ರಿಶಿ ಕಪೂರ್ ನೆನೆದು ಭಾವುಕ ಪತ್ರ ಬರೆದ ಶಾರುಖ್ ಖಾನ್
ನಟ ಶಾರುಖ್ ಖಾನ್ ಇಂದು ಕಿಂಗ್ ಆಫ್ ಬಾಲಿವುಡ್. ವಿಶ್ವದಾದ್ಯಂತ ಕೊಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಶಾರುಖ್ ಖಾನ್ ನ ಪ್ರತಿಭೆಯನ್ನು ಮೊದಲ ದೃಶ್ಯದಲ್ಲೇ ಗುರುತಿಸಿದ್ದರು ರಿಶಿ ಕಪೂರ್.
ತಮ್ಮ ಮೊದಲ ಸಿನಿಮಾದ ಮೊದಲ ದೃಶ್ಯವನ್ನು ರಿಶಿ ಕಪೂರ್ ಎದುರಿಗೆ ಅಭಿನಯಿಸಿದ್ದನ್ನು ನೆನಪಿಸಿಕೊಂಡು ಭಾವುಕ ಪತ್ರ ಬರೆದಿರುವ ಶಾರುಖ್ ಖಾನ್, ರಿಶಿ ಕಪೂರ್ ಅವರಿಗೆ ಧನ್ಯವಾದ ಹೇಳಿದ್ದಾರೆ.
ರಿಶಿ ಕಪೂರ್ ಅಭಿನಯದ 'ದೀವಾನಾ' ಸಿನಿಮಾ ಶಾರುಖ್ ಖಾನ್ ಗೆ ಮೊದಲ ಸಿನಿಮಾ ಆಗಿತ್ತು. ಅಲ್ಲಿಯವರೆಗೆ ಧಾರವಾಹಿಗಳಲ್ಲಿ ನಟಿಸುತ್ತಿದ್ದ ಶಾರುಖ್ ಖಾನ್ ಗೆ ಮೊದಲ ಸಿನಿಮಾದಲ್ಲಿಯೇ ಆಗಿನ ಸ್ಟಾರ್ ರಿಶಿ ಕಪೂರ್ ಅವರೊಂದಿಗೆ ಅಭಿನಯಿಸುವ ಅವಕಾಶ ದೊರೆತಿತ್ತು.

ಹಲವು ಕೀಳರಿಮೆ ಹೊಂದಿದ್ದ ಶಾರುಖ್ ಖಾನ್
ನಾನು ಸುಂದರನಲ್ಲ, ನನ್ನ ನಟನೆ ಉತ್ತಮವಾಗಿಲ್ಲ ಹೀಗೆ ಹಲವಾರು ಕೀಳರಿಮೆಗಳನ್ನು ಆರಂಭದಲ್ಲಿ ಹೊಂದಿದ್ದ ಶಾರುಖ್ ಖಾನ್ ಗೆ ಮೊದಲ ಸಿನಿಮಾವೇ ರಿಶಿ ಕಪೂರ್ ಜೊತೆಗಿತ್ತು, ತಮ್ಮ ದೃಶ್ಯದ ಚಿತ್ರೀಕರಣ ಮುಗಿದಿದ್ದರು ಶಾರುಖ್ ನಟನೆ ನೋಡಲು ಸೆಟ್‌ನಲ್ಲಿ ಕುರ್ಚಿ ಹಾಕಿ ಕುಳಿತಿದ್ದರಂತೆ ರಿಶಿ ಕಪೂರ್.

ರಿಶಿ ಕಪೂರ್ ಜೊತೆಗೆ ಮೊದಲ ಸಿನಿಮಾ
ಮೊದಲೇ ಹೆದರಿದ್ದ ಶಾರುಖ್ ಖಾನ್, ನಾನು ಇಲ್ಲಿ ಫೇಲ್ ಆದರೂ ಪರವಾಗಿಲ್ಲ, ಅದ್ಭುತ ನಟನೊಂದಿಗೆ ತೆರೆ ಹಂಚಿಕೊಂಡ ನೆನಪು ಉಳಿಯುತ್ತದೆ ಅಷ್ಟು ಸಾಕು ಎಂದು ಅಭಿನಯಿಸಿದರಂತೆ. ಆದರೆ ಮೊದಲ ದೃಶ್ಯ ನೋಡಿದ ರಿಶಿ ಕಪೂರ್, 'ನಿನ್ನಲ್ಲಿ ತುಂಬಾ ಎನರ್ಜಿ ಇದೆ' ಎಂದು ಹೊಗಳಿದ್ದರಂತೆ.

ಶಾರುಖ್ ಖಾನ್ ಏರಿದ ಎತ್ತರ ಈಗ ಇತಿಹಾಸ
ರಿಶಿ ಕಪೂರ್ ಅಂದು ಆ ಮಾತು ಹೇಳಿದ ಮೇಲೆ ಶಾರುಖ್ ಗೆ ಸ್ವನಂಬಿಕೆ ಬಂದಿದ್ದಂತೆ ತಾವೊಬ್ಬ ನಟನೆಂದು. ಆ ನಂಬಿಕೆಯಿಂದಲೇ ಮುಂದೆ ಸಾಗಿದ ಶಾರುಖ್ ಖಾನ್ ಏರಿದ ಎತ್ತರ ಈಗ ಇತಿಹಾಸ. ಅವರೀಗ ಬಾಲಿವುಡ್ ನ ಕಿಂಗ್ ಖಾನ್.

ತಲೆಯ ಮೇಲೆ ಹೊಡೆದು ಮಾತನಾಡಿಸುತ್ತಿದ್ದ ರಿಶಿ
ರಿಶಿ ಕಪೂರ್ ಅವರನ್ನು ಕೆಲವು ತಿಂಗಳ ಹಿಂದೆ ಭೇಟಿ ಮಾಡಿದ್ದನ್ನು ನೆನಪಿಸಿಕೊಂಡಿರುವ ಶಾರುಖ್, 'ನೀವು ಸಿಕ್ಕಾಗಲೆಲ್ಲಾ ನನ್ನ ತಲೆಗೆ ಮೆತ್ತಗೆ ಪ್ರೀತಿಯಿಂದ ಹೊಡೆದು ಮಾತನಾಡಿಸುತ್ತಿದ್ದಿರಿ, ಅದನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ. ನಿಮ್ಮ ಆ ಪ್ರೀತಿಯ ಹೊಡೆತವನ್ನು ಆಶೀರ್ವಾದವೆಂದು ಭಾವಿಸಿದ್ದೇನೆ' ಎಂದಿದ್ದಾರೆ.

''ಆಶೀರ್ವಾದದಿಂದ ಇಂದು ಇಲ್ಲಿಗೆ ತಲುಪಿದ್ದೇನೆ''
ನಿಮ್ಮ ಆಶೀರ್ವಾದದಿಂದಲೇ ನಾನು ಇಂದು ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ, ನಿಮ್ಮನ್ನು ಬಹಳವಾಗಿ ಮಿಸ್ ಮಾಡಿಕೊಳ್ಳುತ್ತೇವೆ, ನಿಮ್ಮ ಮೇಲಿನ ಗೌರವ ಎಂದೂ ಅಳಿಯದು ಎಂದು ಶಾರುಖ್ ಬರೆದಿದ್ದಾರೆ.


Click it and Unblock the Notifications











