ರೊಮ್ಯಾಂಟಿಕ್ ಫೋಟೋ ಮೂಲಕ ಪ್ರೀತಿ ವಿಚಾರ ಬಹಿರಂಗ ಪಡಿಸಿದ ಶಿಲ್ಪಾ ಶೆಟ್ಟಿ ಸಹೋದರಿ
ಬಿಗ್ ಬಾಸ್ ಮುಗಿದು ಸ್ಪರ್ಧಿಗಳು ಹೊರಬರುತ್ತದ್ದಂತೆ ಹೊಸ ಕಪಲ್ ಗಳ ಸೃಷ್ಟಿಯಾಗುತ್ತಾರೆ. ಬಿಗ್ ಬಾಸ್ ಮೂಲಕ ಪರಿಚಿತರಾಗಿ, ಪ್ರೇಮಿಗಳಾಗಿ ಬಳಿಕ ಮದುವೆಯಾದ ಉದಾಹರಣೆಗಳು ಅನೇಕ ಇದೆ. ಇದೀಗ ಮತ್ತೊಂದು ಬಿಗ್ ಬಾಸ್ ಜೋಡಿ ತನ್ನ ಪ್ರೀತಿ ವಿಚಾರವನ್ನು ಬಹಿರಂಗ ಪಡಿಸಿದೆ. ಅದು ಮತ್ಯಾರು ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಾಪಟ್.
ಇತ್ತೀಚಿಗಷ್ಟೆ ಬಿಗ್ ಬಾಸ್ ಒಟಿಟಿಗೆ ಅದ್ದೂರಿ ತೆರೆ ಬಿದ್ದಿದೆ. ಕರಣ್ ಜೋಹರ್ ಬಿಗ್ ಬಾಸ್ ಒಟಿಟಿ ಶೋ ನಡೆಸಿಕೊಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಗಮನ ಸೆಳೆದ ಸ್ಪರ್ಧಿಗಳಲ್ಲಿ ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಾಪಟ್ ಜೋಡಿ ಕೂಡ ಒಂದು. ಇಬ್ಬರ ಪ್ರೀತಿ ಪ್ರೇಮದ ವಿಚಾರ ಮನೆಯೊಳಗೆ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಬಿಗ್ ಮನೆಯಿಂದ ಹೊರಬಂದ ಮೇಲು ಇಬ್ಬರ ನಡುವೆ ಅದೇ ಬಾಂಧವ್ಯ ಇತ್ತು.
ರಾಕೇಶ್ ಮತ್ತು ಶಮಿತಾ ಇಬ್ಬರೂ ಪ್ರೀತಿಯಲ್ಲಿದ್ದಾರೆ, ಮದುವೆಯಾಗುತ್ತಾರೆ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಈ ಬಗ್ಗೆ ಶಮಿತಾ ಅಥವಾ ರಾಕೇಶ್ ಕಡೆಯಿಂದ ಯಾವುದೇ ಮಾಹಿತಿ ಬಹಿರಂಗವಾಗಿರಲಿಲ್ಲ. ಇದೀಗ ಈ ಜೋಡಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಪ್ರೀತಿ ವಿಚಾರ ಅಧಿಕೃತಗೊಳಿಸುವ ಮೂಲಕ ಇಬ್ಬರೂ ಡೇಟಿಂಗ್ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.

ಅಂದಹಾಗೆ ಇನ್ಸ್ಟಾಗ್ರಾಮ್ ನಲ್ಲಿ ಶಮಿತಾ ಮತ್ತು ರಾಕೇಶ್ ಇಬ್ಬರು ಕೈ ಕೈ ಹಿಡಿದುಕೊಂಡಿರುವ ಫೋಟೋ ಶೇರ್ ಮಾಡಿದ್ದಾರೆ. ಫೋಟೋ ಜೊತೆಗೆ "ಯು ಅಂಡ್ ಐ" ಎಂದು ಬರೆದು ಹಾರ್ಟ್ ಇಮೋಜಿ ಹಾಕಿದ್ದಾರೆ. ಜೊತೆಗೆ 'ಶರಾ' ಎಂದು ಬರೆದುಕೊಂಡಿದ್ದಾರೆ. 'ಶ' ಎಂದರೆ ಶಮಿತಾ, ರಾ ಎಂದರೆ ರಾಕೇಶ್. ಇದೀಗ 'ಶರಾ' ಜೋಡಿ ಅಭಿಮಾನಿಗಳ ಗಮನಸೆಳೆಯುತ್ತಿದ್ದಾರೆ.
ಬಿಗ್ ಬಾಸ್ ಬಳಿಕ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುವ ರಾಕೇಶ್ ಮತ್ತು ಶಮಿತಾ ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆಗಾಗ ಕ್ಯಾಮರಾ ಕಣ್ಣಿಗೆ ಸೆರೆಯಾಗುವ ಈ ಜೋಡಿಯ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ.
ಅಂದಹಾಗೆ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಾಕೇಶ್, ಶಮಿತಾ ಶೆಟ್ಟಿ ಬಗ್ಗೆ ಸಾಫ್ಟ್ ಕಾರ್ನರ್ ಇದೆ ಎಂದು ಹೇಳಿದ್ದರು. ಇಬ್ಬರ ನಡುವಿನ ಬಾಂಧವ್ಯ ಸ್ನೇಹಕ್ಕಿಂತ ಸ್ವಲ್ಪ ಹೆಚ್ಚು ಎಂದು ಹೇಳಿದ್ದರು. ಶಮಿತಾ ತುಂಬಾ ವಿಶೇಷ ನನ್ನ ಜೀವನದಲ್ಲಿ. ನನ್ನೊಂದಿಗೆ ಮಾತನಾಡಲು, ಸಮಯ ಕಳೆಯಲು, ಸವಂಹನ ಮಾಲು ಇಷ್ಟಪಡುವ ವ್ಯಕ್ತಿ ಎಂದು ರಾಕೇಶ್ ಹೇಳಿದ್ದರು.
ಬಿಗ್ ಬಾಸ್ ಮನೆಯಲ್ಲಿ ಇಬ್ಬರ ರೊಮ್ಯಾಂಟಿಕ್ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇಬ್ಬರು ಆಗಾಗ ಒಬ್ಬರಮೇಲೊಬ್ಬರು ಪ್ರೀತಿ ವ್ಯಕ್ತಪಡಿಸುತ್ತಿದ್ದರು. ಇನ್ನು ಶಮಿತಾ ಶೆಟ್ಟಿ ತಾಯಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗ ರಾಕೇಶ್ ನನ್ನು ಹೊಗಳಿದ್ದರು. ರಾಕೇಶ್ ತುಂಬಾ ಸ್ಟೀಟ್ ಮನುಷ್ಯ ಎಂದಿದ್ದರು. ಮನೆಯಲ್ಲಿರುವ ತುಂಬಾ ಜೆಂಟಲ್ ಮ್ಯಾನ್ ಎಂದಿದ್ದರು. ರಾಕೇಶ್ ಕಿಸ್ ಮಾಡಿ ಲವ್ ಯು ಎಂದು ಹೇಳಿದ್ದರು. ಈ ಎಲ್ಲಾ ಬೆಳವಣಿಗೆಗಳು ರಾಕೇಶ್ ಮತ್ತು ಶಮಿತಾ ನಡುವೆ ಸ್ನೇಹಕ್ಕಿಂತ ಮಿಗಿಲಾದ ಬಂಧವ್ಯವಿದೆ ಎನ್ನುವುದು ಬಹಿರಂಗ ಪಡಿಸಿತ್ತು. ಆದರೀಗ ಇಬ್ಬರು ಅಧಿಕೃತಗೊಳಿಸುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.


Click it and Unblock the Notifications











