ಕೊರೊನಾ ಸಂಕಷ್ಟಕ್ಕೆ 25 ಕೋಟಿ ಕೊಟ್ಟಿದ್ದಕ್ಕೆ ಅಕ್ಷಯ್ ಕುಮಾರ್ ವಿರುದ್ಧ ಗರಂ ಆದ ಶತೃಘ್ನ ಸಿನ್ಹಾ

ಕೊರೊನಾ ವಿರುದ್ಧ ದೇಶವೇ ಒಗ್ಗಟ್ಟಿನಿಂದ ಬಡಿದಾಡುತ್ತಿದೆ. ಕೊರೊನಾದಿಂದ ಆರ್ಥಿಕತೆ ಕುಸಿದರಿರುವ ಈ ಹೊತ್ತಿನಲ್ಲಿ ಸರ್ಕಾರಗಳೂ ಸಹ ಆರ್ಥಿಕ ಮುಗ್ಗಟ್ಟಿನತ್ತ ಮುಖ ಮಾಡುತ್ತಿವೆ.

ಕೊರೊನಾ ವಿರುದ್ಧ ಹೋರಾಡಲು ನಾಗರೀಕರ ಸಹಾಯವನ್ನು ಸರ್ಕಾರಗಳು ಕೇಳಿವೆ. ಮೋದಿ ಪರಿಹಾರ ನಿಧಿಯಿಂದ ಹಿಡಿದು ಎಲ್ಲಾ ರಾಜ್ಯಗಳೂ ಪರಿಹಾರ ನಿಧಿಗೆ ನಾಗರೀಕರು ದೇಣಿಗೆ ನೀಡಲೆಂಬ ನಿರೀಕ್ಷೆಯಲ್ಲಿದ್ದಾರೆ.

ಸಿನಿಮಾ ನಟ-ನಟಿಯರು ಸಹ ತಮ್ಮ ಕೈಲಾದ ಮಟ್ಟಿಗೆ ದೇಣಿಗೆ ನೀಡುತ್ತಿದ್ದಾರೆ. ಕೊರೊನಾ ಸಂಕಷ್ಟ ಎದುರಾದ ಕೂಡಲೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಪ್ರಧಾನಿಗಳ ಪರಿಹಾರ ನಿಧಿಗೆ 25 ಕೋಟಿ ಹಣ ನೀಡಿದ್ದಾರೆ.

ಆದರೆ ಪರಿಹಾರ ನಿಧಿಗೆ ಹಣ ನೀಡಿದ್ದಕ್ಕೆ ಅಕ್ಷಯ್ ಕುಮಾರ್ ಅವರು ಬಾಲಿವುಡ್‌ನ ಹಿರಿಯ ನಟ, ಮಾಜಿ ಕೇಂದ್ರ ಸಚಿವರಿಂದ ಟೀಕೆಗೆ ಗುರಿಯಾಗಿದ್ದಾರೆ.

ಹೆಸರು ಹೇಳದೆ ಅಕ್ಷಯ್ ಮೇಲೆ ವಾಗ್ದಾಳಿ

ಹೆಸರು ಹೇಳದೆ ಅಕ್ಷಯ್ ಮೇಲೆ ವಾಗ್ದಾಳಿ

ಮಾಜಿ ಕೇಂದ್ರ ಸಚಿವ, ಬಾಲಿವುಡ್‌ನ ಹಿರಿಯ ನಟರೂ ಆಗಿರುವ ಶತೃಘ್ನ ಸಿನ್ಹಾ ಅವರು ಅಕ್ಷಯ್ ಕುಮಾರ್ ಹೆಸರು ಹೇಳದೆ, ಅಕ್ಷಯ್ ಕುಮಾರ್ ದೇಣಿಗೆ ನೀಡಿರುವ ಬಗ್ಗೆ ತೀವ್ರ ಟೀಕೆ ಮಾಡಿದ್ದಾರೆ.

ಸಂದರ್ಶನವೊಂದರಲ್ಲಿ ಶತೃಘ್ನ ಸಿನ್ಹಾ ಮಾತು

ಸಂದರ್ಶನವೊಂದರಲ್ಲಿ ಶತೃಘ್ನ ಸಿನ್ಹಾ ಮಾತು

ಸಂದರ್ಶನವೊಂದರಲ್ಲಿ ಮಾತನಾಡಿದ ಶತೃಘ್ನ ಸಿನ್ಹಾ, 'ಎಷ್ಟು ದೊಡ್ಡ ಮೊತ್ತದ ಹಣ ಕೊಟ್ಟಿರಿ ಎಂದು ನೋಡಿ ನಿಮಗೆ ಸಮಾಜದ ಮೇಲೆ ಇರುವ ಕಾಳಜಿಯನ್ನು ಅಳೆಯುವಂತಿಲ್ಲ, 25 ಕೋಟಿ ಹಣ ಕೊಟ್ಟವರಿಗೆ ಹೆಚ್ಚು ಕಾಳಜಿ ಇದೆ ಎಂದು ಹೇಳಲು ಸಾಧ್ಯವಿಲ್ಲ, ಒಬ್ಬ ವ್ಯಕ್ತಿ ಎಷ್ಟು ದೊಡ್ಡ ಮೊತ್ತದ ಹಣ ಕೊಟ್ಟಿದ್ದಾನೆ ಎಂದು ಅಳೆದು ಆತನ ಗುಣ ತೀರ್ಮಾನ ಮಾಡುವುದು ಸರ್ವತಾ ಸಮ್ಮತವಲ್ಲ ಎಂದು ಶತೃಘ್ನ ಸಿಂಹಾ ಹೇಳಿದ್ದಾರೆ.

ಪ್ರಚಾರ ಪಡೆಯುವುದಕ್ಕೆ ಶತೃಘ್ನ ಸಿನ್ಹಾ ಗರಂ

ಪ್ರಚಾರ ಪಡೆಯುವುದಕ್ಕೆ ಶತೃಘ್ನ ಸಿನ್ಹಾ ಗರಂ

ದೇಣಿಗೆ ಕೊಟ್ಟಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡು ಪ್ರಚಾರ ಪಡೆಯುವ ಬಗ್ಗೆಯೂ ಶತೃಘ್ನ ಸಿಂಹ ಗರಂ ಆಗಿದ್ದಾರೆ, ದೇಣಿಗೆ ನೀಡುವುದು ಆ ವ್ಯಕ್ತಿಯ ಖಾಸಗಿ ವಿಷಯ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡು ಪ್ರಚಾರ ಪಡೆಯುವುದು, ತಾನು ಮತ್ತೊಬ್ಬನಿಗಿಂತ ಶ್ರೇಷ್ಠ ಎಂದು ಬಿಂಬಿಸಿಕೊಳ್ಳುವುದು ಸೂಕ್ತವಲ್ಲ ಎಂದು ಶತೃಘ್ನ ಸಿನ್ಹಾ ಹೇಳಿದ್ದಾರೆ.

ಶತೃಘ್ನ ಸಿನ್ಹಾ ಹೇಳಿಕೆಗೆ ಭಾರಿ ವಿರೋಧ

ಶತೃಘ್ನ ಸಿನ್ಹಾ ಹೇಳಿಕೆಗೆ ಭಾರಿ ವಿರೋಧ

ಆದರೆ ಶತೃಘ್ನ ಸಿಂಹ ಹೇಳಿಕೆಗೆ ವಿರೋಧಗಳು ವ್ಯಕ್ತವಾದಾಗ ತಮ್ಮ ಮಾತಿಗೆ ಸ್ಪಷ್ಟನೆ ನೀಡಿರುವ ಶತೃಘ್ನ ಸಿನ್ಹಾ, ನಾನು ಹಾಗೆ ಮಾತನಾಡುವುದಾಗಿ ಅಕ್ಷಯ್ ಕುಮಾರ್ ಅವರನ್ನು ಮನಸ್ಸಿನಲ್ಲಿಟ್ಟುಕೊಂಡು ಮಾತನಾಡಿರಲಿಲ್ಲ, ನನ್ನ ಮಾತಿಗೂ ಅಕ್ಷಯ್ ಕುಮಾರ್‌ ಗೂ ಸಂಬಂಧಿವಿಲ್ಲ ಎಂದಿದ್ದಾರೆ.

ಹಲವು ನಟರು ದೇಣಿಗೆ ನೀಡಿದ್ದಾರೆ

ಹಲವು ನಟರು ದೇಣಿಗೆ ನೀಡಿದ್ದಾರೆ

ನಟ ಅಕ್ಷಯ್ ಕುಮಾರ್ ಅವರು ಪ್ರಧಾನಿ ಪರಿಹಾರ ನಿಧಿಗೆ 25 ಕೋಟಿ ದೇಣಿಗೆ ನೀಡಿದ್ದಾರೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಅಮಿತಾಬ್ ಬಚ್ಚನ್ ಇನ್ನೂ ಹಲವರು ಕೊರೊನಾ ವಿರುದ್ಧ ಹೋರಾಟಕ್ಕೆ ಹಣದ ನೆರವು ನೀಡಿದ್ದಾರೆ.

More from Filmibeat

English summary
Actor politician Shatrughan Sinha lambasted on actor Akshay Kumar for his donation of 25 cr to PM relief fund to fight coronavirus.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X