For Quick Alerts
  ALLOW NOTIFICATIONS  
  For Daily Alerts

  ಅಕ್ಕ ಶಿಲ್ಪಾ ಶೆಟ್ಟಿ ಬೆಂಬಲಕ್ಕೆ ನಿಂತ ಶಮಿತಾ ಶೆಟ್ಟಿ

  |

  ರಾಜ್ ಕುಂದ್ರಾ ಬಂಧನದ ಬಳಿಕ ಮಾಧ್ಯಮಗಳ, ಸಾಮಾಜಿಕ ಜಾಲತಾಣಗಳ ದೃಷ್ಟಿಯೆಲ್ಲ ಶಿಲ್ಪಾ ಶೆಟ್ಟಿ ಮೇಲೆ ಬಿದ್ದಿದ್ದು, ಶಿಲ್ಪಾ ಶೆಟ್ಟಿ ಕುರಿತಾಗಿ ಪುಂಖಾನುಪುಂಖವಾಗಿ ಸುದ್ದಿಗಳು ಹರಿದಾಡುತ್ತಿವೆ.

  ರಾಜ್ ಕುಂದ್ರಾ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಆಗುವ ಮುನ್ನವೇ ಹಲವು ಮಾಧ್ಯಮಗಳು ತೀರ್ಪು ಸಹ ನಿಡಿಬಿಟ್ಟಿವೆ! ರಾಜ್ ಕುಂದ್ರಾ ಜೊತೆಗೆ ಶಿಲ್ಪಾ ಶೆಟ್ಟಿಯನ್ನೂ ದೋಷಿಯೆಂದು ಕರೆದಿವೆ. ಸಾಮಾಜಿಕ ಜಾಲತಾಣದಲ್ಲಂತೂ ಶಿಲ್ಪಾ ಶೆಟ್ಟಿ ವಿರುದ್ಧ ಅವಿರತ ಟ್ರೋಲ್ ಜಾರಿಯಲ್ಲಿದೆ.

  ತಮ್ಮ ವಿರುದ್ಧ ಮಾನಹಾನಿಕರ, ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿರುವ ಮಾಧ್ಯಮಗಳ ವಿರುದ್ಧ ಶಿಲ್ಪಾ ಶೆಟ್ಟಿ ನ್ಯಾಯಾಲಯದ ಮೆಟ್ಟಿಲು ಸಹ ಏರಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ಪ್ರಕಟಿಸಿ, ತಮ್ಮ ಖಾಸಗಿತನಕ್ಕೆ ಗೌರವ ನೀಡುವಂತೆ ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೆ ಸಿನಿಮಾ ರಂಗದ ಕೆಲವು ಸೆಲೆಬ್ರಿಟಿಗಳು ನಿಧಾನಕ್ಕೆ ಶಿಲ್ಪಾ ಶೆಟ್ಟಿ ಬೆಂಬಲಕ್ಕೆ ಬಂದಿದ್ದಾರೆ. ಶಿಲ್ಪಾ ಶೆಟ್ಟಿಯ ಸ್ವಂತ ಸಹೋದರಿ ಶಮಿತಾ ಶೆಟ್ಟಿ ಅಕ್ಕನನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಪ್ರಕಟಿಸಿದ್ದಾರೆ.

  ''ನಿನ್ನ ಸದಾ ಪ್ರೀತಿಸುವೆ ಮುಂಕಿ (ಶಿಲ್ಪಾ ಶೆಟ್ಟಿ), ಯಾವುದೇ ಕಷ್ಟದ ಸಂದರ್ಭದಲ್ಲೂ ನಾನು ನಿನ್ನ ಜೊತೆಗೆ ಇದ್ದೇ ಇರುತ್ತೇನೆ'' ಎಂದು ಶಮಿತಾ ಶೆಟ್ಟಿ ಪೋಸ್ಟ್ ಮಾಡಿದ್ದಾರೆ. ಶಮಿತಾ ಶೆಟ್ಟಿ ಪೋಸ್ಟ್‌ಗೆ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು 'ಸ್ವಂತ ಅಕ್ಕನ ಬೆಂಬಲಕ್ಕೆ ಬರಲು ಇಷ್ಟು ತಡವೇಕೆ' ಎಂದು ಪ್ರಶ್ನೆ ಸಹ ಮಾಡಿದ್ದಾರೆ.

  ಶಿಲ್ಪಾ-ಶಮಿತಾ ಸಹೋದರಿಯರು

  ಶಿಲ್ಪಾ-ಶಮಿತಾ ಸಹೋದರಿಯರು

  ಶಿಲ್ಪಾ ಶೆಟ್ಟಿ ಮತ್ತು ಶಮಿತಾ ಶೆಟ್ಟಿ ಇಬ್ಬರೂ ಸಹೋದರಿಯರು. ಬಂಧಿತ ರಾಜ್ ಕುಂದ್ರಾ ಜೊತೆಗೆ ಶಮಿತಾ ಶೆಟ್ಟಿಗೆ ಉತ್ತಮ ಬಾಂಧವ್ಯ ಇತ್ತು. ರಾಜ್ ಕುಂದ್ರಾ ನಿರ್ಮಿಸಲಿದ್ದ ಸಿನಿಮಾದಲ್ಲಿ ಶಮಿತಾ ಶೆಟ್ಟಿ ನಟಿಸಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಆ ಸಿನಿಮಾ ಇನ್ನೂ ಸೆಟ್ಟೇರಿರಲಿಲ್ಲ. ಬಾಲಿವುಡ್‌ನ ಕಾರ್ಯಕ್ರಮಗಳಲ್ಲಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಜೊತೆಗೆ ಶಮಿತಾ ಶೆಟ್ಟಿ ಸಹ ಕಾಣಿಸಿಕೊಳ್ಳುತ್ತಿದ್ದರು.

  ಶಿಲ್ಪಾ ಶೆಟ್ಟಿಗೆ ಬೆಂಬಲಿಸಿದ ಆರ್.ಮಾಧವನ್

  ಶಿಲ್ಪಾ ಶೆಟ್ಟಿಗೆ ಬೆಂಬಲಿಸಿದ ಆರ್.ಮಾಧವನ್

  ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟ ಆರ್.ಮಾಧವನ್ ಸಹ ಶಿಲ್ಪಾ ಶೆಟ್ಟಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ''ನಾನು ನೋಡಿದ ಅತ್ಯಂತ ಗಟ್ಟಿ ಮಹಿಳೆಯರಲ್ಲಿ ನೀವು ಒಬ್ಬರು. ಈ ಸವಾಲಿನ ಸಮಯವನ್ನು ನೀವು ಘನತೆಯಿಂದ ಪಾರಾಗಿ ಬರುತ್ತೀರ ಎಂಬ ವಿಶ್ವಾಸ ನನಗೆ ಇದೆ. ನನ್ನ ಪ್ರಾರ್ಥನೆಗಳು ನಿಮಗೆ ಹಾಗೂ ನಿಮ್ಮ ಕುಟುಂಬ ಪರವಾಗಿ ಸದಾ ಇರುತ್ತದೆ'' ಎಂದಿದ್ದಾರೆ.

  ಶಿಲ್ಪಾ ಶೆಟ್ಟಿ-ಮಾಧವನ್ ಒಳ್ಳೆಯ ಗೆಳೆಯರು

  ಶಿಲ್ಪಾ ಶೆಟ್ಟಿ-ಮಾಧವನ್ ಒಳ್ಳೆಯ ಗೆಳೆಯರು

  ಶಿಲ್ಪಾ ಶೆಟ್ಟಿ ಮತ್ತು ಆರ್.ಮಾಧವನ್ ಬಹಳ ಆಪ್ತ ಗೆಳೆಯರು. ಕಳೆದ ವರ್ಷ ಮಾಧವನ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದ ಶಿಲ್ಪಾ ಶೆಟ್ಟಿ, ''ಆರ್.ಮಾಧವನ್ ತಮ್ಮ ಅತ್ಯಾಪ್ತ ಗೆಳೆಯ, ನನಗೆ ಹೊಸ ತಂತ್ರಜ್ಞಾನ, ವಿಜ್ಞಾನ ವಿಚಾರಗಳು, ಜೀವನ, ಮಕ್ಕಳನ್ನು ಬೆಳೆಸುವ ಕಲೆ, ವ್ಯವಹಾರ ಹೀಗೆ ಹಲವು ವಿಚಾರಗಳನ್ನು ತಿಳಿಸುತ್ತಿರುತ್ತಾರೆ. ನಾನು ಹಾಗೂ ರಾಜ್ ಕುಂದ್ರಾ ಭೇಟಿ ಮಾಡಿದ್ದ ಅತ್ಯಂತ ವಿನಮ್ರ ಹಾಗೂ ನಿಷ್ಠಾವಂತ ವ್ಯಕ್ತಿ ಮಾಧವನ್'' ಎಂದು ಹೇಳಿದ್ದರು.

  ರಿಚಾ ಚಡ್ಡಾ ಸಹ ಬೆಂಬಲ ನೀಡಿದ್ದಾರೆ

  ರಿಚಾ ಚಡ್ಡಾ ಸಹ ಬೆಂಬಲ ನೀಡಿದ್ದಾರೆ

  ಬಾಲಿವುಡ್‌ನ ಪ್ರತಿಭಾವಂತ ನಟಿಯರಲ್ಲಿ ಒಬ್ಬರಾದ ರೀಚಾ ಚಡ್ಡಾ ಸಹ ಶಿಲ್ಪಾ ಶೆಟ್ಟಿಗೆ ಬೆಂಬಲಿಸಿ ಟ್ವೀಟ್ ಮಾಡಿದ್ದರು, ''ನಮ್ಮ ದೇಶದಲ್ಲಿ ಪುರುಷರು ಮಾಡುವ ತಪ್ಪಿಗೆ ಮಹಿಳೆಯರನ್ನು ನಿಂದಿಸಲಾಗುತ್ತದೆ. ಇದೊಂದು ರೀತಿ ನಮ್ಮ ರಾಷ್ಟ್ರೀಯ ಕ್ರೀಡೆಯಾಗಿಬಿಟ್ಟಿದೆ. ತಮ್ಮ ವಿರುದ್ಧ ಅಕಾರಣ ನಿಂದನೆ ಮಾಡುವವರ ಮೇಲೆ ಮೊಕದ್ದಮೆ ಹೂಡಲು ಮುಂದಾಗಿರುವುದು ಬಹಳ ಒಳ್ಳೆಯ ಬೆಳವಣಿಗೆ'' ಎಂದು ರಿಚಾ ಚಡ್ಡಾ ಹೇಳಿದ್ದರು.

  ಸೆಲೆಬ್ರಿಟಿಗಳ ಮೌನದ ಬಗ್ಗೆ ಹನ್ಸಲ್ ಮೆಹ್ತಾ ಟೀಕೆ

  ಸೆಲೆಬ್ರಿಟಿಗಳ ಮೌನದ ಬಗ್ಗೆ ಹನ್ಸಲ್ ಮೆಹ್ತಾ ಟೀಕೆ

  ರಾಜ್ ಕುಂದ್ರಾ ಬಂಧನವಾದ ಬಳಿಕ ಮೊದಲ ಬಾರಿಗೆ ಬಹಿರಂಗವಾಗಿ ಶಿಲ್ಪಾ ಶೆಟ್ಟಿ ಬೆಂಬಲಕ್ಕೆ ನಿಂತಿದ್ದು ನಿರ್ದೇಶಕ ಹನ್ಸಲ್ ಮೆಹ್ತಾ, ''ಒಳ್ಳೆಯ ಸಮಯದಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಪಾರ್ಟಿ ಮಾಡುತ್ತಾರೆ. ಆದರೆ ಕಷ್ಟದ ಸಮಯದಲ್ಲಿ ಭಯಂಕರ ಮೌನ ತಾಳುತ್ತಾರೆ. ಅಂತಿಮ ಸತ್ಯ ಏನೇ ಆಗಿರಲಿ ಆದರೆ ಹಾನಿ ಆಗಬಿಟ್ಟಿದೆ'' ಎನ್ನುವ ಮೂಲಕ ಶಿಲ್ಪಾ ಶೆಟ್ಟಿಗೆ ಬೆಂಬಲ ನೀಡಲು ಹಿಂದೇಟು ಹಾಕುತ್ತಿರುವ ಅವರ ಸೆಲೆಬ್ರಿಟಿ ಗೆಳೆಯರನ್ನು ಪರೋಕ್ಷವಾಗಿ ಟೀಕಿಸಿದ್ದರು.

  English summary
  Actress Shamita Shetty says she will support her sister Shilpa Shetty no matter what. R.Madhavan also tweeted in support of Shilpa Shetty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X