ಈದ್ ಗಾಗಿ ಶಾರೂಖ್ ಜೊತೆ ಸೇರಿ ಸಲ್ಮಾನ್ ಕೊಟ್ರು ಉಡುಗೊರೆ

By Naveen

Recommended Video

ಮತ್ತೆ ಒಂದಾದ್ರು ಕರಣ್-ಅರ್ಜುನ್..! | Salman khan and Shahrukh Khan gives a great gift to their fans..!

ಪ್ರತಿ ವರ್ಷ ಈದ್ ಹಬ್ಬಕ್ಕಾಗಿ ಬಾಲಿವುಡ್ ನಲ್ಲಿ ಬಿಗ್ ಸಿನಿಮಾಗಳು ಬಿಡುಗಡೆಯಾಗುತ್ತದೆ. ಅದರಲ್ಲಿಯೂ ನಟ ಸಲ್ಮಾನ್ ಖಾನ್ ಪ್ರತಿ ವರ್ಷ ರಂಜಾನ್ ಹಬ್ಬಕ್ಕೆ ಚಿತ್ರಮಂದಿರಕ್ಕೆ ತಪ್ಪದೆ ಬರುತ್ತಿದ್ದರು.

ಆದರೆ, ಈ ವರ್ಷದ ಈದ್ ಹಬ್ಬಕ್ಕೆ ಶಾರೂಖ್ ಖಾನ್ ಹಾಗೂ ಸಲ್ಮಾನ್ ಖಾನ್ ಒಟ್ಟಿಗೆ ಬಂದು ವಿಶ್ ಮಾಡಿದ್ದಾರೆ. ಜೊತೆಗೆ ಈ ಇಬ್ಬರು ನಟರು ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದಾರೆ. ಹೌದು, ಶಾರೂಖ್ ಖಾನ್ ನಟನೆಯ ಬಹು ನಿರೀಕ್ಷಿತ ಸಿನಿಮಾ 'ಜೀರೋ' ಚಿತ್ರದ ಟೀಸರ್ ರಂಜಾನ್ ಹಬ್ಬದ ವಿಶೇಷವಾಗಿ ಇಂದು ಬಿಡುಗಡೆಯಾಗಿದೆ.

'ಜೀರೋ' ಸಿನಿಮಾದ ಯೂ ಟ್ಯೂಬ್ ನಲ್ಲಿ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಟೀಸರ್ ಬಿಡುಗಡೆಯಾದ ಒಂದು ಗಂಟೆಯ ಒಳಗೆ 5 ಲಕ್ಷಕ್ಕೂ ಹೆಚ್ಚು ಜನರು ಅದನ್ನು ವೀಕ್ಷಿಸಿದ್ದಾರೆ. 1 ನಿಮಿಷ 21 ಸೆಕೆಂಡ್ ಇರುವ ಈ ಟೀಸರ್ ನೋಡುಗರಿಗೆ ಸಿಕ್ಕಾಪಟ್ಟೆ ಮಜಾ ಕೊಡುತ್ತಿದೆ.

sharukh khans zero hindi movie teaser released

ಶಾರೂಖ್ ಖಾನ್ ಈ ಚಿತ್ರದ ಮೂಲಕ ಮತ್ತೊಂದು ವಿಭಿನ್ನ ಪಾತ್ರವನ್ನು ಪ್ರಯತ್ನ ಮಾಡಿದ್ದಾರೆ. ಶಾರೂಖ್ ಚಿತ್ರದಲ್ಲಿ ಒಬ್ಬ ಕುಬ್ಜನಾಗಿ ಕಾಣಿಸಿಕೊಂಡಿದ್ದಾರೆ. ಟೀಸರ್ ನಲ್ಲಿ ಕುಬ್ಜ ಶಾರೂಖ್ ಅನ್ನು ಬಿಗ್ ಬಾಸ್ ಸಲ್ಮಾನ್ ಎತ್ತಿಕೊಳ್ಳುತ್ತಾರೆ. ಆನಂದ್ ಎಲ್ ರೈ ನಿರ್ದೇಶನದ ಈ ಚಿತ್ರ ಡಿಸೆಂಬರ್ 21 ಕ್ಕೆ ಬಿಡುಗಡೆಯಾಗಲಿದೆ. ಶಾರೂಖ್ ಜೊತೆಗೆ ಚಿತ್ರದಲ್ಲಿ ನಾಯಕಿಯರಾಗಿ ಕತ್ರೀನಾ ಕೈಫ್ ಹಾಗೂ ಅನುಷ್ಕಾ ಶರ್ಮ ನಟಿಸಿದ್ದಾರೆ.

More from Filmibeat

English summary
Actor Sharukh Khan, Anushka Sharma and Katrina Kaif starrer 'Zero' hindi movie teaser released On the occasion of Ramadan festival. The movie will release on December 21st 2018.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X