ಕರೆದರೆ ಹೋಗಿ ಆಶೀರ್ವಾದ ಮಾಡಿ ಬರುತ್ತೇನೆ ; ಮಗಳು ಸೋನಾಕ್ಷಿ ಮದುವೆಯ ಬಗ್ಗೆ ಶತ್ರುಘ್ನ ಸಿನ್ಹಾ ಮಾತು..!
ಜನಸಾಮಾನ್ಯರ ದೃಷ್ಟಿಯಲ್ಲಿ ಸಿನಿಮಾರಂಗ ಅಂದ ತಕ್ಷಣ ಕಣ್ತುಂಬ ಬಣ್ಣಗಳೇ ತುಂಬಿಕೊಳ್ಳುತ್ತವೆ. ಆದರೆ ವಾಸ್ತವದಲ್ಲಿ ಈ ಬಣ್ಣಗಳಲ್ಲಿ ಕೂಡ ಕಲಬೆರಕೆ ಇರುತ್ತೆ. ಇವರ ಮನೆಯ ಹಣತೆಯಲ್ಲಿ ಕೂಡ ಭಿನ್ನಾಭಿಪ್ರಾಯ ಇರುತ್ತೆ. ಇದಕ್ಕೆ ಬಾಲಿವುಡ್‌ನ ಬಬ್ಲೀ ಗರ್ಲ್ ಸೋನಾಕ್ಷಿ ಸಿನ್ಹಾ ಸದ್ಯದ ಉದಾಹರಣೆ.
ಹೌದು. ನಿಮಗೆ ಗೊತ್ತಿರಬೇಕು .. ಸೋನಾಕ್ಷಿ ಸಿನ್ಹಾ ತಮ್ಮ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ಜೊತೆ ನಿಖಾ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ಕುರಿತು ಅಖಂಡ ಮಹಾರಾಷ್ಟ್ರ ಮಾತನಾಡುತ್ತಿದೆ. ಇನ್ನೂ ಶತ್ರುಘ್ನ ಸಿನ್ಹಾ ಮನೆಯ ಹೆಸರು ರಾಮಾಯಣ. ಇಷ್ಟೇ ಅಲ್ಲ ಶತ್ರುಘ್ನ ಸಿನ್ಹಾ ಅವರಿಗೆ ರಾಮ್, ಭರತ್ ಮತ್ತು ಲಕ್ಷ್ಮಣ ಹೆಸರಿನ ಮೂವರು ಸೋದರರಿದ್ದಾರೆ. ಇನ್ನೂ ಶತ್ರುಘ್ನಾ ಸಿನ್ಹಾ ತಮ್ಮ ಇಬ್ಬರು ಮಕ್ಕಳಿಗೆ ಲವ ಮತ್ತು ಕುಶ ಎಂದು ಹೆಸರಿಟಿದ್ದಾರೆ. ಮನೆಯ ವಾತಾವರಣ ಹೀಗಿದ್ದರೂ, ಸೋನಾಕ್ಷಿ ಸಿನ್ಹಾ ಮುಸ್ಲಿಂ ಯುವಕನ ಜೊತೆ ಮದುವೆಯಾಗಲು ಅಣಿಯಾಗಿದ್ದಾರೆ. ಹೀಗಾಗಿಯೇ ಈ ಮದುವೆ ಹಿಂದೆ ಲವ್ ಜಿಹಾದ್ ಪಿತೂರಿ ಇದೆ ಅನ್ನುವ ಅನುಮಾನ ಕೂಡ ಅನೇಕರಲ್ಲಿದೆ. ಇಬ್ಬರ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಪರ-ವಿರೋಧದ ಚರ್ಚೆ ಕೂಡ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.

ಆದರೆ.. ಇಷ್ಟೆಲ್ಲ ಆದರೂ ಕೂಡ ತನ್ನ ಮಗಳು ಜೂನ್ 23ಕ್ಕೆ ಮದುವೆಯಾಗಲಿದ್ದಾಳೆ ಎನ್ನುವ ವಿಚಾರ, ಮನೆಯಲ್ಲಿನ ಬಾಕಿ ಸದಸ್ಯರನ್ನ ಬಿಡಿ.. ಸೋನಾಕ್ಷಿ ಸಿನ್ಹಾ ಅವರ ತಂದೆ ಶತ್ರುಘ್ನ ಸಿನ್ಹಾ ಅವರಿಗೆ ಗೊತ್ತಿಲ್ಲ. ಇದು ಅಚ್ಚರಿ ಎನಿಸಿದರೂ ಸತ್ಯ. ಖುದ್ದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ. ಕರೆದರೆ ಮದುವೆಗೆ ಹೋಗಿ ಅಕ್ಷತೆ ಕಾಳು ಹಾಕಿ, ಆಶೀರ್ವಾದ ಮಾಡಿ ಬರುವುದಾಗಿ ಹೇಳಿದ್ದಾರೆ.
ಹೌದು, ಇಂದಿನ ಕಾಲದ ಮಕ್ಕಳು ಮದುವೆಗೆ ಒಪ್ಪಿಗೆ ಕೇಳುವುದಿಲ್ಲ. ಬದಲಿಗೆ ತಮ್ಮ ನಿರ್ಧಾರವನ್ನು ಪೋಷಕರಿಗೆ ತಿಳಿಸುತ್ತಾರೆ ಎಂದಿರುವ ಶತ್ರುಘ್ನ ಸಿನ್ಹಾ ಚುನಾವಣೆ ಫಲಿತಾಂಶದ ನಂತರ ನಾನೀಗ ದೆಹಲಿಯಲ್ಲಿದ್ದೇನೆ. ಮಗಳ ಮದುವೆ ಬಗ್ಗೆ ನನಗೆ ಏನನ್ನೂ ಹೇಳಿಲ್ಲ. ಮಾಧ್ಯಮದಲ್ಲಿ ಏನು ವರದಿ ಆಗಿದೆಯೋ ನನಗೂ ಅಷ್ಟೇ ಗೊತ್ತು ಅಂದಿದ್ದಾರೆ.

ಇನ್ನೂ.. ನಮಗೆ ಆಮಂತ್ರಣ ನೀಡಿದರೆ ನಾನು ಮತ್ತು ನನ್ನ ಪತ್ನಿ ಇಬ್ಬರೂ ಹೋಗಿ ಹಾರೈಸಿ ಬರುತ್ತೇವೆ ಯಾಕೆಂದರೆ ಹೆತ್ತವರಾಗಿ ನಮಗೆ ಆಕೆಯ ಸಂತೋಷ ಮುಖ್ಯವೆಂದಿರುವ ಶತ್ರುಘ್ನ ಸಿನ್ಹಾ, ನನ್ನ ಮಗಳ ಮದುವೆಯಲ್ಲಿ ಡ್ಯಾನ್ಸ್ ಮಾಡಲು ಇಷ್ಟಪಡುತ್ತೇನೆ ಎಂದು ಕೂಡ ಹೇಳಿದ್ದಾರೆ.
ಲವ್ ಜಿಹಾದ್ ಕುರಿತ ಪ್ರಶ್ನೆಗೆ ಉತ್ತರವನ್ನ ಕೂಡ ನೀಡಿರುವ ಶತ್ರುಘ್ನ ಸಿನ್ಹಾ, ಮಗಳು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ನಮ್ಮ ಮಗಳ ನಿರ್ಧಾರ ಯಾವತ್ತೂ ಸರಿಯಾಗಿರುತ್ತದೆ ಎನ್ನುವ ವಿಶ್ವಾಸವಿದೆ. ಅವಳು ಎಂದಿಗೂ ಕಾನೂನುಬಾಹಿರ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಮಗಳು ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಹೊಂದಿದ್ದಾಳೆ ಎಂದಿದ್ದಾರೆ. ಅವಳ ಸಂತೋಷವನ್ನೇ ಎಂದಿಗೂ ನಾವು ಬಯಸುತ್ತೇವೆ ಎಂದು ಕೂಡ ಹೇಳಿದ್ದಾರೆ ಶತ್ರುಘ್ನ ಸಿನ್ಹಾ.


Click it and Unblock the Notifications











