ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಬಾಲಿವುಡ್‌ ನಾಯಕಿಯ ಕಿರಿಕ್..!

ಆಗರ್ಭ ಶ್ರೀಮಂತ ಮುಖೇಶ್ ಅಂಬಾನಿಯವರ ಮಗ ಅನಂತ್ ಅಂಬಾನಿಯ ಮದುವೆ ಭಾರತದ ಇತಿಹಾಸದಲ್ಲಿಯೇ ಕಂಡು ಕೇಳರಿಯದಂತೆ ನಡೆದಿದೆ. ಆದರೆ .. ಮದ್ವೆ ಮುಗಿದರೂ ಚರ್ಚೆ ಇನ್ನೂ ಕಡಿಮೆಯಾಗಿಲ್ಲ. ಇವತ್ತು ಕೂಡ ತನ್ನ ಮುದ್ದಿನ ಮಗನ ಮದುವೆಗೆ ಮುಕೇಶ್ ಅಂಬಾನಿ ಸುರಿದ ಹಣ ಎಷ್ಟಿರಬಹುದು ಎಂದು ಅನೇಕರು 'ಚಾಯ್ ಪೇ ಚರ್ಚಾ' ಮಾಡುತ್ತಿದ್ಧಾರೆ.

ಇನ್ನೂ ನಿಮಗೆ ಗೊತ್ತು.. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ಗೆ ಶುಭಾಶಯ ಕೋರಲು, ದೊಡ್ಡ ದೊಡ್ಡವರೆಲ್ಲ ಬಂದಿದ್ದರು. ರಾಜಕೀಯ.. ಕ್ರೀಡೆ.. ಸಿನಿಮಾ.. ಹೀಗೆ ನಾನಾ ಕ್ಷೇತ್ರದಲ್ಲಿನ ದಿಗ್ಗಜರ ಸಮಾಗಮಕ್ಕೆ ಸಾಕ್ಷಿಯಾದ ಈ ಮದುವೆಗೆ ಬಾಲಿವುಡ್‌ನ ಅನೇಕರು ತಮ್ಮ ಪರಿವಾರ ಸಮೇತ ಬಂದಿದ್ದರು.ನವ ಜೋಡಿಗೆ ಶುಭ ಕೋರಿದರು. ಆ ನಂತರ ಕುಣಿದರು.

Shanaya Kapoor clashes with wedding security at Anant Ambani s wedding

ಆದರೆ, ಇದೇ ಸಮಯದಲ್ಲಿ ಅಲ್ಲೊಂದು ಮೂಲೆಯಲ್ಲಿ ಬಾಲಿವುಡ್‌ನ ಭವಿಷ್ಯದ ನಾಯಕಿ ಶನಯಾ ಕಪೂರ್ ಅದ್ಯಾರದ್ದೋ ಜೊತೆ ವಾದವನ್ನೂ ಮಾಡುತ್ತಿದ್ದರು. ಮುಖ ಊದಿಸಿಕೊಂಡು ನಿಂತಿದ್ದರು. ಈ ವಿಚಾರ ಈಗ ಜಗಜ್ಜಾಹೀರಾಗಿದೆ. ಶನಾಯಾ ಕಪೂರ್ ವಿಡಿಯೋ ವೈರಲ್ ಆಗಿದೆ.

ಹೌದು, ಶನಯಾ ಕಪೂರ್.. ಅನಿಲ್ ಕಪೂರ್ ಸಹೋದರ ಸಂಜಯ್ ಕಪೂರ್ ಅವರ ಮುದ್ದಿನ ಮಗಳು. ಆಲಿಯಾ ಭಟ್.. ಜಾಹ್ನವಿ ಕಪೂರ್.. ಸಾರಾ ಅಲಿ ಖಾನ್.. ಹೆಜ್ಜೆ ಜಾಡನ್ನು ಹಿಂಬಾಲಿಸುತ್ತಾ ಹೀರೋಯಿನ್ ಆಗಲು ಅಣಿಯಾಗುತ್ತಿರುವ ಶನಯಾ, ಕೋಟ್ಯಾಧಿಪತಿಯ ಕೂಸಿನ ಮದುವೆಯಲ್ಲಿ ತಕರಾರು ತೆಗೆದಿದ್ದಾರೆ. ಶನಯಾ ಅವರ ಈ ಅಸಹನೆ..ಅಸಮಾಧಾನಕ್ಕೆ ನಿಖರವಾದ ಕಾರಣವೇನು ಅನ್ನುವುದಕ್ಕೆ ಉತ್ತರ ಸದ್ಯಕ್ಕಿಲ್ಲವಾದರೂ.. ತನ್ನ ಬ್ಯಾಗ್‌ನ್ನೂ ಭದ್ರತಾ ಸಿಬ್ಬಂದಿ ಪರಿಶೀಲಿಸಿದ್ದಕ್ಕೆ ಶನಯಾ ಕೋಪ ಮಾಡಿಕೊಂಡಿದ್ದಾರೆ ಎನ್ನುವ ಅಭಿಪ್ರಾಯವನ್ನು ವಿಡಿಯೋ ವೈರಲ್ ಆದ ಬೆನ್ನಲ್ಲಿ ಅನೇಕರು ವ್ಯಕ್ತಪಡಿಸುತ್ತಿದ್ದಾರೆ.

shanaya-kapoor-clashes-with-wedding-security-at-anant-ambanis-wedding

ಇನ್ನೂ ಸೆಲೆಬ್ರಿಟಿಗಳು ಏನೂ ಮಾಡಿದರೂ ನೋಡುಗರಿಗೆ ಅದು ಎಲೆ ಅಡಿಕೆಯೇ. ಹೀಗಾಗಿಯೇ ಶನಯಾ ಅವರ ಈ ನಡೆ-ನುಡಿಯನ್ನು ನೋಡಿದ ಅನೇಕರು ಸದ್ಯ ಶನಯಾ ಕಪೂರ್ ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

ಅಂಬಾನಿ ಮದ್ವೆಯಲ್ಲಿ ಕಪೂರ್ ಖಾನ್ದಾನ್‌ನ ಈ ಕುಡಿ ಗುಲಾಬ್ ಜಾಮೂನು ಕದ್ದು, ತನ್ನ ಬ್ಯಾಗ್‌ನಲ್ಲಿ ಇಟ್ಟುಕೊಂಡಿರಬಹುದು ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಚಮಚ ಕಳ್ಳಿ ಎಂದು ಕಾಲೆಳೆಯುತ್ತಿದ್ಧಾರೆ. ಇನ್ನೂ ಕೆಲವರು ಶನಯಾ ಅವರ ಈ ವರ್ತನೆಗೆ ಕಿಡಿಯನ್ನೂ ಕಾರುತ್ತಿದ್ದಾರೆ. ಇನ್ನೂ ನೆಟ್ಟಗೆ ಒಂದು ಸಿನಿಮಾ ಮಾಡಿಲ್ಲ ಆಗ್ಲೇ ಈ ದರ್ಪ ದೌಲತ್ತು ಅಹಂಕಾರ ಎನ್ನುತ್ತಿದ್ದಾರೆ. ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳುವ ಈ ಸ್ಟಾರ್‌ ಕಿಡ್‌ಗಳ ದುರಹಂಕಾರಕ್ಕೆ ಉದಾಸೀನವೇ ಮದ್ದು ಎನ್ನುತ್ತಿದ್ದಾರೆ. ಅಷ್ಟೊಂದು ಹಣ ಖರ್ಚು ಮಾಡಿ ಮಾಡಲಾದ ಮದುವೆಯಲ್ಲಿ ಕೆಲವು ನೀತಿ-ನಿಯಮಗಳಿರುತ್ತಾವೆ, ಅದನ್ನು ಅರ್ಥ ಮಾಡಿಕೊಳ್ಳದೇ ಭದ್ರತಾ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದರೆ ಏನೂ ಪ್ರಯೋಜನ ಎಂದು ಶನಯಾ ಅವರನ್ನು ತರಾಟೆ ತೆಗೆದುಕೊಳ್ಳುತ್ತಿದ್ಧಾರೆ

Shanaya going off
byu/Jealous_Summer_4867 inBollyBlindsNGossip

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X