ನನ್ನೆದುರೆ ಪೋಸ್ ಕೊಡ್ತೀಯಾ ? ಅಭಿಮಾನಿ ಕೈಗೆ ಹೊಡೆದು ಅವಮಾನ ಮಾಡಿದ ಶತ್ರುಘ್ನ ಸಿನ್ಹಾ, ವಿಡಿಯೋ ವೈರಲ್

ಅಭಿಮಾನಿಗಳ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯ ಇಲ್ಲ. ಈ ಕಾರಣಕ್ಕಾಗಿಯೇ ಕನ್ನಡದ ವರನಟ ಡಾ.ರಾಜ್ ಕುಮಾರ್ ಅಭಿಮಾನಿಗಳಲ್ಲಿ ದೇವರನ್ನು ಕಂಡರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳಿಗೆ ಸೆಲೆಬ್ರಿಟಿ ಪಟ್ಟವನ್ನ ಕಟ್ಟಿದರು. ಧ್ರುವಾ ಸರ್ಜಾ ತಮ್ಮ ಅಭಿಮಾನಿಗಳನ್ನ ವಿಐಪಿ ಎಂದು ಕರೆದರು. ಕನ್ನಡದ ಹಲವು ತಾರೆಯರು ಅಭಿಮಾನಿಗಳ ಅಭಿಮಾನಕ್ಕೆ ಶರಣೆಂದರು.ಪ್ರೀತಿಯಿಂದ ತಲೆ ಬಾಗಿದರು.

ಹಾಗಂಥ ಇಲ್ಲಿ ಎಲ್ಲರೂ ಅಭಿಮಾನಿಗಳ ಅಭಿಮಾನಿಗಳಲ್ಲ. ಅಭಿಮಾನಿಗಳ ಅಭಿಮಾನದ ಮೇಲೆ ಇವರಿಗೆ ಕಿಂಚಿತ್ತೂ ಪ್ರೀತಿಯೂ ಇರುವುದಿಲ್ಲ. ಬದಲಿಗೆ ಹಲವು ಬಾರಿ ಕೇವಲ ತೋರ್ಪಡಿಕೆಯ ಪ್ರೀತಿಯಾಗಿರುತ್ತದೆಯಷ್ಟೇ. ಅದರಲ್ಲಿಯೂ ಬಾಲಿವುಡ್‌ನಲ್ಲಿ ಬಹುತೇಕರಲ್ಲಿ ಅಭಿಮಾನಿಗಳನ್ನು ಗೌರವಿಸುವ ಸಂಸ್ಕಾರ ಇಲ್ಲ. ಬದಲಿಗೆ ಅಲ್ಲಿರುವುದು ಸ್ಟಾರ್ ಗಿರಿಯ ಅಹಂಕಾರ ಮಾತ್ರ. ಉದಾಹರಣೆಗೆ ಶತುಘ್ನ ಸಿನ್ಹಾ ಅವರನ್ನೇ ತೆಗೆದುಕೊಳ್ಳಿ.

shatrughan-sinha-brutally-trolled-for-swatting-fans-hand-mid-pose-hurt-fan-walks-off

ಹೌದು. ಶತ್ರುಘ್ನ ಸಿನ್ಹಾ.. ಬಾಲಿವುಡ್ ನ ಹಿರಿಯ ನಟ. ಅಮಿತಾಬ್ ಬಚ್ಚನ್ ಸಮಕಾಲೀನ. ಸೋನಾಕ್ಷಿ ಸಿನ್ಹಾ ಅವರ ತಂದೆ. ಚಿತ್ರರಂಗದ ಜೊತೆ ಜೊತೆಯಲ್ಲಿ ರಾಜಕೀಯದ ರಣರಂಗಕ್ಕೂ ಧುಮುಕಿದ ನಾಯಕ. ಇವರ ಟ್ರೇಡ್ ಮಾರ್ಕ್ ಡೈಲಾಗ್ "ಖಾಮೋಶ್" ಯಾರ್ ತಾನೇ ಮರೆಯಲು ಸಾಧ್ಯ.

ಇಂಥಾ ಶತ್ರುಘ್ನ ಸಿನ್ಹಾ ಸದ್ಯ ಚಿತ್ರರಂಗದಿಂದ ದೂರ ಇದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಇವರನ್ನು ಇನ್ನೂ ತಮ್ಮ ಹೃದಯದ ದೇಗುಲದಲ್ಲಿ ಇಟ್ಟು ಪೂಜೆ ಮಾಡ್ತಿದ್ದಾರೆ.

ಹೋದಲ್ಲಿ ಬಂದಲ್ಲಿ ಹಿಂಬಾಲಿಸ್ತಾರೆ. ಸೆಲ್ಫಿ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಆದರೆ ಈಗ ಕಾಲ ಬದಲಾಗಿದೆ.‌ಬದಲಾದ ಈ‌ ಕಾಲದಲ್ಲಿ ಸ್ಟಾರ್ ಗಳು ಅಭಿಮಾನಿಗಳನ್ನು ನೋಡುವ ದೃಷ್ಟಿಕೋನವೂ ಬದಲಾಗಿದೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಸೆಲ್ಫಿ ಕ್ಲಿಕಿಸಿಕೊಳ್ಳಲು ಬಂದ ಅಭಿಮಾನಿಗೆ ಶತ್ರುಘ್ನ ಸಿನ್ಹಾ ಗದರಿದ್ದಾರೆ. ತಮ್ಮ ನೆಚ್ಚಿನ ಸ್ಟಾರ್ ನಿಂದ ಇದನ್ನು ನಿರೀಕ್ಷೆ ಮಾಡದ ಅಭಿಮಾನಿ ಬೇಸರದಿಂದಲೇ ಸ್ಥಳದಿಂದ ಹೊರ ನಡೆದಿದ್ದಾರೆ.

ಹೌದು ಅಸಲಿಗೆ ಮೊನ್ನೆ ಮೊನ್ನೆ ಆಲಿಯಾ ಭಟ್ ಆಪ್ತ ಸ್ನೇಹಿತೆ ಮತ್ತು ನಟಿ ಆಕಾಂಕ್ಷಾ ರಂಜನ್ ಕಪೂರ್ ಗ್ರಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದರು. ಡೈರೆಕ್ಟರ್ ಶರಣ್ ಶರ್ಮಾ ಜೊತೆ ಸರಳವಾಗಿ ಮದುವೆಯಾದರು. ಚಿತ್ರರಂಗದವರಿಗೆ ಅದ್ದೂರಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಇದೇ ಆರತಕ್ಷತೆ ಕಾರ್ಯಕ್ರಮಕ್ಕೆ ಶತ್ರುಘ್ನ ಸಿನ್ಹಾ ಕೂಡ ಹೋಗಿದ್ದರು. ಈ ಸಮಯದಲ್ಲಿ ಇವರನ್ನು ತನ್ನ ಕಣ್ಣೆದುರು ಕಂಡು ಅಭಿಮಾನಿಯೊಬ್ಬರು ಪುಳಕಿತಗೊಂಡಿದ್ದಾರೆ. ಫೋಟೊ ತೆಗೆಸಿಕೊಳ್ಳಲು ಧಾವಿಸಿದ್ದಾರೆ. ಜಗವೇ ಗೆದ್ದಂತೆ ಕ್ಯಾಮರಾಗೆ ಫೋಸ್ ಕೊಡುವಾಗ ವಿಕ್ಟರಿ ಸೈನ್ ತೋರಿಸಿದ್ದಾರೆ.

ಬಹುಶ ಅಭಿಮಾನಿಯ ಈ ವಿಕ್ಟರಿ ಫೋಸ್ ಶತ್ರುಘ್ನ ಸಿನ್ಹಾಗೆ ಇಷ್ಟವಾಗಲಿಲ್ಲವೇನೋ..? ಹೀಗಾಗಿಯೇ ಏನೋ ಕೆರಳಿದ ಶತ್ರುಘ್ನ ಸಿನ್ಹಾ ಸೆಲ್ಫಿ ಕೇಳಲು ಬಂದಿದ್ದ ಅಭಿಮಾನಿಯನ್ನು ಗದರಿದ್ದಾರೆ. ಅಭಿಮಾನಿಗೆ ಹೊಡೆದು ಕೈ ಕೆಳಗಿಳಿಸಿದ್ದಾರೆ.

ಶತ್ರುಘ್ನ ಸಿನ್ಹಾ ಅವರ ಈ ಸಡನ್ ರಿಯ್ಯಾಕ್ಷನ್ ದಿಂದ ಬೆಚ್ಚಿ ಬಿದ್ದ ಅಭಿಮಾನಿ ನಿರಾಸೆಗೊಂಡಿದ್ದಾರೆ. ಭಯದಿಂದಲೇ ಅಲ್ಲಿಂದ‌ ಕಾಲ್ಕಿತ್ತಿದ್ದಾರೆ. ಅಭಿಮಾನಿಯ ಈ ನಡೆಯನ್ನು ನಿರೀಕ್ಷೆ ಮಾಡದ ಶತ್ರುಘ್ನ ಸಿನ್ಹಾ ಆ ನಂತರ ನನ್ನ ಎದುರೇ ಫೋಸ್ ಕೊಡ್ತಿದ್ದಾ ಎಂದು ಲೇವಡಿ ಮಾಡಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಹಲವರು ಶತ್ರುಘ್ನ ಸಿನ್ಹಾ ಅವರ ಈ ಅಹಂಕಾರದ ವರ್ತನೆ ಖಂಡಿಸಿದ್ದಾರೆ. ಅಭಿಮಾನಿಯ ಜೊತೆ ಶತ್ರುಘ್ನ ಸಿನ್ಹಾ ಈ ರೀತಿ ವರ್ತಿಸಬಾರದಿತ್ತು ಎಂದು ಕಿಡಿ ಕಾರುತ್ತಿದ್ದಾರೆ.

English summary
"Lost all respect!" Shatrughan Sinha is under fire after a viral video shows him rudely shoving a fan's hand away, forcing the disappointed fan to walk off.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X