ಕಾಸ್ಟಿಂಗ್ ಕೌಚ್ ಬಗ್ಗೆ ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ ಹೇಳಿದ್ದೇನು ಗೊತ್ತಾ.?

By Harshitha

ಕಳೆದ ಕೆಲವು ದಿನಗಳಿಂದ ಸಿನಿ ಲೋಕದಲ್ಲಿ 'ಕಾಸ್ಟಿಂಗ್ ಕೌಚ್' ಬಗ್ಗೆಯೇ ಹೆಚ್ಚು ಸುದ್ದಿ ಆಗುತ್ತಿದೆ. 'ಕಾಸ್ಟಿಂಗ್ ಕೌಚ್' ವಿರುದ್ಧ ಸಿನಿಮಾ ನಟಿಯರು ದನಿ ಎತ್ತುತ್ತಿರುವಾಗಲೇ, ನೃತ್ಯ ಸಂಯೋಜಕಿ ಸರೋಜ್ ಖಾನ್ 'ಅವಕಾಶಕ್ಕಾಗಿ ಮಂಚ ಹತ್ತುವ' ಪದ್ಧತಿಯ ಪರವಾಗಿ ಮಾತನಾಡಿ ವಿವಾದಕ್ಕೆ ಸಿಲುಕಿದ್ದರು.

''ಕಾಸ್ಟಿಂಗ್ ಕೌಚ್ ನಿಂದ ಕೆಲಸ ಅಂತೂ ಸಿಗುತ್ತೆ. ಕಮ್ಮಿ ಅಂದರೂ ಹೊಟ್ಟೆಗೆ ರೊಟ್ಟಿ ಕೊಡ್ತಾರೆ. ಅತ್ಯಾಚಾರ ಎಸಗಿ ಪರಾರಿ ಆಗುವುದಿಲ್ಲ'' ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನೃತ್ಯ ಸಂಯೋಜಕಿ ಸರೋಜ್ ಖಾನ್ ಹೇಳಿಕೆ ನೀಡಿದ್ದರು. ಇದರಿಂದ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.

''ಸರೋಜ್ ಖಾನ್ ಮಾತಿನಲ್ಲಿ ಅರ್ಥ ಇದೆ'' ಎಂದು ರಿಚಾ ಚಡ್ಡಾ ಹೇಳಿರುವಾಗಲೇ, ಸರೋಜ್ ಖಾನ್ ಪರ ಶತ್ರುಘ್ನ ಸಿನ್ಹಾ ಕೂಡ ಬ್ಯಾಟಿಂಗ್ ಆರಂಭಿಸಿದ್ದಾರೆ. ಹಾಗಾದ್ರೆ, ಕಾಸ್ಟಿಂಗ್ ಕೌಚ್ ಕುರಿತು ಶತ್ರುಘ್ನ ಸಿನ್ಹಾ ಹೇಳುವುದೇನು.? ಮುಂದೆ ಓದಿರಿ...

ಮನಸ್ಸಿನಿಂದ ಮಾತನಾಡುತ್ತಾರೆ ಸರೋಜ್ ಖಾನ್

ಮನಸ್ಸಿನಿಂದ ಮಾತನಾಡುತ್ತಾರೆ ಸರೋಜ್ ಖಾನ್

''ಸರೋಜ್ ಖಾನ್ ಆಗಲಿ ಅಥವಾ ರೇಣುಕಾ ಚೌಧರಿ ಆಡಿರುವ ಮಾತುಗಳಲ್ಲಿ ತಪ್ಪೇನಿಲ್ಲ. ಬಾಲಿವುಡ್ ನಟಿಯರಾದ ರೇಖಾ, ಮಾಧುರಿ ದೀಕ್ಷಿತ್ ಹಾಗೂ ಶ್ರೀದೇವಿ ಅವರ ವೃತ್ತಿ ಜೀವನಕ್ಕೆ ಭದ್ರ ಬುನಾದಿ ಹಾಕುವಲ್ಲಿ ಸರೋಜ್ ಖಾನ್ ಕೊಡುಗೆ ಅಪಾರವಾದದ್ದು. ಸರೋಜ್ ಖಾನ್ ಯಾವಾಗಲೂ ಮನಸ್ಸಿನಿಂದ ಮಾತನಾಡುತ್ತಾರೆ'' ಎಂದಿದ್ದಾರೆ ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ.

ಸರೋಜ್ ಖಾನ್ ಮಾತಿಗೆ ಸಹಮತ ಇದೆ

ಸರೋಜ್ ಖಾನ್ ಮಾತಿಗೆ ಸಹಮತ ಇದೆ

''ಬಾಲಿವುಡ್ ನಲ್ಲಿ ನಟಿಯರು ಕಾಂಪ್ರೊಮೈಸ್ ಆಗಬೇಕು ಅಂತ ಸರೋಜ್ ಖಾನ್ ಹೇಳಿದ್ರೆ, ಏನಾಗುತ್ತಿದೆ ಎಂಬ ಅರಿವು ಅವರಿಗಿದೆ ಅಂತರ್ಥ. ಸರೋಜ್ ಖಾನ್ ಹಾಗೂ ರೇಣುಕಾ ಚೌಧರಿ ಆಡಿರುವ ಮಾತುಗಳಿಗೆ ನನ್ನ ಸಹಮತ ಇದೆ. ಚಿತ್ರರಂಗಕ್ಕೆ ಬರುವಾಗ ಹೆಣ್ಮಕ್ಕಳು ಮಾಡಿಕೊಳ್ಳುವ ಕಾಂಪ್ರೊಮೈಸ್ ಬಗ್ಗೆ ನನಗೆ ತಿಳಿದಿದೆ. ಬಹುಶಃ ಸರೋಜ್ ಖಾನ್ ಕೂಡ ಈ ನೋವನ್ನ ಅನುಭವಿಸಿರಬಹುದು'' - ಶತ್ರುಘ್ನ ಸಿನ್ಹಾ

ಸರೋಜ್ ಖಾನ್ ರನ್ನ ಖಂಡಿಸಬೇಡಿ

ಸರೋಜ್ ಖಾನ್ ರನ್ನ ಖಂಡಿಸಬೇಡಿ

''ಸತ್ಯ ಹೇಳಿದ್ದಕ್ಕೆ ಸರೋಜ್ ಖಾನ್ ರನ್ನ ಖಂಡಿಸಬೇಡಿ. ಅವಕಾಶಗಳು ಸಿಗಬೇಕು ಅಂದ್ರೆ ಕಾಂಪ್ರೊಮೈಸ್ ಮಾಡಿಕೊಳ್ಳಬೇಕು ಎಂಬ ಅನಿವಾರ್ಯತೆಯನ್ನ ಸೃಷ್ಟಿಸುವವರನ್ನ ಖಂಡಿಸಿ'' ಎಂದಿದ್ದಾರೆ ಶತ್ರುಘ್ನ ಸಿನ್ಹಾ.

ಯಾರೂ ಬಲವಂತ ಮಾಡಲ್ಲ.!

ಯಾರೂ ಬಲವಂತ ಮಾಡಲ್ಲ.!

''ಕಾಸ್ಟಿಂಗ್ ಕೌಚ್ ಸರಿ ಅಂತ ನಾನು ಹೇಳುವುದಿಲ್ಲ. ಅಂತಹ ಕಾಂಪ್ರೊಮೈಸ್ ಗೆ ನಾನು ಯಾವತ್ತೂ ಭಾಗಿ ಆಗಿಲ್ಲ. ಅವಕಾಶಕ್ಕಾಗಿ ಮಂಚ ಹಂಚಿಕೊಳ್ಳುವುದು, ಬಿಡುವುದು ವೈಯುಕ್ತಿಕ ಆಯ್ಕೆ. ಮಂಚ ಏರಲು ಯಾವುದೇ ಹೆಣ್ಣಿಗಾಗಲಿ, ಗಂಡಿಗಾಗಲಿ ಯಾರೂ ಫೋರ್ಸ್ ಮಾಡಲ್ಲ. ಅವಕಾಶ ಬೇಕು ಅಂದ್ರೆ ಕಾಂಪ್ರೊಮೈಸ್ ಆಗುತ್ತಾರೆ. ಇದರಲ್ಲಿ ಬಲವಂತ ಎಲ್ಲಿದೆ.?'' ಎಂದು ಪ್ರಶ್ನಿಸಿದ್ದಾರೆ ಶತ್ರುಘ್ನ ಸಿನ್ಹಾ.

More from Filmibeat

English summary
Bollywood Actor, Politician Shatrughan Sinha defends Saroj Khan's Casting Couch comments.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X