ಸತ್ತ ತಾಯಿಯನ್ನು ಎಬ್ಬಿಸುತ್ತಿದ್ದ ಪುಟ್ಟ ಕಂದಮ್ಮನ ಕೈ ಹಿಡಿದ ಶಾರುಖ್ ಖಾನ್
ರೈಲ್ವೆ ನಿಲ್ದಾಣದಲ್ಲಿ ಅಸುನೀಗಿದ ತನ್ನ ತಾಯಿಯನ್ನನು ಎಬ್ಬಿಸಲು ಹೆಣಗಾಡುತ್ತಿದ್ದ ಪುಟ್ಟ ಕಂದಮ್ಮನ ವಿಡಿಯೋ ಇತ್ತೀಚೆಗೆ ಭಾರಿ ವೈರಲ್ ಆಗಿತ್ತು.
Recommended Video
ತಾಯಿ ಸತ್ತಿದ್ದಾಳೆಂದು ಅರಿವಿಲ್ಲದ ಆ ಮಗು ತಾಯಿಯ ಮೇಲೆ ಹೊದಿಸಲಾಗಿದ್ದ ಹರಿದ ಕಂಬಳಿಯನ್ನು ಸರಿಸುತ್ತಾ ಆಕೆಯನ್ನು ಎಬ್ಬಿಸಲು ಯತ್ನಿಸುತ್ತಿತ್ತು. ಈ ವಿಡಿಯೋ ಕೋಟ್ಯಂತರ ಜನರ ಮನಸ್ಸು ಕರಗಿಸಿತ್ತು. ಈ ವಿಡಿಯೋ ದೇಶದ ಕಾರ್ಮಿಕರ ಹೀನಾಯ ಪರಿಸ್ಥಿತಿಯನ್ನು ಬಿಂಬಿಸುತ್ತಿತ್ತು.
ಆ ವಿಡಿಯೋ ನೋಡಿ ನೊಂದವರಲ್ಲಿ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಸಹ ಒಬ್ಬರು. ತಾಯಿಯನ್ನು ಕಳೆದುಕೊಂಡಿರುವ ಪ್ರಪಂಚನ್ನೇ ಅರಿಯದ ಆ ಪುಟ್ಟ ಕಂದಮ್ಮನಿಗೆ ಸಹಾಯ ಹಸ್ತವನ್ನು ಶಾರುಖ್ ಖಾನ್ ಚಾಚಿದ್ದಾರೆ.

ಶಾರುಖ್ ಖಾನ್‌ರ ಮೀರ್ ಫೌಂಡೇಶನ್ ಸಹಾಯ
ರೈಲ್ವೆ ಸ್ಟೇಶನ್‌ನಲ್ಲಿ ತಾಯಿಯನ್ನು ಕಳೆದುಕೊಂಡು ಅನಾಥವಾದ ಆ ಕಂದಮ್ಮನಿಗೆ ಶಾರುಖ್ ಖಾನ್ ತಮ್ಮ ಮೀರ್ ಫೌಂಡೇಶನ್ ವತಿಯಿಂದ ಸಹಾಯ ಮಾಡುತ್ತಿದ್ದಾರೆ. ಈ ಬಗ್ಗೆ ಮೀರ್ ಫೌಂಡೇಶನ್ ಮತ್ತು ಶಾರುಖ್ ಖಾನ್ ಟ್ವೀಟ್ ಮಾಡಿದ್ದಾರೆ.

ಆ ಕಂದ ಈಗ ತಾತನ ಪೋಷಣೆಯಲ್ಲಿದೆ
ಆ ಕಂದಮ್ಮ ಈಗ ತಮ್ಮ ತಾತನ ಪೋಷಣೆಯಲ್ಲಿದೆ. ಅದನ್ನು ಹುಡುಕಿರುವ ಮೀರ್ ಫೌಂಡೇಶನ್, ಮಗುವಿ ನ ಶಿಕ್ಷಣ ಮತ್ತು ಇತರೆಗಳಿಗೆ ಆಗಬಹುದಾದ ವೆಚ್ಚವನ್ನು ಭರಿಸುವುದಾಗಿ ಒಪ್ಪಿಕೊಂಡಿದೆ ಎನ್ನಲಾಗುತ್ತಿದೆ. ಕಂದನ ನೋಡಿಕೊಳ್ಳುತ್ತಿರುವ ಕುಟುಂಬಕ್ಕೆ ಆರ್ಥಿಕ ಸಹಾಯವನ್ನೂ ನೀಡಲಾಗಿದೆ.

ಆ ನೋವು ನನಗೆ ಗೊತ್ತಿದೆ: ಶಾರುಖ್
ಈ ಬಗ್ಗೆ ಟ್ವೀಟ್ ಮಾಡಿರುವ ಶಾರುಖ್ ಖಾನ್, 'ಆ ಮಗುವನ್ನು ಹುಡುಕಲು ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ. ಕಣ್ಣ ಎದುರೇ ತಾಯಿಯನ್ನು ಕಳೆದುಕೊಂಡ ಆ ಮಗುವಿಗೆ ಭಗವಂತ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಪೋಷಕರನ್ನು ಕಳೆದುಕೊಳ್ಳುವ ನೋವು ಏನೆಂದು ನನಗೆ ಗೊತ್ತು, ನನ್ನ ಬೆಂಬಲ ಮತ್ತು ಪ್ರೀತಿ ಆ ಮಗುವಿಗೆ ಸದಾ ಇರುತ್ತದೆ' ಎಂದು ಶಾರುಖ್ ಬರೆದಿದ್ದಾರೆ.

ಶ್ರಮಿಕ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ
ಮೃತಪಟ್ಟ ಮಹಿಳೆ ಕಾರ್ಮಿಕಳಾಗಿದ್ದು, ಗುಜರಾತ್ ನ ಅಹ್ಮದಾಬಾದ್‌ನಿಂದ ವಿಶೇಷ ಶ್ರಮಿಕ್ ರೈಲಿನಲ್ಲಿ ಬಿಹಾರ್ ಗೆ ಪ್ರಯಾಣ ಮಾಡುತ್ತಿದ್ದಳು. ತೀವ್ರ ಬಿಸಿ ಅನುಭವಿಸಿ ನೀರು, ಸೂಕ್ತ ಆಹಾರ ಸಿಗದೆ ತೊಂದರೆ ಪಟ್ಟು ಮೃತಪಟ್ಟಳೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದರು. ಆಕೆಯ ಶವವನ್ನು ಮುಜಪ್ಪರ್‌ನಗರ ರೈಲ್ವೆ ನಿಲ್ದಾಣದಲ್ಲಿ ಇಡಲಾಗಿತ್ತು. ಆಗ ಆಕೆಯ ಮಗು ತಾಯಿಯನ್ನು ಎಬ್ಬಿಸುವ ಪ್ರಯತ್ನ ಮಾಡಿದ ವಿಡಿಯೋ ಭಾರಿ ವೈರಲ್ ಆಗಿತ್ತು.


Click it and Unblock the Notifications











