಾರೆ. ಆದರೆ ಇದು ಆಗ ಇರಲಿಲ್ಲ. ಮೊದಲು ನಿರ್ಮಾಪಕರ ಜೊತೆ ಮಲಗದೇ ಇದ್ದರೆ ಕೆಲಸ ಸಿಗುತ್ತಿರಲಿಲ್ಲ. ಯಾರಾದರೂ ಒಬ್ಬರ ಜೊತೆ ಅಫೇರ್ ಇಟ್ಟುಕೊಳ್ಳಬೇಕಿತ್ತು."

Shama Sikander opens up on casting couch in Film industry

" ನಾವು ನಿನಗೆ ಆ ಕೆಲಸ ಮಾಡಿಕೊಟ್ಟರೆ ಬದಲಿಗೆ ನೀನು ಏನು ಕೊಡುತ್ತೀಯಾ ಕೇಳುತ್ತಿದ್ದರು. ಇದು ಚಿತ್ರರಂಗ ಮಾತ್ರವಲ್ಲ ಎಲ್ಲಾ ಕ್ಷೇತ್ರಗಳಲ್ಲೂ ಇದೆ. ಕೆಲವರು ನೇರವಾಗಿಯೇ ಕೇಳುತ್ತಿದ್ದರು. ಇಂಡಸ್ಟ್ರಿಯಲ್ಲಿ ಅಂತಹ ರಾಕ್ಷಸರನ್ನು ನೋಡಿದವರು ಇದ್ದಾರೆ. ಮಹಿಳೆಯರ ಮನಸು ಗೆದ್ದು ಸ್ವಂತ ಮಾಡಿಕೊಂಡವರು ಇದ್ದಾರೆ" ಎಂದು ಶಮಾ ವಿವರಿಸಿದ್ದಾಳೆ.

Shama Sikander opens up on casting couch in Film industry

"ಹಿಂದೆ ಕೆಲ ನಿರ್ಮಾಪಕರು, ನಿರ್ದೇಶಕರು ಅವರ ಜೊತೆ ಯಾವುದೇ ಸಿನಿಮಾ ಮಾಡದೇ ಇದ್ದರೂ ಸಲುಗೆಯಿಂದ ಇರುವಂತೆ ಕೇಳುತ್ತಿದ್ದರು. ಅವರ ಮಾತುಗಳು ನನಗೆ ಅಚ್ಚರಿ ತರಿಸುತ್ತಿತ್ತು. ನಿಮ್ಮ ಜೊತೆ ಸೇರಿ ಯಾವುದೇ ಕೆಲಸ ಮಾಡದೇ ಇದ್ದರೂ ಯಾಕೆ ಸಲುಗೆಯಿಂದ ಇರಬೇಕು ಎಂದು ನಾನು ಕೇಳುತ್ತಿದ್ದೆ. ಆಗ ಅವರು ನಿನಗೆ ಅವಕಾಶ ಬೇಕು ಅಂದರೆ ನಮ್ಮ ಜೊತೆ ಸಲುಗೆಯಿಂದ ಇರಬೇಕು. ನಮ್ಮ ಜೊತೆ ಹಾಸಿಗೆ ಹಂಚಿಕೊಳ್ಳಬೇಕು ಎನ್ನುತ್ತಿದ್ದರು. ಆಗ ನಟಿಯರು ಬಹಳ ಚಿತ್ರರಂಗದಲ್ಲಿ ಬಹಳ ಅಭದ್ರತೆಯಿಂದ ಇರುತ್ತಿದ್ದರು. ಅವಕಾಶ ಬೇಕು ಎಂದರೆ ಎಲ್ಲದಕ್ಕೂ ಸಿದ್ಧರಿರಬೇಕು ಎನ್ನುವಂತಿತ್ತು. ಆದರೆ ಈಗ ಅದು ಕಮ್ಮಿ ಆಗಿದೆ" ಎಂದು ಶಮಾ ಹೇಳಿದ್ದಾಳೆ. ಸದ್ಯ ಈಕೆಯ ಮಾತುಗಳು ಸಖತ್ ವೈರಲ್ ಆಗಿದೆ.

More from Filmibeat

English summary
Shama Sikander opens up on casting couch in Film industry. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X