ಶಾರುಖ್ ಖಾನ್ ಮಗಳ ಕಪ್ಪು ತ್ವಚೆ ಹಾಗೂ ಗಟ್ಟಿ ಗುಂಡಿಗೆ

ಶಾರುಖ್ ಖಾನ್ ವಿಶ್ವದಲ್ಲೇ ಸುಂದರ ವ್ಯಕ್ತಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಳ್ಳುತ್ತಾರೆ. ಆದರೆ ಶಾರುಖ್ ಮಗಳು ಸುಹಾನಾ ಖಾನ್ ಅನ್ನು ಆಕೆಯ ತ್ವಚೆಯ ಬಣ್ಣದ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಮೂದಲಿಸಲಾಗುತ್ತದೆ.

ಕೆಲ ವರ್ಷಗಳ ಹಿಂದಷ್ಟೆ ಕೆಕೆಆರ್ ಸೋಲಿಗೆ ಹೆದರಿ ಅಪ್ಪನ ಕಾಲು ತಬ್ಬಿ ಹಿಡಿದಿದ್ದ ಪುಟ್ಟ ಬಾಲಕಿ ಸುಹಾನಾ ಈಗ ಬೆಳೆದ ಯುವತಿ, ತನ್ನ ವಯಸ್ಸಿನ ಯುವತಿಯರೆಲ್ಲಾ ಬೆಳ್ಳಗಾಗಲು, ಚಂದ ಕಾಣಲು ನಾನಾ ತಾಪತ್ರಯಗಳು ಪಡುತ್ತಿದ್ದರೆ, ಸುಹಾನಾ 'ಹೌದು ಕಪ್ಪಗಿದ್ದೇನೆ, ಏನಿವಾಗ?' ಎಂದು ಪ್ರಶ್ನಿಸುವ ಧೈರ್ಯ ತೋರಿದ್ದಾಳೆ.

ತನ್ನ ಬಣ್ಣವನ್ನು ಟೀಕಿಸಿದ, ಮೂದಲಿಸಿದ ಕಮೆಂಟ್‌ಗಳನ್ನೆಲ್ಲಾ ಒಟ್ಟು ಮಾಡಿ ಸಾಮಾಜಿಕ ಹಂಚಿಕೊಂಡಿದ್ದಾರೆ ಸುಹಾನಾ, ಆ ಕಮೆಂಟ್‌ಗಳಿಗೆ ತಮಾಷೆಯಾಗಿ ಉತ್ತರಗಳನ್ನೂ ನೀಡಿದ್ದಾರೆ. ಕೇವಲ 20 ವರ್ಷದ ಹುಡುಗಿ ಸುಹಾನಾ ಖಾನ್ ದೊಡ್ಡ ಪ್ರಬುದ್ಧತೆಯನ್ನೇ ಪ್ರದರ್ಶಿಸಿದ್ದಾರೆ.

Sharukh Khans Daughter Faces Hate Over Skin Colour In Social Media

ನಾನು ಎದುರಿಸುತ್ತಿರುವ ಈ ಮೂದಲಿಕೆಯನ್ನು ಭಾರತದ ಹಲವಾರು ಯುವಕ/ಯುವತಿಯರು ಎದುರಿಸಿದ್ದಾರೆ ನಾನು ಮೊದಲೇನಲ್ಲ. ಬೆಳೆಯುತ್ತಿರುವ ಯುವಕ/ಯುವತಿಯರು ತಮ್ಮ ಬಣ್ಣದ ಕಾರಣಕ್ಕೆ ಕೀಳರಿಮೆಗೆ ಗುರಿಯಾಗುವಂತೆ ಮಾಡಲಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಸುಹಾನಾ ಖಾನ್.

Sharukh Khans Daughter Faces Hate Over Skin Colour In Social Media

ನನ್ನ ಮೈಬಣ್ಣದ ಕಾರಣದಿಂದ ನನ್ನನ್ನು ಕೆಟ್ಟಗಿದ್ದಾಳೆ ಎನ್ನಲಾಗುತ್ತದೆ. ನಾವು ಭಾರತೀಯರು ನಾವಿರುವುದೇ ಹೀಗೆ, ಹೌದು, ಕೆಲವರು ಬೇರೆ-ಬೇರೆ ಬಣ್ಣಗಳನ್ನು ಪಡೆದು ಹುಟ್ಟುತ್ತಾರೆ ಆದರೆ ನಾವೆಷ್ಟೇ ಪ್ರಯತ್ನ ಪಟ್ಟರು ಚರ್ಮದ ಬಣ್ಣ ಅಳಿಸಲಾಗದು ಎಂದಿದ್ದಾರೆ ಸುಹಾನಾ.

Sharukh Khans Daughter Faces Hate Over Skin Colour In Social Media

ಸುಹಾನಾ ಬಣ್ಣದ ಬಗ್ಗೆ ಬಹು ಕೀಳಾಗಿ ಮಾಡಲಾಗಿರುವ ಕಮೆಂಟ್‌ಗಳನ್ನು ಸಹ ಅವರು ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಹಿಂದಿಯಲ್ಲಿರುವ ಕಮೆಂಟ್‌ಗಳಿಗೆ ಇಂಗ್ಲಿಷ್ ಅರ್ಥವನ್ನೂ ಬರೆದಿದ್ದಾರೆ. ಹಾಗೂ ಕಮೆಂಟ್‌ಗಳಿಗೆ ತಮಾಷೆಯ ಉತ್ತರಗಳನ್ನೂ ಸಹ ಬರೆದಿದ್ದಾರೆ.

Sharukh Khans Daughter Faces Hate Over Skin Colour In Social Media

ಸುಹಾನಾ ಖಾನ್ ತಮ್ಮ ಬಣ್ಣದಿಂದಾಗಿ ತಾವು ಎದುರಿಸುತ್ತಿರುವ ಮೂದಲಿಕೆಯ ಬಗ್ಗೆ ಬಹಿರಂಗವಾಗಿ ಮಾತನಾಡಿರುವ ಪ್ರಬುದ್ಧವಾಗಿ ಎದುರಿಸಿರುವ ಬಗ್ಗೆ ಹಲವು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

More from Filmibeat

English summary
Sharukh Khan's daughter Suhana Khan faces hate over her skin color on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X