ಶಾರೂಖ್ ಬರ್ತಡೇ ವಿಶೇಷ: ಬೆರಗು ಮೂಡಿಸೋ 'ಜೀರೋ' ಟ್ರೇಲರ್
'ಅಬ್ಬಾ...ಏನಿದು..?....' 'ಜೀರೋ' ಸಿನಿಮಾದ ಟ್ರೇಲರ್ ನೋಡಿ ಮುಗಿಸಿದ ಮೇಲೆ ಎಲ್ಲರಿಂದ ಬರುವ ಪ್ರತಿಕ್ರಿಯೆ ಇದು.
ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನ ಶಾರೂಖ್ ಮುಂದಿನ ಸಿನಿಮಾ 'ಜೀರೋ' ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್ ನೋಡುಗರಿಗೆ ಒಳ್ಳೆಯ ಅನುಭವ ನೀಡುತ್ತದೆ. ಇದೊಂದು ಒಳ್ಳೆಯ ಸಿನಿಮಾ ಆಗುವ ಎಲ್ಲ ಲಕ್ಷಣ ಎದ್ದು ಕಾಣುತ್ತಿದೆ.
ಮುಖ್ಯವಾಗಿ ಸಿನಿಮಾದಲ್ಲಿ ಶಾರೂಖ್ ಖಾನ್ ಹಾಗೂ ಅನುಷ್ಕಾ ಶರ್ಮಾ ಅವರ ಪಾತ್ರಗಳು ಗಮನ ಸೆಳೆಯುತ್ತದೆ. ಕುಬ್ಜನ ಪಾತ್ರದಲ್ಲಿ ಶಾರೂಖ್ ನಟನೆ ಅದ್ಬುತ, ಅಂಗವಿಕಲ ವಿಜ್ಞಾನಿ ಪಾತ್ರದಲ್ಲಿ ಅನುಷ್ಕಾ ನಟನೆ ಅತ್ಯದ್ಬುತ. ಅವರಿಬ್ಬರ ನಟನೆ ಬಗ್ಗೆ ಹೇಳುವುದಕ್ಕಿಂತ ಅದನ್ನು ನೋಡಿದರೇನೇ ಆನಂದ.

ಅಂದಹಾಗೆ, ಈ ಸಿನಿಮಾವನ್ನು 'ತನು ವೆಡ್ಸ್ ಮನು' ಖ್ಯಾತಿಯ ನಿರ್ದೇಶಕ ಆನಂದ್ ಎಲ್ ರೈ ನಿರ್ದೇಶನ ಮಾಡಿದ್ದಾರೆ. ಹಿಮಾಂಶು ಶರ್ಮಾ ಕಥೆ ಬರೆದಿದ್ದಾರೆ. ಶಾರೂಖ್ ಖಾನ್ ಹೊಮ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣವಾಗಿದೆ.
{video1}
ಉಳಿದಂತೆ, ಸಿನಿಮಾದಲ್ಲಿ ಒಬ್ಬ ನಟಿಯ ಪಾತ್ರದಲ್ಲಿ ಕತ್ರೀನಾ ಕಾಣಿಸಿಕೊಂಡಿದ್ದಾರೆ. ಯೂಟ್ಯೂಬ್ ನಲ್ಲಿ ದೊಡ್ಡ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ, ಈ ಸಿನಿಮಾ ಡಿಸೆಂಬರ್ 21ಕ್ಕೆ ಬಿಡುಗಡೆಯಾಗಲಿದೆ.


Click it and Unblock the Notifications











