ಹಿಂದೆಯಿಂದ ಬೇಡ ಅಂದರೂ ಕೇಳಲಿಲ್ಲ, ಕೈ ಅಡ್ಡ ಹಿಡಿದುಕೊಂಡೇ ಹೋದ ನಾಯಕಿ..!
ಮನೆಯ ಬೆಡ್ ರೂಮ್ ವೊಂದನ್ನ ಹೊರತು ಪಡಿಸಿದರೆ, ಬಾಲಿವುಡ್ ಸ್ಟಾರ್‌ಗಳ ದಿನ ನಿತ್ಯದ ಚಲನ-ವಲನ, ಹಾವ-ಭಾವಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುವ ಪಾಪರಾಜಿಗಳಿಂದ ಹಿಂದಿ ಚಿತ್ರರಂಗದ ತಾರೆಯರ ನೆಮ್ಮದಿಯೇ ಭಂಗವಾಗಿದೆ. ಎಲ್ಲಿ ಹೋದರು ನೆರಳಿನಂತೆ ಹಿಂಬಾಲಿಸುವ ಇವರು, ಬೇಡ .. ಬೇಡವೆಂದರೂ ಕೆಲವೊಮ್ಮೆ ಫೋಟೋಗಳನ್ನು ಕ್ಲಿಕಿಸುತ್ತಾರೆ. ಮಾನಸಿಕ ಕಿರಿಕಿರಿಯನ್ನುಂಟು ಮಾಡುವುದಲ್ಲದೇ ಮುಜುಗರಕ್ಕೀಡು ಮಾಡುತ್ತಾರೆ. ಇದಕ್ಕೆ ಶನಾಯಾ ಕಪೂರ್ ಸದ್ಯದ ತಾಜಾ ಉದಾಹರಣೆ.
ಹೌದು, ಅನಿಲ್ ಕಪೂರ್ ಸಹೋದರ ಸಂಜಯ್ ಕಪೂರ್ ಅವರ ಪತ್ನಿ ಮಹೀಪ್ ಕಪೂರ್ ಅವರ ಮುದ್ದಿನ ಮಗಳು ಶನಾಯಾ, ಕಪ್ಪು ಬಣ್ಣದ ಅಥ್ಲೀಶರ್ ನಲ್ಲಿ ಜಿಮ್‌ಗೆ ತೆರಳುತ್ತಿದ್ದರು. ಈ ಸಮಯದಲ್ಲಿ ಶನಾಯಾ ಅವರನ್ನು ಸುತ್ತುವರೆದ ಕ್ಯಾಮರಾ ಗುಂಪು.. ಶನಾಯಾ ಅವರ ಫೋಟೋಗಳನ್ನು ಕ್ಲಿಕಿಸಲು ಮುಂದಾಯಿತು. ಆದರೆ.. ಇದಕ್ಕೆ ಅಭ್ಯಂತರ ವ್ಯಕ್ತಪಡಿಸಿದ ಶನಾಯಾ ಕೇವಲ ಎದುರುಗಡೆಯಿಂದ ಮಾತ್ರ ತಮ್ಮ ಫೋಟೋಗಳನ್ನು ತೆಗೆಯುವಂತೆ ಕೇಳಿಕೊಂಡರು. ಪ್ಲೀಸ್ ಹಿಂಬದಿಯೆಲ್ಲ ಕ್ಯಾಮರಾ ಹಿಡಿಯಬೇಡಿ ಎಂಬ ಮನವಿಯನ್ನೂ ಮಾಡಿದರು.

ಆದರೆ.. ಆರಂಭದಲ್ಲಿ ಶನಾಯಾ ಮಾಡಿಕೊಂಡ ಈ ಮನವಿಗೆ ಮಣೆ ಹಾಕಿದಂತೆ ವರ್ತಿಸಿದ ಪಾಪರಾಜಿಗಳು, ಶನಾಯಾ ಜಿಮ್‌ಗೆ ತೆರಳುವಾಗ ಹಿಂದಿನಿಂದ ಅವರ ಭಾವ ಚಿತ್ರ ತೆಗೆದಿದ್ದಾರೆ. ವಿಡಿಯೋಗಳನ್ನೂ ಮಾಡಿದ್ದಾರೆ. ಇದನ್ನ ಅರಿತ ಶನಾಯಾ ಕೈಗಳನ್ನು ಹಿಂಭಾಗಕ್ಕೆ ಅಡ್ಡ ಹಿಡಿದುಕೊಂಡೇ ಮೆಟ್ಟಿಲು ಹತ್ತಿದ್ದಾರೆ.
ಸದ್ಯಕ್ಕೆ ಶನಾಯಾ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪಾಪರಾಜಿಗಳ ವಿರುದ್ದ ಆಕ್ರೋಶವೂ ವ್ಯಕ್ತವಾಗುತ್ತಿದೆ. ಅವರ ಖಾಸಗಿ ಬದುಕಿನಲ್ಲಿ ನಿಮಗೆ ಯಾಕೆ ಇಷ್ಟು ಆಸಕ್ತಿ ಎಂಬ ಪ್ರಶ್ನೆಯನ್ನ ಕೇಳಿದ್ದಾರೆ. ಬದುಕಿ ಬದುಕಲು ಬಿಡಿ ಎಂದು ಬುದ್ದಿಮಾತನ್ನೂ ಪಾಪರಾಜಿಗಳಿಗೆ ಹೇಳುತ್ತಿದ್ದಾರೆ. ಇನ್ನೂ ನಾಚಿಕೆ..ಮಾನ..ಮರ್ಯಾದೆ ಪಾಠವನ್ನೂ ಮಾಡುತ್ತಿದ್ದಾರೆ. ಅವರ ಅನುಮತಿ ಇಲ್ಲದೆ ಫೋಟೋ, ವಿಡಿಯೋ ತೆಗೆಯುವುದು ತಪ್ಪು. ಅದರಲ್ಲೂ ಈ ರೀತಿ ಹಿಂದಿನಿಂದ ತೆಗೆಯುವುದು ತಪ್ಪು ಎಂದು ಹಲವರು ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.
ಅಂದ್ಹಾಗೇ ಶನಾಯಾ ಕಪೂರ್ ''ಬೇಧಡಕ್'' ಎಂಬ ಚಿತ್ರದ ಮೂಲಕ ಚಿತ್ರರಂಗವನ್ನು ಈಗಾಗಲೇ ಪ್ರವೇಶಿಸಿದ್ದಾರೆ. ಆದರೆ ಅಂದುಕೊಂಡ ಹೆಸರು ಆಗಲಿ ಅಥವಾ ಗೆಲುವು ಆಗಲಿ ಇವರಿಗೆ ಈ ಚಿತ್ರದ ಮೂಲಕ ಸಿಗಲಿಲ್ಲ. ಹೀಗಾಗಿಯೇ ದಕ್ಷಿಣದ ಕಡೆ ವಲಸೆ ಬಂದಿರುವ ಶನಾಯಾ ಕಪೂರ್, ಮೋಹನ್ ಲಾಲ್ ಅಭಿನಯದ ವೃಷಭ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ. ಹಾಲಿವುಡ್ ಮಾದರಿಯಲ್ಲಿ ನಿರ್ಮಾಣವಾಗುತ್ತಿರುವ ಭಾರತದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಚಿತ್ರವನ್ನು ಕನ್ನಡದ ಸ್ಟಾರ್ ಡೈರೆಕ್ಟರ್ ನಂದಕಿಶೋರ್ ನಿರ್ದೇಶನ ಮಾಡುತ್ತಿರುವುದು ಒಂದು ವಿಶೇಷವಾದರೆ ರಾಗಿಣಿ ದ್ವಿವೇದಿ ಕೂಡ ಈ ಚಿತ್ರದ ಪಾತ್ರಕ್ಕೆ ಬಣ್ಣ ಹಚ್ಚಿರುವುದು ಮತ್ತೊಂದು ವಿಶೇಷ.


Click it and Unblock the Notifications











