ಕೊರೊನಾ ಎದುರಿಸಲು ನಾಲ್ಕಂತಸ್ತಿನ ಕಟ್ಟಡವನ್ನೇ ಬಿಟ್ಟುಕೊಟ್ಟ ಶಾರುಖ್ ಖಾನ್

ಕೊರೊನಾದಿಂದ ಇಡೀಯ ವಿಶ್ವವೇ ತತ್ತರಿಸಿದೆ. ಭಾರತವು ಕೊರೊನಾ ವಿರುದ್ಧ ಹೋರಾಡಲು ತನ್ನೆಲ್ಲಾ ಶಕ್ತಿಯನ್ನು ಒಟ್ಟುಮಾಡಿಕೊಂಡಿದೆ.

ಭಾರತೀಯರು ಸಹ ಸರ್ಕಾರಕ್ಕೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳು ಸಹ ಸರ್ಕಾರಕ್ಕೆ ನೆರವು ನೀಡುತ್ತಿದ್ದಾರೆ.

ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಅವರೂ ಸಹ ನೆರವಿನ ಮಹಾ ಪೂರವನ್ನೇ ಹರಿಸಿದ್ದು, ನಗದು ದೇಣಿಗೆ ಜೊತೆಯಾಗಿ ಏಳು ಭಿನ್ನ ನೆರವುಗಳನ್ನು ತನ್ನ ಒಡೆತನದ ಸಂಸ್ಥೆಗಳು, ಫೌಂಡೇಶನ್‌ಗಳ ಮೂಲಕ ಮಾಡುವುದಾಗಿ ಅವರು ಕೆಲವು ದಿನಗಳ ಹಿಂದಷ್ಟೆ ಘೋಷಿಸಿದ್ದಾರೆ. ಇದರ ಜೊತೆಗೆ ಇನ್ನೂ ದೊಡ್ಡ ನೆರವನ್ನು ಶಾರುಖ್ ಖಾನ್ ಮಹಾರಾಷ್ಟ್ರ ಸರ್ಕಾರಕ್ಕೆ ನೀಡಿದ್ದಾರೆ.

ಹೌದು, ಈಗಾಗಲೇ ದೊಡ್ಡ ಮಟ್ಟದ ನೆರವನ್ನೇ ನೀಡಿರುವ ಶಾರುಖ್ ಖಾನ್, ತಮ್ಮ ಕಚೇರಿಯನ್ನೇ ಸರ್ಕಾರಕ್ಕೆ ಬಿಟ್ಟುಕೊಡುವುದಾಗಿ ಹೇಳಿದ್ದಾರೆ.

ನಾಲ್ಕಂತಸ್ತಿನ ಕಟ್ಟಡವನ್ನೇ ಬಿಟ್ಟುಕೊಟ್ಟಿದ್ದಾರೆ

ನಾಲ್ಕಂತಸ್ತಿನ ಕಟ್ಟಡವನ್ನೇ ಬಿಟ್ಟುಕೊಟ್ಟಿದ್ದಾರೆ

ಹೌದು, ಕೊರೊನಾ ರೋಗಿಗಳನ್ನು, ಶಂಕಿತರನ್ನು ಕ್ವಾರೆಂಟೈನ್ ಮಾಡಲು ತನ್ನ ನಾಲ್ಕು ಮಹಡಿಯ ಐಶಾರಾಮಿ ಕಚೇರಿಯನ್ನೇ ಬಿಟ್ಟುಕೊಟ್ಟಿದ್ದಾರೆ. ಇದನ್ನು ಶಾರುಖ್ ಖಾನ್ ಮತ್ತು ಪತ್ನಿ ಗೌರಿ ಖಾನ್ ಅಧಿಕೃತವಾಗಿ ಘೋಷಿಸಿದ್ದಾರೆ.

ಶಾರುಖ್‌ ಗೆ ಧನ್ಯವಾದ ಹೇಳಿದ ಮುಂಬೈ ಮುನಿಸಿಪಲ್

ಶಾರುಖ್‌ ಗೆ ಧನ್ಯವಾದ ಹೇಳಿದ ಮುಂಬೈ ಮುನಿಸಿಪಲ್

ಶಾರುಖ್ ಖಾನ್ ನೀಡಿರುವ ನೆರವಿಗೆ ಮುಂಬೈ ಮುನಿಪಲ್ ಕಾರ್ಪೊರೇಷನ್ ಸಾಮಾಜಿಕ ಜಾಲತಾಣದಲ್ಲಿ ಧನ್ಯವಾದ ಸಹ ತಿಳಿಸಿದೆ. ನಾಲ್ಕಂತಸ್ತಿನ ಕಚೇರಿಯನ್ನು ಶಾರುಖ್ ಬಿಟ್ಟುಕೊಟ್ಟಿದ್ದಾರೆ. ಅಲ್ಲಿ ಕೆಲವು ಅಗತ್ಯ ವೈದ್ಯಕೀಯ ಪರಿಕರಗಳನ್ನೂ ಅವರು ಒದಗಿಸಿದ್ದಾರೆ ಎಂದು ಬಿಎಂಸಿ ಹೇಳಿದೆ.

ಮೂರು ರಾಜ್ಯ ಹಾಗೂ ಕೇಂದ್ರಕ್ಕೆ ನೆರವು ನೀಡಿದ ಖಾನ್

ಮೂರು ರಾಜ್ಯ ಹಾಗೂ ಕೇಂದ್ರಕ್ಕೆ ನೆರವು ನೀಡಿದ ಖಾನ್

ಶಾರುಖ್ ಖಾನ್ ಅವರು, ಪ್ರಧಾನಿ ರಿಲೀಫ್ ಫಂಡ್‌ ಗೆ ದೇಣಿಗೆ ನೀಡುವ ಜೊತೆಗೆ. ದೆಹಲಿ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಪ್ರತ್ಯೇಕವಾಗಿ ನೆರವು ಘೋಷಿಸಿದ್ದಾರೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಶಾರುಖ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಫೌಂಡೇಶನ್‌ನಿಂದ ಹಲವು ಉತ್ತಮ ಕಾರ್ಯ

ಫೌಂಡೇಶನ್‌ನಿಂದ ಹಲವು ಉತ್ತಮ ಕಾರ್ಯ

ಅಷ್ಟೆ ಅಲ್ಲದೆ ತಮ್ಮ ಫೌಂಡೇಶನ್‌ ನಿಂದ ದಿನಗೂಲಿ ಕಾರ್ಮಿಕರು, ಬಡವರಿಗೆ ಲಾಕ್‌ ಡೌನ್ ಸಮಯದಲ್ಲಿ ದಿನಸಿ ಪೂರೈಕೆ, ಆಹಾರ ಪೂರೈಕೆ ಮಾಡುತ್ತಿದ್ದಾರೆ. ಸಿನಿಮಾ ದಿನಗೂಲಿ ನೌಕರರಿಗೆ ಆರ್ಥಿಕ ನೆರವು ನೀಡಿದ್ದಾರೆ. ಜೊತೆಗೆ ವೈದ್ಯಕೀಯ ಸಾಮಗ್ರಿಗಳನ್ನು ಖರೀದಿಸಿ ಆಸ್ಪತ್ರೆಗಳಿಗೆ ಉಚಿತವಾಗಿ ನೀಡುತ್ತಿದ್ದಾರೆ.

More from Filmibeat

English summary
Actor Sharukh Khan shower helps to fight coronavirus. He gave his four-store building to Mumbai municipal to fight coronavirus.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X