For Quick Alerts
  ALLOW NOTIFICATIONS  
  For Daily Alerts

  ಭಾರತದಲ್ಲಿ ಯಾರೂ ಪಡೆಯದಷ್ಟು ಸಂಭಾವನೆ ಪಡೆದ ಶಾರುಖ್ ಖಾನ್

  |

  ಭಾರತದ ನಟ ಅಕ್ಷಯ್ ಕುಮಾರ್ ವಿಶ್ವದಲ್ಲಿಯೇ ಅತಿ ಹೆಚ್ಚು ಗಳಿಸುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಫೋರ್ಬ್ಸ್ ತಯಾರಿಸಿದ್ದ ಪಟ್ಟಿಯಲ್ಲಿ ಅತಿ ಹೆಚ್ಚು ಹಣ ಗಳಿಸುವ ಟಾಪ್ ನೂರು ಸೆಲೆಬ್ರಿಟಿಗಳಲ್ಲಿ ಅಕ್ಷಯ್ ಕುಮಾರ್ ಬಿಟ್ಟರೆ ಇನ್ನಾವ ಭಾರತೀಯನ ಹೆಸರೂ ಇರಲಿಲ್ಲ.

  ಭಾರತದಲ್ಲಿ ಅತಿ ಹೆಚ್ಚು ಗಳಿಸುವ ನಟರಲ್ಲಿ ಅಕ್ಷಯ್ ಕುಮಾರ್ ಮೊದಲ ಸ್ಥಾನದಲ್ಲಿದ್ದಾರೆ. ಆದರೆ ಒಂದು ಸಿನಿಮಾಕ್ಕೆ ಅತಿ ಹೆಚ್ಚು ಸಂಭಾವನೆ ಪಡೆವ ನಟ ಅಕ್ಷಯ್ ಕುಮಾರ್ ಅಲ್ಲ. ಬದಲಿಗೆ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್.

  ಹೌದು, ಶಾರುಖ್ ಖಾನ್ ಅವರು ಬಾಲಿವುಡ್‌ನ ಸಲ್ಮಾನ್ ಖಾನ್, ಅಮೀರ್ ಖಾನ್, ಅಕ್ಷಯ್ ಕುಮಾರ್ ಇನ್ನಿತರರನ್ನು ಹಿಂದಕ್ಕೆ ಹಾಕಿ ಸಿನಿಮಾ ಒಂದಕ್ಕೆ ಅತಿ ಹೆಚ್ಚು ಸಂಭಾವನೆ ಪಡೆದ ನಟ ಎನಿಸಿಕೊಂಡಿದ್ದಾರೆ.

  ಬರೋಬ್ಬರಿ 100 ಕೋಟಿ ಸಂಭಾವನೆ ಪಡೆದ ಶಾರುಖ್

  ಬರೋಬ್ಬರಿ 100 ಕೋಟಿ ಸಂಭಾವನೆ ಪಡೆದ ಶಾರುಖ್

  ಶಾರುಖ್ ಖಾನ್ ಪ್ರಸ್ತುತ ನಟಿಸುತ್ತಿರುವ 'ಪಠಾಣ್' ಸಿನಿಮಾಕ್ಕೆ ಬರೋಬ್ಬರಿ 100 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಭಾರತದ ಇನ್ಯಾವ -ನಟ ಕೂಡಾ ಒಂದು ಸಿನಿಮಾಕ್ಕೆ ಇಷ್ಟೊಂದು ಹಣವನ್ನು ಸಂಭಾವನೆಯಾಗಿ ಪಡೆದಿಲ್ಲ.

  ಅತಿ ಹೆಚ್ಚು ಗಳಿಸುವ ನಟ ಅಕ್ಷಯ್ ಕುಮಾರ್

  ಅತಿ ಹೆಚ್ಚು ಗಳಿಸುವ ನಟ ಅಕ್ಷಯ್ ಕುಮಾರ್

  ಅಕ್ಷಯ್ ಕುಮಾರ್ ಅತಿ ಹೆಚ್ಚು ಹಣ ಗಳಿಸುವ ಭಾರತೀಯ ನಟ. ಆದರೆ ಅವರೂ ಸಹ ಒಂದು ಸಿನಿಮಾಕ್ಕೆ 100 ಕೋಟಿ ಹಣ ಪಡೆದಿಲ್ಲ. ಅಕ್ಷಯ್ ಒಂದು ವರ್ಷದಲ್ಲಿ ಆರೇಳು ಸಿನಿಮಾಗಳಲ್ಲಿ ನಟಿಸಿಬಿಡುತ್ತಾರೆ. ಆದರೆ ಶಾರುಖ್ , ಅಮೀರ್ ಅವರುಗಳು ವರ್ಷಕ್ಕೊಂದು ಅಥವಾ ಎರಡು ವರ್ಷಕ್ಕೆ ಒಂದು ಸಿನಿಮಾಗಳಲ್ಲಿ ಮಾತ್ರವೇ ನಟಿಸುತ್ತಾರೆ.

  ಬುರ್ಜ್ ಖಲೀಫಾದಲ್ಲಿ ಚಿತ್ರೀಕರಣ ಮಾಡಲಾಗಿದೆ

  ಬುರ್ಜ್ ಖಲೀಫಾದಲ್ಲಿ ಚಿತ್ರೀಕರಣ ಮಾಡಲಾಗಿದೆ

  'ಪಠಾಣ್' ಸಿನಿಮಾವು ಪಕ್ಕಾ ಆಕ್ಷನ್ ಕತೆಯುಳ್ಳ ಸಿನಿಮಾ ಆಗಿದ್ದು, ಈ ಸಿನಿಮಾಕ್ಕಾಗಿ ಹಲವಾರು ಅಪಾಯಕಾರಿ ಸ್ಟಂಟ್‌ಗಳಲ್ಲಿ ಶಾರುಖ್ ಖಾನ್ ಪಾಲ್ಗೊಂಡಿದ್ದಾರೆ. ವಿಶ್ವದ ಎತ್ತರದ ಹಾಗೂ ಐಶಾರಾಮಿ ಹೋಟೆಲ್ ಆದ ಬುರ್ಜ್ ಖಲೀಫಾದ ಒಳಗೆ 'ಪಠಾಣ್' ಸಿನಿಮಾದ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.

  Harshika ಜೊತೆ ಕನ್ನಡದ ಹಾಡನ್ನು ಹಾಡಿ ಮಿಂಚಿದ ನಟ Govinda | Filmibeat Kannada
  ಗೂಡಾಚಾರಿ ಏಜೆಂಟ್ ಕತೆ ಹೊಂದಿರುವ ಸಿನಿಮಾ

  ಗೂಡಾಚಾರಿ ಏಜೆಂಟ್ ಕತೆ ಹೊಂದಿರುವ ಸಿನಿಮಾ

  'ಪಠಾಣ್' ಸಿನಿಮಾವು ಗೂಡಾಚಾರಿ ಏಜೆಂಟ್‌ನ ಕತೆ ಹೊಂದಿದ್ದು ಸಿನಿಮಾದಲ್ಲಿ ಸಲ್ಮಾನ್ ಖಾನ್, ಹೃತಿಕ್ ರೋಷನ್ ಅವರುಗಳು ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ನಾಯಕಿ ದೀಪಿಕಾ ಪಡುಕೋಣೆ. ಸಿನಿಮಾದಲ್ಲಿ ಜಾನ್ ಅಬ್ರಹಾಂ ಸಹ ಇದ್ದಾರೆ. ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡುತ್ತಿದ್ದಾರೆ.

  English summary
  Sharukh Khan became highest paid actor of India. He took 100 crore rs remuneration for his upcoming movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X