For Quick Alerts
  ALLOW NOTIFICATIONS  
  For Daily Alerts

  ಶಾರುಖ್ ಖಾನ್ ಬಂಗಲೆಯಲ್ಲಿ ವರುಣ್ ಧವನ್ ಮದುವೆ ಸಂಭ್ರಮ

  |

  ಬಾಲಿವುಡ್ ನಟ ವರುಣ್ ಧವನ್ ಹಾಗೂ ನತಾಶಾ ದಲಾಲ್ ಜೊತೆಗೆ ಜನವರಿ 24 ರಂದು ವಿವಾಹವಾಗಲಿದ್ದಾರೆ. ಇಂದು ಎರಡೂ ಕುಟುಂಬದ ಸದಸ್ಯರು, ಕೆಲವು ಆಪ್ತೇಷ್ಟರು ಮದುವೆ ನಡೆಯಲಿರುವ ಅಲಿಭಾಗ್‌ಗೆ ಸೇರಿಕೊಂಡಿದ್ದಾರೆ.

  ಮುಂಬೈ ಸಮೀಪವೇ ಸಮುದ್ರ ತೀರದಲ್ಲಿನ ಪಟ್ಟಣ ಅಲಿಭಾಗ್‌ ನಲ್ಲಿ ನಿಯಮಿತ ಅತಿಥಿಗಳೊಂದಿಗೆ ಅದ್ಧೂರಿಯಾಗಿ ವರುಣ್ ಧವನ್ ಹಾಗೂ ನತಾಶಾ ಮದುವೆ ಬರೋಬ್ಬರಿ ಐದು ದಿನಗಳ ಕಾಲ ನಡೆಯಲಿದೆ.

  ಅಲಿಭಾಗ್‌ ನ ದಿ ಮ್ಯಾನ್ಶನ್‌ ಹೌಸ್ ಐಶಾರಾಮಿ ಹೋಟೆಲ್‌ನಲ್ಲಿ ವರುಣ್ ಧವನ್ ಹಾಗೂ ನತಾಶಾ ವಿವಾಹ ನಡೆಯಲಿದೆ. ಮ್ಯಾನ್‌ಶನ್ ಹೌಸ್ ಮಾತ್ರವೇ ಅಲ್ಲದೆ ಮದುವೆ ಸಂಭ್ರಮದ ಕಳೆ ಶಾರುಖ್ ಖಾನ್ ರ ಬಂಗಲೆಯಲ್ಲೂ ನಳನಳಿಸಲಿದೆ.

  ಮದುವೆ ಬುಕ್ ಮಾಡಿಕೊಂಡಿರುವ ದಿ ಮ್ಯಾನ್‌ಶನ್‌ ಹೌಸ್ ಹಾಗೂ ಶಾರುಖ್ ರ ಅದ್ಧೂರಿ ಅಲಿಭಾಗ್ ಬಂಗಲೆ ಬಹಳ ಸಮೀಪದಲ್ಲಿಯೇ ಇದ್ದು, ವರುಣ್ ಧವನ್ ಕುಟುಂಬವು ಮದುವೆ ಸಂಭ್ರಮಕ್ಕೆ ಶಾರುಖ್ ಖಾನ್ ಬಂಗಲೆಯನ್ನೂ ಬಳಸಿಕೊಳ್ಳಲಿದೆ ಎನ್ನಲಾಗುತ್ತಿದೆ.

  ಶಾರುಖ್ ಖಾನ್ ಸಹ ತಮ್ಮ ಕಿರಿಯ ಸಹೋದ್ಯೋಗಿಗಾಗಿ ತಮ್ಮ ಬಂಗಲೆಯನ್ನು ಬಿಟ್ಟುಕೊಟ್ಟಿದ್ದು, ಮದುವೆಯ ಕೆಲವು ಕಾರ್ಯಕ್ರಮಗಳು ಶಾರುಖ್ ಖಾನ್ ರ ಬಂಗಲೆಯಲ್ಲಿ ಸಹ ನಡೆಯಲಿದೆಯಂತೆ.

  ಮದುವೆಯಲ್ಲಿ ಕೆಲವು ಆಪ್ತೇಷ್ಟರನ್ನಷ್ಟೆ ವರುಣ್ ಧವನ್ ಹಾಗೂ ತಂದೆ ಡೇವಿಡ್ ಧವನ್ ಆಹ್ವಾನಿಸಿದ್ದಾರೆ. ಮದುವೆ ಸಂಭ್ರಮದಲ್ಲಿ ಮೊಬೈಲ್ ಹಾಗೂ ಕ್ಯಾಮೆರಾ ಬಳಕೆ ನಿಷೇಧಿಸಲಾಗಿದೆಯಂತೆ. ಚಿತ್ರ ಹಾಗೂ ವಿಡಿಯೋದ ಜವಾಬ್ದಾರಿ ನಿರ್ದಿಷ್ಟ ಸಂಸ್ಥೆಯವರಿಗೆ ನೀಡಲಾಗಿದ್ದು, ಅವರನ್ನು ಹೊರತುಪಡಿಸಿ ಇನ್ನಾರೂ ಸಹ ಫೊಟೊ-ವಿಡಿಯೋ ತೆಗೆಯುವಂತಿಲ್ಲ.

  ಈ ಸಾಧನೆ ಮಾಡಿದ ಮೊದಲ ಕನ್ನಡಿಗ ಸುದೀಪ್ | Filmibeat Kannada

  ವಿವಾಹ ಮುಗಿಸಿದ ಬಳಿಕ ಈ ಜೋಡಿ ಮಧುಚಂದ್ರಕ್ಕೆ ಟರ್ಕಿಗೆ ತೆರಳಿದೆ ಎನ್ನಲಾಗುತ್ತಿದೆ.

  English summary
  Sharukh Khan opens his Alibag banglow for Varun Dhawan and Natasha's wedding.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X