ಶಿಲ್ಪಾ ಶೆಟ್ಟಿ ಸೋದರಿ ಶಮಿತಾ ಶೆಟ್ಟಿ ಲವ್ ಬ್ರೇಕಪ್: ಇದು ಬಿಗ್ ಬಾಸ್ ಗಿಮಿಕ್?

ಬಣ್ಣದ ಲೋಕದಲ್ಲಿ ಸದ ಬ್ರೇಕಪ್, ಪ್ಯಾಚಪ್ ಸುದ್ದಿಗಳು ಹರಿದಾಡುತ್ತಲೆ ಇರುತ್ತವೆ. ಇಂದು ಪ್ರೀತಿ ಮಾಡುತ್ತಿದ್ದೇವೆ ಎಂದು ಹೇಳಿಕೊಂಡ ಜೋಡಿ, ನಾಳೆ ಬ್ರೇಕಪ್ ಎಂದು ಬಿಡುತ್ತಾರೆ. ಇದು ಹೊಸದೇನಲ್ಲ. ಬಾಲಿವುಡ್‌ನಲ್ಲಿ ಈ ಟ್ರೆಂಡ್ ಹೆಚ್ಚು.

ಈಗ ಮತ್ತೊಂದು ಜನಪ್ರಿಯ ಜೋಡಿ ಬ್ರೇಕಪ್ ಮಾಡಿಕೊಂಡು ಸುದ್ದಿ ಆಗಿದೆ. ಅದು ಮತ್ಯಾರು ಅಲ್ಲ, ಶಿಲ್ಪ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ. ಬಿಗ್ ಬಾಸ್‌ನಲ್ಲಿ ಭಾಗವಹಿಸಿದ ಬಳಿಕ ಶಮಿತಾ ಶೆಟ್ಟಿ ಹೆಸರು ಹೆಚ್ಚು ಮುನ್ನೆಲೆಯಲ್ಲಿ ಇತ್ತು. ಅದರ ಜೊತೆಗೆ ಇವರ ಲವ್ ಕಹಾನಿ ಕೂಡ ಸಿಕ್ಕಾ ಪಟ್ಟೆ ಸದ್ದು ಮಾಡಿತ್ತು.

ಇತ್ತೀಚೆಗೆ ಹೆಚ್ಚು ಹೆಸರು ಮಾಡಿದ್ದ ಜೋಡಿಗಳಲ್ಲಿ ಶಮಿತಾ ಮತ್ತು ರಾಕೇಶ್ ಲವ್ ಸ್ಟೋರಿ ಕೂಡ ಒಂದು. ಆದರೆ ಈ ಜೋಡಿ ಈಗ ಬೇರೆ ಆಗಿದೆ. ಈ ಬಗ್ಗೆ ಈ ಜೋಡಿ ಅಧಿಕೃತ ಹೇಳಿಕೆಯನ್ನು ಕೊಟ್ಟಿದೆ. ಇದಕ್ಕೆ ಕಾರಣ ಬಿಗ್ ಬಾಸ್ ಎನ್ನುವ ಗುಸು ಗುಸು ಹಬ್ಬಿದೆ. ಅದು ಏನೆಂದು ಮುಂದೆ ಓದಿ...

ಇದು ಬಿಗ್ ಬಾಸ್ ಲವ್!

ಇದು ಬಿಗ್ ಬಾಸ್ ಲವ್!

ಹಿಂದಿಯ ಬಿಗ್ ಬಾಸ್ ಒಟಿಟಿಯ ಮೊದಲ ಸೀಸನ್‌ನಲ್ಲಿ ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಾಪಟ್ ಇಬ್ಬರೂ ಭೇಟಿಯಾದರು. ಅಲ್ಲಿ ಹೆಚ್ಚಿನ ಸಮಯ ಕಳೆದ ಕಾರಣ ಪ್ರೀತಿಯಲ್ಲಿ ಬಿದ್ದರು. ಅಲ್ಲದೇ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೂ ಇಬ್ಬರೂ ಹಲವೆಡೆ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಜೋಡಿ ಒಟ್ಟಿಗೆ ಇರುವ ಫೋಟೊಗಳು ಸಖತ್ ವೈರಲ್ ಆಗುತ್ತಿದ್ದವು. ಆದರೆ ಕೆಲ ದಿನಗಳಿಂದ ಈ ಜೋಡಿ ಒಟ್ಟಿಗೆ ಇಲ್ಲ ಎನ್ನುವ ಸುದ್ದಿ ಹರಿದಾಡಿತ್ತು. ಇದು ಈಗ ನಿಜವಾಗಿತ್ತು. ಇದೀಗ ಸ್ಪಷ್ಟ ಉತ್ತರ ದೊರಕಿದೆ.

ಶಮಿತಾ ಶೆಟ್ಟಿ ಪೋಸ್ಟ್!

ಶಮಿತಾ ಶೆಟ್ಟಿ ಪೋಸ್ಟ್!

ಇನ್ನು ಬ್ರೇಕಪ್ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಶಮಿತಾ ಶೆಟ್ಟಿ "ಈಗ ಸ್ಪಷ್ಟನೆ ನೀಡುವುದು ಮಹತ್ವದ್ದು ಎಂದು ಭಾವಿಸುತ್ತೇನೆ. ನಾನು, ರಾಕೇಶ್ ಇಬ್ಬರೂ ದೂರ ದೂರ ಆಗಿದ್ದೇವೆ. ಬಹಳ ಸಮಯದಿಂದ ನಾವಿಬ್ಬರೂ ಒಟ್ಟಿಗಿಲ್ಲ. ನಮಗೆ ತುಂಬ ಪ್ರೀತಿ, ಬೆಂಬಲ ನೀಡಿದವರಿಗೆ ಈ ಮ್ಯೂಸಿಕ್ ವಿಡಿಯೋ ಅರ್ಪಿಸುತ್ತಿದ್ದೇವೆ. ಇಬ್ಬರಿಗೂ ಪ್ರೀತಿ ನೀಡುವುದನ್ನು ಮುಂದುವರೆಸಿ. ಎಲ್ಲರಿಗೂ ಧನ್ಯವಾದಗಳು" ಎಂದು ಶಮಿತಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರಾಕೇಶ್ ಬಾಪಟ್ ಪೋಸ್ಟ್!

ರಾಕೇಶ್ ಬಾಪಟ್ ಪೋಸ್ಟ್!

ಬ್ರೇಕಪ್ ಕುರಿತು ಇನ್‌ಸ್ಟಾಗ್ರಾಂ ಪೋಸ್ಟ್ ಹಾಕಿರುವ ರಾಕೇಶ್ ಬಾಪಟ್, " ಶಮಿತಾ ಮತ್ತು ನಾನು ಇನ್ನು ಮುಂದೆ ಒಟ್ಟಿಗೆ ಇರುವುದಿಲ್ಲ ಎಂಬುದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ. ವಿಧಿಯು ನಮ್ಮ ಹಾದಿಗಳನ್ನು ಅತ್ಯಂತ ಅಸಾಮಾನ್ಯ ಸಂದರ್ಭದಲ್ಲಿ ಭೇಟಿ ಮಾಡಿಸಿತು. ಎಲ್ಲರ ಪ್ರೀತಿಗಾಗಿ ತುಂಬಾ ಧನ್ಯವಾದಗಳು. ಜೊತೆಗೆ ಖಾಸಗಿ ವ್ಯಕ್ತಿಯಾಗಿರುವುದರಿಂದ, ನಾವು ಪ್ರತ್ಯೇಕಗೊಳ್ಳುವ ವಿಚಾರವನ್ನು ಸಾರ್ವಜನಿಕವಾಗಿ ಘೋಷಿಸಲು ಬಯಸುವುದಿಲ್ಲ. ಆದರೆ ಈ ವಿಷಯವನ್ನು ಹೇಳಿಕೊಳ್ಳಬೇಕಿತ್ತು. ವೈಯಕ್ತಿಕವಾಗಿಯೂ ನಮ್ಮ ಮೇಲೆ ನಿಮ್ಮ ಪ್ರೀತಿ ಹೀಗೆ ಮುಂದುವರೆಯುತ್ತದೆ ಎಂದು ನಂಬುತ್ತೇನೆ. ಈ ಸಂಗೀತದ ವೀಡಿಯೋ ನಿಮ್ಮೆಲ್ಲರಿಗೂ ಸಮರ್ಪಿಸಲಾಗಿದೆ" ಎಂದು ಬರೆದುಕೊಂಡಿದ್ದಾರೆ.

ಬಿಗ್‌ಬಾಸ್‌ಗೆ ಬಂದ ಬಳಿಕ ಏನಾಯ್ತು?

ಬಿಗ್‌ಬಾಸ್‌ಗೆ ಬಂದ ಬಳಿಕ ಏನಾಯ್ತು?

ಬಿಗ್‌ಬಾಸ್‌ನಿಂದ ಹೊರಗಡೆ ಬಂದಮೇಲೆ ಈ ಜೋಡಿ ಡಿನ್ನರ್ ಡೇಟ್, ಲಂಚ್ ಡೇಟ್ ಎಂದು ಒಟ್ಟಾಗಿ ಕಾಣಿಸಿಕೊಂಡಿದೆ. ಅವರಿಬ್ಬರೂ ನಾವು ಪ್ರೇಮಿಗಳು ಎನ್ನುವಂತೆ ಸೋಶಿಯಲ್ ಮೀಡಿಯಾದಲ್ಲಿ ಫೋಟೊ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಈ ಜೋಡಿಗೆ ಅವರ ಅಭಿಮಾನಿಗಳು #ಶಾರಾ ಎಂದು ಹ್ಯಾಶ್‌ಟ್ಯಾಗ್ ನೀಡಿದ್ದಾರೆ. ಈ ದೂರಾಗಿ ಅಭಿಮಾನಿಗಳಿಗೆ ಈ ಜೋಡಿ ಶಾಕ್ ಕೊಟ್ಟಿದೆ.

ಇದೆಲ್ಲಾ ಬಿಗ್‌ಬಾಸ್ ಗಿಮಿಕ್?

ಇದೆಲ್ಲಾ ಬಿಗ್‌ಬಾಸ್ ಗಿಮಿಕ್?

ಈ ಜೋಡಿ ತಮ್ಮ ಬ್ರೇಕಪ್ ಅನೌನ್ಸ್ ಮಾಡುತ್ತಿದ್ದಂತೆಯೇ, ಇದೆಲ್ಲಾ ಒಂದು ಗಿಮಿಕ್ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಬಿಗ್‌ ಬಾಸ್‌ನಲ್ಲಿ ಉಳಿಯಲು ಈ ಜೋಡಿ ಪ್ರೀತಿಯ ನಾಟಕವಾಡಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಅನುಮಾನ ಬರಬಾರದು ಎಂದು ಈ ಜೋಡಿ ಕೆಲವು ದಿನ ಒಟ್ಟೊಟ್ಟಿಗೆ ತಿರುಗಾಡಿ ಈಗ ಬ್ರೇಕಪ್ ಎನ್ನುತ್ತಿದೆ. ಇದು ಸ್ಪರ್ಧೆಗಾಗಿ ಮಾಡಿದ ಗಿಮಿಕ್ ಎನ್ನುವ ಅಭಿಪ್ರಾಯ ಮತ್ತೊಂದು ಕಡೆ ವ್ಯಕ್ತವಾಗಿದೆ.

More from Filmibeat

English summary
Shamita Shetty And Raqesh Bapat Announce Break-Up, Netizens Says It's Bigg Boss Fake Love Story,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X