For Quick Alerts
  ALLOW NOTIFICATIONS  
  For Daily Alerts

  ಅಭಿಷೇಕ್ ಬಚ್ಚನ್ ವೈಫಲ್ಯ ಮತ್ತು ಶಾರುಖ್ ಖಾನ್ ಕೊಟ್ಟಿದ್ದ ಸಲಹೆ

  |

  ನಟ ಅಭಿಷೇಕ್ ಬಚ್ಚನ್ ಸಿನಿಮಾ ವೃತ್ತಿ ಬಹಳ ವೈರುಧ್ಯಗಳಿಂದ ಕೂಡಿದೆ. ಚಾಲೆಂಜಿಂಗ್ ಎನ್ನಬಹುದಾದ ಹಲವು ಪಾತ್ರಗಳನ್ನು ಅಭಿಯಿಸಿ ತಮ್ಮ ಪ್ರತಿಭೆ ಸಾಬೀತು ಮಾಡಿದ್ದಾರಾದರೂ ವಿಜಯಲಕ್ಷ್ಮಿ ಅವರ ಕೈಹಿಡಿದಿಲ್ಲ.

  ಅಭಿಷೇಕ್ ಎಷ್ಟೇ ಒಳ್ಳೆಯ ಅಭಿನಯ ಮಾಡಿದ್ದರೂ, ಅವರ ತಂದೆ ಅಮಿತಾಭ್ ಜೊತೆ ಹೋಲಿಕೆ ಒಳಗಾಗುತ್ತಾರೆ. ಇದೇ ಅವರು ಎದುರಿಸುತ್ತಿರುವ ಬಹುದೊಡ್ಡ್ ಸಮಸ್ಯೆ.

  ಸತತ ಸೋಲುಗಳನ್ನು ಕಂಡು ಇನ್ನೇನು ಬಾಲಿವುಡ್‌ನಿಂದ ದೂರವಾದರು ಎಂದುಕೊಂಡಾಗ ಮತ್ತೊಂದು ಸಿನಿಮಾ ಜೊತೆಗೆ ವಾಪಸ್ ಬರುತ್ತಾರೆ. ಒಂದು ಯಶಸ್ಸಿನ ನಂತರ ಮತ್ತೆ ಸತತ ಸೋಲುಗಳು ಅವರ ಬೆನ್ನು ಬೀಳುತ್ತವೆ. ಕೆಲ ವರ್ಷಗಳಿಂದ ಅವಕಾಶಗಳ ಕೊರತೆ ಎದುರಿಸಿದ್ದ ಅಭಿಷೇಕ್ ಇತ್ತೀಚಿನ ಸಂದರ್ಶನವೊಂದರಲ್ಲಿ ಆ ಬಗ್ಗೆ ಮಾತನಾಡಿದ್ದಾರೆ. ಶಾರುಖ್ ಖಾನ್ ನೀಡಿದ್ದ ಸಲಹೆಯನ್ನೂ ಸಹ ನೆನಪಿಸಿಕೊಂಡಿದ್ದಾರೆ.

  ಶಾರುಖ್ ಖಾನ್ ಜೊತೆ ಆತ್ಮೀಯ ಸ್ನೇಹ

  ಶಾರುಖ್ ಖಾನ್ ಜೊತೆ ಆತ್ಮೀಯ ಸ್ನೇಹ

  ಅಭಿಷೇಕ್ ಬಚ್ಚನ್ ನಟರಾಗುವ ಮುಂಚೆಯೇ ಶಾರುಖ್ ಖಾನ್ ಜೊತೆಗೆ ಆಪ್ತ ಗೆಳೆತನ ಹೊಂದಿದ್ದರು. ಅಭಿಷೇಕ್ ನಟರಾಗುವ ನಿರ್ಣಯ ಮಾಡಿದ ಮೇಲೆ ಅದಾಗಲೇ ದೊಡ್ಡ ಹೆಸರು ಗಳಿಸಿದ್ದ ಶಾರುಖ್ ಖಾನ್ ಒಂದು ಸಲಹೆ ಕೊಟ್ಟಿದ್ದರಂತೆ. ಅದನ್ನು ಈಗಲೂ ಪಾಲಿಸುತ್ತೇನೆ ಎಂದಿದ್ದಾರೆ ಅಭಿಷೇಕ್.

  ಶಾರುಖ್ ಖಾನ್ ನೀಡಿದ್ದ ಸಲಹೆ

  ಶಾರುಖ್ ಖಾನ್ ನೀಡಿದ್ದ ಸಲಹೆ

  'ನೀನು ಯಾವ ಪಾತ್ರ ಮಾಡುತ್ತೀಯೋ ಆ ಪಾತ್ರವನ್ನು ಇಷ್ಟಪಡು. ನಿನಗೆ ಇಷ್ಟ ಎನಿಸದ ಪಾತ್ರವನ್ನು ಮಾಡಲೇ ಹೋಗಬೇಡ' ಎಂದು ಶಾರುಖ್ ಖಾನ್, ಅಭಿಷೇಕ್‌ ಗೆ ಹೇಳಿದ್ದರಂತೆ. ಆ ಸಲಹೆಯನ್ನು ಈಗಲೂ ಪಾಲಿಸುತ್ತಾರೆ ಅಭಿಷೇಕ್.

  ಅವಕಾಶಗಳ ಕೊರತೆ ಎಲ್ಲರಿಗೂ ಕಾಡುತ್ತದೆ: ಅಭಿಷೇಕ್

  ಅವಕಾಶಗಳ ಕೊರತೆ ಎಲ್ಲರಿಗೂ ಕಾಡುತ್ತದೆ: ಅಭಿಷೇಕ್

  ಅವಕಾಶಗಳ ಕೊರತೆ ಬಗ್ಗೆಯೂ ಮಾತನಾಡಿರುವ ಅಭಿಷೇಕ್ ಬಚ್ಚನ್, 'ಅವಕಾಶಗಳ ಕೊರತೆ ಎಂಬುದು ಎಲ್ಲಾ ನಟರಿಗೂ ಒಂದಲ್ಲಾ ಒಂದು ಸಮಯದಲ್ಲಿ ಕಾಡುತ್ತದೆ. ಆದರೆ ನನಗೆ ಅದು ಹೆಚ್ಚಾಗೇನೂ ಕಾಡಲಿಲ್ಲ. ಒಟಿಟಿ ಅಥವಾ ಸಿನಿಮಾ ಆಗಲಿ ಅವಕಾಶಗಳು ದೊರುಕುತ್ತಲೇ ಇತ್ತು' ಎಂದಿದ್ದಾರೆ.

  ಲೂಡೋ ಸಿನಿಮಾ ಬಿಡುಗಡೆಗೆ ರೆಡಿ

  ಲೂಡೋ ಸಿನಿಮಾ ಬಿಡುಗಡೆಗೆ ರೆಡಿ

  ನಟ ಅಭಿಷೇಕ್ ಬಚ್ಚನ್ ಅಭಿನಯದ, ಅನುರಾಗ್ ಬಸು ನಿರ್ದೇಶನದ 'ಲೂಡೊ' ಸಿನಿಮಾದ ಬಿಡುಗಡೆಗೆ ತಯಾರಾಗಿದೆ. ಅಮೆಜಾನ್ ಪ್ರೈಂ ನ ಬ್ರೀತ್ ವೆಬ್ ಸರಣಿಯಲ್ಲಿ ಸಹ ಅಭಿಷೇಕ್ ನಟಿಸಿದ್ದರು. ಅನುರಾಗ್ ಕಶ್ಯಪ್ ನಿರ್ದೇಶನದ ಗುಲಾಬ್ ಜಾಮೂನ್ ಸಿನಿಮಾದಲ್ಲಿಯೂ ಅಭಿಷೇಕ್ ನಟಿಸುತ್ತಿದ್ದಾರೆ.

  English summary
  Sharukh Khan gave advice to Abhishek Bachchan before he became as actor. He still follow it.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X