ಮದ್ವೆ ಬೆನ್ನಲ್ಲಿಯೇ ಮಗಳು ಸೋನಾಕ್ಷಿ ಸಿನ್ಹಾ ಜೊತೆ ಸಂಬಂಧ ಕಡಿದುಕೊಂಡ ಶತ್ರುಘ್ನ ಸಿನ್ಹಾ..?

ಸೆಲೆಬ್ರಿಟಿಗಳ ಹತ್ತಿರ ಎಲ್ಲವೂ ಇರುತ್ತೆ. ಆದರೆ .. ಬದುಕಲು ಬೇಕಾಗುವ ಮೂಲವಸ್ತುವಾದ ಸಂತೋಷ ಅವರಿಗೆ ಇರಲ್ಲ. ಯಾಕೆಂದರೆ.. ಆ ಸಂತೋಷವನ್ನು ಖ್ಯಾತಿ ಮತ್ತು ಸಾರ್ವಜನಿಕತೆ ಕಸಿದುಕೊಂಡು ಬಿಟ್ಟಿರುತ್ತೆ. ಇನ್ನೂ.. ಕೆಲವೊಮ್ಮೆ ಸೆಲೆಬ್ರಿಟಿ ಫಿಗರ್ ಎಂಬ ಭಾರ ಮಾನಸಿಕ ನೆಮ್ಮದಿಗೆ ಕೊಳ್ಳಿಯನ್ನೂ ಇಡುತ್ತೆ. ಮನೆಯಿಂದ ಒಂಚೂರು ಹೊರ ನಡೆದು ಕಾಲು ಕೆ.ಜಿ ಬದನೇ ಕಾಯಿ ತರುವ ಸಾರ್ವಜನಿಕ ಸ್ವಾತಂತ್ರ್ಯವೂ ಇವರಿಗೆ ಇರುವುದಿಲ್ಲ. ಅಷ್ಟರ ಮಟ್ಟಿಗೆ ಇವರ ಖಾಸಗಿತನಕ್ಕೆ ಧಕ್ಕೆ ಆಗುತ್ತೆ. ಇನ್ನೂ ಸೋಶಿಯಲ್ ಮೀಡಿಯಾ ಬಂದ ಮೇಲಂತೂ ಸೆಲೆಬ್ರೆಟಿಗಳು ಏನ್ ಮಾಡಿದ್ರೂ ನೋಡುಗರಿಗದು ಎಲೆ ಅಡಿಕೆಯೇ. ಇದಕ್ಕೆ ಸೋನಾಕ್ಷಿ ಸಿನ್ಹಾ ಅವರ ವ್ಯೆಯಕ್ತಿಕ ಬದುಕು ಸದ್ಯದ ಉದಾಹರಣೆ.

ಹೌದು, ಕೆಲ ದಿನದ ಹಿಂದೆ ಸೋನಾಕ್ಷಿ ಸಿನ್ಹಾ- ಜಹೀರ್ ಇಕ್ಬಾಲ್ ಅವರ ಜೊತೆ ಮದುವೆಯಾಗಿರುವುದು ಎಲ್ಲರಿಗೂ ಗೊತ್ತಿರುವುದೇ. ಆಗ ಇವರು ಇಬ್ಬರನ್ನೂ ಟ್ರೋಲ್ ಮಾಡಿದವರು ಒಬ್ಬರು - ಇಬ್ಬರಲ್ಲ. ಇನ್ನೂ ಇವರ ಮದುವೆಗೆ ಲವ್ ಜಿಹಾದ್ ಬಣ್ಣ ಹಚ್ಚುವ ಪ್ರಯತ್ನ ಮಾಡಿದವರ ಸಂಖ್ಯೆ ಕೂಡ ಕಮ್ಮಿಯೇನಿಲ್ಲ. ಇಂಥಾ ಸೋನಾಕ್ಷಿ ಸಿನ್ಹಾ ಅವರನ್ನು ಈಗ ಅವರ ಹೆತ್ತವರಾದ ಶತ್ರುಘ್ನ ಸಿನ್ಹಾ ಮತ್ತು ಪೂನಂ ಸಿನ್ಹಾ ಮನೆಯಾಚೆ ಹಾಕಿದ್ದಾರೆ ಎಂದು ಕೆಲವರು ಮಾತನಾಡುತ್ತಿದ್ದಾರೆ. ಇನ್ನೂ ಕೆಲವರು ಟ್ರೋಲ್ ಕೂಡ ಮಾಡುತ್ತಿದ್ದಾರೆ. ಇದಕ್ಕೆ ಕಾರಣವಾಗಿದ್ದು ಅದೊಂದು ಫೋಟೋ ಅನ್ನುವುದು ವಿಪರ್ಯಾಸ.

shatrughan-sinha-son-luv-sinha-omits-sister-sonakshi-sinha-from-parents-anniversary-post

ಹೌದು, ಅಸಲಿಗೆ ತಮ್ಮ ತಂದೆ ಮತ್ತು ತಾಯಿಯ ಮದುವೆ ವಾರ್ಷಿಕೋತ್ಸವದ ಹಿನ್ನೆಲೆ, ಸೋನಾಕ್ಷಿ ಸಿನ್ಹಾ ಅವರ ಸಹೋದರರಲ್ಲಿ ಒಬ್ಬರಾದ ಲವ್.. ಫೋಟೋ ಶೇರ್​ ಮಾಡಿದ್ದಾರೆ. ನಿಮ್ಮಂಥ ಅಪ್ಪ-ಅಮ್ಮ ಪಡೆಯಲು ಪುಣ್ಯ ಮಾಡಿರಬೇಕು, ನಿಮ್ಮ ಜೊತೆ ಕಳೆದಿರುವ ಅದ್ಭುತ ಕ್ಷಣಗಳು ಸಂತೋಷಭರಿತವಾಗಿದೆ ಎನ್ನುತ್ತಲೇ ಅಪ್ಪ-ಅಮ್ಮಂದಿರಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯ ಕೋರಿದ್ದಾರೆ. ಆದರೆ ಈ ಭಾವ ಚಿತ್ರದಲ್ಲಿ ಶತ್ರುಘ್ನ ಸಿನ್ಹಾ ಮತ್ತು ಪೂನಂ ಸಿನ್ಹಾ ಇದ್ದಾರೆ. ಇವರ ಜೊತೆಯಲ್ಲಿ ಅವರಿಬ್ಬರು ಗಂಡು ಮಕ್ಕಳಾದ ಲವ್ ಮತ್ತು ಕುಶ್ ಇದ್ದಾರೆ. ಸೋನಾಕ್ಷಿ ಸಿನ್ಹಾ ಮಾತ್ರ ಈ ಫೋಟೋದಲ್ಲಿ ಇಲ್ಲ.

ಇನ್ನೂ.. ತನ್ನ ಮುದ್ದಿನ ಸಹೋದರಿ ಮದುವೆಯಾದರೂ ಕೂಡ ಆ ಮದುವೆಯಲ್ಲಿ ಲವ್ ಗೈರಾಗಿದ್ದರು. ಆ ನಂತರ ಅಂತೆ-ಕಂತೆಯ ಸುದ್ದಿ ಹರಿದಾಡಲು ಶುರುವಾದ ಮೇಲೆ ಮದುವೆಯಲ್ಲಿ ಭಾಗವಹಿಸದೇ ಇರುವುದಕ್ಕೆ ಕಾರಣ ಸ್ಪಷ್ಟವಾಗಿದೆ ಎಂದಿದ್ದರು. ಏನೇ ಆಗಲಿ ನಾನು ಕೆಲವರ ಜೊತೆ ಬೆರೆಯಲ್ಲ ಎಂದಿದ್ದರು. ಇನ್ನೂ ಎಲ್ಲಕ್ಕಿಂತ ಹೆಚ್ಚಾಗಿ ಶತ್ರುಘ್ನ ಸಿನ್ಹಾ ಅವರ ಮನೆಯ ಹೆಸರು ರಾಮಾಯಣ. ಇಷ್ಟೇ ಅಲ್ಲ ಶತ್ರುಘ್ನ ಸಿನ್ಹಾ ಅವರಿಗೆ ರಾಮ್, ಭರತ್ ಮತ್ತು ಲಕ್ಷ್ಮಣ ಹೆಸರಿನ ಮೂವರು ಸೋದರರಿದ್ದಾರೆ. ಇನ್ನೂ ಶತ್ರುಘ್ನಾ ಸಿನ್ಹಾ ತಮ್ಮ ಇಬ್ಬರು ಮಕ್ಕಳಿಗೆ ಲವ ಮತ್ತು ಕುಶ ಎಂದು ಹೆಸರಿಟಿದ್ದಾರೆ. ಈ ಎಲ್ಲ ಕಾರಣಗಳಿಂದ ಮಗಳ ಈ ಅಂತರ ಧರ್ಮಿಯ ವಿವಾಹದಿಂದ ಶತ್ರುಘ್ನ ಸಿನ್ಹಾ ಅವರು ಖುಷಿಯಾಗಿಲ್ಲ ಎಂಬ ಮಾತು, ಸೋನಾಕ್ಷಿ ಸಿನ್ಹಾ ಮದುವೆಯಾದ ದಿನದಿಂದನೇ ಕೇಳಿ ಬರುತ್ತಿದೆ. ಆ ಮಾತುಗಳಿಗೆ ಪುಷ್ಟಿ ನೀಡುವಂತೆ ಈಗ ಲವ್ ಸಿನ್ಹಾ ತಮ್ಮ ಸಹೋದರಿ ಇರದ ಫೋಟೋವನ್ನು ಹಂಚಿಕೊಂಡಿದ್ಧಾರೆ.

shatrughan-sinha-son-luv-sinha-omits-sister-sonakshi-sinha-from-parents-anniversary-post

ಈ ಎಲ್ಲ ಕಾರಣಗಳಿಂದ ಈಗ ಶತ್ರುಘ್ನ ಸಿನ್ಹಾ ಕುಟುಂಬದಲ್ಲಿ ಬಿರುಕು ಮೂಡಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಸೋನಾಕ್ಷಿ ಸಿನ್ಹಾ ಅವರಿಂದ ಅವರ ಕುಟುಂಬದವರು ಅಂತರವನ್ನೂ ಕಾಪಾಡಿಕೊಳ್ಳುತ್ತಿದ್ದಾರೆ ಎಂದು ಮಾತನಾಡಲು ಶುರುಮಾಡಿದ್ದಾರೆ. ಮದುವೆಯ ಬೆನ್ನಲ್ಲಿಯೇ ತಮ್ಮ ಪುತ್ರಿ ಸೋನಾಕ್ಷಿ ಸಿನ್ಹಾ ಜೊತೆ ಶತ್ರುಘ್ನ ಸಿನ್ಹಾ ಸಂಬಂಧ ಕಡಿದುಕೊಂಡಿದ್ಧಾರೆ ಎಂಬ ಪುಕಾರು ಹಬ್ಬಿಸಿದ್ಧಾರೆ. ಇನ್ನೂ ಕೆಲವರು ಈ ವಿಚಾರವನ್ನು ಮುಂದಿಟ್ಟುಕೊಂಡು ಧರ್ಮ ದಂಗಲ್ ನಡೆಸುತ್ತಿದ್ದಾರೆ. ಟ್ರೋಲಿಗರು ಎಂದಿನಂತೆ ಮತ್ತೊಮ್ಮೆ ಸೋನಾಕ್ಷಿ ಸಿನ್ಹಾ ಅವರನ್ನು ಟ್ರೋಲ್ ಮಾಡುವ ಕೆಲಸವನ್ನು ಮತ್ತೆ ಶುರುಮಾಡಿದ್ದಾರೆ. ಸತ್ಯಾಂಶ ಶತ್ರುಘ್ನ ಸಿನ್ಹಾ ಫ್ಯಾಮಿಲಿಗೆ ಗೊತ್ತು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X