For Quick Alerts
  ALLOW NOTIFICATIONS  
  For Daily Alerts

  ಅಕ್ಷಯ್ ಕುಮಾರ್ 'ಲಕ್ಷ್ಮೀ ಬಾಂಬ್' ಸಿನಿಮಾದ ವಿರುದ್ಧ ಲವ್ ಜಿಹಾದ್ ಆರೋಪ: #ShameonuAkshayKumar ಟ್ರೆಂಡ್

  |

  ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ ಅಭಿನಯದ ಲಕ್ಷೀ ಬಾಂಬ್ ಸಿನಿಮಾ ವಿರುದ್ಧ ಲವ್ ಜಿಹಾದ್ ಆರೋಪ ಕೇಳಿ ಬರುತ್ತಿದೆ. ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಮಿಲಿಯನ್ ಗಟ್ಟಲೆ ವೀಕ್ಷಣೆ ಕಂಡಿರುವ ಈ ಟ್ರೈಲರ್ ಈಗ ವಿವಾದಲ್ಲಿ ಸಿಲುಕಿದೆ.

  ಲಕ್ಷ್ಮೀ ಬಾಂಬ್ ಸಿನಿಮಾಗೆ ಧರ್ಮದ ನಂಟು ಕಟ್ಟಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚಿಗೆ ತನಿಷ್ಕ್ ಜಾಹೀರಾತಿನ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲೇ ಈಗ ಲಕ್ಷೀ ಬಾಂಬ್ ಸಿನಿಮಾದ ಟ್ರೈಲರ್ ಗೂ ವಿರೋಧ ವ್ಯಕ್ತವಾಗುತ್ತಿದೆ. ಈ ಟ್ರೈಲರ್ ಲವ್ ಜಿಹಾದ್ ಗೆ ಉತ್ತೇಜನ ನೀಡುತ್ತಿದೆ ಎಂದು ನೆಟ್ಟಿಗರು ಅಕ್ಷಯ್ ಕುಮಾರ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಅಲ್ಲದೆ #ShameonuAkshayKumar ಎಂದು ಹ್ಯಾಷ್ ಟ್ಯಾಗ್ ಹಾಕಿ ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ.

  ಅಕ್ಷಯ್ ಕುಮಾರ್ 'ಲಕ್ಷ್ಮಿ ಬಾಂಬ್' ಸಿನಿಮಾ ಬಹಿಷ್ಕರಿಸುವಂತೆ ನೆಟ್ಟಿಗರ ಅಭಿಯಾನ: ಕಾರಣವೇನು?

  ಟ್ರೈಲರ್ ನಲ್ಲಿ ಏನಿದೆ

  ಟ್ರೈಲರ್ ನಲ್ಲಿ ಏನಿದೆ

  ಈ ಚಿತ್ರದಲ್ಲಿ ನಟ ಅಕ್ಷಯ್ ಕುಮಾರ್ ಆಸಿಫ್ ಎನ್ನುವ ಮುಸ್ಲಿಂ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪತ್ನಿಯ ಹೆಸರು ಪ್ರಿಯಾ. ಅಕ್ಷಯ್ ಕುಮಾರ್ ಪತ್ನಿಯಾಗಿ ನಟಿ ಕಿಯಾರಾ ಅಡ್ವಾನಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಲವ್ ಜಿಹಾದ್ ಅನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ಮುಸ್ಲಿಂ ಪಾತ್ರ ಮಾಡಿರುವ ಅಕ್ಷಯ್ ಕುಮಾರ್ ಹಿಂದೂ ಹುಡುಗಿ ಜೊತೆ ರೊಮ್ಯಾನ್ಸ್ ಮಾಡುತ್ತಿರುವ ದೃಶ್ಯ ನೋಡಿ ನೆಟ್ಟಿಗರು ಕೆಂಡಕಾರುತ್ತಿದ್ದಾರೆ.

  ಲಕ್ಷೀ ಬಾಂಬ್ ಬದಲು ಫಾತೀಮಾಬಾಂಬ್ ಎಂದು ಇಡಿ

  ಲಕ್ಷೀ ಬಾಂಬ್ ಬದಲು ಫಾತೀಮಾಬಾಂಬ್ ಎಂದು ಇಡಿ

  ಸಿನಿಮಾ ಬಹಿಷ್ಕರಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಜೊತೆಗೆ ಲಕ್ಷ್ಮೀ ಬಾಂಬ್ ಸಿನಿಮಾ ಹೆಸರಿನ ಬದಲು ಆಸಿಯಾಬಾಂಬ್, ಫಾತೀಮಾಬಾಂಬ್ ಎಂದು ಹೆಸರಿಡಬಹುದು ಎಂದು ಕಾಮೆಂಟ್ಸ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಅಕ್ಷಯ್ ಕುಮಾರ್ ಅನ್ನು ಸರಿಯಾಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಅಕ್ಷಯ್ ಕುಮಾರ್ ಕೆನಡಾ ಪೌರತ್ವ ಹೊಂದಿದ್ದಾರೆ. ಅವರಿಗೆ ಹಿಂದೂಗಳ ಬಗ್ಗೆ ಗೌರವವಿಲ್ಲ ಎಂದು ಹೇಳುತ್ತಿದ್ದಾರೆ.

  ಅಕ್ಷಯ್ ಕುಮಾರ್ ನನ್ನು ಹೊಗಳಿದ ನಟ ಆಮೀರ್ ಖಾನ್: ಅಕ್ಷಯ್ ಪ್ರತಿಕ್ರಿಯೆ ಹೀಗಿದೆ

  ಈ ಸಿನಿಮಾವನ್ನು ದೀಪಾವಳಿಗೆ ಹೇಗೆ ರಿಲೀಸ್ ಮಾಡುತ್ತಾರೆ?

  ಈ ಸಿನಿಮಾವನ್ನು ದೀಪಾವಳಿಗೆ ಹೇಗೆ ರಿಲೀಸ್ ಮಾಡುತ್ತಾರೆ?

  ಲವ್ ಜಿಹಾದ್ ಉತ್ತೇಜನದ ಬಗ್ಗೆ ಇರುವ ಈ ಸಿನಿಮಾವನ್ನು ಹಿಂದೂ ಹಬ್ಬವಾದ ದೀಪಾ ವಳಿಗೆ ಹೇಗೆ ರಿಲೀಸ್ ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇಲ್ಲಿ ಯಾವ ಸಂಸ್ಕೃತಿಯನ್ನು ಉತ್ತೇಜನ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. ಲಕ್ಷೀ ಬಾಂಬ್ ಸಿನಿಮಾ ಒಟಿಟಿಯಲ್ಲಿ ತೆರೆಗೆ ಬರುತ್ತಿದೆ.

  ಸರ್ಜಾ ಕುಟುಂಬಕ್ಕೆ ನಾಳೆ ಮಹತ್ವದ ದಿನ | Chiranjeevi Sarja Family | Filmibeat Kannada
  ಡ್ರಗ್ಸ್ ವಿಚಾರದ ಹೇಳಿಕೆ ವಿರುದ್ಧ ಆಕ್ರೋಶ

  ಡ್ರಗ್ಸ್ ವಿಚಾರದ ಹೇಳಿಕೆ ವಿರುದ್ಧ ಆಕ್ರೋಶ

  ಈ ಮೊದಲು ಸಹ ಲಕ್ಷೀ ಬಾಂಬ್ ಸಿನಿಮಾವನ್ನು ಬಹಿಷ್ಕರಿಸುವಂತೆ ನೆಟ್ಟಿಗರು ಅಭಿಯಾನ ಮಾಡಿದ್ದರು. ಅಕ್ಷಯ್ ಡ್ರಗ್ಸ ದಂಧೆ ವಿಚಾರವಾಗಿ ನೀಡಿರುವ ಪ್ರತಿಕ್ರಿಯೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಡ್ರಗ್ಸ್ ದಂಧೆ ವಿಚಾರದಲ್ಲಿ ನಟ ಅಕ್ಷಯ್ ಕುಮಾರ್ ಚಿತ್ರರಂಗವನ್ನು ಸಮರ್ಥಿಸಿಕೊಂಡಿದ್ದಾರೆ ಎನ್ನುವ ಆರೋಪ ವ್ಯಕ್ತವಾಗಿತ್ತು. ಹಾಗಾಗಿ ಅಕ್ಷಯ್ ಕುಮಾರ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಇದೀಗ ಸಿನಿಮಾ ವಿರುದ್ಧ ಲವ್ ಜಿಹಾದ್ ಆರೋಪ ಕೇಳಿಬರುತ್ತಿದೆ.

  English summary
  Shame on u Akshay Kumar trends on Twitter after actor accused of Promoting Love Jihad in the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X