ಆ ಖ್ಯಾತ 'ಸ್ಟಾರ್' ಅವತ್ತು ನನ್ನ ಜೊತೆ ಏನ್ಮಾಡಿದ ಗೊತ್ತಾ ಎಂದು ಬಿಕ್ಕಿದ ನಟಿ...!

ಹೆಣ್ಣುಮಕ್ಕಳನ್ನು ಕಾಮದ ಸರಕಿನಂತೆ ನಡೆಸಿಕೊಳ್ಳೋ ದುಷ್ಟರ ವಿರುದ್ಧ ಆರಂಭ ಮಾಡಲಾಗಿದ್ದ ಅಭಿಯಾನ ಮೀಟೂ. ಆರೇಳು ವರ್ಷಗಳ ಹಿಂದೆ ಆರಂಭವಾಗಿದ್ದ ಈ ಮೀಟೂ ಅಭಿಯಾನದಡಿ ಹಳ್ಳ ಹಿಡಿದಿದ್ದ ಎಷ್ಟೋ ಪ್ರಕರಣಗಳು ಬೆಳಕಿಗೆ ಬಂದಿದ್ದವು.

ಅನೇಕ ನಟಿಯರು ತಮ್ಮ ಸಹ ನಟರು, ನಿರ್ಮಾಪಕರ ಹಾಗೂ ನಿರ್ದೇಶಕರ ಮಾನ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿದ್ದರು. ಆ ನಿರ್ಮಾಪಕ ನೈಟ್ ಔಟಿಗೆ ಕರೆದ, ಈ ನಾಯಕ ಡೇಟಿಂಗ್ ಕರೆದ, ಚಿತ್ರೀಕರಣದ ಸಮಯದಲ್ಲಿ ಬೇಕಂತಲೇ ಬಿಗಿಯಾಗಿ ಅಪ್ಪಿದ, ಪಾತ್ರಕ್ಕಾಗಿ ಪಲ್ಲಂಗ ಏರುವಂತೆ ಹೇಳಿದ, ಹೀಗೆ ಇತ್ಯಾದಿ ಇತ್ಯಾದಿ ಆರೋಪಗಳೆಲ್ಲವೂ ಬಣ್ಣದ ಲೋಕದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದವು. ಆದರೆ ಆ ನಂತರ ಆ ವಿಷಯ ಹಾಗೇ ತಣ್ಣಗಾಯಿತು.

Shama Sikander reveals she was inappropriately hugged by a Bollywood star who improvised during a sh

ಆದರೆ ಈಗ ಮಲಯಾಳಂ ಚಿತ್ರರಂಗದ ಕುರಿತು ಹೇಮಾ ಆಯೋಗ ವರದಿ ನೀಡಿದ ಬೆನ್ನಲ್ಲಿ ಇನ್ನೊಮ್ಮೆ ಈ ಬಿರುಗಾಳಿ ಎದ್ದಿದೆ. ಕೇವಲ ಮಲಯಾಳಂನಲ್ಲಿ ಅಷ್ಟೇ ಅಲ್ಲ ಭಾರತದ ಬೇರೆ ಬೇರೆ ಭಾ‍ಷೆಯಲ್ಲಿ ಕೂಡ ಕಾಮುಕರು ತುಂಬಿ ತುಳುಕುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಬೇರೆ ಬೇರೆ ಭಾಷೆಯಲ್ಲಿನ ನಟಿಯರು ತಮಗಾದ ಕಹಿ ಅನುಭವ ಹಂಚಿಕೊಳ್ಳುತ್ತಿದ್ದಾರೆ. ಈ ಸಾಲಿಗೆ ಈಗ ಶಮಾ ಸಿಖಂದರ್ ಸೇರಿಕೊಂಡಿದ್ದಾರೆ. ಜಾಹೀರಾತು ಚಿತ್ರೀಕರಣ ಸಮಯದಲ್ಲಿ ಸೂಪರ್ ಸ್ಟಾರ್‌ ಒಬ್ಬರಿಂದ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ.

ಹೌದು, ಬಾಲಿವುಡ್ ಬಬಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಶಮಾ ಸಿಖಂದರ್, ಅದೊಂದು ಜಾಹೀರಾತಿನ ಚಿತ್ರೀಕರಣ ಇತ್ತು. ನನ್ನೆದುರು ಸೂಪರ್ ಸ್ಟಾರ್‌ ಒಬ್ಬರು ಆಕ್ಟ್ ಮಾಡುತ್ತಿದ್ದರು. ಆದರೆ, ನನಗೆ ಆಶ್ಚರ್ಯ ಆಗಿದ್ದೇನು ಅಂದರೆ ಆ ಸ್ಟಾರ್ ನನ್ನನ್ನೂ ತಬ್ಬಿಕೊಳ್ಳುವ ಆಸೆಯಿಂದ ಜಾಹೀರಾತಿನಲ್ಲಿದ್ದ ಸನ್ನಿವೇಶವನ್ನೇ ಸಂಪೂರ್ಣ ಬದಲಿಸಿದ ಎಂದಿರುವ ಶಮಾ, ಆತ ನನ್ನನ್ನೂ ತಬ್ಬಿಕೊಂಡಾಗ ನನಗೆ ಅವನ ಸ್ಪರ್ಶದಿಂದ ನನಗೆ ಆತನ ಯೋಗ್ಯತೆ ಗೊತ್ತಾಯಿತು ಎಂದು ಹೇಳಿದ್ದಾರೆ. ತಬ್ಬಿಕೊಂಡಾಗ ತುಂಬಾ ಹಿಂಸೆಯಾಯಿತು ಆದರೂ ನಾನು ಅಸಹಾಯಕಳಾಗಿದ್ದೆ ಎಂದು ಹೇಳಿದ್ದಾರೆ. ಆ ವ್ಯಕ್ತಿ ಸೂಪರ್ ಸ್ಟಾರ್ ಆದರೂ ಈ ತರಹ ಕೀಳು ಮಟ್ಟಕ್ಕೆ ಇಳಿಯುವ ಅವಶ್ಯಕತೆ ಏನಿತ್ತು ಎಂಬ ಪ್ರಶ್ನೆ ನನಗೆ ಕಾಡುತ್ತಿತ್ತು ಎಂದು ಹೇಳಿದ್ದಾರೆ ಶಮಾ.

Shama Sikander reveals she was inappropriately hugged by a Bollywood star who improvised during a sh

ಮುಂದುವರೆದು ಅದೇ ಮೊದಲು, ಅದೇ ಕೊನೆ.. ಆ ನಂತರ ನಾನು ಆ ಸ್ಟಾರ್ ಜೊತೆ ಯಾವತ್ತು ಮುಖಾಮುಖಿಯಾಗಿಲ್ಲ ಎಂದಿರುವ ಶಮಾ, ಆತನ ಮುಖ ಕೂಡ ನೋಡಲು ನನಗೆ ಇಷ್ಟ ಎಂದು ಹೇಳಿದ್ದಾರೆ. ಭವಿಷ್ಯದಲ್ಲಿ ಎಷ್ಟೇ ದೊಡ್ಡ ಅವಕಾಶ ಸಿಕ್ಕರೂ, ಎಷ್ಟೇ ಉತ್ತಮವಾದ ಸಂಭಾವನೆ ನೀಡಿದರೂ ಕೂಡ ಆ ಸ್ಟಾರ್ ಜೊತೆ ನಾನು ಯಾವತ್ತು ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇಲ್ಲಿಯವರೆಗೆ ಹಲವಾರು ಜನರ ಜೊತೆ ನಾನು ಕೆಲಸ ಮಾಡಿದ್ದೇನೆ ಆದರೆ ಈ ತರಹದ ಕೆಟ್ಟ ಅನುಭವ ನನಗೆ ಯಾವತ್ತು ಆಗಿಲ್ಲ ಎಂದಿರುವ ಶಮಾ ಸಿಖಂದರ್ ಆ ಸ್ಟಾರ್‌ನಿಂದ ನಾನು ಇದೆಲ್ಲವನ್ನು ನಿರೀಕ್ಷೆ ಕೂಡ ಮಾಡಿರಲಿಲ್ಲ ಎಂದು ಹೇಳಿದ್ದಾರೆ.

ಅಂದ್ಹಾಗೇ ಶಮಾ ಸಿಖಂದರ್ ಕಳೆದ ಎರಡೂವರೆ ದಶಕಗಳಿಂದ ಹಿಂದಿ ಚಿತ್ರರಂಗದಲ್ಲಿದ್ದಾರೆ. 'ಪ್ರೇಮ್ ಅಗನ್' ಚಿತ್ರದ ಮೂಲಕ ಚಿತ್ರ ಜೀವನ ಶುರು ಮಾಡಿದ ಶಮಾಗೆ ನಾಯಕಿಯಾಗಿ ಅದೃಷ್ಟ ಕೈ ಹಿಡಿಯಲಿಲ್ಲ. ಬೆಳ್ಳಿ ತೆರೆ ಒಲಿಯಲಿಲ್ಲ. ಹೀಗಾಗಿ 2003ರಲ್ಲಿ ಕಿರುತೆರೆಯತ್ತ ಮುಖ ಮಾಡಿದ ಶಮಾ ಸಿಖಂದರ್ ಎರಡು ವೆಬ್ ಸರಣಿಯಲ್ಲಿ ಕೂಡ ನಟಿಸಿದ್ದಾರೆ. 2019ರಲ್ಲಿ ನೀಲ್ ನಿತಿನ್ ಮುಖೇಶ್ ನಿರ್ದೇಶನದ ಬೈಪಾಸ್ ರೋಡ್‌ ಚಿತ್ರವೇ ಕೊನೆ ಆ ನಂತರ ಶಮಾ ಯಾವುದೇ ಚಿತ್ರದಲ್ಲಿ ನಟಿಸಿಲ್ಲ. 2014ರಿಂದ ಕಿರುತೆರೆಯಲ್ಲಿ ಕೂಡ ಕಾಣಿಸಿಕೊಳ್ಳಲಿಲ್ಲ.

More from Filmibeat

Read more about: casting couch me too bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X