ನೀನೇನು ಕಿತ್ತು ದಬ್ಬಾಕಿದೀಯಾ ; ಕೆರಳಿದ ಶಿಲ್ಪಾ ಶೆಟ್ಟಿ ತಂಗಿ

ಮೂವತ್ತರ ಆಸು ಪಾಸಿನಲ್ಲಿ ಮದುವೆಯಾಗಿ, ಮೂವತ್ತೈದರ ಒಳಗೆ ಮಗುವಾದರೆ ಒಳ್ಳೆಯದು ಎನ್ನುವುದು ಹಿರಿಯರ ಮಾತು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಮದುವೆ ಬೇಡ ಮಕ್ಕಳೂ ಬೇಡ ಎನ್ನುವ ಟ್ರೆಂಡ್ ಶುರುವಾಗಿದೆ. ಲಿವ್ ಇನ್ ಸಂಬಂಧ ಸಾಮಾನ್ಯವಾಗಿದೆ. ಇನ್ನು .. ಮದುವೆ-ಸಂಸಾರವೇ ಬದುಕಿನ ಅಂತಿಮ ಗುರಿಯಲ್ಲ. ಬದುಕಿನ ಖುಷಿ.. ನೆಮ್ಮದಿ.. ಯಾವುದರಲ್ಲಿದೆ ಎನ್ನುವುದನ್ನು ನಾವೇ ಹುಡುಕಿಕೊಳ್ಳಬೇಕು ನಮ್ಮ ಆಯ್ಕೆಗಳಿಗೆ ನಾವೇ ಜವಾಬ್ದಾರಿ .. ಎಂಬ ಮಾತುಗಳನ್ನಾಡುವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.

ಹೀಗಿದ್ದರೂ ಕೂಡ ನಮ್ಮ ಸಮಾಜದಲ್ಲಿ ಕಂಡವರ ಮದುವೆಯನ್ನು ಕಣ್ತುಂಬಿಕೊಳ್ಳುವ ಆಸೆ ಮಾತ್ರ ಕಡಿಮೆಯಾಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಸಾಮಾನ್ಯಕ್ಕೆ ವಯಸ್ಸಿಗೆ ಬಂದ ಯುವಕ ಯುವತಿಯರು ಎಲ್ಲಿಯೇ ಹೋಗಲಿ ಅಲ್ಲಿ ಮೊದಲು ಇವರಿಗೆ ಎದುರಾಗುವುದು ಮದುವೆಯ ಕುರಿತ ಪ್ರಶ್ನೆಯೇ. ಇನ್ನು ಸೆಲೆಬ್ರೆಟಿಗಳ ಪಾಡಂತೂ ಇದಕ್ಕಿಂತ ಭಿನ್ನ. ಯಾವ ಸಿನಿಮಾ ಕಾರ್ಯಕ್ರಮಕ್ಕೆ ಹೋಗಲಿ, ಸಭೆ-ಸಮಾರಂಭಕ್ಕೆ ತೆರಳಲಿ, ಪಾರ್ಟಿಗೆ ಹೋಗಲಿ.. ಸಿಕ್ಕ-ಸಿಕ್ಕಲ್ಲಿ ಮದುವೆಯ ಪ್ರಶ್ನೆಯನ್ನ ಕೇಳಿ ಕೊಡಬಾರದ ಟಾರ್ಚರ್ ಕೊಡ್ತಾರೆ. ಸದ್ಯ ಹೀಗೆ ಟಾರ್ಚರ್ ಕೊಡಲು ಬಂದ ವ್ಯಕ್ತಿಗೆ ಸರಿಯಾದ ಉತ್ತರವನ್ನು ಶಮಿತಾ ಶೆಟ್ಟಿ ನೀಡಿದ್ದಾರೆ.

Shamita Shetty s Savage Response To Troll Questioning Her Single Status At 47

ಹೌದು, ಹೇಳಿಕೊಳ್ಳಲು ಶಿಲ್ಪಾಶೆಟ್ಟಿ ಸಹೋದರಿಯಾದರೂ ಕೂಡ ಅಕ್ಕನಿಗೆ ಸಿಕ್ಕ ಗೆಲುವು ಇವರಿಗೆ ಸಿಗಲಿಲ್ಲ. ಆರಂಭದಲ್ಲಿ ಅವಕಾಶಗಳು ಸುಲಭವಾಗಿ ಸಿಕ್ಕವಾದರೂ ಕೂಡ ಕಲಾಭಿಮಾನಿಗಳು ಇವರಿಗೆ ತಮ್ಮ ಹೃದಯದಲ್ಲಿ ಜಾಗ ನೀಡಲಿಲ್ಲ. ಸದ್ಯ ಶಮಿತಾ ತಮ್ಮ ಎರಡನೇ ಇನಿಂಗ್ಸ್ ಶುರು ಮಾಡಿದ್ದಾರೆ. ಕೆಲ ವೆಬ್ ಸೀರೀಸ್‌ಗಳನ್ನು ಮಾಡುತ್ತಿದ್ದಾರೆ.

ಇಂಥಾ ಶಮಿತಾ ಶೆಟ್ಟಿಗೆ ಈಗ 47 ವರ್ಷ. ಆದರೆ ಇನ್ನೂ ಮದುವೆಯಾಗಿಲ್ಲ. ಹೀಗಾಗಿಯೇ ಇವರ ಮದುವೆ ಚಿಂತೆ ಮಾಡುತ್ತಿರುವ ವ್ಯಕ್ತಿಯೊಬ್ಬರು ಶಮಿತಾ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಸಮಯಕ್ಕೆ ಸರಿಯಾಗಿ ಮದುವೆಯಾಗಿದ್ದರೆ ಇಷ್ಟೊತ್ತಿಗೆ ಎದೆಯೆತ್ತರಕ್ಕೆ ಬೆಳೆದ ಮಕ್ಕಳು ಇರುತ್ತಿದ್ದರು ಎಂದಿದ್ದಾರೆ. ವ್ಯಕ್ತಿಯ ಈ ವ್ಯಂಗ್ಯ ಮಾತು ಶಮಿತಾರನ್ನು ಸಹಜವಾಗಿ ಕೆರಳಿಸಿದೆ. ಹೀಗಾಗಿ ಮದುವೆಯಾಗಿ ನೀವೇನು ಕಿತ್ತು ದಬ್ಬಾಕಿದ್ದೀಯಾ ಎಂದು ಪ್ರಶ್ನೆಯನ್ನು ಶಮಿತಾ ಕೇಳಿದ್ದಾರೆ.

ಇಷ್ಟೇ ಅಲ್ಲ ನಮ್ಮಂತಹ ಒಂಟಿ ಮಹಿಳೆಯರ ವಯಸ್ಸನ್ನು ಹಂಗಿಸಲು ಮತ್ತು ನಿಮ್ಮ ಆದಿಮಾನವನ ಕಾಲದ, ಪುರುಷ ಕೇಂದ್ರಿತ ಆಲೋಚನೆಗಳನ್ನು ನಮ್ಮ ಮೇಲೆ ಹೇರಲು ನೀವು ನಮ್ಮನ್ನು ಯಾಕೆ ಫಾಲೋ ಮಾಡುತ್ತೀರಿ? ದಯವಿಟ್ಟು ನನಗೊಂದು ಉಪಕಾರ ಮಾಡಿ, ತಕ್ಷಣ ನನ್ನನ್ನು ಅನ್‌ಫಾಲೋ ಮಾಡಿ! ಎಂದು ತಪರಾಕಿ ಹಾಕಿದ್ದಾರೆ.

ಇನ್ನು ಇದೇ ಸಮಯದಲ್ಲಿ ಪಂಕಜ್ ಮಿತ್ತಲ್ ಎಂಬ ವ್ಯಕ್ತಿ ಮತ್ತೊಂದು ಪ್ರಶ್ನೆಯನ್ನು ಕೂಡ ಮಾಡಿದ್ದಾರೆ. ನಿಮ್ಮಲ್ಲಿ ಮೊದಲಿದ್ದ ಕಳೆ ಇಲ್ಲ ಎಂದು ಹೇಳುವ ಮೂಲಕ ಬಾಡಿ ಶೇಮಿಂಗ್ ಮಾಡುವ ಪ್ರಯತ್ನ ಮಾಡಿದ್ದಾರೆ. ಇದಕ್ಕೂ ಕೂಡ ತಿರುಗೇಟು ನೀಡಿರುವ ಶಮಿತಾ, ಹೌದು, ಸಮಯ ಕಳೆದಂತೆ ನನ್ನ ನೋಟ ಬದಲಾಗಬಹುದು ಎಂದು ಹೇಳಿದ್ದಾರೆ. ಈ ಮೂಲಕ ಬದಲಾವಣೆ ಎನ್ನುವುದು ಮಾನವ ಜೀವನದ ಅನಿವಾರ್ಯ ಭಾಗ ಎಂದಿದ್ದಾರೆ.

shamita-shetty-s-savage-response-to-troll-questioning-her-single-status-at-47

ಮುಂದುವರೆದು ಸಮಯಕ್ಕೆ ತಕ್ಕಂತೆ ಎಲ್ಲವೂ ಬದಲಾಗುತ್ತದೆ, ಇದು ನೈಸರ್ಗಿಕ ನಿಯಮ. ದೈಹಿಕ ಸೌಂದರ್ಯ ಸೇರಿದಂತೆ ಯಾವುದೂ ಶಾಶ್ವತವಲ್ಲ! ಆದರೆ ಈ ವಯಸ್ಸಿನಲ್ಲೂ ನಾನು ಆರೋಗ್ಯವಾಗಿದ್ದೇನೆ, ಫಿಟ್ ಆಗಿದ್ದೇನೆ ಮತ್ತು ಸಂತೋಷವಾಗಿದ್ದೇನೆ. ದೇವರು ನನಗೆ ನೀಡಿರುವ ಎಲ್ಲದಕ್ಕೂ ನಾನು ಕೃತಜ್ಞಳಾಗಿದ್ದೇನೆ... ನನಗೆ ಅಷ್ಟೇ ಮುಖ್ಯ ಎಂದು ಶಮಿತಾ ಶೆಟ್ಟಿ ಹೇಳಿದ್ದಾರೆ.

ಅಂದ್ಹಾಗೇ ಶಮಿತಾ ಶೆಟ್ಟಿ ಅವಕಾಶಗಳು ಇಲ್ಲದೇ ಖಾಲಿ ಕುಳಿತ ಸಮಯದಲ್ಲಿ 'ಬಿಗ್ ಬಾಸ್'' ಮನೆಗೆ ಹೋಗಿದ್ದರು. 2022ರಲ್ಲಿ ಹಿಂದಿಯ ''ಬಿಗ್ ಬಾಸ್‌ ಒಟಿಟಿ''ಯಲ್ಲಿ ಭಾಗವಹಿಸಿದ್ದರು. ಈ ಸಮಯದಲ್ಲಿ ಮನೆಯಲ್ಲಿದ್ದ ಸ್ಫರ್ಧಿ ರಾಕೇಶ್ ಬಾಪತ್ ಅವರ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು ಶಮಿತಾ.

ಇನ್ನೇನು ಇವರು ಇಬ್ಬರು ಮದುವೆಯಾಗುತ್ತಾರೆ ಎಂದೇ ಎಲ್ಲರು ಅಂದುಕೊಂಡಿದ್ದರು. ಆದರೆ ಈ ಸಂಬಂಧ ಮುರಿದು ಬಿತ್ತು. ಜುಲೈ 26-2022ರಂದು ಖುದ್ದು ಶಮಿತಾ ತಮ್ಮ ಬ್ರೇಕಪ್ ವಿಚಾರ ಹಂಚಿಕೊಂಡಿದ್ದರು. ರಾಕೇಶ್ ಬಾಪತ್ ಮತ್ತು ನಾನು ಈಗ ಒಟ್ಟಾಗಿಲ್ಲ, ಹಾಗೂ ಸ್ವಲ್ಪ ಸಮಯದಿಂದ ನಾವು ಬೇರೆಯಾಗಿದ್ದೇವೆ ಎಂದು ಶಮಿತಾ ಹೇಳಿದ್ದರು. ಈ ವಿಚಾರ ಸ್ಪಷ್ಟಪಡಿಸುವುದು ಮುಖ್ಯ ಎಂದುಕೊಂಡು ನಾನು ನಿಮ್ಮಲ್ಲರಿಗೆ ಈ ವಿಷಯ ಹೇಳುತ್ತಿದ್ದೇನೆ ಎಂದಿದ್ದರು.

Photo credit SHAMITA SHETTY Instagram

English summary
47, single, and absolutely savage! Shamita Shetty silences a troll questioning her marital status with one epic question. Read the full story.
Read more about: shamita shetty marriage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X