twitter
    For Quick Alerts
    ALLOW NOTIFICATIONS  
    For Daily Alerts

    ಆಸ್ಕರ್ ಅಂಗಳಕ್ಕೆ ಭಾರತದ ಕಿರುಚಿತ್ರ: ಮೂಡಿದೆ ಗೊಂದಲ

    |

    ಭಾರತದ ಮಟ್ಟಿಗೆ ಈ ಹಿಂದಿಗಿಂತಲೂ ಈ ಬಾರಿ ಕುತೂಹಲ ಮೂಡಿಸಿದೆ ಆಸ್ಕರ್. ಮಲಯಾಳಂ ಸಿನಿಮಾ 'ಜಲ್ಲಿಕಟ್ಟು'ವನ್ನು ಭಾರತದಿಂದ ಅಧಿಕೃತವಾಗಿ ಆಸ್ಕರ್ ಸ್ಪರ್ಧೆಗೆ ಕಳಿಸಲಾಗಿದೆ.

    ಆದರೆ ಈ ಬಾರಿ ಆಸ್ಕರ್‌ನ ಸಿನಿಮಾ ವಿಭಾಗದ ಜೊತೆಗೆ ಕಿರುಚಿತ್ರ ವಿಭಾಗದ ಮೇಲೆ ಭಾರತೀಯರ ಕಣ್ಣು ನೆಟ್ಟಿದೆ. ಅದಕ್ಕೆ ಕಾರಣ ಉತ್ತಮ ಗುಣಮಟ್ಟದ ಕಿರುಚಿತ್ರಗಳು ಆಸ್ಕರ್‌ಗೆ ಆಗಿವೆ. ಆದರೆ ಈ ಆಯ್ಕೆಯಲ್ಲೂ ತುಸು ಗೊಂದಲ ಏರ್ಪಟ್ಟಿದೆ.

    ಹೌದು, ಮೊದಲಿಗೆ ನಟಿ ವಿದ್ಯಾ ಬಾಲನ್ ನಟನೆಯ 'ನಟ್‌ಕಟ್' ಸಿನಿಮಾ, ವಿವಿಧ ಕಿರುಚಿತ್ರ ಸ್ಪರ್ಧೆಗಳಲ್ಲಿ ಭಾಗವಹಿಸಿ, ಪ್ರಶಸ್ತಿ ಗೆದ್ದು, ಆಸ್ಕರ್‌ಗೆ ಹೋಗಲು ಅರ್ಹತೆ ಗಿಟ್ಟಿಸಿಕೊಂಡಿದೆ ಎನ್ನಲಾಗಿತ್ತು.

    Shamless Short Film Is Official Entry To Oscar From India

    ನಂತರ ಧೀರಜ್ ಜಿಂದಾಲ್ ನಿರ್ದೇಶನದ 'ಪಾಷ್‌' ಎಂಬ ಕಿರುಚಿತ್ರ ಸಹ ಆಸ್ಕರ್‌ಗೆ ತೆರಳಿದೆ ಎಂಬ ಸುದ್ದಿ ಬಂತು. 13 ನಿಮಿಷದ ಈ ಕಿರುಚಿತ್ರದಲ್ಲಿ ಅಭಿಷೇಕ್ ಬ್ಯಾನರ್ಜಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಟ್ರಕ್ ಡ್ರೈವರ್ ಒಬ್ಬ ಹೇಳಿದ ಕತೆಯನ್ನೇ ಸಿನಿಮಾ ಮಾಡಿದ್ದಾರೆ ಧೀರಜ್ ಜಿಂದಾಲ್.

    Recommended Video

    SUPERSTAR SURYA-Kannada Short Film | Rakshit | Praveen | Nikhil | Filmibeat Kannada

    ಕಿರುಚಿತ್ರ 'ಶೇಮ್‌ಲೆಸ್' ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಿ ಆಸ್ಕರ್‌ ಹೋಗುತ್ತಿದೆ ಎಂಬ ಸದ್ದಿ ಇದೀಗ ಬಂದಿದೆ. ಆದರೆ ಈ ಬಗ್ಗೆ 'ನಟ್‌ಕಟ್' ಕಿರುಚಿತ್ರದ ನಿರ್ದೇಶಕ ತಕರಾರು ತೆಗೆದಿದ್ದು, ಇದು ಸುಳ್ಳು ಸುದ್ದಿ, ಶೆಮ್‌ಲೆಸ್ ಸಿನಿಮಾ ಅಧಿಕೃತವಾಗಿ ಆಯ್ಕೆ ಆಗಿಲ್ಲ ಎಂದು ಹೇಳಿದ್ದಾರೆ. ಆದರೆ ಹಲವು ಮಾಧ್ಯಮಗಳಲ್ಲಿ ಶೇಮ್‌ಲೆಸ್ ಸಿನಿಮಾ ಆಯ್ಕೆ ಆಗಿರುವುದಾಗಿ ಹೇಳಲಾಗಿದೆ.

    ನಟ್‌ಕಟ್ ಕಿರುಚಿತ್ರದ ನಿರ್ದೇಶಕ 'ಶೇಮ್‌ಲೆಸ್' ಸಿನಿಮಾ ಆಸ್ಕರ್‌ಗೆ ಆಯ್ಕೆಯಾಗಿಲ್ಲ. ಆಯ್ಕೆಯಾದ ಕಿರುಚಿತ್ರದ ಹೆಸರು ಘೋಷಿಸುವುದು ಫೆಬ್ರವರಿ ತಿಂಗಳಲ್ಲಿ ಆ ವರೆಗೆ ಘೋಷಿಸುವುದಿಲ್ಲ. ಶೇಮ್‌ಲೆಸ್ ಕಿರುಚಿತ್ರ ಆಸ್ಕರ್‌ಗೆ ಆಯ್ಕೆ ಆಗಿದೆ ಎಂಬುದು ಸುಳ್ಳು ಸುದ್ದಿ ಎಂದಿದ್ದಾರೆ.

    English summary
    Short film Shameless is the official entry to Oscar from India. But Nutkhat short film directer Shaan calls it as fake news.
    Thursday, December 3, 2020, 9:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X