ಸುಶಾಂತ್ ಸಿಂಗ್‌ಗೆ ಅವಮಾನ ಮಾಡಿದ್ದ ಶಾರುಖ್ ಖಾನ್: ವಿಡಿಯೋ ವೈರಲ್

ಸುಶಾಂತ್ ಸಿಂಗ್ ಸಾವಿನ ಬೆನ್ನಲ್ಲೆ ಸುಶಾಂತ್ ಅವರ ಹಲವು ಹಳೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಸುಶಾಂತ್ ಅವರೊಂದಿಗೆ ಬಾಲಿವುಡ್‌ನ ಯಾವ ನಟ-ನಟಿ ಹೇಗೆ ನಡೆದುಕೊಂಡಿದ್ದರು, ಸುಶಾಂತ್ ಬಗ್ಗೆ ಹೇಗೆ ಮಾತನಾಡಿದ್ದರು ಎಂಬುದನ್ನು ತೋರಿಸಲು ಈ ವಿಡಿಯೋಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಕಾಫಿ ವಿತ್ ಕರಣ್‌ನಲ್ಲಿ ಸುಶಾಂಗ್ ಬಗ್ಗೆ ಯಾವ ನಟಿ ಹೇಗೆ ಹೇಳಿದ್ದರು ಎಂಬ ವಿಡಿಯೋಗಳು ಹರಿದಾಡುತ್ತಿವೆ. ಅವಾರ್ಡ್‌ ಕಾರ್ಯಕ್ರಮಗಳಲ್ಲಿ ಸುಶಾಂತ್ ಅವರನ್ನು ಹೇಗೆ ನಡೆಸಿಕೊಳ್ಳಲಾಗಿತ್ತು ಎಂಬ ವಿಡಿಯೋ ಸಹ ಹರಿದಾಡುತ್ತಿದೆ.

ಅವಾರ್ಡ್ ಶೋ ಒಂದರಲ್ಲಿ ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಸುಶಾಂತ್ ಅವರಿಗೆ ಅವಮಾನವಾಗುವ ರೀತಿಯಲ್ಲಿ ಮಾತನಾಡಿರುವ ವಿಡಿಯೋ ಇದೀಗ ಹರಿದಾಡುತ್ತಿದೆ.

ಐಫಾ ಅವಾರ್ಡ್ ಕಾರ್ಯಕ್ರಮದಲ್ಲಿ ಘಟನೆ

ಐಫಾ ಅವಾರ್ಡ್ ಕಾರ್ಯಕ್ರಮದಲ್ಲಿ ಘಟನೆ

ಶಾರುಖ್ ಖಾನ್ ಹಾಗೂ ಶಾಹಿದ್ ಕಪೂರ್ ಒಟ್ಟಿಗೆ ಪ್ರತಿಷ್ಠಿತ ಐಫಾ ಅವಾರ್ಡ್ಸ್ ಕಾರ್ಯಕ್ರಮವನ್ನು ನಿರೂಪಕರಾಗಿ ನಡೆಸಿಕೊಡುತ್ತಿದ್ದರು. ಮುಂದೆ ಅತಿಥಿಗಳ ಸಾಲಿನಲ್ಲಿ ಯುವ ನಟ ಆಗಷ್ಟೆ ಚಿತ್ರರಂಗ ಪ್ರವೇಶಿಸಿದ್ದ ಸುಶಾಂತ್ ಸಿಂಗ್ ಕೂತಿದ್ದರು.

ವೇದಿಕೆಗೆ ಕರೆದ ಶಾರುಖ್, ಶಾಹಿದ್

ವೇದಿಕೆಗೆ ಕರೆದ ಶಾರುಖ್, ಶಾಹಿದ್

ಅವರನ್ನು ವೇದಿಕೆ ಮೇಲೆ ಕರೆದ ಶಾರುಖ್ ಹಾಗೂ ಸಹ ನಿರೂಪಕ ಶಾಹಿದ್ ಕಪೂರ್ ಬಹಳ ವ್ಯಂಗ್ಯವಾಗಿ, ಅವಮಾನಕಾರಿ ರೀತಿಯಲ್ಲಿ ಸುಶಾಂತ್ ಬಗ್ಗೆ ಮಾತನಾಡಿದ್ದರು. ಆ ವಿಡಿಯೋ ಇದೀಗ ವೈರಲ್ ಆಗಿದ್ದು, ಜನರೆಲ್ಲಾ ಸ್ಟಾರ್ ನಟರ ಅಹಂಕಾರಕ್ಕೆ ಚೀಮಾರಿ ಹಾಕುತ್ತಿದ್ದಾರೆ.

ವ್ಯಂಗ್ಯ ಮಾಡುವ ಶಾಹಿದ್ ಕಪೂರ್

ವ್ಯಂಗ್ಯ ಮಾಡುವ ಶಾಹಿದ್ ಕಪೂರ್

ಸುಶಾಂತ್ ಅನ್ನು ವೇದಿಕೆಗೆ ಕರೆದ ಶಾರುಖ್, ನಿನ್ನದು ಹೆಸರೋ ಅಥವಾ ವಿಳಾಸವೋ ಎಂದು ಶಾರುಖ್ ಖಾನ್ ಕೇಳಿದ್ದರು. 'ಏನೋ ಚೂರು ಚೆನ್ನಾಗಿ ಡಾನ್ಸ್, ನಟನೆ ಮಾಡುತ್ತಾನೆಂದು ಜನ ಹೇಳುತ್ತಾರೆ' ಎಂದು ಅತ್ಯಂತ ವ್ಯಂಗ್ಯದಿಂದ ಕಾಲೆಳೆಯುತ್ತಾರೆ ಶಾಹಿದ್ ಕಪೂರ್.

ಮನೆಯವರಷ್ಟೆ ಇವನನ್ನು ಹೊಗಳುತ್ತಾರೆ ಎಂದಿದ್ದ ಶಾರುಖ್

ಮನೆಯವರಷ್ಟೆ ಇವನನ್ನು ಹೊಗಳುತ್ತಾರೆ ಎಂದಿದ್ದ ಶಾರುಖ್

ಇದಕ್ಕೆ ಪ್ರತಿಕ್ರಿಯಿಸುವ ಶಾರುಖ್ ಇವನ ಮನೆಯ ನಾಲ್ಕಾರು ಮಂದಿ ಹೇಳುತ್ತಿರಬೇಕಷ್ಟೆ ಎಂದು ಹೇಳಿ ದೊಡ್ಡದಾಗಿ ನಗುತ್ತಾರೆ. ಎದುರಿಗೆ ಕೂತಿದ್ದ ನೂರಾರು-ಸಾವಿರಾರು ಮಂದಿಯೂ ನಗುತ್ತಾರೆ. ಇಬ್ಬರ ವ್ಯಂಗ್ಯದ ಮಾತುಗಳನ್ನು ಕೇಳುತ್ತಾ ಸಣ್ಣಗೆ ನಗುತ್ತಾ ಸುಮ್ಮನಿರುತ್ತಾರೆ ಸುಶಾಂತ್.

ಈಗ ವೈರಲ್ ಆಗಿರುವ ವಿಡಿಯೋ

ಈಗ ವೈರಲ್ ಆಗಿರುವ ವಿಡಿಯೋ

ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಸ್ಟಾರ್ ನಟರು ಸುಶಾಂತ್ ಅನ್ನು ಬಾಲಿವುಡ್‌ನವನು, ಸಹ ನಟ ಎಂದು ಒಪ್ಪಿಕೊಂಡಿರಲಿಲ್ಲ, ಮಧ್ಯವರ್ಗದ ಕುಟುಂಬದಿಂದ ಬಂದಿದ್ದ ಅವನ ಬಗ್ಗೆ ಅತೀವವಾದ ಅಸಹನೆ ಇತ್ತು ಎಂದು ಅವರು ಹೇಳಿದ್ದಾರೆ.

More from Filmibeat

English summary
A old video went viral in that Sharukh Khan and Shahid Kapoor insulting Sushant Singh Rajput in a award show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X